ತ್ವರಿತಗತಿಯಲ್ಲಿ ನೀರಿನ ಸಮಸ್ಯೆಯ ಪರಿಹಾರ


Team Udayavani, Mar 22, 2022, 2:59 PM IST

udayavani

ಉಡುಪಿ: ನಗರಸಭೆಯ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಪೌರಾಯುಕ್ತ ಡಾ| ಉದಯಕುಮಾರ್‌ ಶೆಟ್ಟಿ, ಎಂಜಿನಿಯರ್‌ ದುರ್ಗಾಪ್ರಸಾದ್‌ ಫೋನ್‌ ಇನ್‌ನಲ್ಲಿ ಭಾಗವಹಿಸಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ನೀರಿನ ಸಮಸ್ಯೆ ಪರಿಹಾರ

ನಗರದ ವಿವಿಧ ಭಾಗಗಳಿಂದ ನೀರಿನ ಸಮಸ್ಯೆಗಳ ಬಗ್ಗೆ ದೂರುಗಳು ಕೇಳಿಬಂದವು. ಮುಖ್ಯವಾಗಿ ನಗರದ ಎತ್ತರ ಪ್ರದೇಶಗಳು ಹಾಗೂ ಇತರ ಕೆಲವೆಡೆ ಸಮರ್ಪಕವಾಗಿ ನೀರು ಪೂರೈಕೆಯಾಗದಿರುವ ಬಗ್ಗೆ ದೂರುಗಳು ಕೇಳಿಬಂದವು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಹಾಗೂ ಪೌರಾಯುಕ್ತರು ನಗರದಲ್ಲಿ ಬೇಸಗೆ ಸಮಯದಲ್ಲಿ ಬೇಡಿಕೆಯಷ್ಟು ನೀರು ಪೂರೈಕೆಯಾಗುತ್ತಿಲ್ಲ. ಎತ್ತರ ಪ್ರದೇಶಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ನೀರಿನ ಸಮಸ್ಯೆ ಕಂಡುಬರುತ್ತಿರುವ ವಾರ್ಡ್‌ಗಳತ್ತ ಗಮನಹರಿಸಿ ವಾರದೊಳಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಹಾಗೆಯೇ ನೀರಿನ ಪೈಪ್‌ಗ್ಳು ಬ್ಲಾಕ್‌ ಆಗಿದ್ದರೆ ಅದನ್ನು ನೀರಿನ ಬಳಕೆದಾರರು ನಿರ್ವಹಣೆ ಮಾಡುವಂತೆ ತಿಳಿಸಿದರು.

ಹೆದ್ದಾರಿಯಲ್ಲಿ ಬೀದಿದೀಪ ಸಮಸ್ಯೆ-ಇಲಾಖೆಗೆ ಪತ್ರ

ಕರಾವಳಿ ಬೈಪಾಸ್‌, ಕಿನ್ನಿಮೂಲ್ಕಿ ಸಹಿತ ನಗರಸಭೆ ವಾರ್ಡ್‌ ವ್ಯಾಪ್ತಿಯಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ಬೀದಿದೀಪದ ಸಮಸ್ಯೆಯ ಬಗ್ಗೆ ಪ್ರಶ್ನೆಗಳು ಕೇಳಿಬಂದವು. ಇದರ ನಿರ್ವಹಣೆ ಹೆದ್ದಾರಿ ಇಲಾಖೆ ಯವರು ಮಾಡಬೇಕಾದ ಕಾರಣ ಅವರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ಹಾಗೆಯೇ ನಗರದ ಬೀದಿದೀಪಗಳ ನಿರ್ವಹಣೆಯನ್ನೂ ಸಕಾಲಕ್ಕೆ ಮಾಡಲಾಗುತ್ತಿದೆ. ದೂರುಗಳಿದ್ದರೆ ನಗರ ಸಭೆಯನ್ನು ಸಂಪರ್ಕಿಸುವಂತೆ ತಿಳಿಸ ಲಾಯಿತು. ಪಡುಕರೆ ಸಹಿತ ಮಲ್ಪೆ ಭಾಗಗಳಲ್ಲಿ ಬೀದಿ ದೀಪ ಇಲ್ಲದ ಕಾರಣ ಕಳ್ಳತನ ಪ್ರಕರಣಗಳು ಹೆಚ್ಚಳ ವಾಗುತ್ತಿದೆ. ಪರಿಶೀಲನೆ ನಡೆಸಲಾಗುವುದೆಂದು ಆಯುಕ್ತರು ತಿಳಿಸಿದರು.

