ಕಾರ್ಕಳ: ವೀಕೆಂಡ್ ಬಂದ್ ಗೆ ಉತ್ತಮ ಪ್ರತಿಕ್ರಿಯೆ
Team Udayavani, Apr 24, 2021, 9:32 AM IST
ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ವೀಕೆಂಡ್ ಕರ್ಪ್ಯೂಗೆ ಉತ್ತಮ ಸ್ಪಂದನೆ ದೊರಕಿದೆ. ಬೆಳಗ್ಗೆ ಅಗತ್ಯ ವಸ್ತುಗಳ ಅಂಗಡಿಗಳು ಹೊರತು ಪಡಿಸಿದರೆ ಮಿಕ್ಕೆಲ್ಲವೂ ಬಂದ್ ಆಗಿತ್ತು.
ನಗರದಲ್ಲಿ ಬೆಳಗ್ಗೆ ಮೆಡಿಕಲ್, ಹಾಲು, ದಿನಸಿ, ಹಣ್ಣು ತರಕಾರಿ ಇಂತಹುದೇ ಅವಶ್ಯಕ ವಸ್ತುಗಳ ಅಂಗಡಿಗಳು ತೆರೆದಿದ್ದವು. ಸರಕಾರಿ, ಖಾಸಗಿ ಬಸ ಸಹಿತ ವಾಹನಗಳ ಓಡಾಟವಿರಲಿಲ್ಲ.
ಇದನ್ನೂ ಓದಿ: ಮಾಸ್ಕ್ ಇಲ್ಲದೆ ಮದುವೆಯಲ್ಲಿ ಭಾಗಿಯಾದ ಉಡುಪಿ ಡಿಸಿ : ಸಾರ್ವಜನಿಕರಿಂದ ಭಾರೀ ಆಕ್ರೋಶ!
ಅಗತ್ಯದ ಬೆರಳೆಣಿಕೆಯ ವಾಹನಗಳು ಓಡಾಡುತ್ತಿರುವುದು ಕಂಡು ಬಂತು. ಹೆದ್ದಾರಿಗಳಲ್ಲಿ ಕೂಡ ಕಡಿಮೆ ಪ್ರಮಾಣದಲ್ಲಿ ವಾಹನಗಳು ಓಡಾಡುತ್ತಿವೆ. ಆಸ್ಪತ್ರೆಗಳು ತೆರೆದು ಕಾರ್ಯನಿರ್ವಹಿಸುತ್ತಿವೆ.
ಇದನ್ನೂ ಓದಿ:‘ಲಸಿಕೆ ಪಡೆಯುವ ಮೊದಲು ರಕ್ತದಾನ ಮಾಡಿ ಪ್ಲೀಸ್’: ಶಿರಸಿ ವೈದ್ಯೆಯ ಜಾಗೃತಿ ಅಭಿಯಾನ