ಗಂಗೊಳ್ಳಿ : ಯಾಂತ್ರಿಕ ಮೀನುಗಾರಿಕೆ ವಿಳಂಬ ಸಾಧ್ಯತೆ

Team Udayavani, Aug 1, 2021, 3:10 AM IST

ಗಂಗೊಳ್ಳಿ : ಯಾಂತ್ರಿಕ ಮೀನುಗಾರಿಕೆ ವಿಳಂಬ ಸಾಧ್ಯತೆ

ಗಂಗೊಳ್ಳಿ: ಆಳ ಸಮುದ್ರ ಮೀನುಗಾರಿಕೆ ರಜೆ ಜು. 31ಕ್ಕೆ ಕೊನೆ ಗೊಂಡಿದ್ದು, ಆ. 1ರಿಂದ ಕಡಲಿಗಿಳಿ ಯಲು ಅವಕಾಶವಿದ್ದರೂ, ಸಮುದ್ರದಲ್ಲಿ ಪ್ರತಿ ಕೂಲ ಹವಾಮಾನ, ಡೀಸೆಲ್‌ ಬೆಲೆ ದುಬಾರಿಯಿಂದಾಗಿ ಗಂಗೊಳ್ಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಇನ್ನು ಕೆಲವು ದಿನ ವಿಳಂಬ ವಾಗಿ ಆರಂಭವಾಗುವ ಸಾಧ್ಯತೆಗಳಿವೆ.

ಗಂಗೊಳ್ಳಿಯಲ್ಲಿ ಆ.3ರ ಬಳಿಕವಷ್ಟೇ ಯಾಂತ್ರಿಕ ಮೀನುಗಾರಿಕೆ ಆರಂಭವಾಗುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಈ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರತಿಕೂಲ ಹವಾಮಾನ:

ಭಾರೀ ಮಳೆಯಾಗುತ್ತಿರುವುದರಿಂದ ಸಮುದ್ರದಲ್ಲಿ ಗಾಳಿಯ ವೇಗ ಹಾಗೂ ಅಲೆಗಳ ಅಬ್ಬರ ಬಿರುಸಾಗಿದ್ದು, ಇದು ಮೀನುಗಾರಿಕೆ ಆರಂಭಕ್ಕೆ ತೊಡಕಾಗಿದೆ. ಆ. 3ರ ಬಳಿಕ ಸ್ವಲ್ಪ ಮಟ್ಟಿಗೆ ಕಡಲು ಶಾಂತವಾಗಬಹುದು ಎನ್ನುವ ನಿರೀಕ್ಷೆ ಮೀನುಗಾರರದ್ದಾಗಿದೆ. ಇನ್ನು ಈ ಬಾರಿ ಡೀಸೆಲ್‌ ದರ ಮತ್ತಷ್ಟು ದುಬಾರಿಯಾಗಿದ್ದು, ಇದು ಮೀನುಗಾರಿಕೆಗೆ ಹೊಡೆತ ಬಿದ್ದಿದೆ.

3ನೇ ಅಲೆ ಭೀತಿ : ಲಸಿಕೆಗೆ ಮನವಿ :

ಆಳ ಸಮುದ್ರ ಮೀನುಗಾರಿಕೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಆದರೆ ಮೀನುಗಾರರಿಗೆ ಇನ್ನೂ ಸಹ ಲಸಿಕೆ ನೀಡಿಲ್ಲ. ಮಾಟು ಬಲೆ ದೋಣಿಯೊಂದರಲ್ಲೇ 30 ರಿಂದ 35 ಮೀನುಗಾರರು ಕೆಲಸ ಮಾಡುತ್ತಾರೆ. ಯಾಂತ್ರೀಕೃತ ದೋಣಿ, ಬೋಟು ಸೇರಿದಂತೆ ಸಾವಿರಾರು ಮೀನುಗಾರರು ಬಂದರಿನಲ್ಲಿ ಸೇರುತ್ತಾರೆ. ಕೊರೊನಾ 3ನೇ ಅಲೆಯ ಭೀತಿ ಈಗಲೇ ಆವರಿಸಿದ್ದು, ಈ ಹಿನ್ನೆಲೆಯಲ್ಲಿ ಇನ್ನೇನು ಯಾಂತ್ರಿಕ ಮೀನುಗಾರಿಕಾ ಋತು ಆರಂಭಗೊಳ್ಳಲಿದ್ದು, ಮೀನುಗಾರರಿಗೂ ಆದ್ಯತೆ ನೆಲೆಯಲ್ಲಿ ಲಸಿಕೆಗೆ ಅವಕಾಶ ಕಲ್ಪಿಸಿಕೊಡಬೇಕು. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಮೀನುಗಾರಿಕಾ ಇಲಾಖೆ ಗಮನಹರಿಸಬೇಕು ಎನ್ನುವುದಾಗಿ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಆಗ್ರ ಹಿಸಿದ್ದಾರೆ.

