Udayavni Special

ಮಾದಕ ವ್ಯಸನದಿಂದ ನೊಂದ ಕುಟುಂಬಕ್ಕೆ ರಕ್ಷಣೆ ನೀಡಲು ಆಗ್ರಹ

 ಕೋಟತಟ್ಟು ಗ್ರಾ.ಪಂ. ಗ್ರಾಮಸಭೆ

Team Udayavani, Nov 5, 2020, 8:55 PM IST

ಮಾದಕ ವ್ಯಸನದಿಂದ ನೊಂದ ಕುಟುಂಬಕ್ಕೆ ರಕ್ಷಣೆ ನೀಡಲು ಆಗ್ರಹ

ಡಾ| ವಿಶ್ವನಾಥ ಆರೋಗ್ಯ ಇಲಾಖೆ ಕುರಿತು ಮಾಹಿತಿ ನೀಡಿದರು.

ಕೋಟ: ಕೋಟತಟ್ಟು ವ್ಯಾಪ್ತಿಯಲ್ಲಿ ಡ್ರಗ್ಸ್‌, ಗಾಂಜಾ ಹಾವಳಿ ಮಿತಿ ಮೀರಿದ್ದು ಹಲವಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತದೆ. ಈ ಬಗ್ಗೆ ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದೇವೆ. ಆದರೆ ಕ್ರಮಕೈಗೊಳ್ಳುವ ಬದಲು ದೂರುದಾರರ ಸಂಪೂರ್ಣ ಮಾಹಿತಿ ಅಕ್ರಮದಲ್ಲಿ ತೊಡಗಿಕೊಂಡಿರುವವರಿಗೆ ಸೋರಿಕೆಯಾಗುತ್ತಿದೆ. ಹೀಗಾಗಿ ಈ ಬಗ್ಗೆ ತಿಳಿಸಲು ಭಯಪಡಬೇಕಿದೆ. ಇದಕ್ಕೆ ಸೂಕ್ತ ಕ್ರಮಕೈಗೊಂಡು ಮಾದಕ ವ್ಯಸನದಿಂದ ನೊಂದಿರುವ ಕುಟುಂಬಗಳಿಗೆ ರಕ್ಷಣೆ ನೀಡಬೇಕು ಎಂದು ಕೋಟತಟ್ಟು ಗ್ರಾ.ಪಂ.ನ ಗ್ರಾಮಸಭೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ, ಪ್ರಮೋದ್‌ ಹಂದೆ ಮನವಿ ಮಾಡಿದರು.

ಮಾದಕ ವ್ಯಸನ ಮುಂತಾದ ಅಕ್ರಮ ಚಟುವಟಿಕೆಯನ್ನು ಸಮರ್ಥವಾಗಿ ಮಟ್ಟ ಹಾಕಬೇಕಾದರೆ ಪೊಲೀಸರ ಜತೆಗೆ ಸಾರ್ವ ಜನಿಕರ ಸಹಕಾರವೂ ಅತ್ಯಗತ್ಯ. ಈ ರೀತಿ ಸೋರಿಕೆ ಮಾಡುವವರ ವಿರುದ್ಧ ದೂರು ನೀಡಿದರೆ ಕ್ರಮ ಕೈಗೊಳ್ಳುವ ವ್ಯವಸ್ಥೆ ಇದೆ. ಅಕ್ರಮದ ಕುರಿತು ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಎ.ಎಸ್‌.ಎಸ್‌. ಮುಕ್ತಾ ಬಾೖ ತಿಳಿಸಿದರು.

