Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ
ತೆಂಗು ಬೆಳೆಗಿಲ್ಲದ ಹೆಚ್ಚಿನ ಒಲವು; ಪೂರೈಕೆ ಕಡಿಮೆ
Team Udayavani, Sep 20, 2024, 2:58 PM IST
ಉಡುಪಿ: ನಗರದ ಮಾರುಕಟ್ಟೆಯಲ್ಲಿ ಎಳನೀರು ಕೊರತೆ ಎದುರಾಗಿದೆ. ಇಲ್ಲಿಯವರೆಗೆ ಆಸರೆಯಾಗಿದ್ದ ಹೊರಜಿಲ್ಲೆಯ ಎಳನೀರೂ ಇದೀಗ ಪೂರೈಕೆಯಾಗುತ್ತಿಲ್ಲ. ಅನಿವಾರ್ಯವಾಗಿ ತಮಿಳುನಾಡಿನಿಂದ ಜಿಲ್ಲೆಯ ಅಂಗಡಿಗಳಿಗೆ ಎಳನೀರು ತರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಳನೀರು ದರ ಸಹ ಗಗನಕ್ಕೇರಿದ್ದು, ಪಂಚಮಿ ಮತ್ತು ಚೌತಿ ಮುಗಿದರೂ ಎಳನೀರು ಮತ್ತು ಬಾಳೆ ಹಣ್ಣಿನ ದರ ಇಳಿಕೆಯಾಗಿಲ್ಲ. ಸ್ಥಳೀಯವಾಗಿ ಬಾರಕೂರು, ಕುಂದಾಪುರದಿಂದ ಎಳನೀರು ಪೂರೈಕೆಯಾಗುತ್ತಿತ್ತು. ಕಾರ್ಮಿಕರ ಕೊರತೆ, ತೆಂಗು ಬೆಳೆಗೆ ಇಲ್ಲದ ಹೆಚ್ಚಿನ ಒಲವು, ಕೊಬ್ಬರಿ ಎಣ್ಣೆಗೆ ಆದ್ಯತೆ ನೆಲೆಯಲ್ಲಿ ಸ್ಥಳೀಯವಾಗಿ ಎಳನೀರು ಪೂರೈಕೆ ಮಾರುಕಟ್ಟೆಗೆ ಕಡಿಮೆಯಾಗುತ್ತಿದೆ.
ತುಮಕೂರು, ಮೈಸೂರು, ತರಿಕೆರೆ, ಚಿಕ್ಕಮಗಳೂರು, ಹಾಸನ ಭಾಗದಿಂದ ಜಿಲ್ಲೆಗೆ ಹೆಚ್ಚು ಎಳನೀರು ಪೂರೈಕೆಯಾಗುತ್ತಿದ್ದರೂ, ಪ್ರಸ್ತುತ ಅಲ್ಲಿಯೇ ಬೇಡಿಕೆ ಹೆಚ್ಚಿದ್ದು, ಇಳುವರಿ ಕಡಿಮೆ ಇರುವ ಕಾರಣ ಪೂರೈಕೆ ಪ್ರಮಾಣ ತಗ್ಗಿದೆ. ಇದೀಗ ಪ್ರಮುಖ ವ್ಯಾಪಾರಿಗಳು ತಮಿಳುನಾಡಿನಿಂದ ಎಳನೀರು ತರಿಸಿ ಮಾರಾಟ ಮಾಡುತ್ತಿದ್ದಾರೆ. ಎಳನೀರು ದರ ಏರಿಕೆಯಾಗುತ್ತಲೇ ಇದ್ದು, ಒಂದು ಎಳನೀರಿಗೆ 40-50 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಗೆಂದಾಳೆ ಎಳನೀರು ಒಂದಕ್ಕೆ 60 ರೂ.ನಂತೆ ಮಾರಾಟವಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
- ಮಳೆ ಬಿಡುವು ನೀಡಿದರೆ ವಿಪರೀತ ಸೆಕೆ; ಎಳನೀರಿಗೆ ಹೆಚ್ಚಿನ ಬೇಡಿಕೆ
ಬಾಳೆ ಹಣ್ಣು ದುಬಾರಿ
ಹಬ್ಬಗಳು ಮುಗಿದರೂ ಬಾಳೆ ಹಣ್ಣಿನ ದರ ಮಾತ್ರ ಕಡಿಮೆಯಾಗಿಲ್ಲ. ಮೈಸೂರು, ಪುಟ್ಬಾಳೆ, ಪಚ್cಬಾಳೆ, ನೇಂದ್ರ, ಬೂದು, ಚಂದ್ರಬಾಳೆ ಸಹಿತ ವಿವಿಧ ಹಣ್ಣಿಗೆ ದರ ಏರಿಕೆಯಾಗಿದ್ದು, ಮಲೆನಾಡು, ಕರಾವಳಿ ಭಾಗದಲ್ಲಿ ಇಳುವರಿ ಕುಸಿತವಾದ ಹಿನ್ನೆಲೆಯಲ್ಲಿ ದರ ಇಳಿಕೆಯಾಗುತ್ತಿಲ್ಲ. ಕೆಜಿ ಒಂದಕ್ಕೆ 70-80 ಮತ್ತು 100 ರೂ.ವರೆಗೆ ಬಾಳೆ ಹಣ್ಣು ಮಾರಾಟವಾಗುತ್ತಿದೆ. ಪುಟ್ಬಾಳೆ ಹಣ್ಣು 90-100ಕ್ಕೆ ಕೆಜಿಗೆ ಮಾರಾಟವಾಗುತ್ತಿದೆ ಎಂದು ನಗರದ ಹಣ್ಣಿನ ವ್ಯಾಪಾರಿಗಳು ತಿಳಿಸಿದ್ದಾರೆ. ಉಡುಪಿ ಮಾರುಕಟ್ಟೆಗೆ ತೀರ್ಥಹಳ್ಳಿ, ಶಿವಮೊಗ್ಗ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣು ಪೂರೈಕೆಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Tata Passes away: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ವಿಧಿವಶ!
Newdelhi: 2028ರ ಅಂತ್ಯದವರೆಗೂ ಉಚಿತ ಅಕ್ಕಿ ಪೂರೈಕೆ: ಕೇಂದ್ರ
UPI: ವಹಿವಾಟು ಮಿತಿ ಏರಿಕೆಗೆ ಆರ್‌ಬಿಐ ನಿರ್ಧಾರ.. ಮಿತಿ 2,000ರೂ.ನಿಂದ 5,000ರೂ.ಗೆ ಏರಿಕೆ
BBK11: ಪ್ರತಿದಿನ ಎಂಜಾಯ್ ಮಾಡುತ್ತಿದ್ದೇನೆ.. ಬಿಗ್ ಬಾಸ್ ಬಿಟ್ಟು ಹೋಗಲ್ಲ ಎಂದ ಜಗದೀಶ್
Mangaluru: ಆಲ್ವಿನ್ ಡಿ’ಸೋಜ ಮೇಲೆ ಹಲ್ಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.