Udayavni Special

ಸಮಾಜಕ್ಕಾಗಿ ಸ್ವ ಅಭಿವೃದ್ಧಿ: ವಸಂತಿ ಪೈ ಕರೆ

 ಮಣಿಪಾಲ ದಂತ ವಿಜ್ಞಾನ ಕಾಲೇಜಿನ ವಾರ್ಷಿಕೋತ್ಸವ

Team Udayavani, Nov 1, 2020, 9:27 PM IST

Udupi

ಉಡುಪಿ: ಕೊರೊನಾ ಸೋಂಕಿನ ಕಾರಣದಿಂದ ಮುಂದೂಡಿಕೆ ಯಾದ ಮಣಿಪಾಲ ದಂತ ವಿಜ್ಞಾನ ಕಾಲೇಜಿನ ವಾರ್ಷಿಕ ಉತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಅ. 30ರಂದು ಆನ್‌ಲೈನ್‌ ಮೂಲಕ ನಡೆಯಿತು.

ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ತಮಗಾಗಿ ಮಾತ್ರವಲ್ಲದೆ ಜಗತ್ತಿಗಾಗಿಯೂ ಅಭಿವೃದ್ಧಿ ಹೊಂದುವ ದೃಷ್ಟಿಕೋನ ಹೊಂದಿರಬೇಕು. ಮಣಿಪಾಲದಲ್ಲಿ ಕಲಿತ ವಿದ್ಯಾರ್ಥಿಗಳ ಗಮನ ತಮ್ಮ ಗಮ್ಯ ಸ್ಥಾನ ವನ್ನು ಮುಟ್ಟುವಂತಿರಬೇಕು ಎಂದು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಣಿಪಾಲ ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್‌. ಪೈ ಕರೆ ನೀಡಿದರು.

ಕಾಲೇಜಿಗೆ ಎನ್‌ಐಆರ್‌ಎಫ್ ರ್‍ಯಾಂಕಿಂಗ್‌ ಲಭಿಸಿರುವುದಕ್ಕೆ ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮೆಚ್ಚುಗೆ ಸೂಚಿಸಿದರು. ಬೋಧಕರು ಮತ್ತು ವಿದ್ಯಾರ್ಥಿಗಳ ಸಮರ್ಪಣ ಮನೋಭಾವನೆಯೇ ಗುಣಮಟ್ಟದ ಶಿಕ್ಷಣಕ್ಕೆ ಕಾರಣವಾಗಿದೆ ಎಂದು ಡಾ| ಬಲ್ಲಾಳ್‌ ತಿಳಿಸಿದರು.

ನಿಷ್ಠೆ, ಪಾರದರ್ಶಕತೆ, ಗುಣಮಟ್ಟ, ತಂಡ ಕಾರ್ಯ, ಅನುಕಂಪದ ಅನುಷ್ಠಾನ ಇವು ಮಾಹೆಯ ಮುಖ್ಯ ನೀತಿಗಳು. ಮಾನವೀಯ ಮೌಲ್ಯ ಮತ್ತು ಸಾಮಾಜಿಕ ಬದ್ಧತೆಯನ್ನು ಮುಂದಿನ ಜನಾಂಗಕ್ಕೆ ಸಂಸ್ಥೆ ಹಸ್ತಾಂತರಿಸುತ್ತಿದೆ. ಜೀವನದ ಸನ್ನಡತೆ ಜಾಗತಿಕ ನಾಗರಿಕರನ್ನು ರೂಪಿಸುತ್ತದೆ ಎಂದು ಮಾಹೆ ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್‌ ನುಡಿದರು. ಮಾಹೆ ಸಹಕುಲಪತಿ ಡಾ| ಪಿಎಲ್‌ಎನ್‌ಜಿ ರಾವ್‌ ಅಧ್ಯಕ್ಷತೆ ವಹಿಸಿದ್ದರು.

