Udayavni Special

ಇನ್ನೂ  ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಬಸ್‌ ಸಂಚಾರ

Team Udayavani, Jul 28, 2021, 3:20 AM IST

ಇನ್ನೂ  ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಬಸ್‌ ಸಂಚಾರ

ಕುಂದಾಪುರ:  ಪದವಿ ಕಾಲೇಜುಗಳು ಸೋಮವಾರದಿಂದ ಆರಂಭಗೊಂಡಿದ್ದು, ಆದರೆ ಮೊದಲ ದಿನವೇ ಕುಂದಾಪುರದ ಬೇರೆ ಬೇರೆ ಕಡೆಗಳಿಂದ ಕಾಲೇಜಿಗೆ ಬರಲು ಬಸ್‌ ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ. ಕೋವಿಡ್‌ ಎರಡನೇ ಅಲೆ, ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡ ಬಸ್‌ಗಳು ಮತ್ತೆ ಪೂರ್ಣ ಪ್ರಮಾಣದಲ್ಲಿ ಇನ್ನೂ ಸಹ ಸಂಚಾರ ಆರಂಭಿಸದ ಹಿನ್ನೆಲೆಯಲ್ಲಿ ಈ ಸಮಸ್ಯೆ ಉಂಟಾಗಿದೆ.

ಕುಂದಾಪುರದ ಅಮಾಸೆಬೈಲು, ಹಾಲಾಡಿ, ಹೊಸಂಗಡಿ, ಹಳ್ಳಿಹೊಳೆ, ಸಿದ್ದಾಪುರ, ಕೊಲ್ಲೂರು, ವಂಡ್ಸೆ, ನೇರಳಕಟ್ಟೆ, ಹಟ್ಟಿಯಂಗಡಿ, ತ್ರಾಸಿ, ಮುಳ್ಳಿಕಟ್ಟೆ, ಹೆಮ್ಮಾಡಿ, ತಲ್ಲೂರು ಸೇರಿದಂತೆ ಬಹುತೇಕ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳು ಬಸ್‌ಗಾಗಿ ಪರದಾಟ ನಡೆಸಿದ್ದು ಕಂಡು ಬಂತು.

ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಸಾರ್ವಜನಿಕರು ಬಸ್‌ ಇಲ್ಲದೆ  ನಿಲ್ದಾಣಗಳಲ್ಲಿ ಗಂಟೆ ಗಟ್ಟಲೆ ಕಾಯುವ ಸ್ಥಿತಿಯಿದೆ. ಬಸ್‌ ಬಂದರೂ ಆಗಲೇ ಭರ್ತಿ ಆಗಿದ್ದರಿಂದ ಅದಕ್ಕೆ ಹತ್ತಲು ಸಾಧ್ಯವಾಗದೆ ಬೇರೆ ಬಸ್‌ಗೆ ಕಾಯುವ ಅಥವಾ ಇನ್ನಿತರ ವಾಹನ ಬಾಡಿಗೆ ಮಾಡಿಕೊಂಡು ತೆರಳಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಕೆಲವು ವಿದ್ಯಾರ್ಥಿಗಳು ಖಾಸಗಿ ವಾಹನಗಳಲ್ಲಿ ಡ್ರಾಪ್‌ ಪಡೆದುಕೊಂಡರೆ, ಇನ್ನು ಕೆಲವು ವಿದ್ಯಾರ್ಥಿಗಳು ಜತೆಗೂಡಿ ಆಟೋ ರಿûಾ ಬಾಡಿಗೆ ಮಾಡಿಕೊಂಡು ತೆರಳಿದ ಪ್ರಸಂಗ ನಡೆಯಿತು. ಕೇವಲ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಈ ಸ್ಥಿತಿಯಾದರೆ, ಇನ್ನೂ ಪಿಯುಸಿ, ಪ್ರೌಢಶಾಲೆಗಳೆಲ್ಲ ಆರಂಭವಾದರೆ ಆಗ ಈ ಸಮಸ್ಯೆ ಇನ್ನಷ್ಟು ಉಲ½ಣಗೊಳ್ಳುವ ಸಾಧ್ಯತೆಗಳಿವೆ.

