ಅಸಂಘಟಿತ ಕಾರ್ಮಿಕರಿಗೆ 3,000 ರೂ. ಪಿಂಚಣಿ 


Team Udayavani, Mar 5, 2019, 6:27 AM IST

unautherised.jpg

ಉಡುಪಿ: ದೇಶದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರ ಪ್ರಮಾಣ ಶೇ.93. ಇವರಿಗೆ ನೆರವಾಗಲು ಆರಂಭಿಸಿದ ಯೋಜನೆ ಕೇಂದ್ರ ಸರಕಾರ ಪ್ರಧಾನಮಂತ್ರಿ ಶ್ರಮ ಯೋಗಿ ಮಾನ-ಧನ್‌ (ಪಿಎಂಎಸ್‌ವೈಎಂ). ಯೋಜನೆಯು ಭಾರತೀಯ ಜೀವವಿಮಾ ನಿಗಮ ಮತ್ತು ಇ ಗವರ್ನೆನ್ಸ್‌ ಸರ್ವಿಸಸ್‌ ಇಂಡಿಯ ಲಿ. ಮೂಲಕ ಜಾರಿಗೊಳ್ಳುತ್ತಿದೆ. 

60 ವರ್ಷವಾದ ಬಳಿಕ ಕನಿಷ್ಠ 3,000 ರೂ. ಮಾಸಿಕ ಪಿಂಚಣಿ ಜೀವಿತದ ಕೊನೆಯವರೆಗೆ ದೊರೆಯ ಲಿದೆ. ಇದು ಭವಿಷ್ಯದಲ್ಲಿ ಏರಿಕೆಯಾಗಲೂಬಹುದು. ಈಗ ಖಾತ್ರಿ ಪಡಿಸಿದ ಮೊತ್ತ 3,000 ರೂ. ಚಂದಾದಾರ/ ಚಂದಾ ದಾರಳು ಮೃತ ಪಟ್ಟರೆ ಸಂಗಾತಿ ನಾಮಿನಿಗೆ ಅರ್ಧ ಅಂಶ ಪಿಂಚಣಿ ದೊರೆಯಲಿದೆ. 60 ವರ್ಷದೊಳಗೆ ಮೃತಪಟ್ಟರೆ ಯೋಜನೆಯನ್ನು ಮುಂದುವರಿಸಲು ನಾಮಿನಿಗೆ ಅವಕಾಶವಿದೆ. ಹತ್ತು ವರ್ಷದೊಳಗೆ ಯೋಜನಯಿಂದ ನಿರ್ಗಮಿಸಿದರೆ ಪಾವತಸಿದ ಮೊತ್ತ ಮತ್ತು ಉಳಿತಾಯ ಖಾತೆಯ ಬಡ್ಡಿ ದರ ವಾಪಸು ಕೊಡಲಾಗುವುದು. 10 ವರ್ಷಗಳ ಬಳಿಕ ನಿರ್ಗಮಿಸಿದರೆ ಪಾವತಿಸಿದ ಮೊತ್ತ ಮತ್ತು ಹಣವನ್ನು ಹೂಡಿಕೆ ಮಾಡಿದ ಸಂಸ್ಥೆಯಲ್ಲಿರುವ ಬಡ್ಡಿ ದರ ಸೇರಿಸಿ ಕೊಡಲಾಗುವುದು. ಒಂದು ವೇಳೆ ಅರ್ಧಕ್ಕೆ ನಿಲ್ಲಿಸಿದಲ್ಲಿ ಮುಂದೆ ದಂಡ ಶುಲ್ಕ ಪಾವತಿಸಿ ಮುಂದುವರಿಸಲು ಅವಕಾಶವಿದೆ. 

ಸಿಎಸ್‌ಸಿಗಳಲ್ಲಿ ನೋಂದಣಿ
ದೇಶಾದ್ಯಂತ 2 ವರ್ಷಗಳ ಹಿಂದೆ ಸುಮಾರು 2.5 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿಎಸ್‌ಸಿ) ತೆರೆಯ ಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ130 ಕೇಂದ್ರಗಳಿವೆಯಾದರೂ 52 ಸಕ್ರಿಯವಾಗಿವೆ. ಜಿಲ್ಲೆಯಲ್ಲಿ ಸಿಎಸ್‌ಸಿಗೆ ಇಬ್ಬರು ವ್ಯವಸ್ಥಾಪಕರು ನಿಯೋ ಜನೆಗೊಂಡಿದ್ದಾರೆ. 