ಪರಿಸರ ಜಾಗೃತಿ ಅಂಗವಾಗಿ ಬಳಸಿ
ಬಿಸಾಡುವ ಪೆನ್ನುಗಳ ಬದಲು ಪುನರುಪಯೋಗಿಸುವ ಪೆನ್ನುಗಳನ್ನು ಬಳಸುವ “ರೀ ಪೆನ್‌- ದಿ ಪೆನ್‌ ಬಾಕ್ಸ್‌’ ಯೋಜನೆಯನ್ನು ವಸಂತಿ ಪೈಯವರು ಉದ್ಘಾಟಿಸಿದರು. ಸಹ ಡೀನ್‌ ಡಾ| ವಿದ್ಯಾಸರಸ್ವತಿಯವರು ಯೋಜನೆಯ ಮುನ್ನೋಟ ನೀಡಿ, ಮುಳಿಯ ಪ್ರತಿಷ್ಠಾನ ದಿಂದ ಆರಂಭಿಕ ದೇಣಿಗೆಯಾಗಿ 10,000 ರೂ. ನೀಡಿದರು.

ಕಾಲೇಜಿನ ಡೀನ್‌ ಡಾ| ಕೀರ್ತಿಲತಾ ಎಂ. ಪೈ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು. ಡಾ| ರಜ್ವಿ ಸೇಠ್ ಅವರು ವಿದ್ಯಾರ್ಥಿ ಸಂಘದ ವರದಿಯನ್ನು ವಾಚಿಸಿದರು. ವಿದ್ಯಾರ್ಥಿಗಳ ಪರವಾಗಿ ಡಾ| ಜೋನಾತನ್‌ ಕೋಶಿಯವರು ಮಾತನಾಡಿದರು. ಡಾ| ಆನಂದದೀಪ ಶುಕ್ಲಾ ಮತ್ತು ಡಾ| ಶ್ರುತಿ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಪ್ರಶಸ್ತಿ ಪ್ರದಾನ
2019ರ ಶ್ರೇಷ್ಠ ಪ್ರಬಂಧ ಮಂಡನೆಗಾಗಿ ಕನ್ಸರ್ವೇಟಿವ್‌ ಡೆಂಟಿಸ್ಟ್ರಿ ಆ್ಯಂಡ್‌ ಎಂಡೋಡಾಂಟಿಕ್ಸ್‌ ವಿಭಾಗದ ಪ್ರಾಧ್ಯಾಪಕ ಡಾ|ವಾಸುದೇವ ಬಲ್ಲಾಳ್‌ ಅವರಿಗೆ ಡಾ| ಟಿಎಂಎ ಪೈ ಚಿನ್ನದ ಪದಕವನ್ನು ಮತ್ತು ಶ್ರೇಷ್ಠ ಬೋಧನೋಪಕರಣಕ್ಕಾಗಿ ಡಾ| ಸುನಿಲ್‌ ಎಸ್‌. ನಾಯಕ್‌ ಮತ್ತು ಡಾ| ಅನುಪಮ ಸಿಂಗ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ| ಸೋಹಮ್‌ ಮಿತ್ರಾ ಅವರಿಗೆ ಶ್ರೇಷ್ಠ ನಿರ್ಗಮನ ವಿದ್ಯಾರ್ಥಿ ಪ್ರಶಸ್ತಿ ನೀಡಲಾಯಿತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

r-ashok

ಈ ಬಾರಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ: ಆರ್ ಅಶೋಕ್

bsy

ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ತಡೆ ಕಾಯ್ದೆ ಜಾರಿಗೆ ತೀರ್ಮಾನ: ಸಿಎಂ ಬಿಎಸ್ ವೈ

grama

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ಹಂತದ ಗ್ರಾ.ಪಂ ಚುನಾವಣೆ ನಡೆಸುವಂತೆ ಆದೇಶ !

ashwath

HDK ಬಿಜೆಪಿ ಜೊತೆ ಸೇರಿದ್ದರೆ ಸಿಎಂ ಆಗುತ್ತಿರಲಿಲ್ಲ; BSY ನಮ್ಮ ನಾಯಕ: ಅಶ್ವತ್ಥನಾರಾಯಣ

ಮಂಗಳೂರು ಉಗ್ರರ ಪರ ಗೋಡೆ ಬರಹ ಪ್ರಕರಣ : ಇಬ್ಬರ ಬಂಧನ 

ಮಂಗಳೂರು: ಉಗ್ರರ ಪರ ಗೋಡೆ ಬರಹ ಪ್ರಕರಣ; ಇಬ್ಬರ ಬಂಧನ 

ಚಿಕ್ಕಬಳ್ಳಾಪುರ ನಗರದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲು ಕ್ರಮ: ಡಿಎಸ್ ಆನಂದ್‍ರೆಡ್ಡಿ

ಚಿಕ್ಕಬಳ್ಳಾಪುರ ನಗರದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಕ್ರಮ: ಡಿಎಸ್ ಆನಂದ್‍ರೆಡ್ಡಿ

