ಆಟದ ಮೈದಾನ: ಗಬ್ಬೆದ್ದು ಹೈರಾಣ 

Team Udayavani, Sep 5, 2021, 3:10 AM IST

ಆಟದ ಮೈದಾನ: ಗಬ್ಬೆದ್ದು ಹೈರಾಣ 

ಕುಂದಾಪುರ: ಆಟವಾಡ ಲೆಂದೇ ಇರುವ ಗಾಂಧಿ ಮೈದಾನವೂ ಸಾಂಸ್ಕೃತಿಕ ಕೂಟಗಳಿಗೆಂದೇ ಇರುವ ನೆಹರೂ ಮೈದಾನವೂ ಉಪಯೋಗಕ್ಕೆ ದೊರೆಯದ ಮಾದರಿಯಲ್ಲಿ ಹಡಾಲೆದ್ದು ಹೋಗಿದೆ. ಎದೆಯೆತ್ತರ ಬೆಳೆದ ಪೊದೆಯಿಂದಾಗಿ ಹುಲ್ಲು ಹಾವು ಚೇಳುಗಳ ಆವಾಸ ಸ್ಥಾನವಾಗಿದೆ. ನಿರ್ವಹಣೆ ಮಾಡಬೇಕಾದ ಇಲಾಖೆ ಪುರಸಭೆ ಕಡೆಗೆ ಬೆಟ್ಟು ಮಾಡಿದರೆ ಪುರಸಭೆ ಯುವಜನ ಸೇವಾ ಇಲಾಖೆ ಕಡೆಗೆ ಕೈ ತೋರಿಸುತ್ತದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾದಂತಾಗಿದೆ.

ಮೈದಾನಗಳು:

ಶಾಸ್ತ್ರಿ ಪಾರ್ಕ್‌ ಸಮೀಪ ಕುಂದಾಪುರಕ್ಕೆ ಭಂಡಾರ್‌ಕಾರ್ಸ್‌ ಕಾಲೇಜು ಪಕ್ಕದ ಗಾಂಧಿ ಕ್ರೀಡಾಂಗಣ, ಅದರ ಪಕ್ಕದಲ್ಲಿ ನೆಹರೂ ಮೈದಾನ ಎಂದು ವಿವಿಧ ಚಟುವಟಿಕೆಗಳಿಗೆ ಯೋಗ್ಯವಾದ ಮೈದಾನಗಳಿವೆ. ಗಾಂಧಿ ಮೈದಾನ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸುಪರ್ದಿಯಲಿದೆ. ನೆಹರೂ ಮೈದಾನ ಪುರಸಭೆಯ ಹಿಡಿತದಲ್ಲಿದೆ.

ಸಾಂಸ್ಕೃತಿಕ ವೈಭವ  :

ಸಾಂಸ್ಕೃತಿಕವಾಗಿ ಈ ಮೈದಾನಗಳಿಗೆ ಬಹಳ ಮಹತ್ವವಿದೆ. ಕುಂದಾಪುರದ ಗಾಂಧಿ,

ನೆಹರೂ ಮೈದಾನದಲ್ಲಿ  ನಡೆದ ಯಕ್ಷಗಾನ ಯಶಸ್ಸು ಪಡೆದರೆ ಇಡೀ ತಿರುಗಾಟದಲ್ಲಿ ಯಕ್ಷಗಾನ ಪ್ರದರ್ಶನ ಜನಮೆಚ್ಚುಗೆ ಪಡೆಯುತ್ತದೆ ಎನ್ನುವುದು ಪ್ರತೀತಿ. ಆದರೆ ಈಗ ಕೋವಿಡ್‌ ಕಾರಣಗಳಿಂದ ಎಲ್ಲ ಚಟುವಟಿಕೆಗಳೂ ಸ್ತಬ್ಧವಾಗಿವೆ.