ಖಾಲಿ ಜಾಗಕ್ಕೆ ತೆರಿಗೆ ಹೆಚ್ಚಳ

ನಗರಸಭೆ ವ್ಯಾಪ್ತಿ ಯಲ್ಲಿರುವ ಖಾಲಿ ಜಾಗಗಳಿಗೆ ಈ ಹಿಂದೆ ತೆರಿಗೆ ಪ್ರಮಾಣ ಕಡಿಮೆ ಇತ್ತು. ಈಗ ಪರಿಷ್ಕೃತ ದರ ಬಂದಿದ್ದು, ದರದ ಪ್ರಮಾಣ ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ವೆಬ್‌ ಸೈಟ್‌ಗಳಲ್ಲಿಯೂ ಮಾಹಿತಿ ಹಂಚಿಕೊಳ್ಳಲಾಗಿದೆ. ನಗರಸಭೆಯಲ್ಲಿಯೂ ಈ ಬಗ್ಗೆ ಮಾಹಿತಿ ಲಭ್ಯವಿದೆ ಎಂದು ಅಧ್ಯಕ್ಷರು ತಿಳಿಸಿದರು.

ತ್ಯಾಜ್ಯ ಕೊಂಡೊಯ್ಯುವ ವಾಹನ ಬರುತ್ತಿಲ್ಲ

ಮಂಚಿ ದುಗ್ಲಿಪದವು ಭಾಗಗಳಿಗೆ ತ್ಯಾಜ್ಯ ಕೊಂಡೊಯ್ಯುವ ವಾಹನಗಳು ಬರುತ್ತಿಲ್ಲ. ಇದರಿಂದಾಗಿ ಇಲ್ಲಿನ ನಾಗರಿಕರಿಗೆ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಯಿತು. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಅಧ್ಯಕ್ಷರು ತಿಳಿಸಿದರು.

ಸಂಪ್‌ ನಿರ್ಮಾಣ ಅತ್ಯಗತ್ಯ

ನೀರನ್ನು ಸೂಕ್ತ ಬಳಕೆ ಮಾಡಲು ಸಂಪ್‌ಗ್ಳನ್ನು ನಿರ್ಮಿಸುವುದು ಅಗತ್ಯವಾಗಿದೆ. ಸೂಕ್ತ ಪ್ರಮಾಣದಲ್ಲಿ ನೀರನ್ನು ದಾಸ್ತಾನು ಮಾಡು ವು ದರಿಂದ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರ ಸಾಧ್ಯವಿದೆ. ನಗರದ ನಿವಾಸಿಗಳು ಸಂಪ್‌ ನಿರ್ಮಾಣ ಮಾಡುವತ್ತ ಮೊದಲ ಆದ್ಯತೆ ನೀಡಬೇಕೆಂದು ಅಧ್ಯಕ್ಷರು, ಪೌರಾಯುಕ್ತರು ತಿಳಿಸಿದರು.

ರಸ್ತೆಗಳ ನಿರ್ವಹಣೆಗೆ ಆದ್ಯತೆ

ನಗರದ ವಿವಿಧ ಭಾಗಗಳಲ್ಲಿ ಕಾಮಗಾರಿ ನೆಪದಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ಅದೇ ರೀತಿ ಕೆಲವು ವಾರ್ಡ್‌ಗಳ ರಸ್ತೆ ಸಂಪರ್ಕಗಳು ಸಮರ್ಪಕವಾಗಿಲ್ಲ. ಅಂಬಾಗಿಲು-ಕಲ್ಸಂಕ ರಸ್ತೆ ಹಾಗೂ ರಸ್ತೆ ಬದಿಗಳಲ್ಲಿ ಉಬ್ಬುತಗ್ಗುಗಳಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಲಾಯಿತು.

