ಚುನಾವಣೆಗೆ ಬೈಂದೂರು ಕ್ಷೇತ್ರ ಸರ್ವ ಸಿದ್ಧ

Team Udayavani, Apr 21, 2019, 6:30 AM IST

byndoor

ಬೈಂದೂರು: ಎ. 23ರ ಚುನಾವಣೆಗೆ ಬೈಂದೂರು ಕ್ಷೇತ್ರವನ್ನು ತಾಲೂಕು ಆಡಳಿತ ಸಿದ್ಧಗೊಳಿಸಿದೆ. ಸಹಾಯಕ ಚುನಾವಣಾಧಿಕಾರಿ ಕುಸುಮಾಧರ ಅವರ ನೇತೃತ್ವದಲ್ಲಿ ತಹಶೀಲ್ದಾರ್‌ ಬಸಪ್ಪ ಪೂಜಾರ್‌ ಮತ್ತು ಸಿಬಂದಿಯ ಸಹಕಾರದೊಂದಿಗೆ ಸಿದ್ಧತೆಗಳು ನಡೆದಿವೆ.

ಮತಗಟ್ಟೆಗಳಲ್ಲಿ 75 ಸೂಕ್ಷ್ಮ ಮತ್ತು 171 ಸಾಮಾನ್ಯ ಎಂದು ಗುರುತಿಸಲಾಗಿದೆ. ಹೆಮ್ಮಾಡಿಯಲ್ಲಿ 2 ಮತ್ತು ತಲ್ಲೂರಿನಲ್ಲಿ 3 ಸಖೀ ಮತಗಟ್ಟೆಗಳಿರುತ್ತವೆ. ಎಲ್ಲ ಕೇಂದ್ರಗಳಲ್ಲೂ ವಿಶೇಷ ಚೇತನರಿಗೆ, ಅಶಕ್ತರಿಗೆ, ಗರ್ಭಿಣಿಯರಿಗೆ ಮತ್ತು ಹಿರಿಯ ನಾಗರಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. 1088 ಮತಗಟ್ಟೆ ಸಿಬಂದಿ ಮತ್ತು 246 ಸಹಾಯಕ ಸಿಬಂದಿ ಚುನಾವಣೆಯ ಕರ್ತವ್ಯ ನಿರ್ವಹಿಸುವರು. ಸುರಕ್ಷತೆಯ ಹೊಣೆಯನ್ನು ಮೂವರು ಡಿವೈಎಸ್‌ಪಿ ನೇತೃತ್ವದಲ್ಲಿ 103 ಇನ್‌ಸ್ಪೆಕ್ಟರ್‌, 33 ಎಸ್‌ಐ, 149 ಎಎಸ್‌ಐ ಹಾಗೂ 523 ಸಿಬಂದಿ ನೋಡಿಕೊಳ್ಳಲಿದ್ದಾರೆ.

ಎ. 22ರ ಬೆಳಗ್ಗೆ ಬೆ„ಂದೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್‌ ನಡೆಯಲಿದ್ದು, 41 ಬಸ್‌ ಮತ್ತು 45 ವ್ಯಾನ್‌ಗಳ ಮೂಲಕ 86 ರೂಟ್‌ಗಳಿಗೆ ಹೋಗುವ ಸಿಬಂದಿಯ‌ನ್ನು ಸಾಗಿಸುವ ವ್ಯವಸ್ಥೆ ಮಾಡಲಾಗಿದೆ. ಮತದಾನ ಮುಗಿದ ಬಳಿಕ ಡಿಮಸ್ಟರಿಂಗ್‌ ಕೂಡ ಇಲ್ಲಿಯೇ ನಡೆದು, ಮತಪೆಟ್ಟಿಗೆಗಳನ್ನು ಅದೇ ರಾತ್ರಿ ಶಿವಮೊಗ್ಗಕ್ಕೆ ಕಳುಹಿಸಲಾಗುವುದು.

246 ಮತದಾನ ಕೇಂದ್ರ
ಈ ಕ್ಷೇತ್ರದಲ್ಲಿ ಬೈಂದೂರು ತಾಲೂಕಿನ 26, ಕುಂದಾಪುರ ತಾಲೂಕಿನ 39 ಸೇರಿ 65 ಗ್ರಾಮಗಳು ಇವೆ. 1,10,237 ಪುರುಷ, 1,16,349 ಮಹಿಳಾ ಮತ್ತು 1 ಅನ್ಯ ಸೇರಿ ಒಟ್ಟು 2,26,587 ಮತದಾರರು 246 ಮತದಾನ ಕೇಂದ್ರಗಳಲ್ಲಿ ಹಕ್ಕು ಚಲಾಯಿಸಲಿದ್ದಾರೆ.

