Udayavni Special

ಇಂದಿನಿಂದ ರಸ್ತೆಗಿಳಿಯಲಿವೆ ಇನ್ನಷ್ಟು ಬಸ್‌ಗಳು

ಇನ್ನೂ ಪೂರ್ಣಪ್ರಮಾಣದಲ್ಲಿ ಓಡಾಟ ನಡೆಸದ ಖಾಸಗಿ ಬಸ್‌ಗಳು; ಶೇ.60 ಕೆಎಸ್‌ಆರ್‌ಟಿಸಿ ಬಸ್ಸುಗಳಷ್ಟೇ ಓಡಾಟ

Team Udayavani, Oct 1, 2020, 6:57 AM IST

ಇಂದಿನಿಂದ ರಸ್ತೆಗಿಳಿಯಲಿವೆ ಇನ್ನಷ್ಟು ಬಸ್‌ಗಳು

ಕುಂದಾಪುರ ಬಸ್‌ ನಿಲ್ದಾಣ.

ಕುಂದಾಪುರ: ಜನಜೀವನ ಸಹಜ ಸ್ಥಿತಿಯತ್ತ ಬರುತ್ತಿದ್ದರೂ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳಿಗೆ ಆದಾಯದಲ್ಲಿ ಹೊಡೆತ ಬಿದ್ದಿದ್ದು, ಪ್ರಯಾಣಿಕರ ಕೊರತೆ ಎದುರಿಸುತ್ತಿವೆ. ಕಳೆದ ತಿಂಗಳು ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಓಡಾಟ ಆರಂಭಿಸಿದ್ದು ಅಕ್ಟೋಬರ್‌ನಿಂದ ಇನ್ನಷ್ಟು ಖಾಸಗಿ ಬಸ್‌ಗಳು ರಸ್ತೆಗಿಳಿಯಲಿವೆ. ಈಗಾಗಲೇ ಓಡಾಡುತ್ತಿರುವ ಬಸ್‌ಗಳಲ್ಲಿ ಆದಾಯ ಖೋತಾ ಉಂಟಾಗಿದೆ.

ಶೇ.60 ಬಸ್‌
ಕೆಎಸ್‌ಆರ್‌ಟಿಸಿ ಕುಂದಾಪುರ ಘಟಕದ ಆದಾಯಕ್ಕೆ ನಿತ್ಯವೂ ಶೇ. 50ರಷ್ಟು ಹೊಡೆತ ಬೀಳುತ್ತಿದೆ. ಘಟಕದಲ್ಲಿ ಮಾರ್ಗಸೂಚಿ ಪ್ರಕಾರ 97 ಶೆಡ್ನೂಲ್‌ಗ‌ಳಲ್ಲಿ ಓಡಾಟ ನಡೆಸುತ್ತಿದ್ದವು. ಅವುಗಳಲ್ಲಿ ಪ್ರಸ್ತುತ 55ರಿಂದ 60 ರೂಟ್‌ಗಳಲ್ಲಷ್ಟೇ ಸುಮಾರು ಶೇ. 60ರಷ್ಟು ಬಸ್‌ಗಳು ಸಂಚಾರ ನಡೆಸುತ್ತಿವೆ. ಬಹುತೇಕ ರೂಟ್‌ಗಳಲ್ಲಿ ಬಸ್‌ಗಳು ಸಂಚರಿಸಿದರೂ ಪ್ರಯಾಣಿಕರಿಲ್ಲ ಆದಾಯವೂ ಇಲ್ಲ.

