ಮನೆಯಿಂದಲೇ ಗುರುವಂದನೆ; ಭಾರತೀಯ ಅಂಚೆ ಇಲಾಖೆಯಿಂದ ಟೀಚರ್ಸ್‌ ಡೇ ಸ್ಪೆಶಲ್

Team Udayavani, Aug 28, 2020, 6:19 AM IST

ಮನೆಯಿಂದಲೇ ಗುರುವಂದನೆ; ಭಾರತೀಯ ಅಂಚೆ ಇಲಾಖೆಯಿಂದ ಟೀಚರ್ಸ್‌ ಡೇ ಸ್ಪೆಶಲ್

ಉಡುಪಿ: ಶಿಕ್ಷಕರ ದಿನವನ್ನು ಈ ಬಾರಿ ವಿಶೇಷವಾಗಿ ಆಚರಿಸಿಕೊಳ್ಳಲು ಅಂಚೆ ಇಲಾಖೆ ಮುಂದಾಗಿದೆ. ತಮ್ಮ ಜೀವನವನ್ನು ರೂಪಿಸಿದ ಗುರುಗಳಿಗೆ ಗುರುವಂದನೆ ಸಲ್ಲಿಸುವ ಪ್ರಕ್ರಿಯೆಯನ್ನು ಮನೆಯ ಒಳಗೇ ಕುಳಿತು ಸುಲಭ ವಿಧಾನದಲ್ಲಿ ಮಾಡಲು ಯೋಜನೆ, ಯೋಚನೆಗಳನ್ನು ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ಅಂಚೆ ವೃತ್ತ ರೂಪಿಸಿದೆ.

ಶಾಲಾ-ಕಾಲೇಜುಗಳು ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ಗುರು ವಂದನೆ ಸಲ್ಲಿಸಲು ಈ ಸೇವಾ ವಿಧಾನ ಹೆಚ್ಚು ಪರಿಣಾಮಕಾರಿಯಾಗಿದೆ. ಇದಕ್ಕೆ ಕರ್ನಾಟಕ ಅಂಚೆ ವೃತ್ತವು ಶಿಕ್ಷಕರ ದಿನಕ್ಕೆ “ಗುರುವಂದನ’ ಎಂಬ ವಿಶೇಷ ಪರಿಕಲ್ಪನೆಯನ್ನು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಶಾರದಾ ಸಂಪತ್‌ ಅವರು ಬೆಂಗಳೂರಲ್ಲಿ ಲೋಕಾರ್ಪಣೆಗೊಳಿಸಿದ್ದಾರೆ.

ಹೀಗೆ ಸಲ್ಲಿಸಿ
Karnatakapost.gov.in ಮುಖಾಂತರ ನಮ್ಮ ದೇಶ ಮಾತ್ರವಲ್ಲದೆ ಹೊರದೇಶದಲ್ಲಿರುವವರೂ ಭಾರತದ ಯಾವುದೇ ಪ್ರದೇಶದಲ್ಲಿರುವ ತಮ್ಮ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಬಹುದಾಗಿದೆ. ಬಹು ಸುಲಭವಾಗಿ, ಬಲು ತ್ವರಿತವಾಗಿ ಕೇವಲ 100 ರೂ. ವೆಚ್ಚದಲ್ಲಿ ಆಗುವ ಈ ಸೇವಾ ಯೋಜನೆಗಾಗಿ https://karnatakapost.gov.in/ guru_vandana ಇದಕ್ಕೆ ಲಾಗಿನ್‌ ಆಗಿ ಶುಲ್ಕವನ್ನು ಅಂತರ್ಜಾಲ ಬ್ಯಾಂಕಿಂಗ್‌ ನಮ್ಮ ಇಲಾಖೆಯ ಐಪಿಪಿಬಿ, ಗೂಗಲ್‌ ಪೇ ಭೀಮ್‌ ಆ್ಯಪ್‌, ಫೋನ್‌ ಪೇ, ಮುಂತಾದ ವಿಧಾನಗಳಿಂದ ಪಾವತಿಸಬಹುದಾಗಿದೆ. ಅದರ ಯುಟಿಆರ್‌ ಕ್ರಮಸಂಖ್ಯೆಯನ್ನು ಹಾಕಿ ಮುಂದುವರಿದು ಕಳುಹಿಸುವವರ ಪೂರ್ಣ ವಿವರ ನೀಡಬೇಕು.