ಇಂದ್ರಾಳಿ ನದಿಯ ಬದಿಗಳನ್ನು ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾಗುತ್ತಿದೆ. ನಮ್ಮ ಇತಿಮಿತಿಯಲ್ಲಿ ಒಳಚರಂಡಿಯ ಸಮಸ್ಯೆಗಳನ್ನು ಸರಿಪಡಿಸುತ್ತಿದ್ದೇವೆ. ಇಡೀ ನಗರಕ್ಕೆ ಯುಜಿಡಿ ಕಾಮಗಾರಿ ನಡೆಸಲು 330 ಕೋ.ರೂ. ಮೊತ್ತವನ್ನು ಈ ಸಾಲಿನ ಬಜೆಟ್‌ ನಲ್ಲಿ ಮೀಸಲಿರಿಸಲಾಗಿದೆ. ಇದು ಬಂದ ಬಳಿಕವೇ ಶಾಶ್ವತವಾಗಿ ಈ ಸಮಸ್ಯೆ ಬಗೆಹರಿಯಲಿದೆ. – ಸುಮಿತ್ರಾ ನಾಯಕ್‌,ಅಧ್ಯಕ್ಷರು, ಡಾ| ಉದಯ ಕುಮಾರ್‌ ಶೆಟ್ಟಿ, ಪೌರಾಯುಕ್ತರು.

ಬಜೆ ಅಣೆಕಟ್ಟಿನಲ್ಲಿ ಹೆಚ್ಚುವರಿ ಪಂಪಿಂಗ್‌

ನಗರದಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಎ.30ರ ಒಳಗೆ ಬಜೆ ಅಣೆಕಟ್ಟಿನಲ್ಲಿ ಹೆಚ್ಚುವರಿ ಪಂಪಿಂಗ್‌ ಆರಂಭಿಸಲಾಗುವುದೆಂದು ಸುಮಿತ್ರಾ ನಾಯಕ್‌, ಡಾ| ಉದಯ ಕುಮಾರ್‌ ಶೆಟ್ಟಿ ತಿಳಿಸಿದರು.

ಪ್ರಸ್ತುತ 21 ಎಂಎಲ್‌ಡಿ ನೀರು ಬಜೆ ಅಣೆಕಟ್ಟಿನಿಂದ ಪಂಪಿಂಗ್‌ ಮಾಡಲಾಗುತ್ತಿದೆ. ಹೆಚ್ಚುವರಿ ಎಂಎಲ್‌ಡಿ ಪಂಪಿಂಗ್‌ಗೆ ಹೊಸ ಪಂಪ್‌ ಅಳವಡಿಸುವ ತಯಾರಿ ನಡೆಯುತ್ತಿದೆ. ಮಣಿಪಾಲ ಸ್ಟೇಜ್‌ 1ರ ನೀರು ಪೂರೈಕೆ ಪ್ರಮಾಣ ಕಡಿಮೆಗೊಳಿಸಲಾಗುತ್ತಿದೆ. ಹೆಚ್ಚುವರಿ ನೀರನ್ನು ನಗರದ ಮುಖ್ಯ ಭಾಗಕ್ಕೆ ಬಳಕೆ ಮಾಡುತ್ತೇ ವೆ. ನೀರಿನ ಸಮಸ್ಯೆಗೆ ನಗರಸಭೆ ಸ್ಪಂದಿಸುತ್ತಿದ್ದು, ಸಾರ್ವಜನಿಕರ ಸಹಕಾರ ಅಗತ್ಯ. ವಾರಾಹಿ ಯೋಜನೆ ವರ್ಷಾಂತ್ಯಕ್ಕೆ ಪೂರ್ಣಗೊಂಡು 2023 ಎಪ್ರಿಲ್‌ಗೆ ನಗರದ ಮನೆಮನೆಗಳಿಗೆ 24 ಗಂಟೆ ನೀರು ಪೂರೈಕೆಯಾಗಲಿದೆ ಎಂದರು.