ಪುರಾತನ ಕೆರೆಗಳನ್ನು ಉಳಿಸಿ
ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಹಲವು ಪುರಾತನ ಕೆರೆಗಳು ಒತ್ತುವರಿಯಾಗಿದೆ. ಈ ರೀತಿ ಒತ್ತುವರಿಯಾಗಿರುವ ಕೆರೆಗಳನ್ನು ಗುರುತಿಸಿ, ಸರಕಾರಿ ಜಾಗಗಳನ್ನು ಗುರುತಿಸಿ ರಕ್ಷಣೆಗೆ ಮುಂದಾಗಬೇಕು ಎಂದು ಸ್ಥಳೀಯ ರವೀಂದ್ರ ತಿಂಗಳಾಯ ತಿಳಿಸಿದರು. ಈ ಬಗ್ಗೆ ಕಂದಾಯ ಇಲಾಖೆಯಿಂದ ಪ್ರಕ್ರಿಯೆ ಜಾರಿಯಲ್ಲಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗ್ರಾ.ಪಂ. ಪಿಡಿಒ ಶೈಲಾ ಪೂಜಾರಿ ತಿಳಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಮನವಿ
ಗ್ರಾ.ಪಂ. ವ್ಯಾಪ್ತಿಯ ಪಡುಕರೆ, ಮಣೂರು ಬೀಚ್‌ಗಳನ್ನು ಪ್ರವಾಸೋ ದ್ಯಮ ತಾಣಗಳ ಅಭಿವೃದ್ಧಿ ಪಟ್ಟಿಗೆ ಸೇರಿಸುವಂತೆ ಈ ಹಿಂದೆ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಆದರೆ ಪ್ರವಾಸೋದ್ಯಮ ಇಲಾಖೆ ಗುರುತಿಸಿರುವ ಜಿಲ್ಲೆಯ 84 ಸ್ಥಳಗಳಲ್ಲಿ ನಾವು
ಮನವಿ ಮಾಡಿರುವ ಸ್ಥಳವನ್ನು ಗುರುತಿಸಿಲ್ಲ. ಈ ಕುರಿತು ಸೂಕ್ತ ಹೋರಾಟ ಅಗತ್ಯವಿದೆ ಎಂದು ಸ್ಥಳೀಯರಂಜಿತ್‌ ಬಾರಿಕೆರೆ ತಿಳಿಸಿದರು.

ಅಭಿವೃದ್ಧಿ ಯೋಜನೆಗಳನ್ನು ಗಮನಕ್ಕೆ ತನ್ನಿ
ಸ್ಥಳೀಯ ಸದಸ್ಯರ ಗಮನಕ್ಕೆ ತಾರದೆ ಗುತ್ತಿಗೆದಾರರು, ಎಂಜಿನಿಯರ್‌ಗಳು ಕಾಮಗಾರಿಯ ಗುಣಮಟ್ಟ, ಯೋಜನೆ ಬಗ್ಗೆ ಸದಸ್ಯರ ಗಮನಕ್ಕೆ ತರುವುದಿಲ್ಲ. ಕಾಮಗಾರಿ ಕಳಪೆಯಾದಾಗ ಜನರು ಸ್ಥಳೀಯ ಸದಸ್ಯರನ್ನು ತರಾಟೆಗೆ ತೆಗೆದು ಕೊಳ್ಳುತ್ತಾರೆ. ಆದ್ದರಿಂದ ಮುಂದೆ ಪಂ. ವ್ಯಾಪ್ತಿಯಲ್ಲಿ ಕಾಮಗಾರಿ ಆಗುವಾಗ ಸ್ಥಳೀಯ ಸದಸ್ಯರ ಗಮನಕ್ಕೆ ತರ‌ಬೇಕು ಎಂದು ಗ್ರಾ.ಪಂ. ಮಾಜಿ ಸದಸ್ಯ ಸತೀಶ್‌ ಬಾರಿಕೆರೆ ತಿಳಿಸಿದರು.

ಗ್ರಾ.ಪಂ. ಆಡಳಿತಾಧಿಕಾರಿ ಡಾ| ಅರುಣ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಇಲಾಖಾಧಿಕಾರಿಗಳು ಇಲಾಖಾ ಕಾರ್ಯ ಕ್ರಮದ ಕುರಿತು ಮಾಹಿತಿ ನೀಡಿದರು.ಮಾಜಿ ಅಧ್ಯಕ್ಷ ರಘು ತಿಂಗಳಾಯ, ಮಾಜಿ ಸದಸ್ಯ ಜಯಪ್ರಕಾಶ್‌, ವಾಸು ಪೂಜಾರಿ, ಸರಸ್ವತಿ, ಸುಜಾತಾ, ಪಾರ್ವತಿ ಸ್ಥಳೀಯರಾದ ವಿವೇಕ್‌ ಸುವರ್ಣ, ಪ್ರಭಾಕರ ಕಾಂಚನ್‌ ಉಪಸ್ಥಿತರಿದ್ದರು.

