ನಗರದ ಕೆರೆಗಳಿಗೆ 30 ಮೀ. ಬಫರ್‌ ವಲಯ

ರಾಜ್ಯಾದ್ಯಂತ ಸ್ಥಳೀಯಾಡಳಿತದ ಕೆರೆಗಳಿಗೆ ಅನ್ವಯ ; ಕೆರೆ ಸಮೀಪ ಅಭಿವೃದ್ಧಿ ಕಾಮಗಾರಿಗೆ ಅನುಮತಿ ಇಲ್ಲ

Team Udayavani, Jan 24, 2022, 7:30 PM IST

ನಗರದ ಕೆರೆಗಳಿಗೆ 30 ಮೀ. ಬಫರ್‌ ವಲಯ

ಕುಂದಾಪುರ: ಸರಕಾರದಿಂದ ಅನುಮೋದನೆಯಾಗಿರುವ ಮತ್ತು ಇನ್ನು ಆಗಲಿರುವ ಮಹಾಯೋಜನೆಯ ವಲಯ ನಿಯಮಾವಳಿಗಳಿಗೆ ತಂದಿರುವ ತಿದ್ದುಪಡಿಯಲ್ಲಿ ಕಂದಾಯ ದಾಖಲಾತಿಗಳಲ್ಲಿರುವ ಕೆರೆ ಗಡಿ ಅಂಚಿನಿಂದ 30 ಮೀ. ಬಫರ್‌ ಗ್ರೀನ್‌ ವಲಯ ಎಂದು ಘೋಷಿಸಲಾಗಿದೆ.

ರಾಜ್ಯಾದ್ಯಂತ ಈ ನಿಯಮ ಜಾರಿಗೆ ಬರಲಿದ್ದು ಒಂದೊಮ್ಮೆ ಅನುಷ್ಠಾನಕ್ಕೆ ಬಂದರೆ ಕರಾವಳಿಯಲ್ಲಿ ತುಂಡು ಭೂಮಿ ಹೊಂದಿದವರ ಪಾಲಿಗೆ ಅದರಲ್ಲೂ ನಗರದಲ್ಲಿ ಮೀಟರ್‌, ಅಡಿ ಲೆಕ್ಕದಲ್ಲಿ ಭೂಮಿ ಹೊಂದಿದವರಿಗೆ ಮಾರಕವಾಗುವ ಎಲ್ಲ ಲಕ್ಷಣಗಳಿವೆ. ಸದ್ಯ ಇದಕ್ಕೆ ಕುಂದಾಪುರ ನಗರ ಯೋಜನಾ ಪ್ರಾಧಿ ಕಾರ ಆಕ್ಷೇಪ ವ್ಯಕ್ತಪಡಿಸಿದೆ.

ಬಫ‌ರ್‌ ವಲಯ
ಮಹಾಯೋಜನೆ ವಲಯ ನಿಯಮಾವಳಿಗಳಲ್ಲಿ ಏನೇ ಒಳಗೊಂಡಿದ್ದರೂ, ಕೆರೆಗಳಿಗೆ ಕಂದಾಯ ದಾಖಲಾತಿ ಗಳಲ್ಲಿರುವ ಕೆರೆ ಗಡಿ ಅಂಚಿನಿಂದ 30 ಮೀ. ಬಫರ್‌ ಝೋನ್‌ ಇರತಕ್ಕದ್ದು. ಈ ಬಫರ್‌ ರೋನ್‌ನಲ್ಲಿ ಕಾಲಕಾಲಕ್ಕೆ ಸರಕಾರದಿಂದ ಅಧಿಸೂಚಿಸಿರುವುದನ್ನು ಹೊರತುಪಡಿಸಿ, ಯಾವುದೇ ಅಭಿವೃದ್ಧಿಗಳು ಅಥವಾ ನಿರ್ಮಾಣಕ್ಕೆ ಅನುಮತಿಸ ತಕ್ಕದ್ದಲ್ಲ ಎಂದು ಉಲ್ಲೇಖೀತ ಆದೇಶದಲ್ಲಿ ಸೂಚಿಸಲಾಗಿದೆ.

ಆದೇಶ
ರಾಜ್ಯ ಸರಕಾರ ರಾಜ್ಯದಲ್ಲಿನ ಚಾಲ್ತಿಯಲ್ಲಿರುವ ಅನುಮೋದಿತ ಮಹಾಯೋಜನೆಯ ವಲಯ ನಿಯಮಾವಳಿ ತಿದ್ದುಪಡಿ ಮಾಡಲು ಉದ್ದೇಶಿಸಿದೆ. ಇದರಿಂದ ಬಾಧಿ ತರಾಗಬಹುದಾದ ವ್ಯಕ್ತಿಗಳ ಮಾಹಿತಿಗೆಪ್ರಕಟನೆ ನೀಡಿ ಇದಕ್ಕೆ ಆಕ್ಷೇಪ ಆಹ್ವಾನಿಸಿದೆ. ಈ ಕರಡು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದಂದಿನಿಂದ 30 ದಿನಗಳ ಅನಂತರ ಪರಿಗಣನೆಗೆ ಬರಲಿದೆ.ಅದರೊಳಗೆ ಆಕ್ಷೇಪಣೆ, ಸಲಹೆಗಳನ್ನು ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ವಿಕಾಸ ಸೌಧ ಬೆಂಗಳೂರು-560001 ಇವರಿಗೆ ಕಳುಹಿಸಬಹುದು.

