ಸ್ಥಗಿತಗೊಂಡಿದ್ದ ಸೇತುವೆ, ರಸ್ತೆ ಕಾಮಗಾರಿ ಮತ್ತೆ ಆರಂಭ


Team Udayavani, Apr 28, 2020, 5:11 AM IST

ಸ್ಥಗಿತಗೊಂಡಿದ್ದ ಸೇತುವೆ, ರಸ್ತೆ ಕಾಮಗಾರಿ ಮತ್ತೆ ಆರಂಭ

ಕುಂದಾಪುರ: ಬೈಂದೂರು, ಕುಂದಾಪುರ ತಾ | ವ್ಯಾಪ್ತಿಯಲ್ಲಿ ಲಾಕ್‌ಡೌನ್‌ ಹಿನ್ನೆಲೆ ಯಲ್ಲಿ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಸ್ಥಗಿತಗೊಂಡಿದ್ದ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಕೆಲ ಪ್ರಮುಖ ಸೇತುವೆ, ರಸ್ತೆ ಕಾಮಗಾರಿ ಮತ್ತೆ ಪುನರಾರಂಭಗೊಂಡಿದೆ.

ಆಜ್ರಿ ಗ್ರಾಮದ ಬೆಳ್ಳಾಲ – ಮೋರ್ಟು ಸಂಪರ್ಕಿಸುವ ಸೇತುವೆ, ಬೈಂದೂರಿನ ಕಲ್ಯಾಣಿR ಸೇತುವೆ, ಸಿದ್ದಾಪುರ ಸಮೀಪದ ಸೇತುವೆ ಕಾಮಗಾರಿಗಳು ಈಗಾಗಲೇ ಆರಂಭ ಗೊಂಡಿವೆ. ಇದರೊಂದಿಗೆ ಹೆಮ್ಮಾಡಿ – ಕೊಲ್ಲೂರು ದ್ವಿಪಥ ಕಾಮಗಾರಿಯು ಕೂಡ ಮತ್ತೆ ಚಾಲನೆ ಪಡೆದು ಕೊಂಡಿದೆ.

ಒಂದು ವರ್ಷದ ಹಿಂದೆ ಚಾಲನೆ ಪಡೆದು, ಈಗ ಅರ್ಧಕ್ಕಿಂತ ಹೆಚ್ಚು ಕಾಮಗಾರಿ ಪೂರ್ಣಗೊಂಡ ಸೇತುವೆಗಳಿದ್ದರೆ ಈ ಬಾರಿಯ ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಿ, ಸಂಚಾರಕ್ಕೆ ಅವಕಾಶ ಮಾಡಿಕೊಡಲು ಇಲಾಖೆ ಅಧಿಕಾರಿ ಗಳು ಮುಂದಾಗಿದ್ದು, ಅದರಂತೆ ತ್ವರಿತ ಗತಿಯಲ್ಲಿ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.

ಈಗಾಗಲೇ ಚಾಲನೆ ಪಡೆದ ರಸ್ತೆ ಡಾಮರು, ಕಾಂಕ್ರೀಟ್‌ ಕಾಮಗಾರಿ ಮುಂಗಾರಿಗೆ ಮುನ್ನ ಮುಗಿಸಲು ಕ್ರಮ ಕೈಗೊಳ್ಳ ಲಾಗುತ್ತಿದೆ. ಆದರೆ ಆರಂಭಿಕ ಹಂತದಲ್ಲಿರುವ ಸೇತುವೆ, ರಸ್ತೆ ಕಾಮಗಾರಿ ಮಾತ್ರ ಆರಂಭಗೊಳ್ಳುವುದು ಅನುಮಾನ ವೆನಿಸಿದ್ದು, ಅದೇನಿದ್ದರೂ ಮಳೆಗಾಲ ಕಳೆದ ಬಳಿಕವಷ್ಟೇ ಆರಂಭಗೊಳ್ಳುವ ಸಾಧ್ಯತೆಯಿದೆ.

ಸರಕು- ಸಾಮಗ್ರಿ ಕೊರತೆ
ಎಲ್ಲ ಕಡೆಗಳಲ್ಲಿ ಗುತ್ತಿಗೆದಾರರು ಕಾರ್ಮಿಕರಿಂದ ಕೆಲಸ ಮಾಡಿಸಲು ಮುಂದಾಗಿದ್ದರೂ ಕೂಡ ಜಲ್ಲಿ, ಮರಳು, ಸಿಮೆಂಟ್‌, ಕಬ್ಬಿಣ ಮತ್ತಿತರ ಅಗತ್ಯದ ಸರಕು – ಸಾಮಗ್ರಿಗಳ ಕೊರತೆ ಕಂಡು ಬರುತ್ತಿದೆ. ಅದರಲ್ಲೂ ಬಹುತೇಕ ಅಂಗಡಿಗಳಲ್ಲಿ ಸಿಮೆಂಟ್‌ ದಾಸ್ತಾನು ಖಾಲಿಯಾಗಿದ್ದು, ಹೊಸದಾಗಿ ಬೇರೆಡೆಗಳಿಂದ ಇನ್ನಷ್ಟೇ ಬರಬೇಕಿದೆ.

ಮತ್ತೆ ಕೆಲವರಿಗೆ ಕಾರ್ಮಿಕರೆಲ್ಲ ಊರಿಗೆ ಹೋಗಿರುವುದು ಕೂಡ ಸಮಸ್ಯೆಯಾಗಿದೆ. ಲಭ್ಯವಿರುವ ದಾಸ್ತಾನುಗಳು ದುಬಾರಿ ಯಾಗಿರುವುದು ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ.

