ಮರಳು, ವಿಜಯ ಬ್ಯಾಂಕ್‌, ಫ್ಲೈಓವರ್‌!


Team Udayavani, Apr 3, 2019, 11:05 AM IST

44

ಕುಂದಾಪುರ: ಕರಾವಳಿಯ ಚುನಾವಣ ಪ್ರಚಾರದಲ್ಲಿ ಈಗ ಮುಖ್ಯ ಸದ್ದು ಮರಳು, ಫ್ಲೈಓವರ್‌ ಮತ್ತು ವಿಜಯ ಬ್ಯಾಂಕ್‌! ಕ್ಷೀಣವಾದ ಧ್ವನಿ ಎತ್ತಿನಹೊಳೆಯದು.

ಫ್ಲೈಓವರ್‌
ಮಂಗಳೂರಿನ ಪಂಪ್‌ವೆಲ್‌, ಕುಂದಾಪುರದ ಶಾಸಿŒ ಸರ್ಕಲ್‌ ಫ್ಲೈಓವರ್‌ ಅರ್ಧಕ್ಕೆ ಬಾಕಿ ಯಾಗಿವೆ. ಈ ಕುರಿತು ಕಾಂಗ್ರೆಸ್‌- ಬಿಜೆಪಿ ಆರೋಪ -ಪ್ರತ್ಯಾರೋಪ ಮಾಡುತ್ತಿವೆ. ನಳಿನ್‌ ಅಂತೂ ಚುನಾವಣೆಗೆ ಮುನ್ನ ಹೇಗಾದರೂ ಲೋಕಾರ್ಪಣೆ ಮಾಡಬೇಕೆಂಬ ಹಠ ತೊಟ್ಟಿ ದ್ದರು. ಜಾಲತಾಣದಲ್ಲಿ ಫ್ಲೈಓವರ್‌ ಸಾಕಷ್ಟು ಟ್ರೋಲ್‌ಗೆ ಒಳಗಾಗಿದೆ. ಕಾಂಗ್ರೆಸ್‌ ಇದನ್ನೇ ಪದೇಪದೇ ಕೆಣಕಿತ್ತು. ಫ್ಲೈಓವರ್‌ ಆಗದೇ ಇರಲು ಲೋಬೋ, ಐವನ್‌, ಮನಪಾ ಆಯುಕ್ತರಾಗಿದ್ದ ಇಬ್ರಾಹಿಂ ಕಾರಣ ಎಂದು ನಳಿನ್‌ ಪ್ರತ್ಯಸ್ತ್ರ ಹೂಡಿದ್ದರು. ಕುಂದಾಪುರದ ಫ್ಲೈಓವರ್‌ ಕೂಡ ಸಾಕಷ್ಟು ಟೀಕೆ, ಟ್ರೋಲ್‌ಗೆ ಆಹಾರವಾಯಿತು. ಶೋಭಾ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಫ್ಲೈಓವರ್‌ ಕಾಂಗ್ರೆಸ್‌ ಸಂಸದರ ಕಾಲದ್ದು ಎಂದು ಉತ್ತರ ಕೊಟ್ಟು ನುಣುಚಿಕೊಂಡರು. ಆದರೆ ಜಾಲತಾಣಿಗರು ಟೀಕಿಸುವುದು ಬಿಡಲೇ ಇಲ್ಲ.

ಬ್ಯಾಂಕ್‌ ವಿಲೀನ
ವಿಜಯ ಬ್ಯಾಂಕ್‌ ಅವಿಭಜಿತ ದ.ಕ. ಜಿಲ್ಲೆ ಯೊಂದಿಗೆ ಬಂಧ ಹೊಂದಿದ್ದರೂ ಚುನಾವಣ ಅಸ್ತ್ರವಾಗಿಸುತ್ತಿರುವುದು ದ. ಕನ್ನಡದವರು ಮಾತ್ರ. ಸಂಸದ ನಳಿನ್‌ ಮೌನವೇ ವಿಲೀನಕ್ಕೆ ಕಾರಣ, ಅವರು ವಿಜಯ ಬ್ಯಾಂಕ್‌ನ್ನು ಗುಜರಾತಿ ಗಳಿಗೆ ಮಾರಾಟ ಮಾಡಿದ್ದಾರೆ ಎಂದು ಕಾಂಗ್ರೆಸ್‌ ನವರು ಹೇಳುತ್ತಿದ್ದಾರೆ. ಆದರೆ ವಾಸ್ತವ ಹೇಳುವಲ್ಲಿ ಸೋತ ಬಿಜೆಪಿಯವರು ಸುಂದರ ರಾಮ ಶೆಟ್ಟರ ಹೆಸರನ್ನು ರಸ್ತೆಗೆ ಇರಿಸಲು ಲೋಬೋ ಬಿಡಲಿಲ್ಲ, ಐವನ್‌ ಬಿಡಲಿಲ್ಲ ಎನ್ನುತ್ತಿದ್ದಾರೆ.