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದೆಯಾ? ವಹಿವಾಟಿಲ್ಲದ ಖಾತೆಗಳನ್ನು ಸ್ಥಗಿತಗೊಳಿಸೋದು ಹೇಗೆ

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದೆಯಾ? ವಹಿವಾಟಿಲ್ಲದ ಖಾತೆಗಳನ್ನು ಸ್ಥಗಿತಗೊಳಿಸೋದು ಹೇಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಬಂದ್ ಗೆ ಕುಂದಾಪುರದಲ್ಲಿ ನೀರಸ ಪ್ರತಿಕ್ರಿಯೆ

ಕರ್ನಾಟಕ ಬಂದ್ ಗೆ ಕುಂದಾಪುರದಲ್ಲಿ ನೀರಸ ಪ್ರತಿಕ್ರಿಯೆ

ಮಂದಿರ ನಿರ್ಮಾಣಕ್ಕೆ ಸರ್ವರೂ ಕೈಜೋಡಿಸಿ: ಪೇಜಾವರ ಶ್ರೀ

ಮಂದಿರ ನಿರ್ಮಾಣಕ್ಕೆ ಸರ್ವರೂ ಕೈಜೋಡಿಸಿ: ಪೇಜಾವರ ಶ್ರೀ

UDPI-TDY-1

ಚರಂಡಿಯಲ್ಲಿ ನಿಂತ ಕೊಳಚೆ ನೀರು, ರೋಗ ಭೀತಿ

ಆನೆಗುಡ್ಡೆ ಶ್ರೀ ವಿನಾಯಕ ದೇಗುಲ: ಸಂಭ್ರಮದ ದೀಪೋತ್ಸವ

ಆನೆಗುಡ್ಡೆ ಶ್ರೀ ವಿನಾಯಕ ದೇಗುಲ: ಸಂಭ್ರಮದ ದೀಪೋತ್ಸವ

ಕಿರು ಸೇತುವೆಯಾಗಿ 15 ವರ್ಷಗಳು ಕಳೆದರೂ ಸಂಚಾರ ಸಂಕಷ್ಟ

ಕಿರು ಸೇತುವೆಯಾಗಿ 15 ವರ್ಷಗಳು ಕಳೆದರೂ ಸಂಚಾರ ಸಂಕಷ್ಟ

MUST WATCH

udayavani youtube

ಮಂಗಳೂರು: ಉಗ್ರರ ಪರ ಗೋಡೆ ಬರಹ ಪ್ರಕರಣ; ಇಬ್ಬರ ಬಂಧನ

udayavani youtube

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್ | Udayavani

udayavani youtube

ಮಂಗಳೂರು ದೋಣಿ ದುರಂತದಲ್ಲಿ ಮೃತಪಟ್ಟವರಲ್ಲಿ ಅನ್ಸಾರ್ ಎಂಬಾತನ ಮೃತ ದೇಹಕ್ಕಾಗಿ ಹುಡುಕಾಟ

udayavani youtube

ಕುಂದಾಪುರ: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

udayavani youtube

ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

ಹೊಸ ಸೇರ್ಪಡೆ

r-ashok

ಈ ಬಾರಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ: ಆರ್ ಅಶೋಕ್

bsy

ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ತಡೆ ಕಾಯ್ದೆ ಜಾರಿಗೆ ತೀರ್ಮಾನ: ಸಿಎಂ ಬಿಎಸ್ ವೈ

grama

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ಹಂತದ ಗ್ರಾ.ಪಂ ಚುನಾವಣೆ ನಡೆಸುವಂತೆ ಆದೇಶ !

ashwath

HDK ಬಿಜೆಪಿ ಜೊತೆ ಸೇರಿದ್ದರೆ ಸಿಎಂ ಆಗುತ್ತಿರಲಿಲ್ಲ; BSY ನಮ್ಮ ನಾಯಕ: ಅಶ್ವತ್ಥನಾರಾಯಣ

ಮಂಗಳೂರು ಉಗ್ರರ ಪರ ಗೋಡೆ ಬರಹ ಪ್ರಕರಣ : ಇಬ್ಬರ ಬಂಧನ 

ಮಂಗಳೂರು: ಉಗ್ರರ ಪರ ಗೋಡೆ ಬರಹ ಪ್ರಕರಣ; ಇಬ್ಬರ ಬಂಧನ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.