ಕತ್ತಲೆಯಲ್ಲಿ ಕಾಮಗಾರಿ: ನಾಗರಿಕರ ಆಕ್ಷೇಪ

Team Udayavani, Nov 11, 2022, 1:34 PM IST

15

ಕುಂದಾಪುರ: ಇಲ್ಲಿನ ಕುಂದೇಶ್ವರ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆಯುತ್ತಿದ್ದ ಚರಂಡಿ ಕಾಂಕ್ರೀಟ್‌ ಕಾಮಗಾರಿ ವಿರುದ್ಧ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿವಾದದ ಸುತ್ತ

ಮೊದಲಿಂದಲೂ ಒಂದಲ್ಲ ಒಂದು ವಿವಾದವನ್ನು ಎಳೆದು ಹಾಕಿ ಕೊಳ್ಳುತ್ತಿರುವ ಈ ಕಾಮಗಾರಿ ಈಗ ಮತ್ತೂಮ್ಮೆ ಸುದ್ದಿಯಾಗಿದೆ. ಕಾಮಗಾರಿ ಅಂದಾಜುಪಟ್ಟಿ ತಯಾರಿಸುವ ಮುನ್ನ ಸ್ಥಳೀಯರ ವಿರೋಧ ಬಂತು. ಆ ಬಳಿಕ ಮಹಾದ್ವಾರ ಹೊಸದಾಗಿ ಮಾಡುವುದು ಎಂದಾಗ ಹೈಕೋರ್ಟ್‌ ಆದೇಶದ ನೆನಪು ಬಂತು. ಹೊಸ ದ್ವಾರಗಳನ್ನು ನಿರ್ಮಿಸಬಾರದು ಎಂಬ ಆದೇಶ ಉಲ್ಲಂಘನೆಯ ಭಯ ಬಂತು. ಅದಾದ ಬಳಿಕ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದಾಯಿತು. ಅದಾದ ಬಳಿಕ ಮರಗಳನ್ನು ಕಡಿದ ವಿವಾದ ಆರಂಭವಾಯಿತು. ಅದರ ಬಳಿಕ ಭಾರೀ ಮೊತ್ತ ವಿನಿಯೋಗಿಸಲಾಗುತ್ತಿದೆ, ಅವ್ಯವಹಾರ ನಡೆಯುತ್ತಿದೆ ಎಂಬ ಸಂದೇಶ ಹರಿದಾಡತೊಡಗಿತು. ಪುರಸಭೆ ಸಾಮಾನ್ಯ ಸಭೆಯಲ್ಲೂ ಚರ್ಚೆಯಾಯಿತು. ಎಲ್ಲ ಆಗಿ ಒಂದು ಹಂತದ ಕಾಮಗಾರಿ ಆಗುವಾಗ ಲೋಕಾಯುಕ್ತಕ್ಕೆ ದೂರು ಹೋಯಿತು.

ಸಾರ್ವಜನಿಕರಿಂದ ಆಕ್ಷೇಪ

ಎರಡನೇ ಹಂತ ಕಾಮಗಾರಿ ಟೆಂಡರ್‌ ಆಗಿ ಮಂದಗತಿಯಲ್ಲಿ ಸಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ರಸ್ತೆ ಬದಿಯ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಚರಂಡಿಯ ಮೇಲೆ ಹಾಸು ಹಾಕುತ್ತಿರುವ ಕಾಂಕ್ರೀಟ್‌ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚರಂಡಿಯ ಮೇಲ್‌ ಹಾಸು ಕೇವಲ ಸಿಮೆಂಟ್‌ ಮತ್ತು ಜಲ್ಲಿ ಮಿಕ್ಸ್‌ ಮಾಡಿ ಹಾಕಲಾಗಿದೆ. ಭದ್ರತೆಗೆ ಕ್ರಶರ್‌ ಅಥವಾ ಸ್ಯಾಂಡ್‌ ಬಳಕೆ ಮಾಡಿಲ್ಲ. ಕತ್ತಲೆಯಲ್ಲಿ ಕೆಲಸ ಮಾಡುವ ಉದ್ದೇಶ ಅರ್ಥ ವಾಗುತ್ತಿಲ್ಲ. ಸ್ಯಾಂಡ್ಸ್‌ ಮಿಕ್ಸರ್‌ ಹಾಕದೆ ಕಾಟಾಚಾರಕ್ಕೆ ಕೆಲಸ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಸ್ಥಳೀಯರು ಪುರಸಭೆ ಅಧ್ಯಕ್ಷರು ಮತ್ತು ಸಂಬಂಧಿ ತರಿಗೆ ಮಾಹಿತಿ ನೀಡಿದರು.

