ಕುಂದಾಪುರ ತಾ.ಪಂ. ವಿಭಜನೆ: ಬೈಂದೂರು ತಾ.ಪಂ. ರಚನೆ


Team Udayavani, Jul 16, 2019, 5:30 AM IST

kundapura-vibajane

ಕುಂದಾಪುರ: ಬೈಂದೂರು ಹೊಸ ತಾಲೂಕು ರಚನೆ ಬಳಿಕ ಎರಡನೆ ಹಂತವಾಗಿ ಬೈಂದೂರು ತಾಲೂಕು ಪಂಚಾಯತ್‌ ಪ್ರತ್ಯೇಕವಾಗಿ ರಚನೆಯಾಗುತ್ತಿದೆ. ಕುಂದಾಪುರ ತಾಲೂಕು ಪಂಚಾಯತ್‌ ವಿಭಜನೆಯಾಗಲಿದ್ದು ಮೊದಲ ಹಂತವಾಗಿ ಬೈಂದೂರಿಗೆ ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿಯನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಈ ಮೂಲಕ ಬೈಂದೂರು ಒಂದೇ ಹೋಬಳಿಗೆ ಒಂದು ತಾಲೂಕು ಪಂಚಾಯತ್‌ ಸೃಷ್ಟಿಯಾಗಲಿದೆ. ಈ ಮೂಲಕ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, 37 ಸದಸ್ಯಬಲದ ಕುಂದಾಪುರ ತಾಲೂಕು ಪಂಚಾಯತ್‌ 23ಕ್ಕೆ ಇಳಿಯಲಿದ್ದು 14 ಸದಸ್ಯರು, 18 ಪಂಚಾಯತ್‌ಗಳು ಬೈಂದೂರು ತಾಲೂಕು ಪಂಚಾಯತ್‌ ವ್ಯಾಪ್ತಿಗೆ ಸೇರಲಿದ್ದಾರೆ.

ತಾಲೂಕು ರಚನೆ
2017ರ ಡಿ.16ರಂದು ಬೈಂದೂರು ತಾಲೂಕು ಪ್ರತ್ಯೇಕ ಘೋಷಣೆಗೆ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಗಡುವು ನೀಡಿ ಅಧಿಸೂಚನೆ ಹೊರಡಿಸಲಾಗಿತ್ತು. 2018ರ ಜ.27ರಂದು ಈ ಕುರಿತು ಅಧಿಸೂಚನೆ ಹೊರಡಿಸಿತು. ಕುಂದಾಪುರ ತಾಲೂಕಿನಲ್ಲಿದ್ದ 101 ಗ್ರಾಮಗಳ ಪೈಕಿ 26 ಗ್ರಾಮಗಳನ್ನು ಹೊಸ ತಾಲೂಕಿಗೆ ಸೇರಿಸಲಾಗಿತ್ತು.

ಎರಡನೆ ಹಂತ
ತಾಲೂಕು ರಚನೆ ಬಳಿಕ ಎರಡನೆ ಹಂತವಾಗಿ ತಾಲೂಕು ಪಂಚಾಯತ್‌ ರಚನೆಗೆ ಮುಂದಾಗಿದೆ. ಇದರನ್ವಯ ಶಿರೂರು ಪಂಚಾಯತ್‌ನ ಶಿರೂರು, ಪಡುವರಿ ಪಂ., ಉಪ್ಪುಂದ ಪಂ., ಬಿಜೂರು ಪಂ., ಕೆರ್ಗಾಲ್‌ ಪಂಚಾಯತ್‌ನ ಕೆರ್ಗಾಲ್‌ ಹಾಗೂ ನಂದನವನ, ಕೊಲ್ಲೂರು ಪಂ., ಜಡ್ಕಲ್‌ ಪಂ.ನ ಜಡ್ಕಲ್‌, ಮುದೂರು, ಗೋಳಿಹೊಳೆ ಗ್ರಾ.ಪಂ.ನ ಗೋಳಿಹೊಳೆ, ಮುದೂರು, ಕಾಲೊ¤àಡು ಪಂ., ಕಂಬದಕೋಣೆಯ ಕಂಬದಕೋಣೆ, ಹೆರಂಜಾಲು, ಹೇರೂರು ಪಂಚಾಯತ್‌ನ ಹೇರೂರು, ಉಳ್ಳೂರು 2, ಕಿರಿಮಂಜೇಶ್ವರ ಪಂ., ನಾವುಂದ ಪಂ., ಮರವಂತೆ ಪಂ., ಯಡ್ತರೆ ಪಂ., ಬೈಂದೂರು ಪಂ.ನ ಬೈಂದೂರು, ತೆಗ್ಗರ್ಸೆ, ಹಳ್ಳಿಹೊಳೆ ಪಂ., ನಾಡಾ ಪಂ.ನ ನಾಡಾ, ಹಡವು, ಬಡಾಕೆರೆ ಗ್ರಾಮಗಳು ಹೊಸದಾಗಿ ರಚನೆಯಾಗುವ ತಾಲೂಕು ಪಂಚಾಯತ್‌ ವ್ಯಾಪ್ತಿಗೆ ಸೇರಲಿವೆ.

