Udayavni Special

ಸಾಸ್ತಾನ ಟೋಲ್‌: ತಿಂಗಳಿನಿಂದ ಸೇವೆಗಿಲ್ಲ ಆ್ಯಂಬುಲೆನ್ಸ್‌

ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದ ಸಂದರ್ಭ ಗಾಯಾಳುವಿನ ಜೀವಕ್ಕೆ ಆಪತ್ತು  

Team Udayavani, Jul 30, 2020, 3:18 PM IST

ಸಾಸ್ತಾನ ಟೋಲ್‌: ತಿಂಗಳಿನಿಂದ ಸೇವೆಗಿಲ್ಲ ಆ್ಯಂಬುಲೆನ್ಸ್‌

ಕೋಟ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ ಸಂದರ್ಭ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನಿಯೋಜನೆಗೊಂಡ ಸಾಸ್ತಾನ ಟೋಲ್‌ನ
ಆ್ಯಂಬುಲೆನ್ಸ್‌ ಒಂದು ತಿಂಗಳಿನಿಂದ ದುರಸ್ತಿ ಯಲ್ಲಿದ್ದು ಇದುವರೆಗೂ ಸೇವೆಗೆ ಮರಳಿಲ್ಲ ಹಾಗೂ ಬದಲಿ ವಾಹನದ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಕುಂದಾಪುರದಿಂದ-ಉದ್ಯಾವರದ ವರೆಗಿನ 40 ಕಿ.ಮೀ. ವ್ಯಾಪ್ತಿಯನ್ನು ಸಾಸ್ತಾನ ಟೋಲ್‌ ಹೊಂದಿದ್ದು, ಈ ಪ್ರದೇಶದಲ್ಲಿ ಯಾವುದೇ ಅಪಘಾತವಾದರೆ ಇವರು ತುರ್ತಾಗಿ ನೆರವಿಗೆ ಧಾವಿಸಬೇಕು. ಪ್ರಸ್ತುತ ಇವರಿಂದ ಈ ಪ್ರದೇಶಕ್ಕೆ ತುರ್ತು ಸೇವೆ ಲಭ್ಯವಾಗುವುದಿಲ್ಲ.

ಅಪಘಾತವಾದರೆ ಸಮಸ್ಯೆ
ಹೆದ್ದಾರಿಯಲ್ಲಿ ಅಪಘಾತವಾದಾಗ ಟೋಲ್‌ನ ಆ್ಯಂಬುಲೆನ್ಸ್‌ ಅಥವಾ ಸರಕಾರಿ 108 ಆ್ಯಂಬುಲೆನ್ಸ್‌ಗೆ ಕರೆ ಮಾಡಲಾಗುತ್ತದೆ. ಇದೀಗ 108 ವಾಹನವನ್ನು ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಬಳಸುವುದರಿಂದ ಇತರ ಸೇವೆಗೆ ಇವರು ಬರುವುದಿಲ್ಲ. ಹೀಗಾಗಿ ಆಸ್ಪತ್ರೆಗೆ  ದಾಖಲಿಸಲು ಖಾಸಗಿ ವಾಹನ ಅವಲಂಬಿಸಬೇಕಿದೆ. ಇತ್ತೀಚೆಗೆ ಕೆಲವು ಕಡೆ ಅಪಘಾತವಾದಾಗ ಖಾಸಗಿ ಆ್ಯಂಬುಲೆನ್ಸ್‌ ಸಿಗದೆ ಆಸ್ಪತ್ರೆಗೆ ತುರ್ತಾಗಿ ದಾಖಲಿಸಲು ಸಾಕಷ್ಟು ಸ‌ಮಸ್ಯೆಯಾಗಿತ್ತು. ಗಾಯಾಳು ವಿನ ಸ್ಥಿತಿ ಗಂಭೀರವಾಗಿದ್ದಾಗಲೂ ಇದಕ್ಕೆ ಬದಲಿ ವ್ಯವಸ್ಥೆ ಮಾಡಿರಲಿಲ್ಲ.