ಗಂಗೊಳ್ಳಿಯಲ್ಲಿ ಬೋಟ್‌ಗಳು ಕಡಲಿಗಿಳಿಯುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆ.2 ರಂದು ಈ ಬಗ್ಗೆ ಸಭೆ ನಿಗದಿಯಾಗಿದ್ದು, ಅಲ್ಲಿ ಚರ್ಚಿಸಿ ತೀರ್ಮಾನಿಸಲಿದ್ದೇವೆ. ಸಮುದ್ರ ತುಸು ಬಿರು ಸಾಗಿದ್ದು, ಡೀಸೆಲ್‌ ದರವೂ ದುಬಾರಿಯಾಗಿದೆ. ಹಾಗಾಗಿ ಎಲ್ಲ ಬೋಟ್‌ಗಳು ಈ ಬಾರಿ ಕಡಲಿಗಿಳಿಯುವುದು ಅನುಮಾನ. ನಾರಾಯಣ ಖಾರ್ವಿ, ಅಧ್ಯಕ್ಷರು, ಗಂಗೊಳ್ಳಿ ಪರ್ಸಿನ್‌ ಮೀನುಗಾರರ ಸಹಕಾರಿ ಸಂಘ 

ಮೀನುಗಾರರಿಗೂ ಆದ್ಯತೆ ನೆಲೆಯಲ್ಲಿ ಲಸಿಕೆ ನೀಡುವುದು ಅತ್ಯವಶ್ಯಕವಾಗಿದ್ದು, ಈ ಬಗ್ಗೆ ನಾನು ನಮ್ಮ ಇಲಾಖಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಅವರು ಆರೊಗ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾತನಾಡಿದ್ದಾರೆ. ಆದಷ್ಟು ಬೇಗ ಲಸಿಕೆ ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಆ.2ರಂದು ಮಲ್ಪೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ.  ಸುಮಲತಾ, ಸಹಾಯಕ ನಿರ್ದೇಶಕರು, ಮೀನುಗಾರಿಕಾ ಇಲಾಖೆ ಕುಂದಾಪುರ

ಟಾಪ್ ನ್ಯೂಸ್

c-c-patil

ಡಿಸೆಂಬರ್ ತಿಂಗಳಲ್ಲಿ ರಸ್ತೆ ಕಾಮಗಾರಿ ಆರಂಭ: ಸಚಿವ ಸಿ.ಸಿ.ಪಾಟೀಲ

238 ದಿನಗಳ ನಂತರ ಮತ್ತಷ್ಟು ಇಳಿಕೆ; ಭಾರತದಲ್ಲಿ 12,428 ಕೋವಿಡ್ ಪ್ರಕರಣ ಪತ್ತೆ

238 ದಿನಗಳ ನಂತರ ಮತ್ತಷ್ಟು ಇಳಿಕೆ; ಭಾರತದಲ್ಲಿ 12,428 ಕೋವಿಡ್ ಪ್ರಕರಣ ಪತ್ತೆ

2019ರಲ್ಲಿ ದಾಳಿಯಾಗಿದ್ದ ಪುಲ್ವಾಮಾ ಸಿಆರ್ ಪಿಎಫ್ ಕ್ಯಾಂಪಸ್ ನಲ್ಲಿ ರಾತ್ರಿ ಕಳೆದ ಅಮಿತ್ ಶಾ

2019ರಲ್ಲಿ ದಾಳಿಯಾಗಿದ್ದ ಪುಲ್ವಾಮಾ ಸಿಆರ್ ಪಿಎಫ್ ಕ್ಯಾಂಪಸ್ ನಲ್ಲಿ ರಾತ್ರಿ ಕಳೆದ ಅಮಿತ್ ಶಾ

ಶಶಿಕಲಾ ಜೊಲ್ಲೆ

ಚುನಾವಣೆಯಲ್ಲಿ ಸಚಿವರಿಗೆ ಎರಡು ಜಿ.ಪಂ. ಉಸ್ತುವಾರಿ ಸಮರ್ಥ ನಿಭಾವಣೆ: ಶಶಿಕಲಾ ಜೊಲ್ಲೆ

aditi prabhudeva

ತನಿಖಾಧಿಕಾರಿಯಾದ ‘ಅದಿತಿ ಪ್ರಭುದೇವ’

