ಕೊಡಿಹಬ್ಬ ಆಚರಣೆಗೆ ಅಣಿಯಾದ ಕೋಟಿಲಿಂಗೇಶ್ವರ ಸನ್ನಿಧಿ

Team Udayavani, Nov 19, 2021, 3:20 AM IST

ಕೊಡಿಹಬ್ಬ ಆಚರಣೆಗೆ ಅಣಿಯಾದ ಕೋಟಿಲಿಂಗೇಶ್ವರ ಸನ್ನಿಧಿ

ಕೋಟೇಶ್ವರ:  ಕೋಟಿಲಿಂಗೇಶ್ವರ ದೇಗುಲದ ರಥೋತ್ಸವದ ಸಲುವಾಗಿ ದೇಗುಲದಲ್ಲಿ ಪ್ರಧಾನ ಅರ್ಚಕ ಹಾಗೂ ತಂತ್ರಿ ಪ್ರಸನ್ನ ಕುಮಾರ ಐತಾಳ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.

ದೇಗುಲದ ಒಳಪೌಳಿಯಲ್ಲಿ ನ. 18ರಂದು ರಂಗೋತ್ಸವ, ಸಿಂಹವಾನೋತ್ಸವದಲ್ಲಿ ಉತ್ಸವ ಮೂರ್ತಿ, ದೇವರ ಪಲ್ಲಕಿಯ ಪ್ರದ ಕ್ಷಿ ಣೆ ಯನ್ನು ಒಳಸುತ್ತಿನಲ್ಲಿ ಚೆಂಡೆ-ವಾದ್ಯ ಗಳೊಡನೆ ಸಾಂಪ್ರ ದಾಯಿಕ, ಶಾಸ್ತ್ರೋಕ್ತವಾಗಿ ನಡೆಸಲಾಯಿತು.

ದೇಗುಲದಲ್ಲಿ ನಡೆದ ವಿವಿಧ ಉತ್ಸವಾದಿಗಳಲ್ಲಿ ತಾಂಡವ ನೃತ್ಯ ಹಾಗೂ ಚೆಂಡೆವಾದನ ರವಿರಾಜ ಭಟ್‌ ನಂದಳಿಕೆ ಅವರ ನೇತೃತ್ವದಲ್ಲಿ ನಡೆಯಿತು.

ದೇಗುಲದಲ್ಲಿ ಸೇವಾಕರ್ತರಿಂದ ಶತ ರುದ್ರಾಭಿಷೇಕ, ಸಣ್ಣ ಹಾಗೂ ದೊಡ್ಡ ರಂಗಪೂಜೆ ನಡೆಯಿತು. ಆಸ್ತಿಕ ಸಮಾಜದ ನೇತೃತ್ವದಲ್ಲಿ  ಪ್ರತೀ ದಿನ ಭಜನೆ ಹಾಗೂ ಮಂಗಲೋತ್ಸವ ನಡೆಯಿತು.

2 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರ:  