ಸದ್ಯಕ್ಕಿಲ್ಲ
ಬೆಂಗಳೂರಿಗೆ ನಿತ್ಯ ಹೋಗುವ ಎಸಿ ಬಸ್‌ಗಳ ಸಹಿತ ಇತರ ಬಸ್‌ಗಳು ಕೂಡಾ ಪೂರ್ಣ ಪ್ರಮಾಣದಲ್ಲಿ ಓಡಾಟ ನಡೆಸುತ್ತಿಲ್ಲ. ಬೆಂಗಳೂರು, ಮಂಡ್ಯ, ಭಟ್ಕಳ, ಸಿದ್ದಾಪುರ, ಯಡಮೊಗೆ, ಉಡುಪಿ ಮೊದಲಾದ ಕಡೆಗಳಿಗೆ ಬಸ್‌ಗಳನ್ನು ಓಡಿಸಲಾಗುತ್ತಿದೆ. ಆದರೆ ಸಿಂಧನೂರು, ಗೋಕಾಕ್‌, ಆಜ್ರಿ, ಬೈಂದೂರಿನ ಗ್ರಾಮೀಣ ಪ್ರದೇಶಗಳಿಗೆ ಓಡಾಟ ಆರಂಭಿಸಿಲ್ಲ. ಇನ್ನೂ ಒಂದು ತಿಂಗಳು ಇನ್ನಷ್ಟು ಬಸ್‌ಗಳು ಸಂಚಾರ ಆರಂಭಿಸುವ ನಿರೀಕ್ಷೆ ಇಲ್ಲ. ಈಗಾಗಲೇ ಇರುವ ಬಸ್‌ಗಳ ಆದಾಯ ಸರಿದೂಗದ ಹೊರತು ಇನ್ನಷ್ಟು ನಷ್ಟ ಮಾಡಿಕೊಳ್ಳಲು ನಿಗಮ ಸಿದ್ಧವಿಲ್ಲ.

ಶಾಲೆ, ಕಾಲೇಜಿಗೆ ಕಾಯುವಿಕೆ
ನವರಾತ್ರಿ ಹಬ್ಬದ ಸಂದರ್ಭ ಜನರ ಓಡಾಟ ಸಹಜ ಸ್ಥಿತಿಗೆ ಬರಬಹುದು, ವ್ಯಾಪಾರ ವಹಿವಾಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸಾಮಾನ್ಯವಾಗಿ ಸೆಪ್ಟಂಬರ್‌ ಕೊನೆ ವಾರ, ಅಕ್ಟೋಬರ್‌ ಮೊದಲ ವಾರ ನವರಾತ್ರಿ ಇರುವ ಕಾರಣ ಆ ದಿನಗಳಲ್ಲಿ ಪ್ರಯಾಣಿಕರ ಓಡಾಟ ಕೂಡಾ ಹೆಚ್ಚಿರುತ್ತದೆ. ಆದರೆ ಈ ಬಾರಿ ಅಧಿಕ ಮಾಸ ಬಂದ ಕಾರಣ ನವರಾತ್ರಿ ಕೂಡಾ ಭರ್ತಿ ಒಂದು ತಿಂಗಳು ಮುಂದಕ್ಕೋಗಿದೆ. ಕಾಲೇಜುಗಳ ಆರಂಭ ನವೆಂಬರ್‌ನಿಂದಲೇ ಎನ್ನಲಾಗಿದೆ. ವಿದ್ಯಾರ್ಥಿಗಳ ಓಡಾಟ ಆರಂಭವಾದಾಗ ಜನರ ಓಡಾಟ ಕೂಡಾ ಹೆಚ್ಚಬಹುದು ಎಂದು ಭಾವಿಸಲಾಗಿದೆ. ಖಾಸಗಿ ಬಸ್‌ಗಳು ಅ. 1ರಿಂದ ಇನ್ನಷ್ಟು ಸಂಖ್ಯೆಯಲ್ಲಿ ಓಡಾಟ ಆರಂಭಿಸಲಿವೆ.

