ಹೆಮ್ಮಾಡಿ: ನದಿ ದಂಡೆಯೊಂದು ಬೇಗ ಮಾಡಿಬಿಡಿ

ಜನಪ್ರತಿನಿಧಿಗಳಿಗೆ ಗ್ರಾಮಸ್ಥರ ಪ್ರಮುಖ ಬೇಡಿಕೆಗಳಲ್ಲಿ ಇದೂ ಒಂದು

Team Udayavani, Aug 1, 2022, 1:05 PM IST

12

ಹೆಮ್ಮಾಡಿ: ಇಲ್ಲಿನ ಹೆಮ್ಮಾಡಿ ಗ್ರಾಮದಲ್ಲಿ ಬೇಸಗೆ ಬಂದರೆ ಸಾಕು, ಬಹುತೇಕ ಇಡೀ ಗ್ರಾಮಕ್ಕೆ ಗ್ರಾಮವೇ ನೀರಿನ ಸಮಸ್ಯೆಗೆ ತುತ್ತಾಗುತ್ತದೆ. ಇಲ್ಲಿನ ಹೆಚ್ಚಿನ ಮನೆಗಳಲ್ಲಿ ಬಾವಿಯಿದ್ದರೂ, ಮಾರ್ಚ್‌ ಅನಂತರ ಬತ್ತುತ್ತದೆ. ಉಪ್ಪು ನೀರಾಗುವುದರಿಂದ ಈ ಸಮಸ್ಯೆ. ಗ್ರಾಮದ ಅನೇಕ ಕಡೆಗಳಲ್ಲಿ ನದಿದಂಡೆಯೊಂದಿಗೆ ರಿಂಗ್‌ ರೋಡ್‌ ನಿರ್ಮಾಣವಾದರೆ ಈ ಸಮಸ್ಯೆಗೆ ಪರಿಹಾರ ಸಿಗಬಹುದು.

ಹೆಮ್ಮಾಡಿ ಗ್ರಾಮದ ಬಹುಭಾಗ ನದಿ ಆವರಿಸಿ ದ್ದರೂ, ಅಲ್ಲಲ್ಲಿ ನದಿಗಳಿಗೆ ಕಿಂಡಿ ಅಣೆಕಟ್ಟು ಕಟ್ಟಿರುವುದರಿಂದ, ಇಳಿತ- ಭರತದ ಸಮಯದಲ್ಲಿ ಸಮುದ್ರಕ್ಕೆ ಸೇರುವ ಸಿಹಿ ನೀರು ಕಡಿಮೆಯಾಗಿ, ಆ ಕಡೆಯಿಂದ ಉಪ್ಪು ನೀರು ನುಗ್ಗುವುದು ಜಾಸ್ತಿ ಯಾಗುತ್ತದೆ. ಇದರಿಂದ ಕೃಷಿ ಭೂಮಿ, ಬಾವಿ ನೀರಿಗೆಲ್ಲ ಸಮಸ್ಯೆಯಾಗುತ್ತಿದೆ.

ಎಲ್ಲೆಲ್ಲ ಸಮಸ್ಯೆ?

ಸಂತೋಷ್‌ನಗರ, ಮೂವತ್ತುಮುಡಿ, ಚಾತ್ರಬೆಟ್ಟು, ಪಡುಮನೆ, ಮುಡಾಡಿ, ಭಟ್ರಬೆಟ್ಟು, ಹೊಸ್ಕಳಿ, ಬುಗ್ರಿಕಡು, ಕಟ್ಟು ಹಾಗೂ ಕನ್ನಡಕುದ್ರು ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ದೇವಸ್ಥಾನ ಭಾಗದ ವಾರ್ಡ್‌ಗಳಲ್ಲಿ ಮಾತ್ರ ಅಷ್ಟೊಂದು ಈ ಸಮಸ್ಯೆ ಇಲ್ಲ. ಗ್ರಾ.ಪಂ. ವ್ಯಾಪ್ತಿಯ 900 ಮನೆಗಳ ಪೈಕಿ 500 ಕ್ಕೂ ಮಿಕ್ಕಿ ಮನೆಗಳಿಗೆ ಅಂದರೆ ಅರ್ಧಕ್ಕಿಂತಲೂ ಹೆಚ್ಚು ಕುಟುಂಬಗಳಿಗೆ ನೀರಿನ ಸಮಸ್ಯೆ ಇದೆ. ಪಂಚಾಯತ್‌ ಅಧೀನದ 2 ಕೊಳವೆ ಬಾವಿ, 2 ಬಾವಿ ಯಿದ್ದು, ಅವುಗಳಲ್ಲೂ ನೀರಿನ ಮಟ್ಟ ಇಳಿಕೆಯಾಗಿದೆ. ಕೆಲವು ಸಂಪೂರ್ಣ ಎಂಬಂತೆ ಬರಿದಾಗಿದೆ.