400 ವರ್ಷಗಳ ಶಿಥಿಲಗೊಂಡ ಗರ್ಭಗುಡಿಯ ಮಾಡನ್ನು ಹೊಸತಾಗಿ ತಾಮ್ರದ ಹೊದಿಕೆಯೊಂದಿಗೆ ನಿರ್ಮಿಸಲಾಗಿದೆ. 60 ವರ್ಷಗಳ ಹಿಂದಿನ ಕಾಂಕ್ರೀಟ್‌ ಛಾವಡಿಯನ್ನು ತೆರ ವು ಗೊ ಳಿ ಸಿ ಎಡನಾಳಿ ಮಾಡನ್ನು ನೂತನ ತಾಮ್ರದ ಹೊದಿಕೆಯೊಂದಿಗೆ ರಚಿಸಲಾಗಿದೆ. ಗರ್ಭಗುಡಿಯ ಮೇಲಿನ ಶಿಥಿಲಗೊಂಡ ಗೋಡೆಯನ್ನು ತೆರ ವು  ಮಾಡಿ ಹೊಸ ದಾಗಿ ಗೋಡೆ ಹಾಗೂ ಮುಚ್ಚಿಗೆಗಳನ್ನು  ನಿರ್ಮಿಸಲಾ ಗಿ ದೆ. ಶಿಲಾ ಮಾಡಿನ ಮೇಲೆ ಸಂಪೂರ್ಣ ಸಿಮೆಂಟ್‌ ಗಾರೆ ಹಾಕಲಾಗಿದೆ. ಗರ್ಭಗುಡಿಯ ಮೇಲಿನ ಗೋಡೆಯ ಹೊರಸುತ್ತಿನಲ್ಲಿ ಹೊಸತಾಗಿ ಭಿತ್ತಿಚಿತ್ರಗಳನ್ನು ರಚಿಸಲಾಗಿದೆ. ತೀರ್ಥ ಮಂಟಪ ವನ್ನು ತಾಮ್ರದ ಹೊದಿಕೆಯೊಂದಿಗೆ ಹೊಸತಾಗಿ ನಿರ್ಮಿಸಲಾಗಿದೆ. ಗರ್ಭಗುಡಿಯ ಮೇಲಿನ ಹೊರಗಿನ ಗೋಡೆಯ ಸುತ್ತ ನಾಲ್ಕು ಸಿಂಹ ಹಾಗೂ 36 ಚಾರುಗೂಟ ನಿರ್ಮಿಸಲಾಗಿದೆ. ನೂತನ ಧ್ವಜ ಮರ ಕೆತ್ತನೆ, ಶಿಲಾಪೀಠ, ಕಂಚಿನ ಪದ್ಮಪೀಠ, ಎರಕದ ಅಷ್ಟದಿಕಾ³ಲಕರು, ಧ್ವಜಮರಕ್ಕೆ ತಾಮ್ರದ ಕವಚದ ಕೆಲಸ ಸಂಪೂರ್ಣವಾಗಿದೆ. ಬ್ರಹ್ಮ ಅಶ್ವತ್ಥ ಕಟ್ಟೆಯಲ್ಲಿ ನಾಗಶಿಲೆಯ ಪುನರ್‌ ಪ್ರತಿಷ್ಠೆಯಾಗಿದೆ. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಎನ್‌. ಕೃಷ್ಣಮೂರ್ತಿ ರಾವ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ ಕೋಣಿ ಹಾಗೂ ಸದಸ್ಯರ ಮುತುವರ್ಜಿಯಲ್ಲಿ ಕಾಮಗಾರಿಗಳು ಪೂರ್ಣಗೊಂಡಿವೆ.

ಮದ್ಯ ಮಾರಾಟ ನಿಷೇಧ:

ಕೋಟೇಶ್ವರ, ಹಂಗಳೂರು ಹಾಗೂ ಗೋಪಾಡಿ ವ್ಯಾಪ್ತಿಯ ಎಲ್ಲ ರೀತಿಯ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್‌, ರೆಸ್ಟೋರೆಂಟ್‌ ಹಾಗೂ ವೈನ್‌ ಶಾಪ್‌ಗ್ಳಲ್ಲಿ ಮದ್ಯಮಾರಾಟವನ್ನು ನ.18ರ ಬೆಳಗ್ಗೆ 6ರಿಂದ  19ರ ರಾತ್ರಿ 12ರ ವರೆಗೆ ನಿಷೇಧಿಸುವಂತೆ ಜಿಲ್ಲಾಧಿಕಾರಿ ಕೂರ್ಮರಾವ್‌ ಆದೇಶಿಸಿದ್ದಾರೆ.

ಜನಮನ  ಸೂರೆಗೊಂಡ  ತಟ್ಟಿರಾಯ :