ಖಾಲಿ ನಿವೇಶನ ನಿರ್ವಹಣೆ ಸಮಸ್ಯೆ

ಪರ್ಕಳದ ಖಾಲಿ ನಿವೇಶನದಲ್ಲಿ ಪೊದೆ, ಗಿಡ ಮರಗಳು ಬೆಳೆದುಕೊಂಡಿದೆ. ಇಲ್ಲಿ ವಿದ್ಯುತ್‌ ತಂತಿ ಮೇಲೆ ಮರಬಿದ್ದು, ವಿದ್ಯುತ್‌ ಪೂರೈಕೆ ವ್ಯತ್ಯಯ ಸಂಭವಿಸಿದೆ. ಪಾಳುಬಿದ್ದ ಖಾಲಿ ನಿವೇಶನಗಳ ನಿರ್ವಹಣೆಗಳಿಗೆ ಕ್ರಮ ಕೈಗೊಳ್ಳಬೇಕು ಎಂದು ಪರ್ಕಳದ ಸುಂದರ್‌ ರಾವ್‌ ಮನವಿ ಮಾಡಿದರು. ಸಮೀಪದ ಮನೆ ನಿರ್ಮಾಣ ಕಾಮಗಾರಿಯಿಂದಾಗುವ ತೊಂದರೆ ಬಗ್ಗೆ ಬೈಲೂರು, 76 ಬಡಗುಬೆಟ್ಟುವಿನ ಶ್ರೀಮತಿ ಅಳಲು ತೋಡಿಕೊಂಡರು. ಖಾಲಿ ನಿವೇಶನಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ಅಪಾರ್ಟ್‌ಮೆಂಟ್‌ಗಳಲ್ಲಿ ಸಮಸ್ಯೆ

ಅಲಂಕಾರ್‌ ಚಿತ್ರಮಂದಿರ ಸಮೀಪ ವಸಿಷ್ಠ ಅಪಾರ್ಟ್‌ಮೆಂಟ್‌ನಲ್ಲಿ 25 ಫ್ಲ್ಯಾಟ್‌ಗಳಿದ್ದು, 2 ವಾಟರ್‌ ಕನೆಕ್ಷನ್‌ ಇದೆ. ಈಗ ಬರುವ ನೀರು ಸಾಲುತ್ತಿಲ್ಲ. ಈ ಬಗ್ಗೆ ಪರಿಹಾರ ಕಲ್ಪಿಸಿ ಎಂದು ಜ್ಯೂಲಿಯಟ್‌, ವಿಲ್ಸನ್‌ ಸಲ್ದಾನ, ದಯಾನಂದ ಶೆಟ್ಟಿ , ಕಾಡಬೆಟ್ಟು ಅಜಯ ಎಂಪೈರ್‌, ಕ್ಲಾಸಿಕ್‌ ಛಾಯದ ಫ್ಲ್ಯಾಟ್‌ ನಿವಾಸಿಗಳು ದೂರು ಹೇಳಿಕೊಂಡರು.

