8 ಕೆ.ಜಿ. ಚಾಕ್ಲೇಟ್ ಹಂಚಿದ ಮೋದಿಯ ಬಡ ಅಭಿಮಾನಿ!
Team Udayavani, May 24, 2019, 6:15 AM IST
ಕುಂದಾಪುರ: ದೇಶದಲ್ಲಿ ಮತ್ತೆ ಎನ್ಡಿಎಗೆ ಗೆಲುವು ಸಿಕ್ಕಿದ್ದಕ್ಕೆ, ಗುರುವಾರ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಬಡ ಅಭಿಮಾನಿ, ಗುಜರಿ ಮಾರುವ ವಕ್ವಾಡಿಯ ಮೊಹಮ್ಮದ್ ಅವರು ತನ್ನ ಊರಿನಲ್ಲಿ 8 ಕೆ.ಜಿ. ಚಾಕೊಲೇಟ್ ಹಂಚಿ ಸಂಭ್ರಮಿಸಿದರು.
5 ವರ್ಷದ ಹಿಂದೆ ಮೋದಿ ಗೆದ್ದು, ಮೊದಲ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿದಾಗಲೂ ಇವರು 5 ಕೆ.ಜಿ. ಸಿಹಿ ತಿಂಡಿ ನೀಡಿದ್ದರು. ಬಡತನ ಇದ್ದರೂ, ಅನಾರೋಗ್ಯದಿಂದ ಬಳಲುತ್ತಿದ್ದರೂ, ತನ್ನ ಮೆಚ್ಚಿನ ನಾಯಕ ಮತ್ತೂಮ್ಮೆ ಗೆದ್ದಿದ್ದಾರೆ ಎನ್ನುವ ಖುಷಿಯನ್ನು ಊರವರೊಂದಿಗೆ ಹಂಚಿಕೊಂಡರು. ಮೋದಿ ಅವರನ್ನು ನೇರವಾಗಿ ಕಾಣುವ ಅಭಿಲಾಷೆಯನ್ನು ಅವರು ಇದೇ ವೇಳೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapur: ಕುಸಿದು ಬಿದ್ದು ಸಾವು
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