ಕಾಮಗಾರಿ ಆರಂಭಕ್ಕೆ ಸೂಚನೆ
ಈಗಾಗಲೇ ಬೆಳ್ಳಾಲ, ಕಲ್ಯಾಣಿR ಸೇರಿದಂತೆ ಕೆಲ ಸೇತುವೆ ಕಾಮಗಾರಿ ಗಳು ಆರಂಭಗೊಂಡಿವೆ. ಮಳೆಗಾಲಕ್ಕೂ ಮುನ್ನ ಸಾಧ್ಯವಾದಷ್ಟು ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಕೊರತೆಯಿದ್ದ ಸೀಮೆಂಟ್‌, ಕಬ್ಬಿಣ, ಜಲ್ಲಿಗಳನ್ನು ಬೇರೆ ಕಡೆಗಳಿಂದ ತರಿಸಲಾಗಿದೆ. ಆರಂಭಗೊಂಡ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ, ಜನ ಸಂಚಾರಕ್ಕೆ ಅನುವು ಮಾಡಿಕೊಡಲು ಎಲ್ಲ ಪ್ರಯತ್ನ ನಡೆಯುತ್ತಿದೆ.
-ದುರ್ಗಾದಾಸ್‌,
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಕುಂದಾಪುರ

ಟಾಪ್ ನ್ಯೂಸ್

Akshith shashikumar spoke about seethayanam

ರಗಡ್‌ ಲವರ್‌ ಬಾಯ್: ಚೊಚ್ಚಲ ಚಿತ್ರದ ಬಿಡುಗಡೆ ಖುಷಿಯಲ್ಲಿ ಅಕ್ಷಿತ್

1death

7 ವರ್ಷ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆದಿದ್ದ ಮಹಿಳೆ ಸಾವು

ದಾವೋಸ್ ಪ್ರವಾಸದಿಂದ ಹಿಂತಿರುಗಿದ ಸಿಎಂ ಬಸವರಾಜ ಬೊಮ್ಮಾಯಿ

ದಾವೋಸ್ ಪ್ರವಾಸದಿಂದ ಹಿಂತಿರುಗಿದ ಸಿಎಂ ಬಸವರಾಜ ಬೊಮ್ಮಾಯಿ

ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ

ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ

ಜೂನ್‌ 1ರಿಂದ ಕಾರು, ಬೈಕ್‌ ದುಬಾರಿ

ಜೂನ್‌ 1ರಿಂದ ಕಾರು, ಬೈಕ್‌ ದುಬಾರಿ

ಶಿಕ್ಷಕರು, ಪದವೀಧರ ಕ್ಷೇತ್ರ: ಕೋಟ್ಯಧಿಪತಿ ಅಭ್ಯರ್ಥಿಗಳು

ಶಿಕ್ಷಕರು, ಪದವೀಧರ ಕ್ಷೇತ್ರ: ಕೋಟ್ಯಧಿಪತಿ ಅಭ್ಯರ್ಥಿಗಳು

sandalwood

ಸಿನಿ ಟ್ರಾಫಿಕ್‌ ಜೋರು; ಈ ವಾರ ತೆರೆಗೆ 9 ಚಿತ್ರಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

Untitled-1

ಪಡುಬಿದ್ರಿ: ಬಾವಿಗೆ ಹಾರಿ ಯುವತಿ ಆತ್ಮಹತ್ಯೆ

12kaup

ಆನೆಗುಂದಿ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವದ 12 ನೇ ವರ್ಧಂತಿ ಉತ್ಸವ

udupi1

ಬ್ಯಾರಿಕೇಡ್‌ ರಹಿತ ವೈಜ್ಞಾನಿಕ ಜಂಕ್ಷನ್‌ ಅಗತ್ಯ

MUST WATCH

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

udayavani youtube

ಒಂದು ಲಕ್ಷದ ಎಂಟು ವಡೆಗಳಿಂದ ಅಲಂಕೃತಗೊಂಡ ಮೈಸೂರಿನ ಶ್ರೀ ಅಂಜನೇಯ ಸ್ವಾಮಿ

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

ಹೊಸ ಸೇರ್ಪಡೆ

2

ಜೀವನ ಯೋಗ್ಯ ನಿವೃತ್ತಿ ವೇತನಕ್ಕೆ ಆಗ್ರಹ

Akshith shashikumar spoke about seethayanam

ರಗಡ್‌ ಲವರ್‌ ಬಾಯ್: ಚೊಚ್ಚಲ ಚಿತ್ರದ ಬಿಡುಗಡೆ ಖುಷಿಯಲ್ಲಿ ಅಕ್ಷಿತ್

cashew-nut

ಗೇರು ಪ್ರಪಂಚದ ಸಮಗ್ರತೆ ತೆರೆದಿಡುವ ಮ್ಯೂಸಿಯಂ

1death

7 ವರ್ಷ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆದಿದ್ದ ಮಹಿಳೆ ಸಾವು

ದಾವೋಸ್ ಪ್ರವಾಸದಿಂದ ಹಿಂತಿರುಗಿದ ಸಿಎಂ ಬಸವರಾಜ ಬೊಮ್ಮಾಯಿ

ದಾವೋಸ್ ಪ್ರವಾಸದಿಂದ ಹಿಂತಿರುಗಿದ ಸಿಎಂ ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.