ಎಲ್ಲಿ ಕಂಡರೂ ನೀರಿನ ಸಮಸ್ಯೆ

ಸಂತೆಕಟ್ಟೆಯಿಂದ ರಾಜು ಪೂಜಾರಿ, ಅನಿತಾ, ಫ್ಲವಿ ಫೆರ್ನಾಂಡಿಸ್‌, ಕಾಡಬೆಟ್ಟಿನಿಂದ ವೃಂದ, ಫೆಲಿಕ್ಸ್‌ ಆಳ್ವ, ಪ್ರವೀಣ್‌, ವಾದಿರಾಜ ರಸ್ತೆಯಿಂದ ಕಾವ್ಯ ಭಟ್‌, ಚಿಟ್ಟಾಡಿಯಿಂದ ಅನುಪಮಾ, ನರಸಿಂಹ ಶಿರಿಬೀಡು, ಎಂಜಿಎಂ ವಸತಿ ಗೃಹದ ಸುಲೋಚನಾ, ಬೋರ್ಡ್‌ ಹೈಸ್ಕೂಲು ಕಾಂಪೌಂಡ್‌ನ‌ ಶ್ರೀನಿವಾಸ್‌ ರಾವ್‌, ಅಜ್ಜರಕಾಡು ಭುನೇಶ್ವರ ಮೆಂಡನ್‌, ಕೆಲದಿನಗಳಿಂದ ಆಗುತ್ತಿರುವ ನೀರಿನ ಸಮಸ್ಯೆ ಬಗ್ಗೆ ಹೇಳಿಕೊಂಡರು. ಗಣೇಶ್‌ರಾಜ್‌ ಸರಳೇಬೆಟ್ಟು ಬೀದಿ ದೀಪ, ರಸ್ತೆ ಕಾಮಗಾರಿ, ನೀರು ಪೋಲಾಗುತ್ತಿರುವ ಸಮಸ್ಯೆ ಗಮನ ಸೆಳೆದರು.

ಖಾಲಿ ಜಾಗ ತೆರಿಗೆ ಹೆಚ್ಚಳ ಯಾಕೆ ?

ಖಾಲಿ ಜಾಗದ ತೆರಿಗೆ ಕಳೆದ ವರ್ಷ 100 ರೂ. ಪಾವತಿಸಿದ್ದೆ, ಈ ವರ್ಷ 2 ಸಾವಿರ ರೂ. ತೆರಿಗೆ ಶುಲ್ಕ ಪಾವತಿಸಿಕೊಂಡಿದ್ದಾರೆ. ಏಕಾಏಕಿ ಈ ನಿರ್ಧಾರ ಯಾಕೆ? ನಗರಸಭೆ ಕಚೇರಿಯಲ್ಲಿಯೂ ಈ ಬಗ್ಗೆ ಮಾಹಿತಿ ಕೇಳಿದರೆ ಯಾರು ಕೊಡುವುದಿಲ್ಲ ಎಂದು ವಿಪಿ ನಗರ ಎಂ. ಕೇಶವ ರಾವ್‌ ಪ್ರಶ್ನಿಸಿದರು. ಆಯಾ ಪ್ರದೇಶದ ಜಾಗದ ಮೌಲ್ಯಕ್ಕೆ ಸಂಬಂಧಿಸಿ 2021- 22ನೇ ಸಾಲಿನಲ್ಲಿ ಖಾಲಿ ನಿವೇಶನ ತೆರಿಗೆಯನ್ನು ಸರಕಾರ ಹೆಚ್ಚಿಸಿದೆ. ಸರಕಾರ ಆದೇಶವನ್ನು ಕಚೇರಿಗೆ ಬಂದಲ್ಲಿ ನಾನೇ ನಿಮಗೆ ಖುದ್ದಾಗಿ ನೀಡುತ್ತೇನೆಂದು ಆಯುಕ್ತರು ತಿಳಿಸಿದರು.

ಬೀದಿ ದೀಪ, ರಸ್ತೆ ಅವ್ಯವಸ್ಥೆ, ನೀರಿನ ಸಂಪರ್ಕ, ತೆರೆದ ಚರಂಡಿ, ಇತರೆ ಮೂಲ ಸೌಕರ್ಯ ಬಗೆಗೆ ತತ್‌ಕ್ಷಣ ಪರಿಶೀಲಿಸಿ ವಾರ ದೊಳಗೆ ಪರಿಹಾರ ಕಂಡು ಕೊಳ್ಳಲಾಗುವುದು ಎಂದು ಅಧ್ಯಕ್ಷರು ಮತ್ತು ಪೌರಾಯುಕ್ತರು ಸಾರ್ವಜನಿಕರ ಈ ಕೆಳಗಿನ ಪ್ರಶ್ನೆಗ ಳಿಗೆ ಉತ್ತರಿಸಿದರು.