ಟೋಲ್‌ ನಿಯಮದ ಪ್ರಕಾರ ತುರ್ತು ಸೇವೆಗಾಗಿ ನಿಯೋಜನೆಗೊಂಡ ಯಾವುದೇ ವಾಹನ ಕೆಟ್ಟು ನಿಂತಾಗ ಇದಕ್ಕೆ ಬದಲಿ ವ್ಯವಸ್ಥೆ ಮಾಡಿ ಜನರಿಗೆ ಸೇವೆ ನೀಡಬೇಕು. ಆದರೆ ಇಲ್ಲಿ ಯಾವುದೇ ವ್ಯವಸ್ಥೆ ಮಾಡಿಲ್ಲ. ಸದಾ ದುರಸ್ತಿಯಲ್ಲಿರುವ ಆ್ಯಂಬುಲೆನ್ಸ್‌ ಇಲ್ಲಿನ ಆ್ಯಂಬುಲೆನ್ಸ್‌ ಅಫಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವು ದಕ್ಕಿಂತ ಹೆಚ್ಚಾಗಿ ಟೋಲ್‌ನ ಕಾರ್ಮಿಕರನ್ನು ಕೆಲಸಕ್ಕೆ ಕರೆತರಲು, ದಾರಿದೀಪ ರಿಪೇರಿ  ಮಾಡುವವರನ್ನು ಕರೆದೊಯ್ಯಲು, ಬ್ಯಾಂಕ್‌ಗೆ ಹಣ ಜಮೆ ಮಾಡಲು, ಮುಂತಾದ ಕೆಲಸಕ್ಕೆ ಉಪಯೋಗಿಸ ಲಾಗುತ್ತಿದೆ ಪ್ರಾಥಮಿಕ ಚಿಕಿತ್ಸೆ ನೀಡಲು ಸೂಕ್ತ ಸಲಕರಣೆಗಳಿಲ್ಲದ ಕಾರಣ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಸಿಬಂದಿ ಗಳು ಹರಸಾಹಸಪಡುತ್ತಾರೆ.

ಶೀಘ್ರ ದುರಸ್ತಿ
ಚಿಕ್ಕ ಅಪಘಾತದಿಂದ ಆ್ಯಂಬುಲೆನ್ಸ್‌ ಹಾಳಾಗಿದ್ದು ಇದೀಗ ದುರಸ್ತಿ ನಡೆಯುತ್ತಿದೆ. ಬದಲಿ ವ್ಯವಸ್ಥೆಯ ಕುರಿತು ಕಂಪೆನಿ ಯಾವುದೇ ಸೂಚನೆ ನೀಡಿಲ್ಲ. ಈಗಿರುವ ಆ್ಯಂಬುಲೆನ್ಸ್‌ ಶೀಘ್ರ ದುರಸ್ತಿಗೊಂಡು ಸೇವೆಗೆ ಲಭ್ಯವಾಗಲಿದೆ.
-ಬಶೀರ್‌, ಟೋಲ್‌ ಮ್ಯಾನೇಜರ್‌

ಬದಲಿ ವ್ಯವಸ್ಥೆ ಮಾಡಿ
ಆ್ಯಂಬುಲೆನ್ಸ್‌ ಹಾಳಾಗಿ ಒಂದು ತಿಂಗಳು ಕಳೆದರೂ ಬದಲಿ ವ್ಯವಸ್ಥೆ ಯಾಗದೆ ಹೆದ್ದಾರಿ ಬಳಕೆದಾರರಿಗೆ ಸಮಸ್ಯೆಯಾಗಿದೆ. ಇದಕ್ಕೆ ಆದಷ್ಟು ಶೀಘ್ರ
ಬದಲಿ ವ್ಯವಸ್ಥೆ ಯಾಗಬೇಕು ಇಲ್ಲವೇ ಸುಸ್ಥಿತಿಯಲ್ಲಿರುವ ಆ್ಯಂಬುಲೆನ್ಸ್‌ವೊಂದನ್ನು ಇಲ್ಲಿಗೆ ಶೀಘ್ರ ನಿಯೋಜಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ.
-ಅಲ್ವಿನ್‌ ಅಂದ್ರಾದೆ, ಕಾರ್ಯದಶಿ, ಹೆದ್ದಾರಿ ಜಾಗೃತಿ ಸಮಿತಿ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಿಹಾರ ಚುನಾವಣೆ 2020: ಬಿಜೆಪಿ ಪ್ರಣಾಳಿಕೆ ಬಿಡುಗಡೆ, 19 ಲಕ್ಷ ಉದ್ಯೋಗ, ಕೋವಿಡ್ ಲಸಿಕೆ ಉಚಿತ