ಎಲ್ಲ  ಬಸ್‌ಗಳು ರಸ್ತೆಗಿಳಿದಿಲ್ಲ  :

ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಬಸ್‌ ಸಂಚಾರವು ಜೂನ್‌ ಕೊನೆ ಹಾಗೂ ಜುಲೈ ಮೊದಲ ವಾರದಲ್ಲಿ ಆರಂಭಗೊಂಡಿತ್ತು. ಆದರೆ ಇನ್ನೂ ಕೂಡ ಲಾಕ್‌ಡೌನ್‌ಗಿಂತ ಮುಂಚೆ ಸಂಚರಿಸುತ್ತಿದ್ದ ಎಲ್ಲ ಬಸ್‌ಗಳು ರಸ್ತೆಗಿಳಿದಿಲ್ಲ. ಕೆಲವು ನಿಲ್ಲಿಸಿದ್ದ ಬಸ್‌ಗಳು ಅಲ್ಲಿಯೇ ಇವೆ. ಕುಂದಾಪುರ ಡಿಪೋ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ಗಿಂತ ಮುಂಚೆ ಸಿದ್ದಾಪುರ, ಬೈಂದೂರು, ಗಂಗೊಳ್ಳಿ, ಹಾಲಾಡಿ, ಉಡುಪಿ ಕಡೆಗೆ ಸೇರಿದಂತೆ 33 ಬಸ್‌ಗಳು ಸಂಚರಿಸುತ್ತಿದ್ದವು. ಈಗ 20 ಬಸ್‌ಗಳಷ್ಟೇ ಸಂಚರಿಸುತ್ತಿವೆ. ಇನ್ನೂ ಖಾಸಗಿ ಸಹ ಕೆಲವು ಬಸ್‌ಗಳು ಮಾತ್ರ ಸಂಚರಿಸುತ್ತಿವೆ.

ಗ್ರಾಮೀಣ ಭಾಗಗಳಿಂದ ಕುಂದಾಪುರಕ್ಕೆ ಬೆಳಗ್ಗೆ ಬರುವ ಬಹುತೇಕ ಎಲ್ಲ ಬಸ್‌ಗಳು ಜನರಿಂದ ತುಂಬಿರುತ್ತವೆ. ಇದರಿಂದ ನಾವು ಬೇರೆ ಬಸ್‌ ಇಲ್ಲದೆ ನೇತಾಡಿಕೊಂಡು ಬರುವಂತಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಪಿಯುಸಿ, ಪ್ರೌಢಶಾಲೆ ತರಗತಿಗಳು ಆರಂಭವಾಗುವುದರಿಂದ ನಮಗೆಲ್ಲ ಸಮಸ್ಯೆಯಾಗಲಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆ ಹೆಚ್ಚುವರಿ ಬಸ್‌ಗಳು ಸಂಚರಿಸಲು ಆದಷ್ಟು  ಶೀಘ್ರದಲ್ಲಿ  ವ್ಯವಸ್ಥೆ ಮಾಡಲಿ. -ನೊಂದ ಕಾಲೇಜು ವಿದ್ಯಾರ್ಥಿಗಳು 

ಈಗಾಗಲೇ ಕುಂದಾಪುರ ಭಾಗದಲ್ಲಿ ಬಹುತೇಕ ಎಲ್ಲ ಕಡೆಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. ಎಲ್ಲೆಲ್ಲ ಬಸ್‌ಗೆ ಬೇಡಿಕೆ ಇದೆ ಆ ಬಗ್ಗೆ ಗಮನಕ್ಕೆ ತರಲಿ. ಮುಂದಿನ ದಿನಗಳಲ್ಲಿ ಎಲ್ಲ ಶೈಕ್ಷಣಿಕ ಸಂಸ್ಥೆಗಳು, ಶಾಲಾ- ಕಾಲೇಜುಗಳು ಪೂರ್ಣಪ್ರಮಾಣದಲ್ಲಿ ತೆರೆದುಕೊಂಡ ಅನಂತರ ಪರಿಸ್ಥಿತಿ ನೋಡಿಕೊಂಡು ಹೆಚ್ಚುವರಿ ಬಸ್‌ಗಳನ್ನು ಆರಂಭಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು. – ರಾಜೇಶ್‌, ಕುಂದಾಪುರ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌

ಟಾಪ್ ನ್ಯೂಸ್

5 ದಿನ ಶವಗಳ ಮುಂದೆ ಕಣ್ಣೀರಿಟ್ಟು ಬದುಕಿದ ಎರಡೂವರೆ ವರ್ಷದ ಪ್ರೇಕ್ಷಾ!

ತಿಗರಪಾಳ್ಯ ಘಟನೆ: 5 ದಿನ ಶವಗಳ ಮುಂದೆ ಕಣ್ಣೀರಿಟ್ಟು ಬದುಕಿದ ಎರಡೂವರೆ ವರ್ಷದ ಪ್ರೇಕ್ಷಾ!