ನಿತೀಶ್‌ ಶೆಟ್ಟಿಗಾರ್‌ ಅವರು ಉಡುಪಿ, ಕಾಪು, ಕಾರ್ಕಳ, ಹೆಬ್ರಿ, ಬ್ರಹ್ಮಾವರ ತಾಲೂಕು ವ್ಯಾಪ್ತಿಯನ್ನು ಹೊಂದಿದ್ದರೆ ಗೋವರ್ಧನ ಎಚ್‌. ಅವರು ಕುಂದಾಪುರ, ಬೈಂದೂರು ತಾಲೂಕು ವ್ಯಾಪ್ತಿಯನ್ನು ಹೊಂದಿದ್ದಾರೆ. ದ.ಕ. ಜಿಲ್ಲೆಯಲ್ಲಿ ಸುಮಾರು 130 ಸಿಎಸ್‌ಸಿಗಳಿವೆ. ಇಲ್ಲಿ ಸಿಎಸ್‌ಸಿಗೆ ವ್ಯವಸ್ಥಾಪಕರ ನೇಮಕಾತಿ ಆಗಿಲ್ಲ. ಸದ್ಯ ಸೇವಾ ಸಿಂಧು ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಭರತ್‌ಕುಮಾರ್‌ ನೋಡಿಕೊಳ್ಳುತ್ತಿದ್ದಾರೆ. ಸಿಎಸ್‌ಸಿ ಕೇಂದ್ರಗಳ ಮಾಹಿತಿಗಾಗಿ ನಿತೀಶ್‌ ಶೆಟ್ಟಿಗಾರ್‌ 9591646024, ಗೋವರ್ಧನ್‌ 8217840512, ಭರತ್‌ಕುಮಾರ್‌ 9591102450 ಇವರನ್ನು ಸಂಪರ್ಕಿಸಬಹುದು.

 ಬಡವರ್ಗಕ್ಕೆ ಲಾಭ
18ನೆಯ ವರ್ಷಕ್ಕೆ ಯೋಜನೆಗೆ ಸೇರಿದರೆ ತಿಂಗಳಿಗೆ 55 ರೂ. ಕಟ್ಟಿದರೆ ವರ್ಷಕ್ಕೆ 660 ರೂ. ಕಟ್ಟಿದಂತಾಗುತ್ತದೆ. 60ನೇ ವರ್ಷದವರೆಗೆ ಒಟ್ಟು 27,720 ರೂ. ಪಾವತಿಸಿದಂತಾಗುತ್ತದೆ. 40ನೆಯ ವರ್ಷದಲ್ಲಿ ಸೇರಿದರೆ ತಿಂಗಳಿಗೆ 200 ರೂ. ಕಟ್ಟಬೇಕು. 60ನೆಯ ವರ್ಷದವರೆಗೆ 48,000 ರೂ. ಪಾವತಿಸಿದಂತಾಗುತ್ತದೆ. 60ನೆಯ ವರ್ಷದಲ್ಲಿ ತಿಂಗಳಿಗೆ 3,000 ರೂ. ಪಿಂಚಣಿ ಸಿಗುವಾಗ ಚಂದಾದಾರರು ಪಾವತಿಸಿದ ಮೊತ್ತ ಸುಮಾರು ಒಂದು ವರ್ಷದಲ್ಲಿ ಸಿಕ್ಕಿದಂತಾಗುತ್ತದೆ. ಇದು ಬಡವರ್ಗಕ್ಕೆ ಸಿಗುವ ಅನುಕೂಲವಾಗಿದೆ. 
ಸೌರಭ ಕುಮಾರ್‌, ಭವಿಷ್ಯನಿಧಿ ಅಧಿಕಾರಿ

