ಕುಂದಾಪುರ: ಜೋಡೆತ್ತಿನ ಗಾಡಿಯಲ್ಲಿ ಬಂದ ಮದುಮಗಳು
Team Udayavani, Jan 28, 2022, 7:03 AM IST
ಕುಂದಾಪುರ: ಸಂಪ್ರದಾಯದ ನೆನಪಿಗಾಗಿ ಮದುಮ ಗಳನ್ನು ಜೋಡೆತ್ತಿನ ಗಾಡಿಯಲ್ಲಿ ಕರೆತಂದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಟ್ಟಿನಮಕ್ಕಿ ಬವಳಾಡಿ ಮಹಾಬಲ ಆಚಾರ್ಯ ಅವರ ಪುತ್ರಿ ಪ್ರತಿಮಾ ಹಾಗೂ ಕಟ್‌ಬೆಲೂ¤ರು ಬಾಬು ಆಚಾರ್ಯ ಅವರ ಪುತ್ರ ಗುರುರಾಜ್ ಅವರ ವಿವಾಹ ಜ.26ರಂದು ಕಿರಿಮಂಜೇಶ್ವರದ ಅರೆಹೊಳೆ ಕ್ರಾಸ್‌ನ ಮಾಂಗಲ್ಯ ಆರ್ಕೆಡ್‌ನ ಚಿನ್ಮಯಿ ಸಭಾಭವನದಲ್ಲಿ ನಡೆದಿದೆ.
ಕಟ್ಟಿನಮಕ್ಕಿ ಬವಳಾಡಿಯ ಮಹಾಬಲ ಆಚಾರ್ಯ ಅವರು ಪುತ್ರಿಯ ದಿಬ್ಬಣವನ್ನು ಮದುವೆ ಮಂಟಪಕ್ಕೆ ಅವರು ಕರೆತರಲು ಬೈಂದೂರಿನ ಸೀತಾರಾಮ ಶೆಟ್ಟಿ ಅವರ ಎತ್ತಿನಗಾಡಿಯನ್ನು ನಿಗದಿಪಡಿಸಿದರು.
ಕಿರಿಮಂಜೇಶ್ವರವರೆಗೆ ಕಾರಿನಲ್ಲಿ ಬಂದು ಅಲ್ಲಿಂದ ಜೋಡೆತ್ತಿನ ಗಾಡಿ ಯಲ್ಲಿ ಮದುಮಗಳು ಸಾಗಿ ಬಂದಳು. ದಾರಿಯುದ್ದಕ್ಕೂ ಸಾರ್ವಜನಿಕರು ಈ ಸಂಭ್ರಮವನ್ನು ಕಣ್ತುಂಬಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವೇಗದ ಚಾಲನೆ; ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ದಂಡ
ಉದ್ಧವ್ ಠಾಕ್ರೆಗೆ ಅಗ್ನಿಪರೀಕ್ಷೆ: ಜೂ. 30ರಂದು ವಿಶ್ವಾಸಮತ ಸಾಬೀತುಪಡಿಸಲು ಸೂಚನೆ
ಮುಂದಿನ ವಿಧಾನಸಭೆ ಚುನಾವಣೆ: ಸಿದ್ದು-ಡಿಕೆ ಜತೆ ರಾಹುಲ್ ಮಹತ್ವದ ಮಾತುಕತೆ
ಬೀದಿಗೆ ಬಿದ್ದಿದ್ದ ಸಿದ್ದು ಬಾದಾಮಿಗೆ ಕರೆ ತಂದಿದ್ದು ನಾನೇ: ಸಿ.ಎಂ. ಇಬ್ರಾಹಿಂ
ಪಿಎನ್ಬಿ ಹಗರಣದ ಆರೋಪಿ ನೀರವ್ ಮೋದಿಗೆ ಇಬ್ಬರು ಮನೋವೈದ್ಯರಿಂದ ಪರೀಕ್ಷೆ