ವಿಪಿನಗರದ 3ನೇ ಕ್ರಾಸ್‌ ರಸ್ತೆ ಅವ್ಯವಸ್ಥೆ ಸರಿಪಡಿಸಬೇಕು. – ನಾಗರಾಜ ಭಟ್‌

ಹಯಗ್ರೀವ ನಗರದ ಎರಡನೇ ಮುಖ್ಯರಸ್ತೆ ಮಹಿಳಾ ವಸತಿಗೃಹದ ಬಳಿ ದೀಪದ ವ್ಯವಸ್ಥೆ ಇಲ್ಲ. ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. -ಹೇಮನಾಥ್‌ ಹೆಗ್ಡೆ

ನೀರಿನ ಸಂಪರ್ಕ ಪಡೆಯಲು ಅಗತ್ಯವಿರುವ ಪ್ರಕ್ರಿಯೆ ಪೂರ್ಣ ಗೊಳಿಸಲಾಗಿದ್ದು, ಒಂದು ತಿಂಗಳಾ ದರೂ ಸಂಪರ್ಕ ಮಾಡಿಕೊಟ್ಟಿಲ್ಲ. -ವತ್ಸಲಾ ಅಮೀನ್‌, ಮೂರ್ತಿ ವಾಣಿಜ್ಯ ವಿದ್ಯಾಶಾಲೆ.

ಫ್ಲೈಓವರ್‌ ಮತ್ತು ಬೈಪಾಸ್‌ನಲ್ಲಿ ಲೈಟ್‌ ವ್ಯವಸ್ಥೆ ಇಲ್ಲದೆ ಜನ ಸಾಮಾನ್ಯರು ಆತಂಕದಲ್ಲಿ ಓಡಾಟ ನಡೆಸುವಂತಾಗಿದೆ. ಈ ಬಗ್ಗೆ ಸಾಕಷ್ಟು ಸಲ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ನಗರಸಭೆ ಮುತುವರ್ಜಿ ವಹಿಸಿ ಸಂಬಂದಪಟ್ಟ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಬೇಕು. -ಶ್ರೀಧರ ಶೆಟ್ಟಿ, ಕರಾವಳಿ ಬೈಪಾಸ್‌

ಒಮ್ಮೆ ದೂರು ನೀಡಿದ ಬಳಿಕ ನಡುವೆ ನೀರಿನ ಸಮಸ್ಯೆ ಬಗೆ ಹರಿಸಿದ್ದರು. ಇದೀಗ ಮತ್ತೆ 2 ದಿನಗಳಿಂದ ನೀರು ಬರುತ್ತಿಲ್ಲ. ಕಿನ್ನಿಮೂಲ್ಕಿ ಹೈಮಾಸ್ಟ್‌ ದೀಪ ಉರಿಯುತ್ತಿಲ್ಲ. – ರಾಕಿ ಡಯಾಸ್‌, ಕಿನ್ನಿಮೂಲ್ಕಿ

ನೀರು ಪೋಲು ಆಗುತ್ತಿರುವ ಬಗ್ಗೆ ಎಂಜಿನಿಯರ್‌ಗಳು ಗಮನ ಹರಿಸಬೇಕು. ಗುತ್ತಿಗೆ ಕೆಲಸವನ್ನು ಒಬ್ಬರಿಗೆ ನೀಡುವ ಬದಲು ಹಂಚಿಕೆ ಮಾಡಿ ಕಾಮಗಾರಿ ವಹಿಸಿಕೊಡಬೇಕು. -ಪ್ರವೀಣ್‌ ಸುವರ್ಣ,