ಬಿಹಾರ ಚುನಾವಣೆ 2020: ಬಿಜೆಪಿ ಪ್ರಣಾಳಿಕೆ ಬಿಡುಗಡೆ, 19 ಲಕ್ಷ ಉದ್ಯೋಗ, ಕೋವಿಡ್ ಲಸಿಕೆ ಉಚಿತ

ಅವಹೇಳನಕಾರಿ ಫ್ಲೆಕ್ಸ್ ಅಳವಡಿಕೆ: ಕಿಡಿಗೇಡಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಅವಹೇಳನಕಾರಿ ಫ್ಲೆಕ್ಸ್ ಅಳವಡಿಕೆ: ಕಿಡಿಗೇಡಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಸರ್ಜಿಕಲ್ ದಾಳಿ ನಡೆದು 18 ತಿಂಗಳ ಬಳಿಕ ಬಾಲಾಕೋಟ್ ನಲ್ಲಿ ಮತ್ತೆ ತಲೆಎತ್ತಿದ ಉಗ್ರರ ಶಿಬಿರ

ಸರ್ಜಿಕಲ್ ದಾಳಿ ನಡೆದು 18 ತಿಂಗಳ ಬಳಿಕ ಬಾಲಾಕೋಟ್ ನಲ್ಲಿ ಮತ್ತೆ ತಲೆಎತ್ತಿದ ಉಗ್ರರ ಶಿಬಿರ

ಭೀಮಾ ನದಿ ಪ್ರವಾಹದಲ್ಲಿ ಪಿಎಸ್ಐಯ ನಕಲಿ ರಕ್ಷಣಾ ಕಾರ್ಯಚರಣೆಯ ವಿಡಿಯೋ ವೈರಲ್ !

ಭೀಮಾ ನದಿ ಪ್ರವಾಹದಲ್ಲಿ ಪಿಎಸ್ಐಯ ನಕಲಿ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ವೈರಲ್ !

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

irani

ಪೊಲೀಸರೆಂದು ನಂಬಿಸಿ, ಚಿನ್ನಾಭರಣ ದೋಚುತ್ತಿದ್ದ ಇರಾನಿ ಗ್ಯಾಂಗ್ ನ ನಾಲ್ವರ ಬಂಧನ

vijayendra

ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಬಿ.ವೈ. ವಿಜಯೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

ಬದುಕಿನ ಬಂಡಿಗೆ ಗುಜರಿ ಅಂಗಡಿಯ ಸಾಥ್‌

ಬದುಕಿನ ಬಂಡಿಗೆ ಗುಜರಿ ಅಂಗಡಿಯ ಸಾಥ್‌

ಉಡುಪಿ ಆರ್‌ಟಿಒ ಕಚೇರಿ: ಶೇ.55ರಷ್ಟು ಹುದ್ದೆ ಖಾಲಿ!

ಉಡುಪಿ ಆರ್‌ಟಿಒ ಕಚೇರಿ: ಶೇ.55ರಷ್ಟು ಹುದ್ದೆ ಖಾಲಿ!

ಅಜ್ಜರಕಾಡು ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ; ಸಚಿವ ಸಂಪುಟದಲ್ಲಿ ಇಂದು ಅನುಮೋದನೆ ಸಾಧ್ಯತೆ

ಅಜ್ಜರಕಾಡು ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ; ಸಚಿವ ಸಂಪುಟದಲ್ಲಿ ಇಂದು ಅನುಮೋದನೆ ಸಾಧ್ಯತೆ

Kud

ನನೆಗುದಿಗೆ ಬಿದ್ದ ಮಂಕಿ ಪಾರ್ಕ್‌ ಯೋಜನೆ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

dg-tdy-1

ಗ್ರಾಪಂ ಚುನಾವಣೆಯತ್ತ ಗ್ರಾಮೀಣರ ಒಲವು

vp-tdy-2

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಜಲಪುರ ಸರ್ಕಾರಿ ಪ್ರಾಥಮಿಕ ಶಾಲೆ

vp-tdy-1

ಸ್ವಚ್ಛತೆಗೆ ಗಮನ ಹರಿಸಲು ಸೂಚನೆ

bidara-tdy-1

ಬೆಳೆ ಹಾನಿ ಪರಿಶೀಲಿಸಿದ ಎಂಎಲ್‌ಸಿ ವಿಜಯಸಿಂಗ್‌

yg-tdy-2

ಗುರುಮಠಕಲ್‌ದಲ್ಲಿ ಬೆಳಗದ ಹೈಮಾಸ್ಟ್‌ ದೀಪಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.