ಸಮುದಾಯ ಆರೋಗ್ಯ ಕೇಂದ್ರದ ಸೇವೆಗೆ ಶ್ಲಾಘನೆ
ಕೋವಿಡ್‌ ಸಂದರ್ಭದಲ್ಲಿ ಕೋಟ ಸಮುದಾಯ ಆರೋಗ್ಯ ಕೇಂದ್ರ ಅತ್ಯುತ್ತಮವಾಗಿ ಸಾರ್ವಜನಿಕರಿಗೆ ಸೇವೆ ನೀಡಿದೆ. ಕುಂದಾಪುರ ತಾಲೂಕು ಆಸ್ಪತ್ರೆಯ ಸೇವೆಗಳನ್ನು ಕೋಟ ಸ.ಆರೋಗ್ಯ ಕೇಂದ್ರದಲ್ಲಿ ನೀಡುತ್ತಿದ್ದು ಹೆರಿಗೆ ಮುಂತಾದ ತುರ್ತು ಸಂದರ್ಭದಲ್ಲಿ ಉತ್ತಮ ಸೇವೆ ದೊರಕುತ್ತಿದೆ. ಆದ್ದರಿಂದ ಗ್ರಾಮಸ್ಥರ ಪರವಾಗಿ ಆಸ್ಪತ್ರೆಯ ಮುಖ್ಯಸ್ಥರಿಗೆ ಶ್ಲಾಘನೆ ಸಲ್ಲಿಸುವುದಾಗಿ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಯಿತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

vivo

ಮಾರುಕಟ್ಟೆಗೆ ಶೀಘ್ರ ಲಗ್ಗೆ ಇಡಲಿದೆ Vivo Y52s ಸ್ಮಾರ್ಟ್ ಪೋನ್: ಏನೆಲ್ಲಾ ವಿಶೇಷತೆಗಳಿವೆ ?

ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿ 8 ಜನರ ವಿರುದ್ಧ ಸಾಕ್ಷಿ ನಾಶ ಪ್ರಕರಣ ದಾಖಲು

ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿ 8 ಜನರ ವಿರುದ್ಧ ಸಾಕ್ಷಿ ನಾಶ ಪ್ರಕರಣ ದಾಖಲು

netflix

Netflix Stream Fest: ಡಿ. 5 ಮತ್ತು 6 ರಂದು ಉಚಿತವಾಗಿ ನೆಟ್ ಫ್ಲಿಕ್ಸ್ ವೀಕ್ಷಿಸಿ

15-best-apps,-games-of-2020-on-Apple-App-Store

ಆ್ಯಪಲ್; 2020ರ ಸಾಲಿನ ‘ಆ್ಯಪ್ ಸ್ಟೋರ್ ಬೆಸ್ಟ್ 2020’ ಪಟ್ಟಿ ಪ್ರಕಟ

dk-shivakumar

ಬಿಬಿಎಂಪಿ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ; ಡಿ.ಕೆ. ಶಿವಕುಮಾರ್ ಸ್ವಾಗತ

ct-ravi

ಹೈದರಾಬಾದ್ ಪಾಲಿಕೆ ಫಲಿತಾಂಶ ಬಿಜೆಪಿಯ ವಿಶ್ವಾಸವನ್ನು ಹೆಚ್ಚಿಸಿದೆ: ಸಿ.ಟಿ ರವಿ

arun

ಸಂಪುಟ ವಿಸ್ತರಣೆ ಪಕ್ಷದ ಆಂತರಿಕ ವಿಚಾರ,ಇದನ್ನು ಬಹಿರಂಗವಾಗಿ ಹೇಳಲಾಗುವುದಿಲ್ಲ: ಅರುಣ್ ಸಿಂಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UDPI-TDY-1

