ಕನ್ನಡದ ಮೊದಲ ಸಾಮಾಜಿಕ ಕಾದಂಬರಿಯ ಕರ್ತೃ ಗುಲ್ವಾಡಿ ವೆಂಕಟ ರಾವ್‌


Team Udayavani, Nov 10, 2020, 5:12 AM IST

Kannada

ಗುಲ್ವಾಡಿ ವೆಂಕಟ ರಾವ್‌

ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ ವೆಂಕಟ ರಾವ್‌ ಅವರ ಮೊದಲ ಕಾದಂಬರಿ (1899). ಅನಂತರ ಭಾಗೀರಥಿ (1900), ಸೀಮಂತಿನೀ (1907) ಕಾದಂಬರಿಗಳನ್ನು ಬರೆದರು.

ಕುಂದಾಪುರ: 121 ವರ್ಷಗಳ ಹಿಂದೆ 1899ರಲ್ಲಿ ಮಂಗಳೂರಿನ ಬಾಸೆಲ್‌ ಮಿಷನ್‌ನಿಂದ ಮುದ್ರಿತವಾದ ಕನ್ನಡದ ಮೊತ್ತಮೊದಲ ಸಾಮಾಜಿಕ ಕಾದಂಬರಿ “ಇಂದಿರಾಬಾಯಿ’ಯ ಕರ್ತ್ಯು ಗುಲ್ವಾಡಿ ವೆಂಕಟ ರಾವ್‌. 1844ರಲ್ಲಿ ಕುಂದಾಪುರದ ಗುಲ್ವಾಡಿ ಯಲ್ಲಿ ಜನಿಸಿದ ಅವರು ಬಿಎ ಪದವೀಧರ ರಾಗಿ ಪೊಲೀಸ್‌ ಇಲಾಖೆ ಯಲ್ಲಿ ವಿವಿಧೆಡೆ ಸೇವೆ ಸಲ್ಲಿಸಿದರು. ವೃತ್ತಿಗೆ ತಕ್ಕ ಭೀಮಕಾಯ, ಗಂಭೀರ ಮುಖಮುದ್ರೆ ಇವರ ದಾಗಿತ್ತು. ನಿವೃತ್ತರಾದ ಬಳಿಕ ಸಾಹಿತ್ಯ ರಚನೆ ಯಲ್ಲಿ ತೊಡಗಿದರು. ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ ಮೊದಲ ಕಾದಂಬರಿ (1899). ಅನಂತರ ಭಾಗೀರಥಿ (1900), ಸೀಮಂತಿನೀ (1907) ಕಾದಂಬರಿಗಳನ್ನು ಬರೆದರು. ಲಾಡುಪ್ರಿಯಾಚಾರ್ಯ ಎಂಬುದು ವಿಡಂಬನಾತ್ಮಕ ಬರೆಹ. ಮಿತ್ರೋದಯವೆಂಬ ಪತ್ರಿಕೆಯನ್ನೂ ನಡೆಸುತ್ತಿದ್ದರು.

ಮೊದಲ ಕಾದಂಬರಿ
ಅವರ “ಇಂದಿರಾಬಾಯಿ’ ಕಾದಂಬರಿಯು ಮಹಿಳೆಯನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಸಾಮಾಜಿಕ ಸುಧಾರಣೆಗಳನ್ನು ಪ್ರತಿಪಾದಿಸುವ ಕನ್ನಡದ ಮೊದಲ ಸಾಮಾಜಿಕ ಕಾದಂಬರಿ. (ಮೈಲಾಪುರದಲ್ಲಿ ಹೈಕೋರ್ಟಿನ ವಕೀಲರಾಗಿದ್ದ ರೆಂಟ್ಲ ವೆಂಕಟಸುಬ್ಬರಾವ್‌ ಅವರಿಂದ ರಚಿತವಾಗಿ ಮದರಾಸಿನಲ್ಲಿ ಪ್ರಕಟವಾದ ಕೇಸರಿವಿಲಾಸ (1895) ಕಾದಂಬರಿ ಕನ್ನಡದ ಪ್ರಥಮ ಸ್ವತಂತ್ರ ಕಾದಂಬರಿ ಎನ್ನುವುದು ಗೋವಿಂದ ಪೈಗಳ ಅಭಿಪ್ರಾಯ.) ಇದು ವ್ಯಕ್ತಿಯೊಬ್ಬರ ಆತ್ಮಕಥೆ ಎಂದು ಲೇಖಕರೇ ಹೇಳಿಕೊಂಡಿದ್ದು, ಹಳತು ಹೊಸತರ ಸಂಘರ್ಷ ಕಾದಂಬರಿಯಲ್ಲಿ ಚಿತ್ರಿತವಾಗಿದೆ. ಪೊಲೀಸ್‌ ಇಲಾಖೆಯಲ್ಲಿದ್ದಾಗಿನ ಲೋಕಾನುಭವ ಇಲ್ಲಿ ಸಾಹಿತ್ಯವಾಗಿ ರೂಪುಗೊಂಡಿದೆ. ಕಥೆಯಲ್ಲಿನ ಘಟನೆಗಳು ವಾಸ್ತವಾಂಶದಿಂದ ಕೂಡಿದವಾಗಿದ್ದು ಯಾವ ದೃಷ್ಟಿಯಿಂದ ನೋಡಿ ದರೂ ಕಾದಂಬರಿ ಆಧುನಿಕ ಸಮಾಜದ ಕಥನವೆನಿಸಿ ಕೊಳ್ಳುತ್ತದೆ. ಈ ಕಾದಂಬರಿಯ ಗುಣವನ್ನು ಮೆಚ್ಚಿ, ದ.ಕ.ದಲ್ಲಿ ಡಿಸಿಯಾಗಿದ್ದ ಕೌಚನ್‌ ಎಂಬವರು ಇದನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಪ್ರಕಟಿಸಿದ್ದರು. ಅದಾದ ಬಳಿಕವೂ ಇಂಗ್ಲಿಷ್‌ಗೆ ಭಾಷಾಂತರ ಗೊಂಡಿದ್ದು ಇಂದಿಗೂ ಮಾರುಕಟ್ಟೆಯಲ್ಲಿ ಲಭ್ಯ ಇರುವ ಪುರಾತನ ಕೃತಿಯಾಗಿದೆ. ಈ ಕೃತಿಯು ಸಾಕಷ್ಟು ಅಧ್ಯಯನಕ್ಕೆ ಒಳಗಾಗಿದೆ. ತರಗತಿಗಳಲ್ಲಿ ಪಾಠವಾಗಿ ವಿದ್ಯಾರ್ಥಿಗಳು ಓದಿದ್ದಾರೆ. ವಿಮರ್ಶಕರು ಅದರ ವೈಶಿಷ್ಟéಗಳನ್ನು ಚರ್ಚಿಸಿದ್ದಾರೆ. ವೆಂಕಟರಾಯರು ತಮ್ಮ “ಭಾಗೀರಥಿ’ ಕಾದಂಬರಿಗೆ “ಮೂರ್ಖತ್ವದ ಯಾತನೆಗಳು’ ಎಂಬ ಬದಲಿ ಉಪಶೀರ್ಷಿಕೆಯನ್ನು ಕೊಡುವುದರ ಮೂಲಕ ಕೃತಿಯ ವಿಡಂಬನೆಯ ಧಾಟಿಯನ್ನು ಸೂಚಿಸಿದ್ದರು.

