ಪಾರಂಪರಿಕ ಸೌಂದರ್ಯದಲ್ಲಿ ಕಂಗೊಳಿಸುತ್ತಿರುವ ಮಠ

ಉಡುಪಿ ನಗರಿಗೆ ಸಾಂಸ್ಕೃತಿಕ ಸ್ಪರ್ಶ ನೀಡುವ ಪರ್ಯಾಯ

Team Udayavani, Jan 5, 2020, 11:48 PM IST

29

ಉಡುಪಿ: ಪರ್ಯಾಯೋತ್ಸವವೆಂದರೆ ಇದು ಭೂತ ಮತ್ತು ಭವಿಷ್ಯ ಕಾಲದ ನಡುವಿನ ಕೊಂಡಿ. ವರ್ತಮಾನ ಕಾಲದಲ್ಲಿದ್ದು ಹಳೆಯ ಸಾಂಸ್ಕೃತಿಕ ಕೊಂಡಿಯನ್ನು ಮರು ನೆನಪಿಸುವ ಒಂದು ಪ್ರಕ್ರಿಯೆ. ಈ ಥೀಮ್‌ನ್ನು ವರ್ತಮಾನ ಕಾಲದಲ್ಲಿ ತೋರಿಸುವ ಯಥಾಶಕ್ತಿ ಪ್ರಯತ್ನ ಅದಮಾರು ಮಠದಲ್ಲಿ ನಡೆದಿದೆ. ಇದು ಪ್ರಾಚೀನ ಸಾಂಸ್ಕೃತಿಕ ಸೊಗಡು ಮರೆಮಾಚಿ ಅಭಿವೃದ್ಧಿಯ ಶರವೇಗದಲ್ಲಿ ಮುನ್ನಡೆಯುತ್ತಿರುವ ನಗರ ಪ್ರದೇಶದಲ್ಲಿ…

ಹೆರಿಟೇಜ್‌ ಕಲ್ಪನೆ
ಶ್ರೀಕೃಷ್ಣಮಠದಲ್ಲಿ ಮುಂದಿನ ಪರ್ಯಾಯ ಅದಮಾರು ಮಠದ್ದು. ಹೀಗಾಗಿ ಮಠ ಸುಣ್ಣಬಣ್ಣಗಳೊಂದಿಗೆ ಕಂಗೊಳಿಸುತ್ತಿದೆ. ಅದಮಾರು ಮಠದೊಳಗೆ ಪ್ರವೇಶಿಸಿದರೆ ಮಣಿಪಾಲದ ಹೆರಿಟೇಜ್‌ ವಿಲೇಜ್‌ ಪ್ರವೇಶಿಸಿದ ಭಾವನೆ ಮೂಡುತ್ತದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅದಮಾರು ಕಿರಿಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹೆರಿಟೇಜ್‌ ವಿಲೇಜ್‌ನ್ನು ನೋಡಿ ಅದಮಾರು ಮಠವನ್ನು ನವೀಕರಿಸುವಾಗ ಅದೇ ರೀತಿಯನ್ನು ಅನುಸರಿಸಲು ನಿರ್ಧರಿಸಿದರು. ಹೀಗಾಗಿ ಸುಮಾರು 50-100 ವರ್ಷಗಳ ಹಿಂದಿನ ಮನೆಗಳ ಶೈಲಿ ಇಲ್ಲಿ ಭಾಸವಾಗುತ್ತದೆ. ಮಠದ ಗರ್ಭಗುಡಿಯ ಹೊರ ಪ್ರಾಂಗಣದ ಸುತ್ತ ಮಣ್ಣಿನ ಗೋಡೆಯ ಗಾರೆಯನ್ನು ಪುರುಷೋತ್ತಮ ಅಡ್ವೆಯವರ ಮಾರ್ಗದರ್ಶನದಲ್ಲಿ ಮಾಡಲಾಗಿದೆ. ಗರ್ಭಗುಡಿ ಸುತ್ತ ಮುಂದಿನ ಮಳೆಗಾಲದಿಂದ ಫ‌ಲ ಕೊಡುವಂತೆ ಮಳೆ ನೀರಿನ ಕೊಯ್ಲು ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಹೊಸ ವಯರಿಂಗ್‌
ಇಡೀ ಮಠದ ವಿದ್ಯುದ್ದೀಕರಣವನ್ನು ಮರು ಜೋಡಿಸಲಾಗಿದೆ. 1950- 60ರಲ್ಲಿ ವಿದ್ಯುದ್ದೀಕರಣ ಆರಂ ಭವಾದ ಬಳಿಕ ಇದುವರೆಗೆ ಸಾಕಷ್ಟು ಆಧುನೀಕರಣವಾಗಿದೆ. ಹಳೆಯದಾಗಿದ್ದ ವಯರಿಂಗ್‌ನ್ನು ಮತ್ತೆ ವಯರಿಂಗ್‌ ಮಾಡಲಾಗಿದೆ. ದಾರು ಶಿಲ್ಪದ ವೈಭವ ಮಠದಲ್ಲಿರುವುದರಿಂದ ಮರಮಟ್ಟುಗಳ ರಚನೆಗಳಿರುವಲ್ಲಿ ಅವುಗಳಿಗೆಂದೇ ಸೂಚಿತವಾದ ಎಫ್ಆರ್‌ಎಲ್‌ಎಸ್‌ (ಫ‌ಯರ್‌ ರೆಸಿಸ್ಟೆಂಟ್‌ ಲೋ ಸ್ಮೋಕ್‌) ಗುಣಮಟ್ಟದ ವಯರುಗಳನ್ನು ಹೊಸದಾಗಿ ಜೋಡಿಸಲಾಗಿದೆ. ಮೇನ್‌ ಬೋರ್ಡ್‌, ಮೇನ್‌ ಪಾನೆಲ್‌ ಬೋರ್ಡ್‌, ಹಳೆಯ ಕಪ್ಪು ಬಣ್ಣದ ಸ್ವಿಚ್‌ ಅಳವಡಿಸಲಾಗಿದೆ.ಇದೆಲ್ಲ ಹೆರಿಟೇಜ್‌ ವಿಲೇಜ್‌ನ ಹಸ್ತಶಿಲ್ಪ ಟ್ರಸ್ಟ್‌ ಟ್ರಸ್ಟಿ ಹರೀಶ್‌ ಪೈ ಮಾರ್ಗ ದರ್ಶನದಲ್ಲಿ ನಡೆದಿದೆ.

