ಶಾಲಾ-ಕಾಲೇಜು ಆರಂಭ: ಗ್ರಾಮೀಣ ಭಾಗಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಿ


Team Udayavani, Sep 13, 2021, 3:30 AM IST

ಶಾಲಾ-ಕಾಲೇಜು ಆರಂಭ: ಗ್ರಾಮೀಣ ಭಾಗಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಿ

ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ವ್ಯಾಪಿಸಲಾರಂಭಿಸಿದ ಬಳಿಕ ಅಂದರೆ ಕಳೆದ ವರ್ಷದ ಮಾರ್ಚ್‌ನಿಂದ ಸ್ಥಗಿತಗೊಂಡಿದ್ದ ಶಾಲಾ ಕಾಲೇಜುಗಳು ಈಗ ಹಂತಹಂತವಾಗಿ ಪುನರಾರಂಭಗೊಂಡಿವೆ. ದ.ಕ. ಹೊರತುಪಡಿಸಿ, ಉಡುಪಿ ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 6ನೇ ತರಗತಿಯಿಂದ ಆರಂಭಗೊಂಡು, ಎಸೆಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ತರಗತಿಗಳೆಲ್ಲವೂ ಮತ್ತೆ ತೆರೆದುಕೊಂಡಿವೆ.

ಕೊರೊನಾ ಒಂದು ಮತ್ತು ಎರಡನೇ ಅಲೆ ವೇಳೆ ಭೌತಿಕ ತರಗತಿಗಳ ಬದಲಾಗಿ ಆನ್‌ಲೈನ್‌ ತರಗತಿಗಳಿಗೆ ಅನಿವಾರ್ಯವಾಗಿ ಮೊರೆ ಹೋಗಬೇಕಾಗಿತ್ತು. ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿಗೆ ನೆಟ್‌ವರ್ಕ್‌ ಸಮಸ್ಯೆ ಬಲುದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದರೆ ಈಗ ಭೌತಿಕ ತರಗತಿಗಳು ಆರಂಭಗೊಂಡ ಬಳಿಕ ದಿನಕ್ಕೊಂದು ಸಮಸ್ಯೆ ಉದ್ಭವವಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ ತಾಲೂಕಿನ ಗ್ರಾಮೀಣ ಪ್ರದೇಶಗಳಿಂದ ನಗರ ಭಾಗಕ್ಕೆ ವಿದ್ಯಾರ್ಜನೆಗೆಂದು ಬರುವ ಮಕ್ಕಳು ಸರಿಯಾದ ಸಾರ್ವಜನಿಕ ಸಾರಿಗೆ ಸಂಪರ್ಕ ವ್ಯವಸ್ಥೆಯಿಲ್ಲದೆ ಭಾರೀ ತೊಂದರೆ ಅನುಭವಿಸುವಂತಾಗಿದೆ. ಈಗ ತರಗತಿಗಳು ಕೂಡ ಪಾಳಿಯಲ್ಲಿ ನಡೆಯುತ್ತಿರುವುದರಿಂದ ಸಾರಿಗೆ ಸಮಸ್ಯೆ ಮಕ್ಕಳ ಪಾಲಿಗೆ ಭಾರೀ ಸಂಕಷ್ಟವನ್ನು ತಂದೊಡ್ಡಿದೆ.

ಈ ನಾಲ್ಕು ತಾಲೂಕುಗಳ ಗ್ರಾಮೀಣ ಭಾಗದ ಬಹುತೇಕ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ನಗರಗಳಲ್ಲಿನ ಶಿಕ್ಷಣ ಸಂಸ್ಥೆಗಳನ್ನೇ ಅವಲಂಬಿಸಿದ್ದಾರೆ. ಇಲ್ಲಿನ ಸಾಕಷ್ಟು ಹಳ್ಳಿಗಳಿಂದ ಇನ್ನೂ ಸಹ ಸರಿಯಾಗಿ ಬಸ್‌ ಸಂಚಾರ ಆರಂಭಗೊಂಡಿಲ್ಲ. ಹಿಂದೆ ಗ್ರಾಮಾಂತರ ಭಾಗಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ನಿಗದಿತ ಅವಧಿಗಳಲ್ಲಿ ಬಸ್‌ ಸಂಚರಿಸುತ್ತಿದ್ದುದರಿಂದ ಅಷ್ಟೊಂದು ಸಮಸ್ಯೆ ಆಗಿರಲಿಲ್ಲ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಿಗೆ ಸಂಚರಿಸುತ್ತಿದ್ದ ಸಾಕಷ್ಟು ಬಸ್‌ಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭಿಸಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಕಷ್ಟಪಟ್ಟು ಶಾಲೆ-ಕಾಲೇಜುಗಳಿಗೆ ಬರುವಂತಾಗಿದೆ. ಕೆಲವರು ಕಿಲೋಮೀಟರ್‌ಗಟ್ಟಲೆ ನಡೆದು, ಮುಖ್ಯ ರಸ್ತೆಗೆ ಬಂದು ಬಸ್‌ ಹಿಡಿದರೆ, ಇನ್ನೂ ಕೆಲವರು ದುಬಾರಿ ಹಣ ತೆತ್ತು ಖಾಸಗಿ ವಾಹನಗಳಲ್ಲಿ ಬರುವಂತಾಗಿದೆ. ಇನ್ನೂ ಕೆಲವರು ಬಸ್‌ಗಳಿಲ್ಲದೆ ನಿರಂತರ ರಜೆ ಹಾಕಬೇಕಾದ ಸ್ಥಿತಿಯೂ ಬಂದೊದಗಿದೆ.