ಪ್ರಶಸ್ತಿ
1990ರ ದಶಕದಲ್ಲಿ ರಾಜ್ಯ ಸರಕಾರ ಈ ಕಾದಂಬರಿಯನ್ನು ಪ್ರಕಟಿಸಿ ಗೌರವಧನವನ್ನು ವೆಂಕಟರಾಯರ ಕೌಟುಂಬಿಕ ಬಂಧು, ಪತ್ರಕರ್ತ ಸಂತೋಷ್‌ ಕುಮಾರ್‌ ಗುಲ್ವಾಡಿ ಅವರಿಗೆ ನೀಡಿದಾಗ, ಆ ಗೌರವ ಧನದ ಜತೆಗೆ “ತರಂಗ’ದ ಓದುಗರು ಪ್ರೀತಿಯಿಂದ ಸಂಗ್ರಹಿಸಿ ಕೊಟ್ಟ ದೇಣಿಗೆಯ ಹಣವನ್ನೂ ಸೇರಿಸಿ “ಗುಲ್ವಾಡಿ ವೆಂಕಟ ರಾವ್‌ ಪ್ರಶಸ್ತಿ’ಯನ್ನು ಸ್ಥಾಪಿಸಿ, ಕನ್ನಡದ ಕೆಲವು ಸಮರ್ಥ ಲೇಖಕರಿಗೆ ನೀಡಿದ್ದರು. ವೆಂಕಟ ರಾಯರು ಜನಿಸಿದ ಮನೆಯ ಕುರುಹು ಕೂಡ ಇಲ್ಲ. ಸ್ಮಾರಕ ಇತ್ಯಾದಿಗಳ ರಚನೆಗೆ ಯಾರೂ ಆಸ್ಥೆ ವಹಿಸಲಿಲ್ಲ. ಕಳಕಳಿ ಗುಲ್ವಾಡಿ ಅವರು ಬಾಳಿದ ಕಾಲದಲ್ಲಿ ಭಾರತೀಯ ಸಮಾಜ ಸನಾತನ ಆವರಣದಿಂದ ಹೊರಬಿದ್ದು, ಬ್ರಿಟಿಷ್‌ ಆಳ್ವಿಕೆಯಲ್ಲಿ ಪಾಶ್ಚಾತ್ಯ ನಾಗರಿಕತೆಯತ್ತ ಸಾಗುತ್ತಿತ್ತು. ಸನಾತನ ಧರ್ಮದಲ್ಲಿ, ಗುರುಪೀಠಗಳಲ್ಲಿ ಇವರಿಗೆ ಅಚಲ ನಿಷ್ಠೆಯಿದ್ದು ಆ ಮನೋಭಾವ ದಿಂದಲೇ ಅಂದಿನ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡದ್ದಿದೆ. ಪ್ರಾಮಾಣಿಕತೆಯೇ ಜೀವನದ ಉಸಿರಾಗಿತ್ತು. ಹೊಸ ಶಿಕ್ಷಣ ಪಡೆದಿದ್ದರಿಂದ ಹಲವು ಶಿಕ್ಷಣ ಮಂದಿರಗಳನ್ನು ಪುನರುಜ್ಜೀವನ ಗೊಳಿಸಿದರು. ಸ್ತ್ರೀಯರ ಏಳ್ಗೆ ಮುಂತಾದ ವಿಷಯಗಳಲ್ಲಿ ಸಹಜವಾದ ಕಳಕಳಿ ಇತ್ತು.

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.