ಚಿತ್ರ ತೆಗೆದು ಕಳುಹಿಸುವ ಅವಕಾಶ
ಹಾಗೇ ಮುಂದುವರಿದಾಗ ಶಿಕ್ಷಕರಿಗೆ ಕಳುಹಿಸಲು ಸುಮಾರು ಮೂರು ವಿಧದ ಆಕರ್ಷಕ ಕೊಡುಗೆಗಳಾದ ಖಾದಿ ಫೇಸ್‌ ಮಾಸ್ಕ್, ಸೀಡ್‌ ಪೆನ್ಸಿಲ್‌ ಹಾಗೂ ಬುಕ್‌ ಮಾರ್ಕ್‌ಗಳು ವೀಕ್ಷಣೆಗೆ ಲಭ್ಯವಿದ್ದು ಪ್ರತಿಯೊಂದು ಕೊಡುಗೆಯ‌ ಮುಂದೆ ವಿನ್ಯಾಸ ಅಂಕಿ ನಮೂದಿಸಲಾಗಿದೆ. ಇದಕ್ಕೆ ಬೇಕಾದ ಕೊಡುಗೆಗಳನ್ನು ಆರಿಸಿ ಮುಂದುವರಿದಾಗ ಸಂದೇಶ ಕಳುಹಿಸುವ ಆಯ್ಕೆ ಕಾಣಸಿಗುತ್ತದೆ. ಸುಮಾರು ಮೂರು ರೀತಿಯ ಮುದ್ರಿತ ಸಂದೇಶಗಳನ್ನು ಆಯ್ಕೆ ಮಾಡುವ, ಇಲ್ಲವೇ ನಮಗೆ ಬೇಕಾದ ಸಂದೇಶ ಬರೆದು ಅದರ ಫೋಟೋ ತೆಗೆದು ಕಳುಹಿಸುವ ಅವಕಾಶವೂ ಲಭ್ಯವಿದೆ.

ಗುರುವಂದನೆಯ ಅರ್ಥಪೂರ್ಣ ಸಂದೇಶ
ಶಿಕ್ಷಕರ ದಿನದ ಸಾಮಾನ್ಯ ಸಂದೇಶಗಳು ಅಥವಾ ಡಾ| ಎಸ್‌.ರಾಧಾಕೃಷ್ಣನ್‌ ಅವರ ಚಿತ್ರ ಹೊತ್ತ ಸಂದೇಶಗಳು ಇಲ್ಲವೇ ಎಪಿಜೆ ಅಬ್ದುಲ್‌ ಕಲಾಂ ರವರ ಚಿತ್ರ ಹೊತ್ತ ಸಂದೇಶಗಳನ್ನು ಆಯ್ಕೆ ಮಾಡಬಹುದಾಗಿದೆ. ಕೊನೆಯಲ್ಲಿ ಸ್ವೀಕರಿಸುವವರ ಪೂರ್ಣ ವಿವರಗಳನ್ನು ಬರೆಯುವ ವಿಭಾಗವಿದೆ. ಕೇವಲ 100 ರೂ.ಗಳಲ್ಲಿ ಆಕರ್ಷಕ ಕೊಡುಗೆಗಳು, ಗುರುವಂದನೆಯ ಅರ್ಥಪೂರ್ಣ ಸಂದೇಶಗಳನ್ನು ಹೊತ್ತು ವಿಶಿಷ್ಟ ವಿನ್ಯಾಸದ ಗುರುವಂದನ ಲಕೋಟೆಗಳಲ್ಲಿ ತಮ್ಮ ನೆಚ್ಚಿನ ಗುರುಗಳನ್ನು ಸೇರುತ್ತವೆ. ಗುರುಗಳಿಗೆ ಸಲ್ಲಿಸಲು ಕೊಡುಗೆಗಳ ಸೀಮಿತ ದಾಸ್ತಾನು ಲಭ್ಯವಿದ್ದು ಈ ಸೇವಾ ವಿಧಾನದ ಮೂಲಕ ಗುರುವಂದನೆ ಸಲ್ಲಿಸಲು ಸೆ.1ರವರೆಗೆ ಇಲ್ಲವೇ ಕೊಡುಗೆಗಳ ದಾಸ್ತಾನು ಮುಗಿಯುವವರೆಗೆ ಮಾತ್ರ ಚಾಲ್ತಿ ಯಲ್ಲಿರುತ್ತದೆ.

