ತೆಕ್ಕಟ್ಟೆ : ಕೋವಿಡ್ ಗೆದ್ದ ಒಂದೇ ಮನೆಯ 19 ಮಂದಿ
Team Udayavani, May 15, 2021, 11:52 AM IST
ತೆಕ್ಕಟ್ಟೆ : ಕೋವಿಡ್ ಸೋಂಕಿಗೆ ಒಳಗಾದ ಕುಟುಂಬವೊಂದು ಸಂಪೂರ್ಣ ಗುಣಮುಖವಾಗಿ ಕೋವಿಡ್ ನಿಂದ ಬಳಲುತ್ತಿರುವ ಸೋಂಕಿತರಿಗೆ ಧೈರ್ಯದಿಂದ ಸೋಂಕು ಗೆಲ್ಲಲು ಮನವಿ ಮಾಡಿಕೊಂಡಿದೆ.
ಕುಂದಾಪುರ ತಾಲೂಕಿನ ಹೊಂಬಾಡಿ ಮಂಡಾಡಿ ಗ್ರಾಮದ ಹೆರಿಯಣ್ಣ ಆಚಾರ್ಯ ,ಗಣಪ್ಪಯ್ಯ ಆಚಾರ್ಯ,ಶಂಕರ ಆಚಾರ್ಯ ಅವರ ಮನೆಯ 19 ಜನ ಸದಸ್ಯರಿಗೆ ಕೋವಿಡ್ ಲಕ್ಷಣ ಕಂಡುಬಂದು ನಂತರದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು.
ಇದನ್ನೂ ಓದಿ : ಇಸ್ರೇಲ್ ನಲ್ಲಿ ರಾಕೆಟ್ ದಾಳಿಯಲ್ಲಿ ಮಡಿದ ಕೇರಳದ ಸೌಮ್ಯ ಪಾರ್ಥಿವ ಶರೀರ ಭಾರತಕ್ಕೆ
ಪಾಸಿಟಿವ್ ಬಂದ ಬಳಿಕ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲ್ಲಾ 19 ಜನ ಸದಸ್ಯರು ಈಗ ಕೋವಿಡ್ ನಿಂದ ಗುಣಮುಖರಾಗಿದ್ದು,ಅದೆಷ್ಟೋ ಸೊಂಕೀತರಿಗೆ ಧೈರ್ಯದಿಂದ ಕೋವಿಡ್ ಗೆಲ್ಲಲು ಮನವಿಕೊಂಡಿದ್ದಾರೆ.