ತಾ.ಪಂ. ಸದಸ್ಯರು
ಪ್ರಸ್ತುತ 37 ಸದಸ್ಯಬಲ ಹೊಂದಿದ ಕುಂದಾಪುರ ತಾ.ಪಂ. ಕಿರಿದಾಗಲಿದೆ. 14 ತಾಲೂಕು ಪಂಚಾಯತ್‌ ಸದಸ್ಯರು, 3 ಜಿಲ್ಲಾ ಪಂಚಾಯತ್‌ ಸದಸ್ಯರು ಹೊಸ ತಾ.ಪಂ.ನಲ್ಲಿ ಇರಲಿದ್ದಾರೆ.

ತಾ. ಪಂ. ಸದಸ್ಯರಾದ ದಸ್ತಗಿರಿ ಮೌಲಾನಾ, ಪುಷ್ಪರಾಜ್‌ ಶೆಟ್ಟಿ, ಗಿರಿಜಾ ಖಾರ್ವಿ, ಪ್ರಮೀಳಾ ದೇವಾಡಿಗ, ಜಗದೀಶ್‌ ದೇವಾಡಿಗ, ಗಿರಿಶ್ಮಾ, ವಿಜಯ ಶೆಟ್ಟಿ, ಮಹೇಂದ್ರ ಪೂಜಾರಿ, ಶ್ಯಾಮಲಾ ಕುಂದರ್‌, ಜಗದೀಶ್‌ ಪೂಜಾರಿ, ಸುಜಾತಾ ದೇವಾಡಿಗ, ಮಾಲಿನಿ ಕೆ., ಪೂರ್ಣಿಮಾ, ಪ್ರವೀಣ್‌ ಕುಮಾರ್‌, ಜಿ.ಪಂ. ಸದಸ್ಯರಾದ ಸುರೇಶ್‌ ಬಟವಾಡಿ, ಗೌರಿ ದೇವಾಡಿಗ, ಶಂಕರ ಪೂಜಾರಿ ಹಾಗೂ ರೋಹಿತ್‌ ಕುಮಾರ್‌ ಶೆಟ್ಟಿ, ಕೆ. ಬಾಬು ಶೆಟ್ಟಿ ಅವರ ಭಾಗಶಃ ವ್ಯಾಪ್ತಿಗಳು ಇರಲಿವೆ.

ಕಟ್ಟಡ
ತಾತ್ಕಾಲಿಕವಾಗಿ ಬೈಂದೂರು ತಾ.ಪಂ. ಈಗ ಇರುವ ಸ್ತ್ರೀಶಕ್ತಿ ಸಂಘದ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ. ನಂತರ ಹೊಸ ಕಟ್ಟಡ ರಚನೆಗೆ ಅನುದಾನ ಬಿಡುಗಡೆಯಾಗಬೇಕಿದೆ.

ಅಭಿವೃದ್ಧಿಗೆ ವರದಾನ
ಪ್ರತ್ಯೇಕ ತಾ.ಪಂ. ರಚನೆಯಾದರೆ ಆ ಪ್ಯಾಪ್ತಿಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರೆಯಲಿದೆ. ವಾರ್ಷಿಕ ಅನುದಾನ, ಉದ್ಯೋಗ ಖಾತ್ರಿ, ವಸತಿ ಯೋಜನೆಗಳು ಹೀಗೆ ಎಲ್ಲವೂ ಪ್ರತ್ಯೇಕ ದೊರೆಯಲಿದೆ. ಇದರಿಂದಾಗಿ ಎರಡೂ ತಾಲೂಕಿಗೆ ಪ್ರಯೋಜನ ಆಗಲಿದೆ.