ಕೋವಿಡ್‌ ಕಾರಣಕ್ಕೆ ತರಗತಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲವರಿಗೆ ಬೆಳಗ್ಗಿನ ಅವಧಿ ಹಾಗೂ ಇನ್ನೂ ಕೆಲವು ತರಗತಿಗಳಿಗೆ ಮಧ್ಯಾಹ್ನದ ಅನಂತರ ತರಗತಿಗಳು ನಡೆಯುತ್ತಿದ್ದು, ತರಗತಿ ಸಮಯವು ಸಹ ಬದಲಾಗಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್‌ ಸಮಸ್ಯೆಯ ಬಿಸಿ ತೀವ್ರವಾಗಿ ತಟ್ಟಿದೆ. ಸರಕಾರ ಈಗಾಗಲೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಾಸ್‌ಗಾಗಿ ಅರ್ಜಿ ಸಲ್ಲಿಕೆ, ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿ, ಹಳೆ ಪಾಸ್‌ ಅಥವಾ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಿರುವುದು ಉತ್ತಮ ನಡೆಯಾಗಿದೆ. ಆದರೆ ಕೆಲವು ಊರುಗಳಲ್ಲಿ ಬಸ್‌ ಸೇವೆಯೇ ಇನ್ನೂ ಆರಂಭಗೊಳ್ಳದಿರುವುದರಿಂದ ಬಹುತೇಕ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಸಿಗದಂತಾಗಿದೆ.

ಈ ಬಗ್ಗೆ ಪ್ರಾದೇಶಿಕ ಸಾರಿಗೆ ಆಯುಕ್ತರು, ಕೆಎಸ್‌ಆರ್‌ಟಿಸಿ, ಜಿಲ್ಲಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನಹರಿಸಿ, ಕೂಡಲೇ ಗ್ರಾಮೀಣ ಭಾಗಗಳಿಗೆ ಬಸ್‌ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ.

ಸಂ

ಟಾಪ್ ನ್ಯೂಸ್

ಕುಡಿದ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ, ವ್ಯಕ್ತಿ ಸಾವು : ಆರೋಪಿ ಪರಾರಿ

ಕುಡಿದ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ, ವ್ಯಕ್ತಿ ಸಾವು : ಆರೋಪಿ ಪರಾರಿ

1-mu

ಮುರ್ಡೇಶ್ವರ : ಕಟ್ಟುನಿಟ್ಟಿನ ಕ್ರಮಗಳ ನಡುವೆ ವಾರ್ಷಿಕ ರಥೋತ್ಸವ ಸಂಪನ್ನ

r ashok

ಸವಲತ್ತು ಮನೆ ಬಾಗಿಲಿಗೆ: ರೈತರ ಪರವಾಗಿ ಕಂದಾಯ ಇಲಾಖೆ ಮಹತ್ವದ ನಿರ್ಧಾರ

1-sadsad

ಭಟ್ಕಳ: 5 ಕೋಟಿ ರೂ.ಜೀವ ವಿಮೆ ಲಪಟಾಯಿಸಲು ನಕಲಿ ಮರಣ ದಾಖಲೆ ಸೃಷ್ಟಿ!

covid-1

ಇಂದು 47,754 ಕೋವಿಡ್ ಕೇಸ್ ,29 ಸಾವು : ನೈಟ್,ವೀಕೆಂಡ್ ಕರ್ಫ್ಯೂ ಮುಂದುವರಿಕೆ?

