ಲಾಕ್ ಡೌನ್ ವ್ಯವಸ್ಥೆಗೆ ಗ್ರಾಮಾಂತರದ ನಿವಾಸಿಗಳು
Team Udayavani, Apr 24, 2020, 4:18 AM IST
ಕೋಟೇಶ್ವರ: ಕಳೆದ 1 ತಿಂಗಳಿನಿಂದ ಕಟ್ಟು ನಿಟ್ಟಾದ ಪೋಲಿಸ್ ಕ್ರಮದೊಡನೆ ಲಾಕ್ ಡೌನ್ ಪ್ರಕ್ರಿಯೆ ನಡೆಯುತ್ತಿದ್ದು ಗ್ರಾಮೀಣ ಪ್ರದೇಶದ ನಿವಾಸಿಗಳು ಅ ಒಂದು ಪ್ರಕ್ರಿಯೆಗೆ ಒಗ್ಗಿದ್ದು ಬೆಳಗ್ಗೆ 11 ಗಂಟೆ ಒಳಗೆ ದಿನಸಿ, ಹಾಗೂ ತರಕಾರಿ ಅಂಗಡಿಗಳಿಗೆ ತೆರಳಿ ಅತ್ಯತೆಯ ವಸ್ತುಗಳನ್ನು ಖರೀದಿ ಮಾಡಿ ವಾಪಾಸ್ ಆಗುತ್ತಿರುವುದು ಅವರಲ್ಲಿನ ಕಾನೂನಿನ ಸಮಯ ಪ್ರಜ್ಞೆಗೆ ಹಿಡಿದ ಕನ್ನಡಿಯಾಗಿದೆ.
ಗ್ರಾಮೀಣ ಪ್ರದೇಶದ ಮಂದಿ ಶಿಸ್ತು ಪಾಲನೆಯಲ್ಲಿ ನಗರ ವಾಸಿಗಳಿಗಿಂತ ಒಂದು ಹೆಜ್ಜೆ ಮುಂದೆ ಅನ್ನುವುದಕ್ಕೆ ಈ 1 ತಿಂಗಳ ಅವರ ವರ್ತನೆ ಉದಾಹರಣೆಯಾಗಿದೆ. ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಮಧ್ಯಾಹ್ನದ ಅನಂತರ ಊರಿಗೆ ಊರೇ ಜನಸಂಚಾರವಿಲ್ಲದೇ ಕರ್ಫ್ಯೂ ಹೇರಿದಂತೆ ಕಂಡುಬಂದಿದ್ದು ಪೊಲೀಸರ ಲಾಠಿ ಪ್ರಯೋಗವು ಅನೇಕ ಕಡೆ ಜನರಿಗೆ ಬಿಸಿ ಮುಟ್ಟಿಸಿದೆ.