ಚುನಾವಣೆ ಇಲ್ಲ
ಹೊಸದಾಗಿ ಬೈಂದೂರು ತಾ.ಪಂ. ರಚನೆಯಾದರೂ ಚುನಾವಣೆ ಸದ್ಯಕ್ಕಿಲ್ಲ. ಈಗ ಇರುವ ಸದಸ್ಯರೇ ಹೊಸ ಆಡಳಿತ ಮಂಡಳಿ ರಚಿಸಿ ತಾ.ಪಂ. ಸಭೆ ನಡೆಸಲು ಕಾನೂನಿನಲ್ಲಿ ಅವಕಾಶ ಇದೆ. ಅವರು ಆಯ್ಕೆಯಾಗಿ ಐದು ವರ್ಷದ ಅವಧಿಯಾಗುವಾಗ ನಡೆಯುವ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲೇ ಚುನಾವಣೆ ನಡೆಯುತ್ತದೆ.

ಅಧ್ಯಕ್ಷ, ಉಪಾಧ್ಯಕ್ಷ
ತಾ.ಪಂ.ಗೆ ಈಗ ಜಿ.ಪಂ.ನಲ್ಲಿ ಪ್ರಭಾರ ಯೋಜನಾಧಿಕಾರಿಯಾಗಿರುವ ಭಾರತಿ ಅವರನ್ನು ಕಾರ್ಯನಿರ್ವಹಣಾಧಿಕಾರಿ ಯಾಗಿ ನೇಮಿಸಿ ಆದೇಶ ಹೊರಡಿಸಿದೆ. ಪ್ರತ್ಯೇಕ ತಾ.ಪಂ. ರಚನೆಗೆ ಇನ್ನೂ ಗಜೆಟ್‌ ಆದೇಶ ಹೊರಬಿದ್ದಿಲ್ಲ. ಅನಂತರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿಯಾಗುತ್ತದೆ. ಹೊಸ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದು ಇದೇ 14 ಮಂದಿಗೆ ಪ್ರತ್ಯೇಕ ಸಭೆ ನಡೆಯಲು ಅವಕಾಶ ಇದೆ. ಈಗ ಕುಂದಾಪುರ ತಾ.ಪಂ. ಅಧ್ಯಕ್ಷೆಯಾಗಿರುವ ಶ್ಯಾಮಲಾ ಕುಂದರ್‌ ಅವರೇ ಬೈಂದೂರು ತಾ.ಪಂ. ವ್ಯಾಪ್ತಿಗೆ ಒಳಪಡಲಿದ್ದಾರೆ. ಆದ್ದರಿಂದ ಕುಂದಾಪುರ ತಾ.ಪಂ. ಅಧ್ಯಕ್ಷರೂ ಬದಲಾಗಲಿದ್ದಾರೆ.

ಅಧಿಸೂಚನೆ ಬಂದ ಬಳಿಕ ರಚನೆ
ತಾ.ಪಂ.ನಿಂದ ಅವಶ್ಯವಿರುವ ಎಲ್ಲ ಮಾಹಿತಿಗಳನ್ನೂ ಕಳುಹಿಸಿಕೊಡಲಾಗಿದೆ. ಸರಕಾರದ ಅಧಿಕೃತ ಅಧಿಸೂಚನೆ ಬಂದ ಬಳಿಕ ಹೊಸ ತಾ.ಪಂ. ಮಂಡಳಿ ರಚನೆಯಾಗಲಿದೆ. ಇಒ ನೇಮಕ ಮೂಲಕ ಅದಕ್ಕೆ ಚಾಲನೆ ದೊರೆತಿದೆ.
– ಕಿರಣ್‌ ಪೆಡೆ°àಕರ್‌ ಇಒ, ಕುಂದಾಪುರ ತಾ.ಪಂ.

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.