ಸಂಗೀತ, ನೃತ್ಯ ಪರೀಕ್ಷೆಗೆ ಕೂಡಿ ಬರದ ಕಾಲ!

ರಾಜ್ಯದಲ್ಲಿ 65 ಕೇಂದ್ರಗಳು, 13 ಸಾವಿರ ವಿದ್ಯಾರ್ಥಿಗಳು

Team Udayavani, Sep 29, 2020, 5:32 AM IST

ಸಂಗೀತ, ನೃತ್ಯ ಪರೀಕ್ಷೆಗೆ ಕೂಡಿ ಬರದ ಕಾಲ!

ಸಾಂದರ್ಭಿಕ ಚಿತ್ರ

ಕುಂದಾಪುರ: ಪ್ರತಿವರ್ಷ ಮೇ ಎರಡನೇ ವಾರ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ವಿಶೇಷ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗಳು ಕೋವಿಡ್ ಲಾಕ್‌ಡೌನ್‌ ಕಾರಣದಿಂದ ಮುಂದೂ ಡಲ್ಪಟ್ಟಿದ್ದು ದಿನ ನಿಗದಿಗೆ ಇನ್ನೂ ಕಾಲ ಕೂಡಿಬಂದಿಲ್ಲ. ಮಾ. 26ರ ವರೆಗೆ ದಂಡರಹಿತವಾಗಿ, ಮಾ. 31ರ ವರೆಗೆ ದಂಡಸಹಿತ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದ್ದು ಇದರಲ್ಲಿ ಬದಲಾವಣೆ ಮಾಡಿಲ್ಲ. ಆದ್ದರಿಂದ ಆಗ ಅರ್ಜಿ ಸಲ್ಲಿಸಿ ಪರೀಕ್ಷೆಗೆ ತಯಾರಿ ನಡೆಸಿದವರು ಇನ್ನೂ ದಿನಗಣನೆ ಮಾಡುತ್ತಿದ್ದಾರೆ.

ಮಕ್ಕಳಲ್ಲಿ ಆತಂಕ
ರಾಜ್ಯದ 65 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 13 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 20-25 ದಿನಗಳ ಕಾಲ ಪರೀಕ್ಷೆ ನಡೆಯುತ್ತದೆ. ಪಿಯುಸಿ, ಎಸೆಸೆಲ್ಸಿ, ನೀಟ್‌ ಮೊದಲಾದ ಪರೀಕ್ಷೆಗಳು ನಡೆದ ಕಾರಣ ಮತ್ತು ನವೆಂಬರ್‌ 1ರಿಂದ ಪದವಿ ಕಾಲೇಜುಗಳು ಆರಂಭ ವಾಗುವ ಹಿನ್ನೆಲೆಯಲ್ಲಿ ಸಂಗೀತ, ನೃತ್ಯ ಪರೀಕ್ಷೆಯನ್ನು ಶೀಘ್ರ ನಡೆಸುವಂತಾಗಲಿ ಎಂಬುದು ಪರೀಕ್ಷಾರ್ಥಿಗಳ ಆಶಯ. ಕೆಲವೆಡೆ ಭರತನಾಟ್ಯ, ಸಂಗೀತ ತರಗತಿಗಳು ಪುನರಾರಂಭಗೊಂಡಿದ್ದು ಪರೀಕ್ಷೆಗೆ ಪೋಷಕರು ಹಾಗೂ ಶಿಕ್ಷಕರು ಮಕ್ಕಳನ್ನು ಸಿದ್ಧಗೊಳಿಸುತ್ತಿದ್ದಾರೆ. ಪರೀಕ್ಷೆ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿಯಿಲ್ಲದ ಕಾರಣ ನೃತ್ಯ, ಸಂಗೀತ ಶಾಲೆಗೆ ಮಕ್ಕಳನ್ನು ಕಳುಹಿಸಲು ಹೆತ್ತವರಿಗೆ ಆತಂಕ ಉಂಟಾಗಿದೆ.

ಮೊಬೈಲ್‌ಗೆ ಎಸ್‌ಎಂಎಸ್‌
ಪರೀಕ್ಷಾ ಸಿದ್ಧತೆಗಳು ಆರಂಭವಾದಾಗ ಪರೀಕ್ಷಾರ್ಥಿ ಗಳ ಮೊಬೈಲ್‌ಗೆ ಪರೀಕ್ಷಾ ಮಂಡಳಿಯಿಂದ ಎಸ್‌ಎಂಎಸ್‌ ಬರಲಿದೆ. ಲಭ್ಯ ಮೂಲಗಳ ಮಾಹಿತಿ ಪ್ರಕಾರ ನವೆಂಬರ್‌ ನಿಂದ ಡಿಸೆಂಬರ್‌ ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. ಈ ಕುರಿತಾಗಿ ಸಚಿವರು ಹಾಗೂ ಇಲಾಖಾ ಮಟ್ಟದಲ್ಲಿ ಅಂತಿಮ ಹಂತದ ಚರ್ಚೆ ನಡೆಯುತ್ತಿದೆ. ಇನ್ನೊಂದು ವಾರ ದಲ್ಲಿ ಪರೀಕ್ಷಾ ದಿನಗಳು ನಿಗದಿಯಾಗಿ ಘೋಷಣೆಯಾಗುವ ಸಾಧ್ಯತೆಯಿದೆ.