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್: ಅಮಾನತು

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್: ಅಮಾನತು

sreeleela

ಟಾಲಿವುಡ್‌ ನಲ್ಲಿ ಶ್ರೀಲೀಲಾಗೆ ಬೇಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪಾಯ ಆಹ್ವಾನಿಸುತ್ತಿದೆ ಅಪಾಯಕಾರಿ ತಿರುವು

ಅಪಾಯ ಆಹ್ವಾನಿಸುತ್ತಿದೆ ಅಪಾಯಕಾರಿ ತಿರುವು

ಐಟಿಐಯಲ್ಲಿ 11 ಹೊಸ ಕೋರ್ಸ್‌ಗಳು ಆರಂಭ ; ಸಚಿವ ಡಾ| ಅಶ್ವತ್ಥನಾರಾಯಣ

ಐಟಿಐಯಲ್ಲಿ 11 ಹೊಸ ಕೋರ್ಸ್‌ಗಳು ಆರಂಭ ; ಸಚಿವ ಡಾ| ಅಶ್ವತ್ಥನಾರಾಯಣ

4 ವರ್ಷವಾದರೂ ಮುಗಿಯದ ಕಚೇರಿ ಕಾಮಗಾರಿ

4 ವರ್ಷವಾದರೂ ಮುಗಿಯದ ಕಚೇರಿ ಕಾಮಗಾರಿ

ಮೊದಲ ದಿನ ಸಿಹಿಯೊಂದಿಗೆ ಬಿಸಿಯೂಟ

ಮೊದಲ ದಿನ ಸಿಹಿಯೊಂದಿಗೆ ಬಿಸಿಯೂಟ

ಹೆದ್ದಾರಿಯಿಂದ ನಗರಕ್ಕೆ ಪ್ರವೇಶ: ಸಮಿತಿ ರಚನೆ

ಹೆದ್ದಾರಿಯಿಂದ ನಗರಕ್ಕೆ ಪ್ರವೇಶ: ಸಮಿತಿ ರಚನೆ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

5protest

ಕಬ್ಬಿನ ದರ ನಿಗದಿಗೆ ರೈತರ ಪಟ್ಟು; ಧರಣಿ ಮುಂದುವರಿಕೆ

c-c-patil

ಡಿಸೆಂಬರ್ ತಿಂಗಳಲ್ಲಿ ರಸ್ತೆ ಕಾಮಗಾರಿ ಆರಂಭ: ಸಚಿವ ಸಿ.ಸಿ.ಪಾಟೀಲ

238 ದಿನಗಳ ನಂತರ ಮತ್ತಷ್ಟು ಇಳಿಕೆ; ಭಾರತದಲ್ಲಿ 12,428 ಕೋವಿಡ್ ಪ್ರಕರಣ ಪತ್ತೆ

238 ದಿನಗಳ ನಂತರ ಮತ್ತಷ್ಟು ಇಳಿಕೆ; ಭಾರತದಲ್ಲಿ 12,428 ಕೋವಿಡ್ ಪ್ರಕರಣ ಪತ್ತೆ

4bank

ಮಧ್ಯಾಮಾವಧಿ ಸಾಲ ವಿತರಣೆಗೆ

2019ರಲ್ಲಿ ದಾಳಿಯಾಗಿದ್ದ ಪುಲ್ವಾಮಾ ಸಿಆರ್ ಪಿಎಫ್ ಕ್ಯಾಂಪಸ್ ನಲ್ಲಿ ರಾತ್ರಿ ಕಳೆದ ಅಮಿತ್ ಶಾ

2019ರಲ್ಲಿ ದಾಳಿಯಾಗಿದ್ದ ಪುಲ್ವಾಮಾ ಸಿಆರ್ ಪಿಎಫ್ ಕ್ಯಾಂಪಸ್ ನಲ್ಲಿ ರಾತ್ರಿ ಕಳೆದ ಅಮಿತ್ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.