ಆಕ್ಷೇಪ
ಕೆರೆ ಬಪರ್‌ ಝೋನ್‌ನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮತ್ತು ನಿರ್ಮಾಣ ಮಾಡತಕ್ಕದ್ದಲ್ಲ ಎನ್ನುವುದು ನಗರ ಭಾಗದಲ್ಲಿ ಹೆಚ್ಚಾಗಿ ತುಂಡು ಭೂಮಿಯಿದ್ದು, ಕೆರೆ ಅಂಚಿನಿಂದ 30 ಮೀ, ನಿಯಂತ್ರಣ ವಲಯ ಎಂದು ಘೋಷಿಸಿದಾಗ ಜನರಿಗೆ ಸಮಸ್ಯೆಯಾಗುತ್ತದೆ. ಯಾವುದೇ ಅಭಿವೃದ್ಧಿ ಕೆಲಸ ನಡೆಸಲಾಗದು ಎಂದು ನಗರ ಯೋಜನಾ ಪ್ರಾ ಧಿಕಾರ ಅಭಿಪ್ರಾಯಪಟ್ಟಿದೆ. ಪುರಸಭೆ ಅಥವಾ ನಗರಸಭೆ ವ್ಯಾಪ್ತಿಯಲ್ಲಿ ತುಂಡು ಭೂಮಿಗಳೇ ಹೆಚ್ಚು. ಪಟ್ಟಾಭೂಮಿಯಲ್ಲಿ ಕೆರೆ ದಂಡೆ, ಕೃಷಿ ವಗೈರೆಗಳಿವೆ. ಕೆರೆ ಅಂಚಿನಿಂದ 30 ಮೀ. (ಅಂದಾಜು 100 ಅಡಿ) ನಿಯಂತ್ರಣ ವಲಯ ಮಾಡಿದರೆ ಅಭಿವೃದ್ಧಿಗೆ ತೊಡಕಾಗಲಿದೆ. ದೊಡ್ಡ ನಗರ, ಬಯಲು ಪ್ರದೇಶಗಳಲ್ಲಿ ವಿಶಾಲವಾದ ಕೆರೆಗಳಿದ್ದಲ್ಲ ಸಮಸ್ಯೆ ಆಗದೇ ಇದ್ದರೂ ಸಣ್ಣಪುಟ್ಟ ಭೂಮಿ ಹೊಂದಿಅದರ ಸಮೀಪ ಕೆರೆಗಳಿದ್ದರೆ ಕೆರೆಯ ಬದಿಯಲ್ಲಿ ಯಾವುದೇ ಕಾಮಗಾರಿ ಮಾಡಬಾರದು ಎಂದು ಅನುಮತಿ ನಿರಾಕರಿಸಿದರೆ ಹೊಸ ಸಮಸ್ಯೆಗೆ ಕಾರಣವಾಗಲಿದೆ.

ಏನಿದು ಮಹಾ ಯೋಜನೆ?
ನಗರ ಯೋಜನಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಗರದ ಸಮಗ್ರ ನಕ್ಷೆ ಮಹಾಯೋಜನೆ ಅಥವಾ ಮಾಸ್ಟರ್‌ ಪ್ಲಾನ್‌ ತಯಾರಿಸಬೇಕಾಗುತ್ತದೆ. ಮಾಸ್ಟರ್‌ಪ್ಲಾನ್‌ನಲ್ಲಿ ನಗರದ ಸಮಗ್ರ ಮಾಹಿತಿ ಇರುತ್ತದೆ. ವಸತಿ, ವಾಣಿಜ್ಯ, ಕೈಗಾರಿಕೆ, ಆಟದ ಮೈದಾನ, ಸಾರ್ವಜನಿಕ, ಅರೆ ಸಾರ್ವಜನಿಕ, ಉದ್ಯಾನವನ, ಬಯಲು ಪ್ರದೇಶ, ಸಾರಿಗೆ ಸಂವಹನ, ಖಾಲಿ ಪ್ರದೇಶ, ಕೆರೆ, ಕೃಷಿ ಭೂಮಿ ಹೀಗೆ ಸಮಗ್ರ ಮಾಹಿತಿ ಇರುತ್ತದೆ. ಇದರ ಅನ್ವಯ ಮುಂದಿನ ಯೋಜನೆಗಳನ್ನು ಸಿದ್ಧಪಡಿಸಲು, ಹೊಸ ಯೋಜನೆಗಳಿಗೆ ಅನುಮತಿ ನೀಡಲಾಗುತ್ತದೆ.

ಆಕ್ಷೇಪ ಬರೆದಿದ್ದೇವೆ
ಸರಕಾರ ಹೊರಡಿಸಿರುವ ನಿಯಮ ಅನುಷ್ಠಾನ ಮಾಡಿದರೆ ಜನಜೀವನದ ಮೇಲೆ ದುಷ್ಪರಿಣಾಮ ಬೀರಲಿದೆ. ಮುಂದೆ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳಿಗೂ ಈಗಿರುವ ಹಾಲಿ ವ್ಯವಸ್ಥೆಗೂ ಮಾರಕ ವಾಗಲಿದೆ. ವಿಶೇಷವಾಗಿಉ ಸಣ್ಣ ಸಣ್ಣ ಜಮೀನು ಹೊಂದಿದವರಿಗೆ ಸಮಸ್ಯೆಗಳಾಗಲಿವೆ ಎಂದು ಆದೇಶದ ಪುನರ್‌ ವಿಮರ್ಶೆ ನಡೆಸಲು ಬರೆದಿದ್ದೇವೆ.
-ವಿಜಯ್‌ ಎಸ್‌.ಪೂಜಾರಿ ,
ಅಧ್ಯಕ್ಷರು, ನಗರ ಯೋಜನಾ ಪ್ರಾಧಿಕಾರ, ಕುಂದಾಪುರ

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.