ಅರ್ಹತೆ
10 ವರ್ಷ ತುಂಬಿದವರು ಕಿರಿಯ(ಜೂನಿಯರ್‌) 17 ತುಂಬಿದವರು ಅಥವಾ ಕಿರಿಯ ಪರೀಕ್ಷೆ ತೇರ್ಗಡೆಯಾಗಿ ಮೂರು ವರ್ಷ ಆದವರು ಸೀನಿಯರ್‌ ಪರೀಕ್ಷೆ ಬರೆಯ ಬಹುದು ಅಥವಾ ಪಿಯುಸಿ ಯಲ್ಲಿ ಐಚ್ಛಿಕ ಸಂಗೀತ, ನೃತ್ಯ, ತಾಳವಾದ್ಯ ಪಠ್ಯವನ್ನು ಅಭ್ಯಸಿಸಿರ ಬೇಕು. ಅಂತಹವರಿಗೆ ಜೂನಿಯರ್‌ ಪರೀಕ್ಷೆ ಅಗತ್ಯವಿಲ್ಲ. ನೇರ ಸೀನಿಯರ್‌ ಪರೀಕ್ಷೆಗೆ ಹಾಜರಾಗ ಬಹುದು. ವಿದ್ವತ್‌ ಪೂರ್ವ ಪರೀಕ್ಷೆಗೆ 19 ವರ್ಷ ತುಂಬಿರ ಬೇಕು ಅಥವಾ ಸೀನಿಯರ್‌ ಮುಗಿಸಿ 3 ವರ್ಷಗಳಾಗಿರಬೇಕು. ಪದವಿ ತರಗತಿಯಲ್ಲಿ ಐಚ್ಛಿಕ ವಿಷಯ ವಾಗಿ ಇವುಗಳನ್ನು ಪಡೆದರೂ ನೇರ ಪರೀಕ್ಷೆಗೆ ಭಾಗಿ ಯಾಗಲು ಅವಕಾಶ ಇದೆ.

ಪ್ರಾಚೀನ ಪರೀಕ್ಷೆ
ಸಂಗೀತ, ನೃತ್ಯ, ತಾಳವಾದ್ಯ ಕಲೆಯ ಅಭಿವೃದ್ಧಿಯ ಜತೆಗೆ ಅದರ ಶಿಕ್ಷಕರಾಗಿ ಸರಕಾರಿ, ಖಾಸಗಿ ವಲಯದಲ್ಲಿ ನೇಮಕಾತಿ ಹೊಂದಲು ಈ ಪರೀಕ್ಷೆಗಳು ಸಹಕಾರಿ. 1929ರಿಂದ ಈ ಪರೀಕ್ಷೆಗಳು ನಡೆಯುತ್ತಿದ್ದು ಭರತನಾಟ್ಯ, ಸಂಗೀತ, ಮೃದಂಗ ಮೊದಲಾದವುಗಳಲ್ಲಿ ವಿದ್ವತ್‌ ಪದವಿಗಳಿಕೆಗೆ ಈ ಪರೀಕ್ಷೆ ಅನಿವಾರ್ಯ.

ಸಂಗೀತ, ತಾಳವಾದ್ಯ, ನೃತ್ಯ ಪರೀಕ್ಷೆಗಳು ಈ ವರ್ಷ ನಡೆಯ ಲಿದ್ದು ಕೋವಿಡ್‌- 19 ಕಾರಣದಿಂದ ಮುಂದೂಡಲ್ಪಟ್ಟಿತ್ತು. ಪರಿಸ್ಥಿತಿಯನ್ನು ನೋಡಿಕೊಂಡು ಪರೀಕ್ಷೆ ನಡೆಯಬೇಕಿದ್ದು ಸಚಿವರ ಸೂಚನೆಯಂತೆ ಪರೀಕ್ಷಾ ದಿನಾಂಕ ವನ್ನು ಶೀಘ್ರವೇ ಘೋಷಿಸಲಾಗುವುದು.
– ಪ್ರಸನ್ನ ಕುಮಾರ್‌ ಎಂ.ಎಸ್‌. ನಿರ್ದೇಶಕರು,  ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಇತರ ಪರೀಕ್ಷೆಗಳು)

ಟಾಪ್ ನ್ಯೂಸ್

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

16-

ನಟ, ಕಾಂಗ್ರೆಸ್‌ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.