ಕೊರವಡಿ ಕಡಲ ತೀರದಲ್ಲಿ ಅಪರಿಚಿತ ಶವ ಪತ್ತೆ
Team Udayavani, Aug 30, 2019, 8:02 AM IST
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಕೊರವಡಿ ಕಡಲ ತೀರದ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ.
ಕಡಲ ತೀರದ ಮಾಸ್ತಿ ತಾಂಡೇಲರ ಮನೆಯ ಸಮೀಪದಲ್ಲಿ ಶವ ಪತ್ತೆಯಾಗಿದ್ದು, ನಿನ್ನೆ ಗಂಗೊಳ್ಳಿ ನದಿಯಲ್ಲಿ ತೇಲುತ್ತಿತ್ತು ಎಂದು ಹೇಳಲಾಗಿದೆ. ಟೀ ಶರ್ಟ್ ,ಪ್ಯಾಂಟ್ ಹಾಗೂ ಸೊಂಟದ ದಾರ ಶವದ ಮೇಲಿದ್ದು ಸ್ಥಳಿಯ ವ್ಯಕ್ತಿಯೇ ಎಂಬ ಅನುಮಾನ ಕಾಡುತ್ತಿದೆ.
ಸುಮಾರು 5.5 ಅಡಿ ಎತ್ತರವಿದ್ದು, ನಸು ಬಿಳಿ ಮೈ ಬಣ್ಣ, 3/4 ಆರ್ಮಿ ಚಡ್ಡಿ ಧರಿಸಿರುತ್ತಾನೆ. ಕಡು ನೀಲಿ ಬಣ್ಣದ ಅರ್ಧ ತೋಳಿನ ಟಿ ಶರ್ಟ್ ತೊಟ್ಟಿರುತ್ತಾನೆ. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ.
ಕುಂದಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Kundapur: ಬೈಕ್ ಢಿಕ್ಕಿ; ಸ್ಕೂಟರ್ ಸವಾರೆಗೆ ಗಾಯ
Congress;ಪ್ರತಾಪ್ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ
ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ
ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