ಆಟದ ಆಡಂಬೋಲ:

ಗಾಂಧಿ ಮೈದಾನದಲ್ಲಿ ಅದೆಷ್ಟು ಆಟೋಟ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಯಾರೂ ಲೆಕ್ಕ ಇಟ್ಟಿರಲಾರರು. ಪ್ರತಿದಿನ ಸಂಜೆ, ಶನಿವಾರ, ರವಿವಾರ ಆಟದ ಸದ್ದುಗದ್ದಲದಿಂದಲೇ ತುಂಬಿರುತ್ತಿತ್ತು. ಅಭ್ಯಾಸ ನಡೆಸುವವರಿಗೂ ಅನುಕೂಲ ವಾತಾವರಣ ಇದೆ. ಪ್ರತ್ಯೇಕ ಓಟದ ಟ್ರಾಕ್‌ ಇದೆ. ಈಚೆಗಷ್ಟೇ 40 ಲಕ್ಷ ರೂ. ವೆಚ್ಚದಲ್ಲಿ ಸ್ಟೇಡಿಯಂ ನಿರ್ಮಾಣವಾಗಿದೆ. ಕೋವಿಡ್‌ ಲಾಕ್‌ಡೌನ್‌ ಅನಂತರದ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅಂಕುಶ ಬಿದ್ದು ಕ್ರೀಡಾಂಗಣದೊಳಗೆ ಪ್ರವೇಶಿಸುವವರ ಸಂಖ್ಯೆಯೇ ಕಡಿಮೆಯಾಯಿತು. ಸಾಯಂಕಾಲದ ವಾಯುವಿಹಾರಕ್ಕೆ ಬರುವ ವೃದ್ಧರು ಮನೆ ಬಿಟ್ಟು ಹೊರಬರುವುದು ಕಡಿಮೆಯಾಗಿದೆ. ಇದರಿಂದ ಬೀದಿ ದೀಪ ಹಾಳಾದರೂ, ಪಾದಚಾರಿ ಪಥದಲ್ಲಿ ಹುಲ್ಲು ತುಂಬಿದರೂ, ಟ್ರಾಕ್‌ ಮುಚ್ಚಿ ಹೋಗುವಂತೆ ಹುಲ್ಲು ಬೆಳೆದರೂ ಕೇಳುವವರೇ ಇಲ್ಲವಾಯಿತು.

ಗುಜರಿ ವಸ್ತುಗಳು :

ಅತ್ತ ನೆಹರೂ  ಮೈದಾನದ ರಂಗಮಂದಿರ ಉಪಯೋಗಕ್ಕೆ ದೊರೆಯುತ್ತಿಲ್ಲ. ಅದರ ಎದುರು ಕೂಡ ಸ್ವಲ್ಪ ಗುಜರಿ ರಾಶಿಯಿದೆ. ರಂಗಮಂದಿರವೇ ಶಿಥಿಲ ಅವಸ್ಥೆಗೆ ಹೋಗುವಂತೆ ಉಪಯೋಗ ಶೂನ್ಯವಾಗಿದೆ. ಇತ್ತ ಗಾಂಧಿ ಮೈದಾನವೂ ಗುಜುರಿ ವಸ್ತುಗಳ ಸಂಗ್ರಹದ ಅಡ್ಡೆಯಾಗಿದೆ. ಈಚೆಗೆ ಪೆವಿಲಿಯನ್‌ ನವೀಕರಣ ಸಂದರ್ಭ ಬಳಕೆಯಾಗಿ ಉಳಿದ ವಸ್ತುಗಳ ರಾಶಿಯನ್ನು ಹಾಗೆಯೇ ಬಿಡಲಾಗಿದೆ. ತುಕ್ಕು ಹಿಡಿದ ಕಬ್ಬಿಣದ ತುಂಡು, ಸಲಾಕೆ ಮೊದಲಾದವು ಇವೆ. ಬೆಳಕಿನ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಸಾಯಂಕಾಲ ಆಗುತ್ತಲೇ ಮೈದಾನದಿಂದ ಕಾಲ್ಕಿàಳಬೇಕು. ಸಂಜೆಯ ಗಾಳಿ ಸೇವನೆಗೆ ಬರುವವರಿಗೆ ಕತ್ತಲೆಯ ಆತಂಕ.

