ತೆಕ್ಕಟ್ಟೆ: ಜವುಳಿ ಮಳಿಗೆಗೆ ತೆರಳಿ 2 ಸಾವಿರ ರೂ.ನೋಟ್‌ ನೀಡಿ ವಂಚಿಸುವ ಅಪರಿಚಿತರ ತಂಡ ಪತ್ತೆ


Team Udayavani, Jul 24, 2022, 4:38 PM IST

tdy-2

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಪ್ರಮುಖ ಭಾಗದ ಜವುಳಿ ಮಳಿಗೆ ಹಾಗೂ ಇನ್ನಿತರ ಅಂಗಡಿಗಳಿಗೆ ತೆರಳಿ 2 ಸಾವಿರ ರೂ. ಮುಖ ಬೆಲೆಯ ನೋಟ್‌ ನೀಡಿ ಹಣ ಪೀಕುವ ಅಂತಾರಾಜ್ಯ ಅಪರಿಚಿತ ವ್ಯಕ್ತಿಗಳ ತಂಡವೊಂದು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಇಲ್ಲಿನ ಪ್ರಮುಖ ಜವುಳಿ ಮಳಿಗೆಯೊಂದರಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಗ್ರಾಹಕರ ಸೋಗಿನಲ್ಲಿ ಬಂದು 2 ಸಾವಿರ ರೂ. ಮುಖಬೆಲೆಯ 5 ನೋಟುಗಳನ್ನು ನೀಡಿ, 100 ರೂ. ಮುಖ ಬೆಲೆಯ ಚಿಲ್ಲರೆ ನೀಡುವಂತೆ ವಿನಂತಿಸುತ್ತಾರೆ.ಅಂಗಡಿಯ ವ್ಯವಸ್ಥಾಪಕರು 100 ರೂ. ಚಿಲ್ಲರೆ ಇಲ್ಲ ಬದಲಾಗಿ 500 ರೂ. ಮುಖಬೆಲೆಯ 20 ನೋಟ್‌ಗಳನ್ನು ನೀಡುತ್ತಾರೆ. ವ್ಯಾಪಾರದ ಗಡಿಬಿಡಿಯಲ್ಲಿರುವುದನ್ನು ಅರಿತ ಅಪರಿಚಿತ ಇಬ್ಬರು ವ್ಯಕ್ತಿಗಳು ಈ ವಿಷಯವನ್ನೇ ಮುಖ್ಯವಾಗಿರಿಸಿಕೊಂಡು ನಾನು ನೀಡಿದ ಹಣವನ್ನು ವಾಪಸು ನೀಡುವಂತೆ ವ್ಯವಸ್ಥಾಪಕರ ನಡುವೆ ಕೈಮುಗಿದು ವ್ಯವಸ್ಥಾಪಕರ ಗಮನವನ್ನು ಬೇರೆಡೆಗೆ ಸೆಳೆದು 3,500 ರೂಪಾಯಿ ಯಾಮಾರಿಸಿದ್ದಾರೆ.

ಇದನ್ನೂ ಓದಿ: ಗೊಂಡಾ: 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ 13 ವರ್ಷದ ಬಾಲಕ

ಅದರಂತೆ ಇಲ್ಲಿನ ಪ್ರಮುಖ ಭಾಗದಲ್ಲಿರುವ ಪೂಜಾ ಸಾಮಾಗ್ರಿಗಳ ಅಂಗಡಿಗೆ ತೆರಳಿ ತಂಬಿಗೆ ಖರೀದಿಸಿ ರೂ. 2 ಸಾವಿರ ಮುಖಬೆಲೆಯ ನೋಟ್‌ ನೀಡಿ, ಚಿಲ್ಲರೆ ಪಡೆದುಕೊಂಡು ತೆರಳುತ್ತಾರೆ. ತದ ನಂತರ ಪುನಃ ಅದೇ ಅಂಗಡಿಗೆ ಬಂದು ತಾವು ನೀಡಿದ ರೂ.2 ಸಾವಿರ ಮುಖಬೆಲೆಯ ನೋಟ್‌ ವಾಪಾಸು ನೀಡುವಂತೆ ವಿನಂತಿಸಿಕೊಂಡು ಹಿಂಪಡೆದ ಬಳಿಕ, ಅಂಗಡಿಯವರು ನೀಡಿದ ಚಿಲ್ಲರೆ ಆಟೋದಲ್ಲಿದೆ ತರುವುದಾಗಿ ಅಂಗಡಿ ಮಾಲಕರಿಗೆ ಹೇಳಿ ಹೋದವರು ಹಿಂದಿರುಗಿ ಬಾರದೇ ರೂ.1900ವನ್ನು ಯಾಮಾರಿಸಿದ ಘಟನೆಗಳು ಕೂಡಾ ನಡೆದಿದೆ.

ಅಟೋದಲ್ಲಿ ಆಗಮಿಸುತ್ತಾರೆ ಖತರ್ನಾಕ್‌ ಗ್ಯಾಂಗ್‌ !: ತಮಿಳುನಾಡು ಮೂಲದ ಪುರುಷ ಹಾಗೂ ಮಹಿಳೆಯರ ತಂಡವೊಂದು ಗ್ರಾಹಕರ ಸೋಗಿನಲ್ಲಿ ಅಟೋ ಮೂಲಕ ತೆರಳುತ್ತಾರೆ ಈ ಖತರ್ನಾಕ್‌ ಗ್ಯಾಂಗ್‌. ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿಯ ಅನತಿ ದೂರದಲ್ಲಿಯೇ ಅಟೋ ನಿಲ್ಲಿಸಿ, ಸಾಮಾನ್ಯ ವ್ಯಕ್ತಿಗಳಂತೆ ಬಂದು ಅಂಗಡಿಯ ಒಳ ಪ್ರವೇಶಿಸಿ, ನಂತರ ಚಿಲ್ಲರೆ ನೆಪದಲ್ಲಿ ಗಮನ ಬೇರೆಡೆಗೆ ಸೆಳೆದು ಹಣ ಯಾಮಾರಿಸುವ ದೃಶ್ಯಾವಳಿಗಳು ತೆಕ್ಕಟ್ಟೆಯ ಪ್ರಮುಖ ಜವುಳಿ ಮಳಿಗೆಯೊಂದರಲ್ಲಿ ಅಳವಡಿಸಿದ ಸಿಸಿ ಟಿವಿ ಕೆಮರಾದಲ್ಲಿ ಸಂಪೂರ್ಣ ಸೆರೆಯಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಅಂಗಡಿ ಮಾಲಕರು ಅಂಗಡಿಯಲ್ಲಿ ಅಳವಡಿಸಿದ ಸಿಸಿ ಟಿವಿ ಕೆಮರಾ ದೃಶ್ಯಾವಳಿಗಳನ್ನು ಸಂಬಂಧಪಟ್ಟ ಪೊಲೀಸ್‌ ಇಲಾಖೆಯ ಗಮನಕ್ಕೂ ಕೂಡಾ ತಂದಿದ್ದಾರೆ.

 

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.