ಬಾಡಿಗೆ ಕಾರು
ಖಾಸಗಿ ಬಸ್‌ಗಳು ಕೂಡಾ ಬೆಂಗಳೂರಿನಂತಹ ದೂರ ಪ್ರಯಾಣಕ್ಕೆ ಇನ್ನೂ ಎಲ್ಲವೂ ತೆರೆದುಕೊಳ್ಳಲಿಲ್ಲ. ಶೇ.40ರಷ್ಟು ದೂರ ಪ್ರಯಾಣದ ಬಸ್‌ಗಳು ನಿಲ್ಲಿಸಿದಲ್ಲೇ ಬಾಕಿಯಾಗಿವೆ. ಈಗ ಓಡಾಡುತ್ತಿರುವ ಬಸ್‌ಗಳಲ್ಲೂ ಸರಣಿ ರಜೆಯ ಹೊರತಾಗಿ ಇತರ ದಿನಗಳಲ್ಲಿ ಪ್ರಯಾಣಿಕರ ಕೊರತೆಯಿದೆ. ಅನೇಕರು ಕೊರೊನಾ ಕಾರಣದಿಂದ ಸಾರ್ವತ್ರಿಕ ಸಾರಿಗೆಯನ್ನು ಬಳಸದೇ ಒಂದಷ್ಟು ಜನ ಸೇರಿ ವಾಹನವನ್ನು ಬಾಡಿಗೆ ಆಧಾರದಲ್ಲಿ ಊರಿಗೆ ತರುತ್ತಿದ್ದಾರೆ. ಇದು ಹೆಚ್ಚು ಸುರಕ್ಷಿತ ಎಂಬ ಕಾರಣದಿಂದ.

ಗ್ರಾಮೀಣ ಜನ
ಗ್ರಾಮಾಂತರದಿಂದ ನಗರಕ್ಕೆ ಜನ ಬಾರದ ಹೊರತು ನಗರದ ವ್ಯಾಪಾರ, ವಹಿವಾಟಿನಲ್ಲಿ ಏರಿಕೆ ಆಗುವುದಿಲ್ಲ. ಬಸ್ಸುಗಳಲ್ಲಿ ಜನರೂ ಹೆಚ್ಚುವುದಿಲ್ಲ. ನಗರದಲ್ಲಿ ಜನ ಕೊರೊನಾ ತಡೆಗಾಗಿ ಕೈಗೊಂಡ ಕ್ರಮಗಳಿಗೆ ಎಲ್ಲ ಸಹಕಾರ ನೀಡಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಸ್ಯಾನಿಟೈಸರ್‌ ಬಳಸಿದರೆ ಇತರೆಡೆಯಿಂದ ಬಂದವರಿಗೂ ವಿಶ್ವಾಸ ಮೂಡುತ್ತದೆ. ಕೊರೊನಾ ಪಾಸಿಟಿವ್‌ ಪ್ರಕರಣಗಳೂ ಕಡಿಮೆಯಾಗಿ ಉದ್ದಿಮೆಯಲ್ಲಿ ಪಾಸಿಟಿವ್‌ ಬೆಳವಣಿಗೆ ಹೆಚ್ಚಾಗುತ್ತವೆ.

160 ಗ್ರಾಮಗಳನ್ನು ಹಾದು ಹೋಗುವಂತೆ ರೂಟ್‌ ವಿನ್ಯಾಸಗೊಳಿಸಿದರೆ ನಿಗಮಕ್ಕೆ ನಷ್ಟವಾಗುವ ಸಾಧ್ಯತೆ ಕಡಿಮೆ.

ಪ್ರಯಾಣಿಕರ ಕೊರತೆಯಿದೆ
ಶೇ.60ರಷ್ಟು ಬಸ್‌ಗಳು ಓಡಾಡುತ್ತಿದ್ದು ಪ್ರಯಾಣಿಕರ ಕೊರತೆಯಿದೆ. ಜನಜೀವನ ಇನ್ನಷ್ಟು ಸಹಜ ಸ್ಥಿತಿಗೆ ಬಂದ ಬಳಿಕ ಉಳಿದ ಮಾರ್ಗಗಳಲ್ಲೂ ಬಸ್‌ಗಳ ಓಡಾಟ ನಡೆಯಲಿದೆ. -ರಾಜೇಶ್‌ ಮೊಗವೀರ
ಘಟಕ ವ್ಯವಸ್ಥಾಪಕರು, ಕೆಎಸ್‌ಆರ್‌ಟಿಸಿ ಕುಂದಾಪುರ