ಕೊಡಿಹಬ್ಬ ಹಾಗೂ ವಿಶೇಷ ಸಂದರ್ಭ ಗಳಲ್ಲಿ ಉತ್ಸವ ಮೂರ್ತಿಯೊಡನೆ ಸಾಗುವ ಇಲ್ಲಿನ ಎರಡು ಬೃಹತ್‌ ತಟ್ಟಿರಾಯ ವಿಶೇಷ ಆಕರ್ಷಣೆಯಾಗಿದೆ. ದೇಗುಲದ ಕೊಡಿಹಬ್ಬ ಸಹಿತ ಕಟ್ಟೆಪೂಜೆ ಕಾರ್ಯಕ್ರಮಗಳಲ್ಲಿ ತಟ್ಟಿರಾಯನಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪುರಾತನ ಪರಂಪರೆಗೆ ಇದೊಂದು ಪ್ರತೀಕವಾಗಿದೆ. ವಿವಿಧ ದೇಗುಲಗಳ ಧಾರ್ಮಿಕ ಆಚರಣೆಗಳಲ್ಲಿ ಇಲ್ಲಿನ ತಟ್ಟಿರಾಯರನ್ನು ಬಳಸಲಾಗುತ್ತದೆ. ಐತಿಹಾಸಿಕ ಹಿನ್ನೆಲೆಯಲ್ಲಿ ತಟ್ಟಿರಾಯನ ವರ್ಣನೆ ಇದ್ದು, ಅದರ ಬಳಕೆಯನ್ನು ಸಂಪ್ರದಾಯಕ್ಕೆ ಲೋಪವಾಗದಂತೆ ಕೋಟಿಲಿಂಗೇಶ್ವರ ದೇಗುಲದಲ್ಲಿ ಧಾರ್ಮಿಕ ಶ್ರದ್ಧೆಯೊಡನೆ ಬಳಸಲಾಗುತ್ತಿದೆ.

ಇಂದು ಕೊಡಿಹಬ್ಬ :

ಶ್ರೀ ಕೋಟಿಲಿಂಗೇಶ್ವರ ದೇಗುಲದಲ್ಲಿ ನ. 19ರಂದು ನಡೆಯಲಿರುವ ರಥೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಬ್ರಹ್ಮರಥವನ್ನು ಅಲಂಕರಿ ಸಲಾಗಿದೆ. ಪಟ್ಟಾಭಿ ರಾಮಚಂದ್ರ ದೇಗುಲದ ಶ್ರೀ ರಾಮ ಸೇವಾ ಸಂಘದಿಂದ ಬ್ರಹ್ಮರಥಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ಮಿತ್ರದಳ ಕೋಟೇಶ್ವರ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಜಾತ್ರೆ ದಿನ ಶ್ರೀ ದೇವರು ಹಾಗೂ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ತಂತ್ರಿ ಪ್ರಸನ್ನ ಕುಮಾರ್‌ ಐತಾಳ್‌, ಕಾರ್ಯ ನಿರ್ವಹಣಾಧಿ ಕಾರಿ ಗಣೇಶ ಗೌಡ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಹಾಗೂ ಸಮಿತಿ ಸದಸ್ಯರು ಕೊಡಿಹಬ್ಬದ ಆಚರಣೆಗೆ ಸಕಲ ಸಿದ್ಧತೆಗಳನ್ನು ಏರ್ಪಡಿಸಿದ್ದಾರೆ.

ಟಾಪ್ ನ್ಯೂಸ್

ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಹೆಲ್ಮೆಟ್‌ ಸಡಿಲವಾಗಿ ಧರಿಸಿದ್ದರೂ ದಂಡ!

ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಹೆಲ್ಮೆಟ್‌ ಸಡಿಲವಾಗಿ ಧರಿಸಿದ್ದರೂ ದಂಡ!

thumb 1

ಹೈದರಾಬಾದ್‌-ಪಂಜಾಬ್‌ ಲಾಸ್ಟ್‌ ಶೋ; ಇಂದು ಕೊನೆಯ ಲೀಗ್‌ ಪಂದ್ಯ ; ಕೇವಲ ಔಪಚಾರಿಕ ಮುಖಾಮುಖಿ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ

ಸಮುದಾಯ ಮತಬ್ಯಾಂಕ್‌ನತ್ತ ಕಾಂಗ್ರೆಸ್‌ ದೃಷ್ಟಿ

ಸಮುದಾಯ ಮತಬ್ಯಾಂಕ್‌ನತ್ತ ಕಾಂಗ್ರೆಸ್‌ ದೃಷ್ಟಿ

ಬೆಳೆ ಹಾನಿ ಸಮೀಕ್ಷಾ ವರದಿಗೆ ಸಿಎಂ ಬೊಮ್ಮಾಯಿ ಸೂಚನೆ

ಬೆಳೆ ಹಾನಿ ಸಮೀಕ್ಷಾ ವರದಿಗೆ ಸಿಎಂ ಬೊಮ್ಮಾಯಿ ಸೂಚನೆ

astrology

ರವಿವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಮಂಗಳೂರಿನಲ್ಲಿ ವಿಮಾನ ಮಹಾದುರಂತಕ್ಕೆ 12 ವರ್ಷ

ಮಂಗಳೂರಿನಲ್ಲಿ ವಿಮಾನ ಮಹಾದುರಂತಕ್ಕೆ 12 ವರ್ಷಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋಟೇಶ್ವರ – ಹಾಲಾಡಿ ಮಾರ್ಗ: ಬೃಹತ್‌ ಮರ ಬಿದ್ದು ಸಂಚಾರಕ್ಕೆ ಅಡ್ಡಿ

ಕೋಟೇಶ್ವರ – ಹಾಲಾಡಿ ಮಾರ್ಗ: ಬೃಹತ್‌ ಮರ ಬಿದ್ದು ಸಂಚಾರಕ್ಕೆ ಅಡ್ಡಿ

“ಕರಾವಳಿಯಲ್ಲಿ ಪಕ್ಷ ಸಂಘಟನೆಗೆ ಪ್ರತ್ಯೇಕ ಯೋಜನೆೆ’: ಡಿಕೆಶಿ

“ಕರಾವಳಿಯಲ್ಲಿ ಪಕ್ಷ ಸಂಘಟನೆಗೆ ಪ್ರತ್ಯೇಕ ಯೋಜನೆೆ’: ಡಿಕೆಶಿ

meeting

ಶಾಲೆ ದುರಸ್ತಿಗೆ ಪ್ರಥಮ ಆದ್ಯತೆ

barrier

ಅರೆಹೊಳೆ ರಾಜಕಾಲುವೆ: ಶಾಶ್ವತ ತಡೆಗೋಡೆ ಮರೀಚಿಕೆ

ವಂಡಾರು : ಹಲ್ಲೆಗೈದು ಪತ್ನಿಯ ಕೊಲೆ ಮಾಡಿದ ಆರೋಪಿ ಬಂಧನ

ವಂಡಾರು : ಹಲ್ಲೆಗೈದು ಪತ್ನಿಯ ಕೊಲೆ ಮಾಡಿದ ಆರೋಪಿ ಬಂಧನ

MUST WATCH

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಹೆಲ್ಮೆಟ್‌ ಸಡಿಲವಾಗಿ ಧರಿಸಿದ್ದರೂ ದಂಡ!

ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಹೆಲ್ಮೆಟ್‌ ಸಡಿಲವಾಗಿ ಧರಿಸಿದ್ದರೂ ದಂಡ!

thumb 1

ಹೈದರಾಬಾದ್‌-ಪಂಜಾಬ್‌ ಲಾಸ್ಟ್‌ ಶೋ; ಇಂದು ಕೊನೆಯ ಲೀಗ್‌ ಪಂದ್ಯ ; ಕೇವಲ ಔಪಚಾರಿಕ ಮುಖಾಮುಖಿ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ

ಸಮುದಾಯ ಮತಬ್ಯಾಂಕ್‌ನತ್ತ ಕಾಂಗ್ರೆಸ್‌ ದೃಷ್ಟಿ

ಸಮುದಾಯ ಮತಬ್ಯಾಂಕ್‌ನತ್ತ ಕಾಂಗ್ರೆಸ್‌ ದೃಷ್ಟಿ

ಬೆಳೆ ಹಾನಿ ಸಮೀಕ್ಷಾ ವರದಿಗೆ ಸಿಎಂ ಬೊಮ್ಮಾಯಿ ಸೂಚನೆ

ಬೆಳೆ ಹಾನಿ ಸಮೀಕ್ಷಾ ವರದಿಗೆ ಸಿಎಂ ಬೊಮ್ಮಾಯಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.