ದಾರು ಶಿಲ್ಪ
ಗಳು ಹೆಚ್ಚಿಗೆ ಇರುವುದರಿಂದ ಧೂಳು ಬಂದರೂ ಅದನ್ನು ಸುಲಭ ದಲ್ಲಿ ಸರಿಪಡಿಸುವ ತಂತ್ರಜ್ಞಾನವನ್ನು ಅಳವಡಿ ಸಲಾಗಿದೆ. ಸ್ವಾಮೀಜಿಯವರು ವಿವಿಧೆಡೆ ಸಂಚಾರ ಮಾಡುವಾಗ ಕೊಡುವ ಸ್ಮರಣಿಕೆಗಳು ಎಲ್ಲೋ ಮೂಲೆಯಲ್ಲಿ ಬಿದ್ದಿರುವುದು ಸಹಜ. ಇವುಗಳನ್ನು ಶೋಕೇಸ್‌ನಲ್ಲಿ ಸಂಗ್ರಹಿಸಿಡಲಾಗಿದೆ. ಇದೂ ಕೂಡ ಮುಂದೊಂದು ದಿನ ಇತಿಹಾಸಗಳನ್ನು ಸಾರುತ್ತವೆ.

ಪಾರಂಪರಿಕ ಸೌಂದರ್ಯ
ಅದಮಾರು ಕಿರಿಯ ಶ್ರೀಗಳ ವಿಶೇಷ ಆಸ್ಥೆಯಿಂದ ಪ್ರಾಚೀನ ಸಾಂಸ್ಕೃತಿಕ ಬೇರುಗಳನ್ನು ಮರುಸ್ಥಾಪಿಸಲಾಗುತ್ತಿದೆ. ಅವರು ಯಾರೇ ಬಂದು ಸಲಹೆ ನೀಡಿದರೂ ಹೆರಿಟೇಜ್‌ ವಿಲೇಜ್‌ನ್ನು ನೋಡಿ ಬಂದು ಸಲಹೆ ಕೊಡಿ ಎಂದು ಹೇಳುತ್ತಾರೆ. ಸಂಚಾರದಲ್ಲಿದ್ದರೂ ವಾಟ್ಸ್‌ ಆ್ಯಪ್‌ನಲ್ಲಿ ನೋಡಿ ಸಲಹೆ ಕೊಡುತ್ತಿದ್ದರು. ಸಂಸ್ಕೃತಿಯ ಮೌಲ್ಯವನ್ನು ಸಾಧ್ಯವಾದಷ್ಟು ಮರುಸ್ಥಾಪಿಸಲು ಯತ್ನಿಸಿದ್ದೇವೆ. -ಟಿ.ಹರೀಶ್‌ ಪೈ, ಟ್ರಸ್ಟಿ, ಹಸ್ತಶಿಲ್ಪ ಟ್ರಸ್ಟ್‌, ಹೆರಿಟೇಜ್‌ ವಿಲೇಜ್‌, ಮಣಿಪಾಲ.

ಮಣ್ಣಿನ ಗೋಡೆಯ ಚೆಲುವು
ಮಠದ ಗೋಡೆಗಳನ್ನು ನವೀಕರಿಸುವಾಗ ಹಿಂದಿನ ಮಣ್ಣಿನ ಗೋಡೆಯನ್ನು ನಿರ್ಮಿಸಿ ಸುಣ್ಣಬಣ್ಣವನ್ನು ಕೊಡಲಾಯಿತು. ಮಣ್ಣಿನ ಗೋಡೆಗಳು ಕಣ್ಮರೆಯಾಗುವಾಗ ಇದು ಮಹತ್ವಪೂರ್ಣವೆನಿಸುತ್ತದೆ.
-ಪುರುಷೋತ್ತಮ ಅಡ್ವೆ,, ಕಲಾವಿದರು.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.