ನಿರ್ವಹಣೆ ಸವಾಲು :

ಸಹಾಯಕ ಕಮಿಷನರ್‌ ಅಧ್ಯಕ್ಷತೆಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ಗಾಂಧಿ ಮೈದಾನವೂ, ಪುರಸಭೆ ಅಧೀನದಲ್ಲಿ ನೆಹರೂ ಮೈದಾನವು ಇವೆ. ಈವರೆಗೆ ಪುರಸಭೆಯೇ ಈ ಎರಡೂ ಮೈದಾನಗಳ ಸ್ವತ್ಛತ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಯುವಜನ ಸೇವಾ ಇಲಾಖೆ ಅನುದಾನ ಬಂದಾಗ ತಾನೂ ತನ್ನ ಕೈಲಾದ ಸೇವೆ ಮಾಡಿದೆ. ಆದರೆ ಈಗ ಯಾರು ಮಾಡುವುದು ಎಂಬ ಅನುಮಾನದಲ್ಲೇ ನಿರ್ವಹಣೆ ಬಾಕಿಯಾಗಿದೆ. ನಿರ್ವಹಣೆ ನಡೆಯದ ಕಾರಣ ಮೈದಾನ ಸಮರ್ಪಕವಾಗಿ ಬಳಕೆಗೆ ದೊರೆಯುತ್ತಿಲ್ಲ. ಮಳೆ ಬಂದಾಗ ನೀರು ನಿಲ್ಲುತ್ತದೆ. ಕೆಸರು ತುಂಬುತ್ತದೆ. ಹುಲ್ಲಿನ ಎಡೆಯಲ್ಲಿ ಏನು ಇರುತ್ತದೆ ಎನ್ನುವುದೇ ತಿಳಿಯದ ಸ್ಥಿತಿಯಲ್ಲಿದೆ. ದೀಪಗಳ ನಿರ್ವಹಣೆ ತೀರಾ ತುರ್ತಿನ ಅವಶ್ಯವಾಗಿದೆ.

ಮೈದಾನಗಳು ಹಾಳು ಬಿದ್ದು ಹೋಗಿ ಜನರ ಪಯೋಗಕ್ಕೆ ದೊರೆಯುತ್ತಿಲ್ಲ. ಸುಂದರ ಕುಂದಾಪುರ ಎಂದು ಸುಂದರ ಮೈದಾನಗಳೇ ಹಾಳುಕೊಂಪೆಗಳಾದರೆ ಹೇಗೆ. ಸಂಬಂಧಪಟ್ಟವರು ತತ್‌ಕ್ಷಣ ಗಮನಹರಿಸಿ ಸರಿಪಡಿಸುವಂತೆ ಮನವಿ ಮಾಡಿದ್ದೇನೆ. ಗಿರೀಶ್‌ ಜಿ.ಕೆ., ಸದಸ್ಯರು, ಪುರಸಭೆ

ಸ್ವಾತಂತ್ರ್ಯ ಸಂದರ್ಭ ಪುರಸಭೆಯವರು ಸ್ವತ್ಛತೆ ನಡೆಸುತ್ತಾರೆ. ಈ ಬಾರಿ ಪೂರ್ಣ ಪ್ರಮಾಣದಲ್ಲಿ ನಡೆಯಲಿಲ್ಲ. ನಮ್ಮ ಇಲಾಖೆಯಲ್ಲಿ ಅನುದಾನದ ಕೊರತೆ ಇದೆ. ಹಾಗಿದ್ದರೂ ಎಲ್ಲ ಅವ್ಯವಸ್ಥೆಗಳನ್ನು ಶೀಘ್ರ  ಸರಿಪಡಿಸಲಾಗುವುದು. ಕುಸುಮಾಕರ ಶೆಟ್ಟಿ,  ಯುವಜನ ಸೇವೆ ಕ್ರೀಡಾ ಇಲಾಖೆ ಅಧಿಕಾರಿ

-ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

ಅಧಿಕೃತ: ಭಾರೀ ಮೊತ್ತಕ್ಕೆ ಲಕ್ನೋ ಪಾಲಾದ ರಾಹುಲ್; ಹಾರ್ದಿಕ್ ಗೆ 15 ಕೋಟಿ ಕೊಟ್ಟ ಅಹಮದಾಬಾದ್

ಅಧಿಕೃತ: ಭಾರೀ ಮೊತ್ತಕ್ಕೆ ಲಕ್ನೋ ಪಾಲಾದ ರಾಹುಲ್; ಹಾರ್ದಿಕ್ ಗೆ 15 ಕೋಟಿ ಕೊಟ್ಟ ಅಹಮದಾಬಾದ್

ಮೈಸೂರು-ಮಂಗಳೂರು ರೈಲ್ವೇ: ಹಳಿಯೇರದ ವಿದ್ಯುದೀಕರಣ!

ಮೈಸೂರು-ಮಂಗಳೂರು ರೈಲ್ವೇ: ಹಳಿಯೇರದ ವಿದ್ಯುದೀಕರಣ!

ಸರಕಾರ ಒಪ್ಪಿದಲ್ಲಿ ಸೇವೆಗೆ ಅವಕಾಶ: ಡಾ| ರಾಜೇಂದ್ರ

ಸರಕಾರ ಒಪ್ಪಿದಲ್ಲಿ ಸೇವೆಗೆ ಅವಕಾಶ: ಡಾ| ರಾಜೇಂದ್ರ

ಸ್ಥಳೀಯ ಅಕ್ಕಿ ವಿತರಣೆಗೆ ಭತ್ತದ ಬಿತ್ತನೆ ಹೆಚ್ಚಬೇಕು

ಸ್ಥಳೀಯ ಅಕ್ಕಿ ವಿತರಣೆಗೆ ಭತ್ತದ ಬಿತ್ತನೆ ಹೆಚ್ಚಬೇಕು

ಅರಿಶಿಣದಿಂದ ಕ್ಯಾನ್ಸರ್‌ ಚಿಕಿತ್ಸಾ ಧಾತು!

ಅರಿಶಿಣದಿಂದ ಕ್ಯಾನ್ಸರ್‌ ಚಿಕಿತ್ಸಾ ಧಾತು!

ಮತ್ತೆ ಒಂದಾಗ್ತಾರಾ ಸಮಂತಾ-ನಾಗಚೈತನ್ಯ?

ಮತ್ತೆ ಒಂದಾಗ್ತಾರಾ ಸಮಂತಾ-ನಾಗಚೈತನ್ಯ?

ದ.ಕ., ಉಡುಪಿ: 5 ಸಾವಿರ ಮಣ್ಣು ಪರೀಕ್ಷೆ ಗುರಿ

ದ.ಕ., ಉಡುಪಿ: 5 ಸಾವಿರ ಮಣ್ಣು ಪರೀಕ್ಷೆ ಗುರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪೋಷಣ್‌ ಅಭಿಯಾನ್‌ ಸಿಬಂದಿಗೆ ಆರ್ಥಿಕ ಅಪೌಷ್ಟಿಕತೆ!

ಪೋಷಣ್‌ ಅಭಿಯಾನ್‌ ಸಿಬಂದಿಗೆ ಆರ್ಥಿಕ ಅಪೌಷ್ಟಿಕತೆ!

