ಬಡಗುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಸತೀಶ್ ಹೆಗಡೆ ಆನೆಗದ್ದೆ ಇನ್ನಿಲ್ಲ
Team Udayavani, Jan 21, 2021, 8:26 AM IST
ಕುಂದಾಪುರ: ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಡಗುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಸತೀಶ್ ಹೆಗಡೆ ಆನೆಗದ್ದೆ ಅವರು ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ.
ಸುಮಾರು 35ಕ್ಕೂ ಹೆಚ್ಚು ವರ್ಷಗಳಿಗೂ ಹೆಚ್ಚು ಕಾಲ ವಿವಿಧ ಮೇಳಗಳಲ್ಲಿ ಯಕ್ಷಗಾನ ಸೇವೆಗೈದಿದ್ದ ಸತೀಶ್ ಹೆಗಡೆ ಅವರಿಗೆ ಕೆಲವು ವರ್ಷಗಳಿಂದ ಒಂದು ಕಾಲಿನ ಸಮಸ್ಯೆ ಎದುರಾಗಿತ್ತು.
ಇತ್ತೀಚೆಗೆ ಸಮಸ್ಯೆ ಹೆಚ್ಚಾಗಿ ಆಸ್ಪತ್ರೆ ದಾಖಲಾಗಿದ್ದರು. ಕಾಲಿನಲ್ಲಿ ಸೋಂಕು ಆದ ಕಾರಣ ಕಿಡ್ನಿ ವೈಫಲ್ಯವಾಗಿತ್ತು. ಅನಾರೋಗ್ಯ ಉಲ್ಬಣಿಸಿ ಕಳೆದ ಮೂರು ದಿನದ ಹಿಂದೆ ಕೋಮಾ ಹಂತಕ್ಕೆ ತಲುಪಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸತೀಶ್ ಹೆಗಡೆ ಅವರು ಬುಧವಾರ ರಾತ್ರಿ ನಿಧನ ಹೊಂದಿದರು.
ಇದನ್ನೂ ಓದಿ:ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ: ಅಂಗಾರಗೆ ಮೀನುಗಾರಿಕೆ; ಎಂಟಿಬಿಗೆ ಅಬಕಾರಿ
ರಂಗದಲ್ಲಿ ಕೌರವ, ರಾವಣ, ಮಹಿಷಾಸುರ ಪಾತ್ರಗಳಿಂದ ಪ್ರಸಿದ್ಧಿ ಪಡೆದಿದ್ದ ಸತೀಶ್ ಹೆಗಡೆ ಆನೆಗದ್ದೆ ಅವರು ನಾಗರಕೋಡಿಗೆ, ಕಮಲಶಿಲೆ, ಸಿಗಂದೂರು, ಹಾಲಾಡಿ, ಗುತ್ಯಮ್ಮ ಮೇಳ ಮತ್ತು ಕಾರಣಗಿರಿ ಮೇಳಗಳಲ್ಲಿ ಸುಮಾರು 35 ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆಸಲ್ಲಿಸಿದ್ದರು. ಕಳೆದ ಎರಡು ವರ್ಷಗಳಿಂದ ಕಾರಣಗಿರಿ ಮೇಳದಲ್ಲಿ ತಿರುಗಾಟ ನಡೆಸಿದ್ದರು.
ಇದನ್ನೂ ಓದಿ: ಸಂಗೀತದ ಮೂಲ ಧರ್ಮ; ಬಳಿಕ ಸಂಸ್ಕೃತಿ, ವ್ಯವಹಾರ