ಉಡುಪಿ ಸಂಜಾತ ಸ್ವಿಸ್‌ ಸಂಸದ


Team Udayavani, Dec 14, 2017, 6:35 AM IST

sanjata.jpg

ಉಡುಪಿ: ಉಡುಪಿಯಲ್ಲಿ ಜನಿಸಿದ ಯುವಕ ರೊಬ್ಬರು ಐರೋಪ್ಯ ದೇಶ ಸ್ವಿಟ್ಸರ್‌ಲ್ಯಾಂಡ್‌ನ‌ ಸಂಸತ್ತನ್ನು ಪ್ರವೇಶಿಸಿದ್ದಾರೆ. ವಿಪರ್ಯಾಸ ಎಂದರೆ, ಅವರಿಗೆ ತನ್ನ ಜನ್ಮಸ್ಥಳ ಉಡುಪಿ ಎಂಬುದರ ವಿನಾ ಇನ್ಯಾವ ಮಾಹಿತಿಗಳೂ ತಿಳಿದಿಲ್ಲ. 

ಹೆತ್ತಮ್ಮನಿಂದ ದೂರ: 1970ರ ಮೇ 1ರಂದು ಉಡುಪಿಯ ಬಾಸೆಲ್‌ ಮಿಶನ್‌ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಯಾವುದೋ ಕಾರಣದಿಂದ ಮಗುವನ್ನು ತ್ಯಜಿಸಿ ತೆರಳಿದ್ದರು. ಆಗ ಸ್ವಿಟ್ಸರ್‌ಲ್ಯಾಂಡ್‌ನಿಂದ ಬಂದು ಕೇರಳದ ಕಣ್ಣೂರು ಜಿಲ್ಲೆಯ ತಲಶೆÏàರಿಯಲ್ಲಿ ಅನಾಥಾಶ್ರಮವನ್ನು ನಡೆಸುತ್ತಿದ್ದ ಜರ್ಮನ್‌ ಮಿಶನರಿ ದಂಪತಿ ಫ್ರಿಟ್ಸ್‌ ಗುಗ್ಗರ್‌ -ಎಲಿಜಬೆತ್‌ ಗುಗ್ಗರ್‌, ಬಾಸೆಲ್‌ ಮಿಶನ್‌ ಆಸ್ಪತ್ರೆಯನ್ನು ಸಂಪರ್ಕಿಸಿ ಆ ಮಗುವನ್ನು ಪಡೆದುಕೊಂಡಿದ್ದರು.

ಮಗುವಿಗೆ ನಿಕ್‌ ಗುಗ್ಗರ್‌ ಎಂಬ ಹೆಸರಿಟ್ಟರು. ಮಗುವನ್ನು ತಲಶೆÏàರಿಗೆ ಕರೆದೊಯ್ದು ಸಾಕಲಾರಂಭಿಸಿದರು. ಬಳಿಕ ಗುಗ್ಗರ್‌ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು. ನಾಲ್ಕು ವರ್ಷಗಳ ಅನಂತರ ಫ್ರಿಟ್ಸ್‌ ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ಸ್ವದೇಶಕ್ಕೆ ವಾಪಸಾಗಿದ್ದರು.

ಈ ನಿಕ್‌ ಗುಗ್ಗರ್‌ ಈಗ ಸ್ವಿಟ್ಸರ್‌ಲ್ಯಾಂಡ್‌ ಸಂಸತ್ತನ್ನು ಪ್ರವೇಶಿಸಿದ್ದಾರೆ. ಅಲ್ಲಿನ ಅತಿ ಕಿರಿಯ ಸಂಸದ ಎಂಬ ದಾಖಲೆಯನ್ನೂ ಸ್ಥಾಪಿಸಿದ್ದಾರೆ. ಇವರು ಸ್ವಿಸ್‌ ಸಂಸತ್ತನ್ನು ಪ್ರವೇಶಿಸಿದ ಪ್ರಥಮ ಭಾರತೀಯ ಸಂಜಾತ.