 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಂತೋಷ್‌ ತಂದ ಸಂದೇಶ ಏನು? ಸಿಎಂ ಭೇಟಿಯಾದ ಸಂಘಟನ ಪ್ರಧಾನ ಕಾರ್ಯದರ್ಶಿ

ಸಂತೋಷ್‌ ತಂದ ಸಂದೇಶ ಏನು? ಸಿಎಂ ಭೇಟಿಯಾದ ಸಂಘಟನ ಪ್ರಧಾನ ಕಾರ್ಯದರ್ಶಿ

ಲಸಿಕೆ… ನಿರೀಕ್ಷಿಸಿ! ಭಾರತಕ್ಕೆ ಲಸಿಕೆ ಯಾವಾಗ?

ಲಸಿಕೆ… ನಿರೀಕ್ಷಿಸಿ! ಭಾರತಕ್ಕೆ ಲಸಿಕೆ ಯಾವಾಗ?

ಆರ್ಥಿಕ ಸುಧಾರಣೆ ಮುಂದುವರಿಯಲಿದೆ: ನಿರ್ಮಲಾ ಸೀತಾರಾಮನ್‌

ಆರ್ಥಿಕ ಸುಧಾರಣೆ ಮುಂದುವರಿಯಲಿದೆ: ನಿರ್ಮಲಾ ಸೀತಾರಾಮನ್‌

ಧರ್ಮ, ಮನುಷತ್ವ ಹಾಗೂ ವಿಶ್ವಶಾಂತಿ

ಧರ್ಮ, ಮನುಷತ್ವ ಹಾಗೂ ವಿಶ್ವಶಾಂತಿ

ಭಾರತೀಯ ಅಂಚೆ ಇಲಾಖೆಯಲ್ಲಿ ಬೃಹತ್‌ ನೇಮಕಾತಿ

ಭಾರತೀಯ ಅಂಚೆ ಇಲಾಖೆಯಲ್ಲಿ ಬೃಹತ್‌ ನೇಮಕಾತಿ

ಸಂಕ್ರಾಂತಿ ಬಳಿಕ ಪ್ರೌಢಶಾಲೆ? ಶೈಕ್ಷಣಿಕ ವರ್ಷ ಆಗಸ್ಟ್‌ ವರೆಗೆ ವಿಸ್ತರಣೆ ಸಾಧ್ಯತೆ

ಸಂಕ್ರಾಂತಿ ಬಳಿಕ ಪ್ರೌಢಶಾಲೆ? ಶೈಕ್ಷಣಿಕ ವರ್ಷ ಆಗಸ್ಟ್‌ ವರೆಗೆ ವಿಸ್ತರಣೆ ಸಾಧ್ಯತೆ

ಆಸೀಸ್‌ ನೆಲದಲ್ಲಿ ಭಾರತದ ವೇಗಿಗಳ ಮೇಲುಗೈ: ರವಿಶಾಸ್ತ್ರಿ

ಆಸೀಸ್‌ ನೆಲದಲ್ಲಿ ನಡೆಯುವ ಟೆಸ್ಟ್‌ ಸರಣಿಯಲ್ಲಿ ಭಾರತದ ವೇಗಿಗಳ ಮೇಲುಗೈ: ರವಿಶಾಸ್ತ್ರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತೀಯ ಅಂಚೆ ಇಲಾಖೆಯಲ್ಲಿ ಬೃಹತ್‌ ನೇಮಕಾತಿ