ಚರಂಡಿಯಲ್ಲಿ ನಿಂತ ಕೊಳಚೆ ನೀರು, ರೋಗ ಭೀತಿ

ಆನೆಗುಡ್ಡೆ ಶ್ರೀ ವಿನಾಯಕ ದೇಗುಲ: ಸಂಭ್ರಮದ ದೀಪೋತ್ಸವ

ಆನೆಗುಡ್ಡೆ ಶ್ರೀ ವಿನಾಯಕ ದೇಗುಲ: ಸಂಭ್ರಮದ ದೀಪೋತ್ಸವ

ಕಿರು ಸೇತುವೆಯಾಗಿ 15 ವರ್ಷಗಳು ಕಳೆದರೂ ಸಂಚಾರ ಸಂಕಷ್ಟ

ಕಿರು ಸೇತುವೆಯಾಗಿ 15 ವರ್ಷಗಳು ಕಳೆದರೂ ಸಂಚಾರ ಸಂಕಷ್ಟ

ಶೀಘ್ರ ರಾಜ್ಯದಲ್ಲಿ ಲವ್‌ ಜೆಹಾದ್‌ ಕಾನೂನು ಜಾರಿ :ಸಚಿವ ಬಸವರಾಜ ಬೊಮ್ಮಾಯಿ

ಶೀಘ್ರ ರಾಜ್ಯದಲ್ಲಿ ಲವ್‌ ಜೆಹಾದ್‌ ಕಾನೂನು ಜಾರಿ :ಸಚಿವ ಬಸವರಾಜ ಬೊಮ್ಮಾಯಿ

ಹಿರಿಯ ವಿದ್ವಾಂಸ ಡಾ ಬನ್ನಂಜೆ ಗೋವಿಂದಾಚಾರ್ಯರಿಗೆ ಪುತ್ರ ವಿಯೋಗ

ಹಿರಿಯ ವಿದ್ವಾಂಸ ಡಾ ಬನ್ನಂಜೆ ಗೋವಿಂದಾಚಾರ್ಯರಿಗೆ ಪುತ್ರ ವಿಯೋಗ

MUST WATCH

udayavani youtube

ಮಂಗಳೂರು ದೋಣಿ ದುರಂತದಲ್ಲಿ ಮೃತಪಟ್ಟವರಲ್ಲಿ ಅನ್ಸಾರ್ ಎಂಬಾತನ ಮೃತ ದೇಹಕ್ಕಾಗಿ ಹುಡುಕಾಟ

udayavani youtube

ಕುಂದಾಪುರ: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

udayavani youtube

ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

udayavani youtube

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕೂಡಲೇ ಆಗಬೇಕು: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

ಹೊಸ ಸೇರ್ಪಡೆ

vivo

ಮಾರುಕಟ್ಟೆಗೆ ಶೀಘ್ರ ಲಗ್ಗೆ ಇಡಲಿದೆ Vivo Y52s ಸ್ಮಾರ್ಟ್ ಪೋನ್: ಏನೆಲ್ಲಾ ವಿಶೇಷತೆಗಳಿವೆ ?

ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿ 8 ಜನರ ವಿರುದ್ಧ ಸಾಕ್ಷಿ ನಾಶ ಪ್ರಕರಣ ದಾಖಲು

ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿ 8 ಜನರ ವಿರುದ್ಧ ಸಾಕ್ಷಿ ನಾಶ ಪ್ರಕರಣ ದಾಖಲು

netflix

Netflix Stream Fest: ಡಿ. 5 ಮತ್ತು 6 ರಂದು ಉಚಿತವಾಗಿ ನೆಟ್ ಫ್ಲಿಕ್ಸ್ ವೀಕ್ಷಿಸಿ

15-best-apps,-games-of-2020-on-Apple-App-Store

ಆ್ಯಪಲ್; 2020ರ ಸಾಲಿನ ‘ಆ್ಯಪ್ ಸ್ಟೋರ್ ಬೆಸ್ಟ್ 2020’ ಪಟ್ಟಿ ಪ್ರಕಟ

dk-shivakumar

ಬಿಬಿಎಂಪಿ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ; ಡಿ.ಕೆ. ಶಿವಕುಮಾರ್ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.