ಉಪ್ಪುಂದ : ಹೊಸ ಚಿನ್ನ ಮಾಡಿಸಿಕೊಡುವುದಾಗಿ ಹಳೆಯ ಚಿನ್ನಾಭರಣ ಪಡೆದು ಹಲವರಿಗೆ ಮೋಸ


Team Udayavani, Jun 30, 2022, 9:50 PM IST

ಉಪ್ಪುಂದ : ಹೊಸ ಚಿನ್ನ ಮಾಡಿಕೊಡುವುದಾಗಿ ಹಳೆಯ ಚಿನ್ನಾಭರಣ ಪಡೆದು ಹಲವರಿಗೆ ಮೋಸ

ಉಪ್ಪುಂದ : ಹೊಸ ಚಿನ್ನಾಭರಣ ಮಾಡಿಸಿ ಕೊಡುವುದಾಗಿ ಹೇಳಿ ಹಳೆಯ ಚಿನ್ನ ಪಡೆದು ಬಳಿಕ ಹೊಸ ಚಿನ್ನವನ್ನು ನೀಡದೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆ ವಿವರ : ಸಿದ್ದಾಪುರ ಕೆಳಪೇಟೆ ಋಷಿಕೆರೆ ನಿವಾಸಿ ಉದಯ ಅವರು ಉಪ್ಪುಂದದಲ್ಲಿರುವ ನಿತ್ಯಾನಂದ ಶೇಟ್ ರವರ ಮಾರುತಿ ಗೋಲ್ಡ್ ಜ್ಯುವೆಲ್ಲರ್ಸ್ ನಲ್ಲಿ ತನ್ನ ಅಕ್ಕನ ಮಗಳ ಮದುವೆಗೆಂದು ಕರಿಮಣಿ ಸರ ಹಾಗೂ ಬಳೆಗಳನ್ನು ಮಾಡಿಸಲು ಕಳೆದ ಅಕ್ಟೋಬರ್ 18 ರಂದು ಚಿನ್ನದ ಅಂಗಡಿಗೆ ಬಂದಿದ್ದಾರೆ ಈ ವೇಳೆ ಅಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಗಿರೀಶ್ ಶೇಟ್ ಹಾಗೂ ಆತನ ಸಹೋದರರಾದ ವೆಂಕಟೇಶ್ ಹಾಗೂ ಹರೀಶ್ ರವರಲ್ಲಿ ಹೊಸದಾಗಿ ಕರಿಮಣಿ ಸರ ಮತ್ತು ಬಳೆಗಳನ್ನು ಮಾಡಿಸುವ ಬಗ್ಗೆ ಮಾತನಾಡಿದ್ದಾರೆ ಈ ವೇಳೆ ಉದಯ ಅವರು ತಮ್ಮಲ್ಲಿದ್ದ ಹಳೆಯ ಚಿನ್ನ 35 ಗ್ರಾಂ ತೂಕದ ಕರಿಮಣಿ ಸರ, 12 ಗ್ರಾಂ ತೂಕದ ಚಿನ್ನದ ಚೈನ್ ಹಾಗೂ 16 ಗ್ರಾಂ ತೂಕದ ಎರಡು ಬಳೆಗಳನ್ನು ಮತ್ತು ಮುಂಗಡವಾಗಿ 45, 000/- ರೂಪಾಯಿ ನಗದು ಹಣವನ್ನು ನೀಡಿ ಹೊಸ ಚಿನ್ನ ಮಾಡಲು ಹೇಳಿದ್ದಾರೆ ಅದರಂತೆ ಚಿನ್ನದ ಅಂಗಡಿಯವರು ಹಳೆಯ ಚಿನ್ನಗಳನ್ನು ಪಡೆದುಕೊಂಡಿದ್ದಾರೆ ಬಳಿಕ ಸ್ವಲ್ಪ ದಿನಗಳು ಕಳೆದ ಬಳಿಕ ಹೊಸತಾಗಿ ಮಾಡಿದ ಕರಿಮಣಿ ಸರ ಮತ್ತು ಬಳೆಗಳನ್ನು ಕೊಂಡು ಹೋಗಲು ಬಂದಾಗ ಅಂಗಡಿಯವರು ಸ್ವಲ್ಪ ದಿನ ಬಿಟ್ಟು ನೀಡುವುದಾಗಿ ಹೇಳಿದ್ದಾರೆ, ಆ ಬಳಿಕ ಕೆಲವು ದಿನಗಳನ್ನು ಮುಂದಕ್ಕೆ ಹಾಕುತ್ತಾ ಮುಂದೂಡಿದ್ದಾರೆ.

ಹೀಗೆ ಕೆಲವು ಸಮಯದ ಬಳಿಕ ಮಾರುತಿ ಗೋಲ್ಡ್ ಜ್ಯುವೆಲ್ಲರ್ಸ ಗೆ ಹೋದಾಗ ಚಿನ್ನ ಪಡೆದುಕೊಂಡ ವ್ಯಕ್ತಿಗಳು ಅಂಗಡಿಯಲ್ಲಿ ಇರಲಿಲ್ಲ ಈ ವೇಳೆ ಫೋನ್ ಮಾಡಿದರೆ ಸ್ವೀಕರಿಸದೇ ತಲೆಮರೆಸಿಕೊಂಡಿದ್ದಾರೆ.

ಘಟನೆ ಕುರಿತು ಮಾಹಿತಿ ಕಲೆ ಹಾಕಿದಾಗ ಚಿನ್ನದ ಅಂಗಡಿಯವರು ಇದೆ ರೀತಿ ಹಲವು ಮಂದಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಘಟನೆ ಕುರಿತು ಉದಯ ಅವರು ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.