ಮರಳು ಮರುಳು
ಮರಳು ದೊರೆಯದ ಕಾರಣ ಕಾಮಗಾರಿ ವಿಳಂಬ, ಉದ್ಯೋಗ ಕಡಿಮೆ, ವಹಿವಾಟಿನ ಮೇಲೆ ಗಂಭೀರ ಪರಿಣಾಮಗಳಾಗಿವೆ. ಮರಳು ಚಿನ್ನದ ಬೆಲೆಯಲ್ಲಿ ಕಾಳಸಂತೆಯಲ್ಲಿ ಮಾರಾಟ ವಾಗುತ್ತಿದೆ. ಉಡುಪಿಯಲ್ಲಿ ಮರಳು ಸಮಸ್ಯೆಗೆ ಸಚಿವರಾಗಿದ್ದ ಪ್ರಮೋದ್‌ ಕಾರಣ ಎಂದು ಶೋಭಾ ಹೇಳಿಕೆ ಕೊಟ್ಟರೆ, ಶೋಭಾರಿಂದಾಗಿಯೇ ಮರಳು ಹೊರೆಯಾಗಿದೆ ಎಂದು ಪ್ರಮೋದ್‌ ಹೇಳುತ್ತಾರೆ.

ಎರಡೂ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕಳೆದ ಚುನಾವಣೆ ಸಂದರ್ಭ ಎತ್ತಿನಹೊಳೆ ಯೋಜನೆ ನಿಲ್ಲಿಸಲು ಪಾದಯಾತ್ರೆ, ರಥಯಾತ್ರೆ, ಕರಸೇವೆ ಮಾಡುತ್ತೇವೆ, ಅಣೆಕಟ್ಟು ಒಡೆಯುತ್ತೇವೆ ಎಂದಿದ್ದವರು ಈ ಬಾರಿ ಅದರ ತಂಟೆಗೆ ಹೋಗಿಲ್ಲ. ಕರಾವಳಿಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ಕಾಮಗಾರಿ ಒದಗಿಸುತ್ತೇವೆ ಎಂದ ಕಾಂಗ್ರೆಸಿಗರೂ ತಾವು ಹೇಳಿದ್ದನ್ನು ಮರೆತಿದ್ದಾರೆ.

 ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

ಚಾಲಕನ ಸಮಯ ಪ್ರಜ್ಞೆ; ತಪ್ಪಿದ ರೈಲು ಅವಘಡ

ಚಾಲಕನ ಸಮಯ ಪ್ರಜ್ಞೆ; ತಪ್ಪಿದ ರೈಲು ಅವಘಡ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪಾಯ ಆಹ್ವಾನಿಸುತ್ತಿದೆ ಅಪಾಯಕಾರಿ ತಿರುವು

ಅಪಾಯ ಆಹ್ವಾನಿಸುತ್ತಿದೆ ಅಪಾಯಕಾರಿ ತಿರುವು

ಐಟಿಐಯಲ್ಲಿ 11 ಹೊಸ ಕೋರ್ಸ್‌ಗಳು ಆರಂಭ ; ಸಚಿವ ಡಾ| ಅಶ್ವತ್ಥನಾರಾಯಣ

ಐಟಿಐಯಲ್ಲಿ 11 ಹೊಸ ಕೋರ್ಸ್‌ಗಳು ಆರಂಭ ; ಸಚಿವ ಡಾ| ಅಶ್ವತ್ಥನಾರಾಯಣ

4 ವರ್ಷವಾದರೂ ಮುಗಿಯದ ಕಚೇರಿ ಕಾಮಗಾರಿ

4 ವರ್ಷವಾದರೂ ಮುಗಿಯದ ಕಚೇರಿ ಕಾಮಗಾರಿ

ಮೊದಲ ದಿನ ಸಿಹಿಯೊಂದಿಗೆ ಬಿಸಿಯೂಟ

ಮೊದಲ ದಿನ ಸಿಹಿಯೊಂದಿಗೆ ಬಿಸಿಯೂಟ

ಹೆದ್ದಾರಿಯಿಂದ ನಗರಕ್ಕೆ ಪ್ರವೇಶ: ಸಮಿತಿ ರಚನೆ

ಹೆದ್ದಾರಿಯಿಂದ ನಗರಕ್ಕೆ ಪ್ರವೇಶ: ಸಮಿತಿ ರಚನೆ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ಕರಾವಳಿಯ ಶಾಲೆಗಳಲ್ಲಿ ಮರುಕಳಿಸಿದ ಸಂಭ್ರಮ

ಕರಾವಳಿಯ ಶಾಲೆಗಳಲ್ಲಿ ಮರುಕಳಿಸಿದ ಸಂಭ್ರಮ

ಚಾಲಕನ ಸಮಯ ಪ್ರಜ್ಞೆ; ತಪ್ಪಿದ ರೈಲು ಅವಘಡ

ಚಾಲಕನ ಸಮಯ ಪ್ರಜ್ಞೆ; ತಪ್ಪಿದ ರೈಲು ಅವಘಡ

ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಉತ್ತಮ ಮಳೆ

ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಉತ್ತಮ ಮಳೆ

ಐಟಿ ಕಂಪೆನಿಗಳಿಂದ 1.2 ಲಕ್ಷ ಹೊಸಬರ ನೇಮಕ

ಐಟಿ ಕಂಪೆನಿಗಳಿಂದ 1.2 ಲಕ್ಷ ಹೊಸಬರ ನೇಮಕ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.