ಉಡುಪಿ ಕಲ್ಸಂಕ-ಅಂಬಾಗಿಲು ರಸ್ತೆಯಲ್ಲಿ ಕೆಲವಡೆ ರಸ್ತೆ ಬದಿ ಇರುವ ಬ್ಲಾಕ್‌ ಗಳು ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅಪಾಯಕಾರಿಯಾಗಿದೆ. ಈ ಸಮಸ್ಯೆಯನ್ನು ಸರಿಪಡಿಸಬೇಕು. -ಸುಧಾಕರ,ಅಂಬಾಗಿಲು

ಗುಂಡಿಬೈಲು ಭಾರತ್‌ ಪ್ರಸ್‌ ಬಳಿ ಮಳೆ ನೀರು ಹೋಗುವ ತೋಡಿನಲ್ಲಿ ಒಳಚರಂಡಿ ನೀರು ಶೇಖರಣೆಗೊಂಡಿದೆ. ಇದನ್ನು ತೆರವುಗೊಳಿಸಿ ಮುಂದೆ ಹೀಗಾಗದಂತೆ ಪರ್ಯಾಯ ಕ್ರಮಕೈಗೊಳ್ಳಬೇಕು. -ಪ್ರೇಮಾನಂದ ನಾಯಕ್‌, ಕಲ್ಸಂಕ

ಸರಿಯಾದ ಸಮಯಕ್ಕೆ ನೀರು ಪೂರೈಸಬೇಕು. ಮಧ್ಯರಾತ್ರಿ ಎದ್ದು ನೀರಿಗೆ ಕಾಯುತ್ತ ಕೂರುವ ಪರಿಸ್ಥಿತಿ ಬಂದಿದೆ. -ಕುಶಾಲ, ಹುಡ್ಕೊ ಎಲ್‌ಐಜಿ ಕಾಲನಿ, ಮಣಿಪಾಲ

ನೀರಿನ ಸಂಪರ್ಕ ಪಡೆಯಲು ರಸ್ತೆಯನ್ನು ಕ್ರಾಸ್‌ ಮಾಡಿ ಪೈಪ್‌ ಲೈನ್‌ ನಿರ್ಮಾಣಕ್ಕೆ ಸಮಸ್ಯೆ ಯಾಗುತ್ತಿದೆ. -ಪ್ರತಾಪ್‌, ಕೋರ್ಟ್‌ ರಸ್ತೆ

ಮಂಚಿ ದುಗ್ಲಿ ಪದವು ಭಾಗದಲ್ಲಿ ರಸ್ತೆ ಮತ್ತು ನೀರಿನ ಸಮಸ್ಯೆ ಬಗೆಹರಿಸಬೇಕು. ಬೋರ್‌ವೆಲ್‌ ಸಂಪರ್ಕ ಮೋಟಾರ್‌ ಸರಿಪಡಿಸಿ. -ವಸಂತಲಕ್ಷ್ಮೀ , ಶಶಿಕಲಾ

ಸಂಜೆ, ಮುಂಜಾನೆ ಉದ್ಯೋಗಸ್ಥ ಮಹಿಳೆಯರು ಹೆಚ್ಚು ಸಂಚರಿಸುವ ಪಡುಕೆರೆ ಸೇತುವೆಗೆ ಸರಿಯಾಗಿ ಲೈಟ್‌ ವ್ಯವಸ್ಥೆ ಕಲ್ಪಿಸಬೇಕು ಮತ್ತು ಮಲ್ಪೆ ರಸ್ತೆ ಬದಿ ಇರುವ ಹಳೆಯ ಬೋಟ್‌ ಪರಿಕರಗಳನ್ನು ತೆರವುಗೊಳಿಸಿ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಕ್ರಮವಾಗಬೇಕು. – ಆನಂದ್‌, ಮಲ್ಪೆ

ತ್ವರಿತಗತಿಯಲ್ಲಿ ನೀರಿನ ಸಮಸ್ಯೆಯ ಪರಿಹಾರ

ಟಾಪ್ ನ್ಯೂಸ್

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.