ಭಾರತೀಯ ಅಂಚೆ ಇಲಾಖೆಯಲ್ಲಿ ಬೃಹತ್‌ ನೇಮಕಾತಿ

news-tdy-02

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ನೇಮಕ

ಎಂಕೋಡಿ ಬೀಚ್‌: ನೀರಲ್ಲಿ ಮುಳುಗಿ ಓರ್ವ ಸಾವು, ಮತ್ತೋರ್ವನ ರಕ್ಷಣೆ

ಎಂಕೋಡಿ ಬೀಚ್‌: ನೀರಲ್ಲಿ ಮುಳುಗಿ ಓರ್ವ ಸಾವು, ಮತ್ತೋರ್ವನ ರಕ್ಷಣೆ

ಬಬ್ಬುಸ್ವಾಮಿ ದೈವಸ್ಥಾನದ ಹುಂಡಿ ಕಳವಿಗೆ ಯತ್ನ: ಈಶ್ವರ ಲಿಂಗ ರಚನೆಗೆ ಹಾನಿ

ಏಣಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ಹುಂಡಿ ಕಳವಿಗೆ ಯತ್ನ: ಈಶ್ವರ ಲಿಂಗ ರಚನೆಗೆ ಹಾನಿ

ಲಾರಿ- ಸ್ಕೂಟಿ ಢಿಕ್ಕಿ: ಹೆಜಮಾಡಿ ಗ್ರಾ. ಪಂ ಮಾಜಿ ಸದಸ್ಯ ನಿಧನ

ಲಾರಿ- ಸ್ಕೂಟಿ ಢಿಕ್ಕಿ: ಹೆಜಮಾಡಿ ಗ್ರಾ. ಪಂ ಮಾಜಿ ಸದಸ್ಯ ನಿಧನ

MUST WATCH

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

udayavani youtube

ಸುರತ್ಕಲ್ ನ ಪ್ರಥಮ ರಿಕ್ಷಾ ಚಾಲಕಿ

udayavani youtube

ಭೂಲೋಕದ ಅಮೃತ ವಾದ ತುಪ್ಪವನ್ನು ಸರಿಯಾಗಿ ಬಳಸುವುದು ಹೇಗೆ ?

udayavani youtube

Nittur Swarna rice Brand ಶಾಲೆಯ ಮಕ್ಕಳು ಸಿದ್ಧಪಡಿಸಿದ ನಿಟ್ಟೂರು ಸ್ವರ್ಣ ಅಕ್ಕಿ ಬ್ರಾಂಡ್

ಹೊಸ ಸೇರ್ಪಡೆ

ಸಂತೋಷ್‌ ತಂದ ಸಂದೇಶ ಏನು? ಸಿಎಂ ಭೇಟಿಯಾದ ಸಂಘಟನ ಪ್ರಧಾನ ಕಾರ್ಯದರ್ಶಿ

ಸಂತೋಷ್‌ ತಂದ ಸಂದೇಶ ಏನು? ಸಿಎಂ ಭೇಟಿಯಾದ ಸಂಘಟನ ಪ್ರಧಾನ ಕಾರ್ಯದರ್ಶಿ

ಲಸಿಕೆ… ನಿರೀಕ್ಷಿಸಿ! ಭಾರತಕ್ಕೆ ಲಸಿಕೆ ಯಾವಾಗ?

ಲಸಿಕೆ… ನಿರೀಕ್ಷಿಸಿ! ಭಾರತಕ್ಕೆ ಲಸಿಕೆ ಯಾವಾಗ?

ಆರ್ಥಿಕ ಸುಧಾರಣೆ ಮುಂದುವರಿಯಲಿದೆ: ನಿರ್ಮಲಾ ಸೀತಾರಾಮನ್‌

ಆರ್ಥಿಕ ಸುಧಾರಣೆ ಮುಂದುವರಿಯಲಿದೆ: ನಿರ್ಮಲಾ ಸೀತಾರಾಮನ್‌

ಧರ್ಮ, ಮನುಷತ್ವ ಹಾಗೂ ವಿಶ್ವಶಾಂತಿ

ಧರ್ಮ, ಮನುಷತ್ವ ಹಾಗೂ ವಿಶ್ವಶಾಂತಿ

ಭಾರತೀಯ ಅಂಚೆ ಇಲಾಖೆಯಲ್ಲಿ ಬೃಹತ್‌ ನೇಮಕಾತಿ

ಭಾರತೀಯ ಅಂಚೆ ಇಲಾಖೆಯಲ್ಲಿ ಬೃಹತ್‌ ನೇಮಕಾತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.