utpal

ಆಪ್‌ನಿಂದ ಆಹ್ವಾನ: ಯಾವ ಪಕ್ಷ ಸೇರಲಿದ್ದಾರೆ ಪರ್ರಿಕರ್ ಪುತ್ರ ?

dk shi 2

ಹಲ್ಲೆ ಪ್ರಕರಣ ನಡೆದೇ ಇಲ್ಲ: ನಲಪಾಡ್ ಪರ ಡಿಕೆಶಿ ಬ್ಯಾಟಿಂಗ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುಂದಾಪುರ: ಹೈವೆ ಕಾಮಗಾರಿ ನಿರ್ಲಕ್ಷಿಸಿದ ಹೆದ್ದಾರಿ ಪ್ರಾಧಿಕಾರ!

ಕುಂದಾಪುರ: ಹೈವೆ ಕಾಮಗಾರಿ ನಿರ್ಲಕ್ಷಿಸಿದ ಹೆದ್ದಾರಿ ಪ್ರಾಧಿಕಾರ!

ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂದಿರ ನೂತನ ಶಿಲಾಮಯ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟನೆ

ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂದಿರ ನೂತನ ಶಿಲಾಮಯ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟನೆ

Untitled-1

ಕುಂಭಾಸಿ ಶ್ರೀ ಮಹಾಲಿಂಗೇಶ್ವರ (ಹರಿಹರ) ದೇವಸ್ಥಾನ; ಸಂಭ್ರಮದ ಶ್ರೀ ಮನ್ಮಹಾ ರಥೋತ್ಸವ ಸಂಪನ್ನ

ಕೆದೂರು : ರಾಜ್ಯಮಟ್ಟದ ಇನ್ಸ್‌ಪಾಯರ್‌ ಅವಾರ್ಡ್‌ ಸ್ಪರ್ಧೆಗೆ ಆದೇಶ್‌ ಕಾಮತ್‌ ಆಯ್ಕೆ

ಕೆದೂರು: ರಾಜ್ಯಮಟ್ಟದ ಇನ್ಸ್‌ಪಾಯರ್‌ ಅವಾರ್ಡ್‌ ಸ್ಪರ್ಧೆಗೆ ಆದೇಶ್‌ ಕಾಮತ್‌ ಆಯ್ಕೆ

ಮೊಳಕೆಯೊಡೆಯದ ನೆಲಗಡಲೆ ಬೀಜ; ಆತಂಕದಲ್ಲಿ ಕರಾವಳಿ ಕೃಷಿಕರು

ಮೊಳಕೆಯೊಡೆಯದ ನೆಲಗಡಲೆ ಬೀಜ; ಆತಂಕದಲ್ಲಿ ಕರಾವಳಿ ಕೃಷಿಕರು

MUST WATCH

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

udayavani youtube

ಪಾಕಿಸ್ತಾನದ ಲಾಹೋರ್‌ನಲ್ಲಿ ಬಾಂಬ್ ಬ್ಲಾಸ್ಟ್! 3 ಸಾವು

ಹೊಸ ಸೇರ್ಪಡೆ

ಕುಡಿದ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ, ವ್ಯಕ್ತಿ ಸಾವು : ಆರೋಪಿ ಪರಾರಿ

ಕುಡಿದ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ, ವ್ಯಕ್ತಿ ಸಾವು : ಆರೋಪಿ ಪರಾರಿ

1-mu

ಮುರ್ಡೇಶ್ವರ : ಕಟ್ಟುನಿಟ್ಟಿನ ಕ್ರಮಗಳ ನಡುವೆ ವಾರ್ಷಿಕ ರಥೋತ್ಸವ ಸಂಪನ್ನ

r ashok

ಸವಲತ್ತು ಮನೆ ಬಾಗಿಲಿಗೆ: ರೈತರ ಪರವಾಗಿ ಕಂದಾಯ ಇಲಾಖೆ ಮಹತ್ವದ ನಿರ್ಧಾರ

Kanavi

ಕವಿ ಚನ್ನವೀರ ಕಣವಿ ಅವರ ಆಸ್ಪತ್ರೆ ವೆಚ್ಚ ಭರಿಸಲು ಸರ್ಕಾರ ನಿರ್ಧಾರ

1-swwqrwq

ಮಾಜಿ ಸಚಿವ ಕಾಗೋಡು ತಿಮ್ಮಪ್ಪರಿಗೆ ಕೋವಿಡ್ : ಬೇರೆಯವರಿಂದ ಮಾಹಿತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.