ಎಲ್ಲೆಲ್ಲ ನದಿ ದಂಡೆ?

ಹೊಸ್ಕಳಿಯಿಂದ ಬುಗುರಿಕಡು ವರೆಗೆ ಸುಮಾರು 4 ಕಿ.ಮೀ. ನದಿ ದಂಡೆ, ಕಟ್ಟು ಭಾಗದ ಅಲ್ಲಲ್ಲಿ ನದಿ ದಂಡೆ, ಕನ್ನಡಕುದ್ರುವಿನಲ್ಲಿ ಸುಮಾರು 5 ಕಿ.ಮೀ. ಹಾಗೂ ಮೂವತ್ತುಮುಡಿ ಯಲ್ಲಿ 4 ಕಿ.ಮೀ. ಸೇರಿ, ಒಟ್ಟಾರೆ ಅಂದಾಜು 15 ಕಿ.ಮೀ. ನದಿ ದಂಡೆಯೊಂದಿಗೆ ರಿಂಗ್‌ ರೋಡ್‌ ನಿರ್ಮಿಸಬೇಕು. ಆಗ ಇಲ್ಲಿನ ಕೃಷಿ, ಬಾವಿಗೆ ಉಪ್ಪು ನೀರಿನ ಸಮಸ್ಯೆಯೂ ನೀಗಲಿದೆ, ವಾಹನ ಸಂಚಾರಕ್ಕೆ ರಸ್ತೆ ಸೌಕರ್ಯವೂ ಆಗಲಿದೆ. ಹೊಸ್ಕಳಿ, ಜಾಲಾಡಿಯಲ್ಲಿ 2-3 ವರ್ಷದಿಂದ ಹೊಸ ಕಿಂಡಿ ಅಣೆಕಟ್ಟಿಗೆ ಬೇಡಿಕೆಯಿದೆ.

ರಿಂಗ್‌ ರೋಡ್‌ ಆಗದಿದ್ದರೂ, ಕನಿಷ್ಠ ಗದ್ದೆ, ತೋಡುಗಳಿಗೆ ಉಪ್ಪು ನೀರು ಬರದಂತೆ ಮಣ್ಣು ಹಾಕಿ, ದಂಡೆ ನಿರ್ಮಿಸಿದರೂ, ಒಂದಷ್ಟು ಪ್ರಯೋಜನ ವಾಗಲಿದೆ ಎನ್ನುವುದು ಈ ಭಾಗದ ಜನರ ಬೇಡಿಕೆಯಾಗಿದೆ.

ಸೇವಂತಿಗೆಯ ಊರು

ಬಸ್ರೂರಿನ ಬಸುವರಸನ ಸಾಮಂತನಾದ ಹೇಮಂತ ಎಂಬ ರಾಜನಾಳಿದ ಊರಾದ ಈ ಗ್ರಾಮವು ಹೇಮಾಪುರ ಎಂದು ಹೆಸರಿದ್ದು, ಕಾಲಕ್ರಮೇಣ ಹೆಮ್ಮಾಡಿ ಎಂದು ಬದಲಾಯಿತು. ಹೇಮಾಪುರ ಮಠವಿದೆ. ಹೇಮಂತ ರಾಜ ಸಂತಾನ ಪ್ರಾಪ್ತಿಗಾಗಿ ಪುರಾತನ ಲಕ್ಷ್ಮೀನಾರಾಯಣ ದೇವಸ್ಥಾನವನ್ನು ನಿರ್ಮಿಸಿದ್ದ. ಹಾಗಾಗಿ ಈ ದೇವಸ್ಥಾನಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ಗ್ರಾಮವು ಒಟ್ಟು 623.23 ಹೆಕ್ಟೇರ್‌ ಪ್ರದೇಶ ವಿಸ್ತೀರ್ಣ ಹೊಂದಿದ್ದು, ಒಟ್ಟು 11 ಮಂದಿ ಸದಸ್ಯರಿದ್ದಾರೆ. ಅವರಲ್ಲಿ 6 ಮಂದಿ ಮಹಿಳಾ ಸದಸ್ಯರು ಹಾಗೂ ಐವರು ಪುರುಷ ಸದಸ್ಯರಿದ್ದಾರೆ. 2011ರ ಜನಗಣತಿ ಪ್ರಕಾರ 4,293 ಜನಸಂಖ್ಯೆಯಿದ್ದು, ಈಗಿನ ಅಂದಾಜಿನ ಪ್ರಕಾರ 4,900ಕ್ಕೂ ಮಿಕ್ಕಿ ಜನರಿದ್ದಾರೆ. 3 ಸಾವಿರ ಮಂದಿ ಮತದಾರರಿದ್ದಾರೆ. ಹೆಮ್ಮಾಡಿ ಸೇವಂತಿಗೆಯೂ ಜಿಲ್ಲೆಯಲ್ಲಿಯೇ ವಿಶಿಷ್ಟವಾದುದು. ಗ್ರಾಮದ ಬಹುಭಾಗದಲ್ಲಿ ಇದನ್ನು ಬೆಳೆಯುತ್ತಾರೆ. ಭತ್ತದ ಕೃಷಿ ಇಲ್ಲಿ ಪ್ರಮುಖವಾದುದು.