ನರಕ ಸೃಷ್ಟಿ!

ಕುಂದೇಶ್ವರ ರಸ್ತೆಯ ಅಭಿವೃದ್ಧಿ ಹೆಸರಿನಲ್ಲಿ ನರಕ ಸೃಷ್ಟಿಸಲಾಗಿದೆ. ಮೊದಲಿಗೆ ಇಂಟರ್‌ಲಾಕ್‌ ಅಳವಡಿಕೆ ನೆಪದಲ್ಲಿ ಬೆಳೆದು ನಿಂತ ಮರಗಳ ಕಟಾವು ಮಾಡಿದರು. ಲೋಕಾಯುಕ್ತ ದೂರಿನ ಬಳಿಕ ದ್ವಿತೀಯ ಹಂತದ ಕಾಮಗಾರಿ ಆರಂಭಿಸಿದ್ದಾರೆ. ಕತ್ತಲೆಯಲ್ಲಿಯೂ ಕಾಮಗಾರಿ ನಡೆಯುತ್ತಿದೆ. ಕಾಂಕ್ರೀಟ್‌ ಅಭದ್ರವಾಗಿ ಮಾಡಲಾಗುತ್ತಿದೆ. ರಸ್ತೆಯಂಚಿನಲ್ಲಿ ಸಾಕಷ್ಟು ಮನೆಗಳಿದ್ದು ಗೇಟ್‌ ಎದುರೇ ರಸ್ತೆಯಿದೆ. ವಾಹನ ದಾಟಿದರೆ ಚರಂಡಿ ಮೇಲ್‌ ಹಾಸು ಕುಸಿಯುವಂತೆ ಕೆಲಸ ನಿರ್ವಹಿಸಲಾಗುತ್ತಿದೆ. ಸದ್ಯ ಕಾಮಗಾರಿ ತಡೆಹಿಡಿದಿದ್ದೇವೆ ಎಂದಿದ್ದಾರೆ ಸ್ಥಳೀಯರು.

ಕುಂದೇಶ್ವರ ದೇವಸ್ಥಾನದ ರಸ್ತೆಯ ಒಳ ಚರಂಡಿ ಕೆಲಸವನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸದೆ, ಮಾಡಿರುವುದು ಕಳಪೆ ಕಾಮಗಾರಿ ಎಂದು ಸ್ಥಳೀಯರಾದ ಕುಂದೇಶ್ವರ ಫ್ರೆಂಡ್ಸ್‌ನವರು ಚರಂಡಿಯ ಮೇಲೆ ಹಾಕಿದ ಮುಚ್ಚಿಗೆಯನ್ನು ತೆಗೆಸಿದ್ದಾರೆ. ಸರಿಯಾಗಿ ಕೆಲಸ ನಿರ್ವಹಿಸಿ, ಇಲ್ಲವಾದಲ್ಲಿ ಕೆಲಸ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಬೆದರಿದ ಕಾರ್ಮಿಕರು ಈಗಾಗಲೆ ಹಾಕಿದ ಕಾಂಕ್ರೀಟ್‌ ತೆಗೆದು ಪುನರಪಿ ಸ್ಯಾಂಡ್‌ ಮಿಕ್ಸರ್‌ನೊಂದಿಗೆ ಕಾಂಕ್ರೀಟ್‌ ಹಾಕಲು ತಯಾರಿ ಆರಂಭಿಸಿದರು.

ಟಾಪ್ ನ್ಯೂಸ್

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.