ನಿಕ್‌ ಗುಗ್ಗರ್‌ ಅವರ ರಾಜಕೀಯ – ಸಾಮಾಜಿಕ ಕರ್ಮಭೂಮಿ ಸ್ವಿಟ್ಸರ್‌ಲ್ಯಾಂಡ್‌ನ‌ ಆರನೇ ಅತಿ ದೊಡ್ಡ ನಗರ ವಿಂಟರ್‌ತೂರ್‌. ಮೆಶಿನ್‌ ಮೆಕ್ಯಾನಿಕ್‌, ಸಮಾಜ ಕಾರ್ಯ ನಿರ್ವಹಣೆ, ಅಗೋಜಿಕ್‌ ಸೆಂಟರ್‌ ಬಾಸೆಲ್‌ನಲ್ಲಿ ಇನ್ನೋವೇಶನ್‌ ಮ್ಯಾನೇಜೆ¾ಂಟ್‌, ರಾಜಕೀಯ ಸಂವಹನದಲ್ಲಿ ಉನ್ನತಾಧ್ಯಯನ, ಥಾçಲಂಡ್‌ ಮತ್ತು ಈಜಿಪ್ಟ್ನಲ್ಲಿ  ಸುನಾಮಿ ನಿಗಾ ತಂಡದಲ್ಲಿ ಅಧ್ಯಯನ ಇತ್ಯಾದಿ ವಿಷಯಗಳಲ್ಲಿ ನಿಕ್‌ ಗುಗ್ಗರ್‌ ಸಾಧನೆ ಮಾಡಿದ್ದಾರೆ. “ಯೂತ್‌ ಚರ್ಚ್‌’ ಹೆಸರಿನಲ್ಲಿ ಕಡಿಮೆ ವೆಚ್ಚದಲ್ಲಿ ವಾರದಲ್ಲಿ ಐದು ದಿನ ಆಹಾರ ಒದಗಿಸುವ ನಿಕ್‌ ಗುಗ್ಗರ್‌ ಅವರ ಯೋಚನೆ ಕಾರ್ಯರೂಪಕ್ಕೆ ಇಳಿದಿದೆ. ಕಡಿಮೆ ಕ್ಯಾಲರಿಯ ಆಯುರ್ವೇದೀಯ ಶುಂಠಿ ಪಾನೀಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದು ಅವರ ಇತ್ತೀಚಿನ ಇನ್ನೊಂದು ಸಮಾಜಮುಖೀ ಯೋಜನೆ.

ರಾಜಕೀಯವಾಗಿ ನಿಕ್‌ ಗುಗ್ಗರ್‌ 2002ರಿಂದ ಒಂದೊಂದೇ ಹೆಜ್ಜೆ ಇರಿಸಿ ಮುನ್ನಡೆ ಸಾಧಿಸಿದ್ದಾರೆ. 2002ರಲ್ಲಿ ವಿಂಟರ್‌ತೂರ್‌ನ ಪ್ಯಾರಿಶ್‌ ಕೌನ್ಸಿಲ್‌ಗೆ (ಚರ್ಚ್‌ಗೆ ಸಂಬಂಧಿಸಿದ ಮಂಡಳಿ) ಆಯ್ಕೆಯಾದ ಅವರು ವಿಂಟರ್‌ತೂರ್‌ ನಗರ ಸಂಸ್ಥೆಗೆ 2010ರಲ್ಲಿ ಆಯ್ಕೆಯಾದರು. 2017ರಲ್ಲಿ ನ್ಯಾಶ ನಲ್‌ ಕೌನ್ಸಿಲ್‌ ಆಫ್ ಸ್ವಿಟ್ಸರ್‌ಲ್ಯಾಂಡ್‌ಗೆ ಪ್ರವೇಶ ಪಡೆದಿದ್ದಾರೆ. ವಿದೇಶಾಂಗ ವ್ಯವಹಾರ ಸಚಿವರಿಗೆ ಸಲಹೆ ನೀಡುವ ವಿದೇಶಾಂಗ ವ್ಯವಹಾರ ಮಂಡಳಿ ಸದಸ್ಯರಾಗಿ ನಿಕ್‌ ಗುಗ್ಗರ್‌ ಪಾತ್ರ ವಹಿಸುತ್ತಾರೆ. ಸ್ವಿಟ್ಸರ್‌ಲ್ಯಾಂಡ್‌ನ‌ಲ್ಲಿ ಏಳು ಕಾರ್ಯನಿರ್ವಾಹಕ ಸಚಿವರ ತಂಡ ಆಡಳಿತ ನಡೆಸುತ್ತದೆ. ಇವರಲ್ಲಿ ಒಬ್ಬರು ವರ್ಷಕ್ಕೆ ಒಬ್ಬರಂತೆ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. 
ನಿಕ್‌ ಗುಗ್ಗರ್‌ ಪತ್ನಿ ಬಿಯಟ್ರಿಸ್‌ ಜೋಸಿ. ಈ ದಂಪತಿಗೆ ಇಬ್ಬರು ಪುತ್ರರು, ಒಬ್ಬಳು ಪುತ್ರಿ ಇದ್ದಾಳೆ.

ಸದ್ಯವೇ ಭಾರತಕ್ಕೆ ನಿಕ್‌ ಗುಗ್ಗರ್‌
ನಿಕ್‌ ಗುಗ್ಗರ್‌ ಅವರು ಜ. 7 ರಂದು ಭಾರತಕ್ಕೆ ಆಗಮಿಸಲಿ ದ್ದಾರೆ. ಜ. 12ರ ವರೆಗೆ ಭಾರತ ಸರಕಾರದ ಅತಿಥಿಯಾಗಿ ಸಭೆ ಗಳಲ್ಲಿ ಪಾಲ್ಗೊಳ್ಳುವರು. ಭಾರತ ಮತ್ತು ಸ್ವಿಸ್‌ ದೇಶದ ನಡುವೆ ಒಪ್ಪಂದ ಏರ್ಪಟ್ಟು 70 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿ ವಾಲಯ ಏರ್ಪಡಿಸಿರುವ ಕಾರ್ಯ ಕ್ರಮವಿದು. ನಿಕ್‌ ಗುಗ್ಗರ್‌ ಅವರು ಇದುವರೆಗೆ ಆರು ಬಾರಿ ಭಾರತಕ್ಕೆ ಬಂದಿದ್ದಾರೆ. ಈ ಸಲ ಸಮಯಾ ಭಾವದ ಕಾರಣ ಉಡುಪಿಗೆ ಬರುತ್ತಿಲ್ಲ. ಈ ಬೇಸಗೆಯಲ್ಲಿ ಅವರು ಉಡುಪಿಗೆ ಬರುವ ಸಾಧ್ಯತೆ ಇದೆ. 