ಜಂಕ್ಷನ್‌ ಸಂಕಟ

ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಹೆಮ್ಮಾಡಿಯಲ್ಲಿ ಪೂರ್ಣ ಪ್ರಮಾಣದ ಜಂಕ್ಷನ್‌ ಇನ್ನೂ ಆಗಿಲ್ಲ. ಆಗಾಗ ಅಪಘಾತಗಳು ನಡೆಯುತ್ತಿವೆ. ಜಾಲಾಡಿಯಿಂದ ಮೂವತ್ತುಮುಡಿಯವರೆಗೆ ಇಕ್ಕೆಲಗಳಲ್ಲಿ ಸರ್ವಿಸ್‌ ರಸ್ತೆ ಇನ್ನೂ ಆಗಿಲ್ಲ. ಇದರಿಂದ ಸಂತೋಷ್‌ನಗರ, ಜಾಲಾಡಿ- ಹೊಸ್ಕಳಿ ಭಾಗದ ಜನರು ಸುತ್ತು ಬಳಸಿ ಸಂಚರಿಸುವಂತಾಗಿದೆ. ಜಾಲಾಡಿ ಬಳಿ ಡಿವೈಡರ್‌ ಕ್ರಾಸಿಂಗ್‌ಗೆ ಬೇಡಿಕೆಯಿದ್ದರೂ ಪ್ರಾಧಿಕಾರದಿಂದ ಮಾಡಿಕೊಟ್ಟಿಲ್ಲ. ಎರಡೂ ಕಡೆಯಲ್ಲೂ ಬಸ್‌ ನಿಲ್ದಾಣವಿಲ್ಲದೆ, ಜನ ಬಿಸಿಲಲ್ಲಿಯೇ ನಿಲ್ಲುವಂತಾಗಿದೆ. ಬಸ್‌ ಬೇ ಸಹ ಅರ್ಧಕ್ಕೆ ನಿಂತಿದ್ದು, ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲುತ್ತಿದೆ. ಈ ಸಮಸ್ಯೆಯೂ ಬಗೆಹರಿಯಬೇಕಿದೆ.

ಶಾಸಕರಿಗೆ ಮನವಿ: ಹೆಮ್ಮಾಡಿ ಗ್ರಾಮದ ಹೊಸ್ಕಳಿಯಿಂದ ಬುಗುರಿಕಡುವರೆಗೆ, ಕನ್ನಡಕುದ್ರು, ಮೂವತ್ತುಮುಡಿ ಭಾಗದಲ್ಲಿ ನದಿ ದಂಡೆ ಬೇಡಿಕೆ ಬಗ್ಗೆ ಈ ಹಿಂದೆಯೇ ಶಾಸಕರಿಗೆ ಮನವಿ ಸಲ್ಲಿಸಿದ್ದೇವು. ಈಗ ಮತ್ತೂಮ್ಮೆ ಶಾಸಕರು, ಸಂಸದರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ರಿಂಗ್‌ ರೋಡ್‌ ಬೇಡಿಕೆಯ ಬಗ್ಗೆಯೂ ಗಮನಕ್ಕೆ ತರಲಾಗುವುದು. – ಸುಧಾಕರ ದೇವಾಡಿಗ ಕಟ್ಟು, ಹೆಮ್ಮಾಡಿ ಗ್ರಾ.ಪಂ.ಅಧ್ಯಕ್ಷರು

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.