ಇದನ್ನೂ ಓದಿ : ಕೊರಟಗೆರೆ: ಕಾರು ಢಿಕ್ಕಿ; ಬೈಕ್ ಸವಾರರಿಗೆ ಗಂಭೀರ ಗಾಯ

ಟಾಪ್ ನ್ಯೂಸ್

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಭ್ರಷ್ಟಾಚಾರ ನಿಲ್ಲಿಸುತ್ತಾರೆಂಬ ನಂಬಿಕೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಭ್ರಷ್ಟಾಚಾರ ನಿಲ್ಲಿಸುತ್ತಾರೆಂಬ ನಂಬಿಕೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ತೆರಿಗೆ ಪಾವತಿ ಮಾಡುವವರಿಗೆ ಅಟಲ್‌ ಪಿಂಚಣಿ ಇಲ್ಲ

ತೆರಿಗೆ ಪಾವತಿ ಮಾಡುವವರಿಗೆ ಅಟಲ್‌ ಪಿಂಚಣಿ ಇಲ್ಲ

ತೇಜಸ್ವಿ ಸೂರ್ಯ ಭೇಟಿ ವೇಳೆ ಗಲಭೆ: ಎಫ್ಐಆರ್‌ ದಾಖಲು

ತೇಜಸ್ವಿ ಸೂರ್ಯ ಭೇಟಿ ವೇಳೆ ಗಲಭೆ: ಎಫ್ಐಆರ್‌ ದಾಖಲು

cm-bommai

ಎಸಿಬಿ ರದ್ದು; ಚರ್ಚೆಯ ನಂತರ ಮುಂದಿನ ತೀರ್ಮಾನ: ಸಿಎಂ ಬೊಮ್ಮಾಯಿ

ಆವಾಸ್‌ ಯೋಜನೆ 2024ರವರೆಗೆ ವಿಸ್ತರಣೆ

ಆವಾಸ್‌ ಯೋಜನೆ 2024ರವರೆಗೆ ವಿಸ್ತರಣೆ

ಕೋವಿಡ್‌: ರಾಜ್ಯದಲ್ಲಿ ಮರಣ ಪ್ರಮಾಣ ಏರಿಕೆ

ಕೋವಿಡ್‌: ರಾಜ್ಯದಲ್ಲಿ ಮರಣ ಪ್ರಮಾಣ ಏರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-38

ಮೋಹನದಾಸ್‌ ಪೈ ಅವರಿಗೆ ನುಡಿನಮನ

ಕಾಪು: ಫ್ಲ್ಯಾಟ್‌ನಿಂದ 1.98 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಕಾಪು: ಫ್ಲ್ಯಾಟ್‌ನಿಂದ 1.98 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಲಾಡ್ಜ್ ನಲ್ಲಿ ಜುಗಾರಿ: ಐವರ ಬಂಧನ

ಲಾಡ್ಜ್ ನಲ್ಲಿ ಜುಗಾರಿ: ಐವರ ಬಂಧನ

13-arrest

ಕೊರ್ಗಿ: ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ-ಸುಲಿಗೆ; ಸಿಸಿ ಟಿವಿ ದೃಶ್ಯ ಆಧರಿಸಿ ಓರ್ವ ಬಂಧನ

ವಾಹನಗಳಲ್ಲೂ ರಾಷ್ಟ್ರ ಧ್ವಜಕ್ಕೆ ಅವಕಾಶ : ಅವಮಾನ ಆಗದಂತೆ ಎಚ್ಚರ ವಹಿಸಿ : ಡಿಸಿ

ವಾಹನಗಳಲ್ಲೂ ರಾಷ್ಟ್ರ ಧ್ವಜಕ್ಕೆ ಅವಕಾಶ : ಅವಮಾನ ಆಗದಂತೆ ಎಚ್ಚರ ವಹಿಸಿ : ಡಿಸಿ

MUST WATCH

udayavani youtube

ರಸ್ತೆ ಗುಂಡಿಯ ಕೊಳಚೆ ನೀರಿನಲ್ಲೇ ಯೋಗ, ಸ್ನಾನ ಮಾಡಿದ ವ್ಯಕ್ತಿ

udayavani youtube

ಎಸಿಬಿ ರಚನೆ ಆದೇಶ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ

udayavani youtube

ವರ್ಗಾವಣೆಗೊಂಡ ಚಿಕ್ಕಮಗಳೂರು ಎಸ್.ಪಿ ಗೆ ಹೂಮಳೆಗೈದು ಬೀಳ್ಕೊಟ್ಟ ಸಿಬ್ಬಂದಿ…

udayavani youtube

3 ವರ್ಷಗಳ ಬಳಿಕ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್

udayavani youtube

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ

ಹೊಸ ಸೇರ್ಪಡೆ

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

tdy-38

ಮೋಹನದಾಸ್‌ ಪೈ ಅವರಿಗೆ ನುಡಿನಮನ

ಭ್ರಷ್ಟಾಚಾರ ನಿಲ್ಲಿಸುತ್ತಾರೆಂಬ ನಂಬಿಕೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಭ್ರಷ್ಟಾಚಾರ ನಿಲ್ಲಿಸುತ್ತಾರೆಂಬ ನಂಬಿಕೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

crime

ಕಲಬುರಗಿ: ತಾಯಿ, ಮೂವರು ಮಕ್ಕಳ ಶವ ಬಾವಿಯಲ್ಲಿ ಪತ್ತೆ

1-adadasd

ಮಹಾರಾಜ ಟಿ20 ಕೂಟ: ಮಂಗಳೂರಿಗೆ ಮೊದಲ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.