ಯಾರು ಅರ್ಹರು? ಯಾರು ಅನರ್ಹರು?
*ಬೀದಿ ಬದಿ ವ್ಯಾಪಾರಿಗಳು, ರಿಕ್ಷಾ- ಟ್ಯಾಕ್ಸಿ ಚಾಲಕರು, ಮನೆಗಳಲ್ಲಿ ಸಣ್ಣ ಪುಟ್ಟ ವ್ಯವಹಾರ ಮಾಡುವವರು, ಚಿಂದಿ ಆಯುವವರು, ಮನೆ ಕೆಲಸದವರು, ನಿರ್ಮಾಣ ಕೆಲಸಗಾರರು, ದಿನಗೂಲಿ ನೌಕರರು, ಭೂರಹಿತ ಕಾರ್ಮಿಕರು, ಚರ್ಮದ ಕೆಲಸಗಾರರು, ಬೀಡಿ ಕಾರ್ಮಿಕರು ಮೊದಲಾದವರು.
*ವ್ಯಕ್ತಿಗಳ ಮಾಸಿಕ ಆದಾಯ 15,000 ರೂ. ಮೀರಿರಬಾರದು. 
*18ರಿಂದ 40 ವರ್ಷದ ವರೆಗಿನವರು ನೋಂದಾಯಿಸಬಹುದು. 
* ಸಂಘಟಿತ ವಲಯದಲ್ಲಿರಬಾರದು ಅಥವಾ ಭವಿಷ್ಯನಿಧಿ, ಎನ್‌ಪಿಎಸ್‌, ಇಎಸ್‌ಐ ಯೋಜನೆಯಡಿ ಸೇರಿರಬಾರದು. 
* ಆದಾಯ ತೆರಿಗೆ ಪಾವತಿದಾರರು ಆಗಿರಬಾರದು. 
* ಅಟಲ್‌ ಪಿಂಚಣಿ ಯೋಜನೆ, ವೃದ್ಧಾಪ್ಯ ವೇತನ, ವಿಧವಾ ಮಾಸಾಶನ ಪಡೆಯುವವರೂ ಅರ್ಜಿ ಸಲ್ಲಿಸಬಹುದು. 
 ಪಾವತಿ ಕ್ರಮ
18ರಿಂದ 40 ವರ್ಷಗಳ  ವರೆಗೆ ಯೋಜನೆಗೆ ಸೇರುವವರಿಗೆ ಪ್ರತ್ಯೇಕ ದೇಣಿಗೆ ಮೊತ್ತ ನಮೂದಿಸಲಾಗಿದೆ. ಇದಕ್ಕೆ ಸಮನಾದ ಮೊತ್ತವನ್ನು ಕೇಂದ್ರ ಸರಕಾರ ಭರಿಸಲಿದೆ. ಒಂದು ಬಾರಿ ಸೇರಿದರೆ 60 ವರ್ಷಗಳ ವರೆಗೆ ಚಂದಾದಾರರು ಪ್ರತಿ ತಿಂಗಳು ದೇಣಿಗೆ ಮೊತ್ತವನ್ನು ಪಾವತಿಸಬೇಕು. 

ನೋಂದಣಿ ಕ್ರಮ
* ಚಂದಾದಾರರು ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಿಗೆ (ಕಾಮನ್‌ ಸರ್ವಿಸ್‌ ಸೆಂಟರ್‌) ತೆರಳಿ ಹೆಸರು ನೋಂದಾಯಿಸಬೇಕು. ಎಲ್‌ಐಸಿ, ಇಎಸ್‌ಐ, ಭವಿಷ್ಯನಿಧಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಮಿಕರ ಕಚೇರಿಗಳಲ್ಲಿ ಮಾಹಿತಿ ದೊರಕುತ್ತದೆ. 
* ಚಂದಾದಾರರು ಮೊಬೈಲ್‌ ಫೋನ್‌, ಉಳಿತಾಯ/ ಜನಧನ್‌ ಬ್ಯಾಂಕ್‌ ಖಾತೆ ಮತ್ತು ಆಧಾರ್‌ ಸಂಖ್ಯೆ ಹೊಂದಿರಬೇಕು. 
* ಸ್ವಯಂ ಘೋಷಣೆ ಮೂಲಕ ನೋಂದಣಿ ಮಾಡಲಾಗುವುದು. ವಯಸ್ಸು ಮತ್ತು ಆದಾಯ ವಿವರಗಳಿಗೆ ಪ್ರತ್ಯೇಕ ದಾಖಲಾತಿ ಕೊಡುವುದು ಬೇಡ. ಸ್ವಯಂ ಪ್ರಮಾಣೀಕರಣ, ಆಧಾರ್‌ ಸಂಖ್ಯೆಯೇ ದಾಖಲಾತಿ.
* ಯಾವುದೇ ವಿದ್ಯಾರ್ಹತೆ ಮಾನದಂಡವಿಲ್ಲ.
* ಆರಂಭದಲ್ಲಿ ನಗದು ರೂಪದಲ್ಲಿ ದೇಣಿಗೆಯನ್ನು ಕಟ್ಟಿದರೆ ಅನಂತರ ಬ್ಯಾಂಕ್‌ ಖಾತೆಯಿಂದ ಜಮೆ ಆಗಲಿದೆ. 

ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Sam Sung Galaxy M52 5G: Slim and Power Full – tech

ಸ್ಯಾಮ್‍ ಸಂಗ್‍ ಗೆಲಾಕ್ಸಿ ಎಂ52 5ಜಿ: ಸ್ಲಿಮ್‍ ಮತ್ತು ಪವರ್ ಫುಲ್‍

7454

ರಾಜ್ಯ ಸರಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ : ತುಟ್ಟಿಭತ್ಯೆ ಹೆಚ್ಚಳ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 207 ಅಂಕ ಕುಸಿತ, 18,250ಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 207 ಅಂಕ ಕುಸಿತ, 18,250ಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

arya-khan

ಆರ್ಯನ್‌ ಖಾನ್‌ ಜಾಮೀನು ಅರ್ಜಿ ವಿಚಾರಣೆ ಇಂದೂ ಮುಂದೂಡಿಕೆ

b-c-nagesh

ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ಕೊರತೆ ನೀಗಿಸಲು ಕ್ರಮ: ಸಚಿವ ಬಿ.ಸಿ.ನಾಗೇಶ್

bhagavanth-kubha

ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ

21school

ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎಲ್‌ಇಡಿ ಲೈಟ್ ಅಳವಡಿಕೆಗೆ ಪ್ರಾಯೋಗಿಕ ಚಾಲನೆ

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎಲ್‌ಇಡಿ ಲೈಟ್ ಅಳವಡಿಕೆಗೆ ಪ್ರಾಯೋಗಿಕ ಚಾಲನೆ

ಜನಪ್ರತಿನಿಧಿಗಳೇ… ವಿಳಂಬ ನೀತಿಯಿಂದ ಪ್ರಯೋಜನವಿಲ್ಲ

ಜನಪ್ರತಿನಿಧಿಗಳೇ… ವಿಳಂಬ ನೀತಿಯಿಂದ ಪ್ರಯೋಜನವಿಲ್ಲ

ನಾಳೆ ರಾಜ್ಯಾದ್ಯಂತ ಏಕಕಾಲಕ್ಕೆ ಕನ್ನಡ ಗೀತೆಗಳ ಗಾಯನ: ಸುನಿಲ್‌

ನಾಳೆ ರಾಜ್ಯಾದ್ಯಂತ ಏಕಕಾಲಕ್ಕೆ ಕನ್ನಡ ಗೀತೆಗಳ ಗಾಯನ: ಸುನಿಲ್‌

ಐದರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 10 ವರ್ಷ ಜೈಲು

ಐದರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 10 ವರ್ಷ ಜೈಲು

Untitled-1

ಶಿರ್ವ ಶ್ರೀ ಸಿದ್ಧಿ ವಿನಾಯಕ ದೇಗುಲದಲ್ಲಿ ದೃಢಕಲಶ ಸಂಪನ್ನ

MUST WATCH

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

ಹೊಸ ಸೇರ್ಪಡೆ

22film

ವರ್ಷಾಂತ್ಯಕ್ಕೆ ಮದುವೆಯಾಗಲಿದ್ದಾರಾ ಕತ್ರಿನಾ ಕೈಫ್, ವಿಕ್ಕಿ ಕೌಶಲ್?!

Sam Sung Galaxy M52 5G: Slim and Power Full – tech

ಸ್ಯಾಮ್‍ ಸಂಗ್‍ ಗೆಲಾಕ್ಸಿ ಎಂ52 5ಜಿ: ಸ್ಲಿಮ್‍ ಮತ್ತು ಪವರ್ ಫುಲ್‍

7454

ರಾಜ್ಯ ಸರಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ : ತುಟ್ಟಿಭತ್ಯೆ ಹೆಚ್ಚಳ

ಪ್ರತಿಮೆ ಅನಾವರಣಕ್ಕೆ ಡಿ.26ರ ಗಡುವು

ಪ್ರತಿಮೆ ಅನಾವರಣಕ್ಕೆ ಡಿ.26ರ ಗಡುವು

ಶಾಲೆ, ಟೀಸಿ, TC, udayavanipaper, kannadanews,

ಬೇರೆ ಶಾಲೆಗೆ ಸೇರಲು ಟೀಸಿ ನೀಡದ ಶಾಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.