hjghkhjmng

ಪಾತ್ರವನ್ನು ಆವಾಹಿಸಿಕೊಳ್ಳುವವನೇ ನೈಜ ಕಲಾವಿದ

ಟೀಂ ಇಂಡಿಯಾ ಮುಖ್ಯ ಕೋಚ್ ಆಯ್ಕೆ: ಮತ್ತೆ ಕನ್ನಡಿಗನಿಗೆ ಆಫರ್ ನೀಡಿದ ಬಿಸಿಸಿಐ

ಟೀಂ ಇಂಡಿಯಾ ಮುಖ್ಯ ಕೋಚ್ ಆಯ್ಕೆ: ಮತ್ತೆ ಕನ್ನಡಿಗನಿಗೆ ಆಫರ್ ನೀಡಿದ ಬಿಸಿಸಿಐ

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

rwytju11111111111

ಶನಿವಾರದ ರಾಶಿಫಲ : ಇಲ್ಲಿದೆ ನಿಮ್ಮ ಗ್ರಹಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೃಷಿ ಯಂತ್ರಗಳಾದ ನಿರುಪಯುಕ್ತ ವಸ್ತುಗಳು

ಕೃಷಿ ಯಂತ್ರಗಳಾದ ನಿರುಪಯುಕ್ತ ವಸ್ತುಗಳು

ಶಿಥಿಲಾವಸ್ಥೆಯ ಕೊಠಡಿಯಲ್ಲೇ ಪಾಠ ಮಾಡುವ ಅನಿವಾರ್ಯ

ಶಿಥಿಲಾವಸ್ಥೆಯ ಕೊಠಡಿಯಲ್ಲೇ ಪಾಠ ಮಾಡುವ ಅನಿವಾರ್ಯ

ಉಪ್ಪುಂದ ಮೀನುಗಾರಿಕೆಗೆ ತೆರಳಿದ ದೋಣಿ : 6 ಮಂದಿ ಪಾರು, ಇಬ್ಬರು ನಾಪತ್ತೆ

ಉಪ್ಪುಂದ ಮೀನುಗಾರಿಕೆಗೆ ತೆರಳಿದ ದೋಣಿ ದುರಂತ : 6 ಮಂದಿ ಪಾರು, ಇಬ್ಬರು ನಾಪತ್ತೆ

Untitled-1

ಉತ್ತಮ ದಾಖಲಾತಿಯ ಶಾಲೆಗೆ ಬೇಕಿದೆ ಅಗತ್ಯ ಸೌಲಭ್ಯ 

Untitled-1

ಹೆದ್ದಾರಿ ಪ್ರಾಧಿಕಾರದಿಂದ ಅಸಮರ್ಪಕ ಮಾಹಿತಿ

MUST WATCH

udayavani youtube

ಆಡು ಸಾಕಾಣೆಯಿಂದ ಬದುಕು ಕಟ್ಟಿಕೊಂಡ ಪದವೀಧರೆ

udayavani youtube

ಆಟೋ ಚಾಲಕನಿಗೆ ಹುಡುಕಿ ಕಚ್ಚಿ ಗಾಯ ಮಾಡಿದ ಕೋತಿ

udayavani youtube

ಮದ್ಯ ಖರೀದಿಗೆ ಬರುವವರನ್ನು ಕೀಳಾಗಿ ಕಾಣದಿರಿ: ಹೈಕೋರ್ಟ್‌

udayavani youtube

ಸಿಸಿಟಿವಿಯಲ್ಲಿ‌ ಸೆರೆಯಾಯ್ತು ಭೀಕರ ಅಫಘಾತದ ದೃಶ್ಯ

udayavani youtube

ಹಿಮಾಲಯ ಮುಳುಗುತ್ತಾ ?

ಹೊಸ ಸೇರ್ಪಡೆ

5 ದಿನ ಶವಗಳ ಮುಂದೆ ಕಣ್ಣೀರಿಟ್ಟು ಬದುಕಿದ ಎರಡೂವರೆ ವರ್ಷದ ಪ್ರೇಕ್ಷಾ!

ತಿಗರಪಾಳ್ಯ ಘಟನೆ: 5 ದಿನ ಶವಗಳ ಮುಂದೆ ಕಣ್ಣೀರಿಟ್ಟು ಬದುಕಿದ ಎರಡೂವರೆ ವರ್ಷದ ಪ್ರೇಕ್ಷಾ!

hjghkhjmng

ಪಾತ್ರವನ್ನು ಆವಾಹಿಸಿಕೊಳ್ಳುವವನೇ ನೈಜ ಕಲಾವಿದ

ಟೀಂ ಇಂಡಿಯಾ ಮುಖ್ಯ ಕೋಚ್ ಆಯ್ಕೆ: ಮತ್ತೆ ಕನ್ನಡಿಗನಿಗೆ ಆಫರ್ ನೀಡಿದ ಬಿಸಿಸಿಐ

ಟೀಂ ಇಂಡಿಯಾ ಮುಖ್ಯ ಕೋಚ್ ಆಯ್ಕೆ: ಮತ್ತೆ ಕನ್ನಡಿಗನಿಗೆ ಆಫರ್ ನೀಡಿದ ಬಿಸಿಸಿಐ

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.