ಮನೆಯಿಂದಲೆ ಗುರುವಂದನೆ
ಗುರುವಂದನಾ ಲಕೋಟೆಯು “ವೇರ್‌ ಮಾಸ್ಕ್ ಡಿಯರ್‌ ಟೀಚರ್‌ ಸ್ಟೇ ಸೇಫ್’ ಎಂಬ ಆಕರ್ಷಕ ಸ್ಲೋಗನ್‌ ಹಾಗೂ ಚೆಂದದ ಚಿತ್ರ ವಿನ್ಯಾಸ ಹೊಂದಿದ್ದು ತ್ವರಿತ ಅಂಚೆಯ ಮೂಲಕ ಗುರುಗಳನ್ನು ತಲುಪುವಂತೆ ವಿನ್ಯಾಸ ರೂಪಿಸಲಾಗಿದೆ. ನಮ್ಮ ದೇಶದ ಯಾವುದೇ ಮೂಲೆಗೂ ಈ ಗುರು ವಂದನಾ ಕೊಡುಗೆ ಕಳುಹಿಸಿ ‌ಬಹುದಾಗಿದೆ. ಹೊರದೇಶದಲ್ಲಿರುವ ಭಾರತೀಯರು ತಮ್ಮ ಇಲ್ಲಿನ ಬ್ಯಾಂಕ್‌ ಖಾತೆಯ ಮೂಲಕ ಭಾರತದೊಳ ಗಿರುವ ಗುರುಗಳಿಗೂ ಕೊಡುಗೆ ಕಳುಹಿಸಬಹುದಾಗಿದೆ. ಈ ಮೂಲಕ ಮನೆಯೊಳಗೇ ಕುಳಿತು ತಮ್ಮ ನೆಚ್ಚಿನ
ಶಿಕ್ಷಕರಿಗೆ ಗುರುವಂದನೆ ಸಲ್ಲಿಸಬಹು ದಾದ ಕರ್ನಾಟಕ ಅಂಚೆ ವೃತ್ತದ ಈ ಸೇವಾ ಯೋಜನೆ ಜನಸಾಮಾನ್ಯರಲ್ಲಿ ಸಂಚಲನ ಮೂಡಿಸಿದೆ.

ಮತ್ತೂಂದು ಸುತ್ತಿನ ಯತ್ನ
ಮಾಜಿ ರಾಷ್ಟ್ರಪತಿ ದಿ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನವನ್ನು ಭಾರತಾದ್ಯಂತ ಶಿಕ್ಷಕರ ದಿನ ಎಂದು ಆಚರಿಸಲಾಗುತ್ತದೆ. ಕೋವಿಡ್‌-19 ಕಾರಣದಿಂದಾಗಿ ಮನೆಯೊಳಗೆ ಕುಳಿತು ರಾಖೀ ಪೋಸ್ಟ್‌ ಮುಖಾಂತರ ದೇಶಾದ್ಯಂತದ ಸಹೋದರರಿಗೆ, ಸೈನಿಕರಿಗೆ
ಕಳುಹಿಸುವ ವಿನೂತನ ವಿಧಾನದ ಯಶಸ್ಸಿನ ಬಳಿಕ ಈಗ ಅಂಚೆ ಇಲಾಖೆ ಮತ್ತೂಂದು ಸುತ್ತಿಗೆ ಅಣಿಯಾಗಿದೆ.
-ನವೀನ್‌ ಚಂದರ್‌, ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.