ಮಗನಿಗೆ ಉಡುಪಿ ಎಂದರೆ ಅಭಿಮಾನ 
ನನ್ನ ಅಜ್ಜಿ ಟ್ರೂಡಿ ಕರ್ಕಡರು ಉಡುಪಿ ಬಾಸೆಲ್‌ ಮಿಶನರಿಯಲ್ಲಿ ಕಾರ್ಯನಿರ್ವಹಿಸಿದ್ದರು. ಇವರಿಗೂ ನಿಕ್‌ ಗುಗ್ಗರ್‌ ತಂದೆ-ತಾಯಿಗಳಿಗೂ ಸ್ನೇಹವಿತ್ತು. ನಾನು 1986ರಲ್ಲಿ  ಸ್ವಿಟ್ಸರ್‌ಲ್ಯಾಂಡ್‌ಗೆ ಪಿಯುಸಿ, ಪದವಿ ಶಿಕ್ಷಣಾರ್ಥ ತೆರಳಿದ್ದೆ. 1988ರಲ್ಲಿ ನಿಕ್‌ ಗುಗ್ಗರ್‌ ತಂದೆ-ತಾಯಂದಿರ ಸಂಪರ್ಕ ಒದಗಿತು. ಅಂದಿನಿಂದಲೂ ನನಗೆ ನಿಕ್‌ ಗುಗ್ಗರ್‌ ಮನೆಯವರ ಸಂಪರ್ಕವಿದೆ, ನಾವು ಕುಟುಂಬ ಸ್ನೇಹಿತರು. ಐದಾರು ವರ್ಷಗಳ ಹಿಂದೆ ಉಡುಪಿಗೆ ಫ್ರಿಟ್ಸ್‌ ಗುಗ್ಗರ್‌ ಮತ್ತು ಎಲಿಜಬೆತ್‌ ಗುಗ್ಗರ್‌ ಬಂದಿದ್ದಾಗ ನಮ್ಮ ಉಡುಪಿ ಮನೆಯಲ್ಲಿದ್ದರು. ಆಗ ಅವರು “ನಿಕ್‌ ಗುಗ್ಗರ್‌ಗೆ ಭಾರತದ ಮೇಲೆ, ವಿಶೇಷವಾಗಿ ಉಡುಪಿಯ ಮೇಲೆ ಅಭಿಮಾನವಿದೆ’ ಎಂದು ಹೇಳಿದ್ದರು. ಉಡುಪಿಯಲ್ಲಿ ಜನಿಸಿದ ಮಗುವೊಂದು ಸ್ವಿಟ್ಸರ್‌ಲ್ಯಾಂಡ್‌ ಸಂಸತ್ತಿಗೆ ಪ್ರವೇಶ ಪಡೆದದ್ದು ನನಗೆ ಬಹಳ ಸಂತೋಷ ತಂದಿದೆ. ನಿಕ್‌ ಗುಗ್ಗರ್‌ 1980ರ ದಶಕದಲ್ಲಿ ಒಮ್ಮೆ ಉಡುಪಿ ಮಿಶನ್‌ ಆಸ್ಪತ್ರೆಗೆ ಬಂದು ತನ್ನ ಜನನದ ಬಗ್ಗೆ  ವಿಚಾರಿಸಿದ್ದರಂತೆ. 
– ಹೈಡಿ ಶಿರಿ
(ಹೈಡಿ ಶಿರಿ, ಉಡುಪಿ ಮಿಶನ್‌ ಕಂಪೌಂಡ್‌ ನಿವಾಸಿ. ನಿಕ್‌ ಗುಗ್ಗರ್‌ ಉಡುಪಿಯ ಸಂಪರ್ಕ ಉಳಿಸಿಕೊಳ್ಳಲು ಮುಖ್ಯ ಕಾರಣರು. ಹಿಂದೂಸ್ಥಾನ್‌ ಸಾಮಿಲ್‌ ಮಾಲಕರಾಗಿದ್ದ ದಿ| ಸುವಾರ್ತಪ್ಪ ಕರ್ಕಡ ಮತ್ತು ದಿ| ಟ್ರೂಡಿ ಕರ್ಕಡರ ಮೊಮ್ಮಗಳು)

– ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.