ಬಿದ್ಕಲ್‌ಕಟ್ಟೆ: ರಾ.ಹೆ.ಯಲ್ಲಿ ವಿದ್ಯಾರ್ಥಿಗಳ ಪಯಣ; ಅಪಾಯ ಸಾಧ್ಯತೆ

ಬಿದ್ಕಲ್‌ಕಟ್ಟೆ: ರಾ.ಹೆ.ಯಲ್ಲಿ ವಿದ್ಯಾರ್ಥಿಗಳ ಪಯಣ; ಅಪಾಯ ಸಾಧ್ಯತೆ

ವಾರಕ್ಕೆರಡು ದಿನ ಮಾತ್ರ ಸೇವೆ; ಬಾಕಿ ದಿನ ಬೀಗ

ವಾರಕ್ಕೆರಡು ದಿನ ಮಾತ್ರ ಸೇವೆ; ಬಾಕಿ ದಿನ ಬೀಗ

ಕುಂದಾಪುರ: ಹೈವೆ ಕಾಮಗಾರಿ ನಿರ್ಲಕ್ಷಿಸಿದ ಹೆದ್ದಾರಿ ಪ್ರಾಧಿಕಾರ!

ಕುಂದಾಪುರ: ಹೈವೆ ಕಾಮಗಾರಿ ನಿರ್ಲಕ್ಷಿಸಿದ ಹೆದ್ದಾರಿ ಪ್ರಾಧಿಕಾರ!

ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂದಿರ ನೂತನ ಶಿಲಾಮಯ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟನೆ

ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂದಿರ ನೂತನ ಶಿಲಾಮಯ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟನೆ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

ಅಧಿಕೃತ: ಭಾರೀ ಮೊತ್ತಕ್ಕೆ ಲಕ್ನೋ ಪಾಲಾದ ರಾಹುಲ್; ಹಾರ್ದಿಕ್ ಗೆ 15 ಕೋಟಿ ಕೊಟ್ಟ ಅಹಮದಾಬಾದ್

ಅಧಿಕೃತ: ಭಾರೀ ಮೊತ್ತಕ್ಕೆ ಲಕ್ನೋ ಪಾಲಾದ ರಾಹುಲ್; ಹಾರ್ದಿಕ್ ಗೆ 15 ಕೋಟಿ ಕೊಟ್ಟ ಅಹಮದಾಬಾದ್

ಮೈಸೂರು-ಮಂಗಳೂರು ರೈಲ್ವೇ: ಹಳಿಯೇರದ ವಿದ್ಯುದೀಕರಣ!

ಮೈಸೂರು-ಮಂಗಳೂರು ರೈಲ್ವೇ: ಹಳಿಯೇರದ ವಿದ್ಯುದೀಕರಣ!

ಸರಕಾರ ಒಪ್ಪಿದಲ್ಲಿ ಸೇವೆಗೆ ಅವಕಾಶ: ಡಾ| ರಾಜೇಂದ್ರ

ಸರಕಾರ ಒಪ್ಪಿದಲ್ಲಿ ಸೇವೆಗೆ ಅವಕಾಶ: ಡಾ| ರಾಜೇಂದ್ರ

ಸ್ಥಳೀಯ ಅಕ್ಕಿ ವಿತರಣೆಗೆ ಭತ್ತದ ಬಿತ್ತನೆ ಹೆಚ್ಚಬೇಕು

ಸ್ಥಳೀಯ ಅಕ್ಕಿ ವಿತರಣೆಗೆ ಭತ್ತದ ಬಿತ್ತನೆ ಹೆಚ್ಚಬೇಕು

ಅರಿಶಿಣದಿಂದ ಕ್ಯಾನ್ಸರ್‌ ಚಿಕಿತ್ಸಾ ಧಾತು!

ಅರಿಶಿಣದಿಂದ ಕ್ಯಾನ್ಸರ್‌ ಚಿಕಿತ್ಸಾ ಧಾತು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.