ಶಿವಮೊಗ್ಗ ಲೋಕಸಭಾ ಚುನಾವಣೆ : ವಾಹನ ವ್ಯವಸ್ಥೆ
ಕುಂದಾಪುರ: ಶಿವಮೊಗ್ಗ ಲೋಕಸಭಾ ಚುನಾವಣೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಮತದಾನ ಕೆಲಸ ನಿರ್ವಹಿಸಲು ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಅಧಿಕಾರಿ, ಸಿಬಂದಿ, ಪಿಆರ್‌ಒ, ಎಪಿಆರ್‌ಒ, ಪಿಒಗಳನ್ನು ನಿಯೋಜಿಸ ಲಾಗಿದ್ದು, ನಿಯೋಜಿತ ಮತಗಟ್ಟೆ ಅ ಧಿಕಾರಿ, ಸಿಬಂದಿಯು ಮಸ್ಟರಿಂಗ್‌ ಕೇಂದ್ರವಾದ ಬೈಂದೂರಿನ ಸರಕಾರಿ ಪ.ಪೂ. ಕಾಲೇಜಿಗೆ ಎ. 22 ರಂದು ಹಾಜರಾಗಲು ವಾಹನ ವ್ಯವಸ್ಥೆ ಮಾಡಲಾಗಿದೆ.
ವಿವಿಧ ತಾಲೂಕುಗಳಿಂದ ಚುನಾವಣಾ ಕರ್ತವ್ಯಕ್ಕೆ ಹೊರಡುವ ಸಿಬಂದಿಗೆ ತಾಲೂಕು ಕೇಂದ್ರಗಳಿಂದ ಬೈಂದೂರಿನ ಮಸ್ಟರಿಂಗ್‌ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಉಡುಪಿ , ಕಾಪು, ಕಾರ್ಕಳ, ಕುಂದಾಪುರ ತಾಲೂಕು ಕೇಂದ್ರಗಳಲ್ಲಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಎ. 22 ರಂದು ಬೆಳಗ್ಗೆ 6.30 ಕ್ಕೆ ಬಸ್‌ ಹೊರಡಲಿದ್ದು, ಅನಂತರ ಬಸ್‌ ವ್ಯವಸ್ಥೆ ಇರುವುದಿಲ್ಲ. ಚುನಾವಣೆ ಮುಗಿದು ಡಿ ಮಸ್ಟರಿಂಗ್‌ ಕೇಂದ್ರದಲ್ಲಿ ಇವಿಎಂ ಮತಯಂತ್ರಗಳನ್ನು ಹಸ್ತಾಂತರಿಸಿದ ಅನಂತರ ವಾಪಸ್‌ ಕೇಂದ್ರ ಸ್ಥಾನಗಳಿಗೆ ಹೋಗಲು ಬಸ್‌ ವ್ಯವಸ್ಥೆ ಮಾಡಲಾಗಿದೆ.

ಹೊರಡುವ ಸ್ಥಳ
ಕುಂದಾಪುರದಲ್ಲಿ ತಾಲೂಕು ಕಚೇರಿ ಬಳಿ, ಉಡುಪಿಯಲ್ಲಿ ತಾಲೂಕು ಕಚೇರಿ ಮತ್ತು ಸಿಟಿ ಬಸ್‌ ನಿಲ್ದಾಣ, ಕಾಪುವಿನಲ್ಲಿ ತಾಲೂಕು ಕಚೇರಿ ಮತ್ತು ಬಸ್‌ ನಿಲ್ದಾಣ, ಕಾರ್ಕಳದಲ್ಲಿ ತಾಲೂಕು ಕಚೇರಿ ಮತ್ತು ಬಂಡಿಮಠದ ಬಸ್‌ ನಿಲ್ದಾಣದಿಂದ ಬಸ್‌ ಹೊರಡಲಿದೆ. ನಿಯೋಜಿತ ಅಧಿಕಾರಿ/ಸಿಬಂದಿ ಪ್ರಯೋಜನ ಪಡೆಯುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

Gangolli ಬೈಕ್‌ ಢಿಕ್ಕಿ ; ಸವಾರರಿಗೆ ಗಾಯ

Gangolli ಬೈಕ್‌ ಢಿಕ್ಕಿ ; ಸವಾರರಿಗೆ ಗಾಯ

Siddapura ಸಾಲ ಬಾಧೆಯಿಂದ ಯುವಕ ಆತ್ಮಹತ್ಯೆ

Siddapura ಸಾಲ ಬಾಧೆಯಿಂದ ಯುವಕ ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.