Udayavni Special

ಇಎಂಐ ಕಟ್ಟಿಲ್ವಾ ?


Team Udayavani, Apr 6, 2020, 5:54 PM IST

ಇಎಂಐ ಕಟ್ಟಿಲ್ವಾ ?

ಕೋವಿಡ್ 19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್‌.ಬಿ.ಐ, ಗ್ರಾಹಕರ ತಿಂಗಳ ಕಂತು ಇ.ಎಂ.ಪಾವತಿಗೆ, ಮೂರು ತಿಂಗಳು ವಿನಾಯಿತಿ ನೀಡುವಂತೆ ಸೂಚಿಸಿತ್ತು. ಕುರಿತಾಗಿ ಅನೇಕ ಗೊಂದಲಗಳು ಸೃಷ್ಟಿಯಾಗಿದ್ದವು. ಅವುಗಳನ್ನು ಬಗೆಹರಿಸುವ ಸಲುವಾಗಿ ಲೇಖನ.

 

ಇದು ಮೂರು ತಿಂಗಳ ಮುಂದೂಡಿಕೆಯಷ್ಟೇ. ಮೂರು ತಿಂಗಳ ಇ.ಎಂ. ಐ ಮನ್ನಾ ಅಲ್ಲ. ಮಾರ್ಚ್‌ 1, 2020 ಮತ್ತು ಮೇ 31, 2020, ಈ ಅವಧಿಯಲ್ಲಿ ಕಟ್ಟಬೇಕಿದ್ದ ಇ.ಎಂ.ಐ.ಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಮಾರ್ಚ್‌ 1- ಮೇ 31ರ ಅವಧಿಯಲ್ಲಿ ಕಟ್ಟಬೇಕಿದ್ದ ಸಾಲದ ಕಂತುಗಳಿಗೂ 3 ತಿಂಗಳ ವಿನಾಯಿತಿ ಅನ್ವಯವಾಗುತ್ತದೆ. ಮೂರು ತಿಂಗಳ ವಿನಾಯಿತಿ ಬೇಕಿದ್ದವರು ತಂತಮ್ಮ ಬ್ಯಾಂಕುಗಳಿಗೆ ಮನವಿ ಸಲ್ಲಿಸಬೇಕು. ಇಲ್ಲದೇ ಹೋದರೆ, ವಿನಾಯಿತಿ ಅನ್ವಯವಾಗುವುದಿಲ್ಲ. ಈ ಮುಂದೂಡಿಕೆ ಕೇವಲ ಬ್ಯಾಂಕ್‌ ಸಾಲಕ್ಕೆ ಮಾತ್ರವಲ್ಲ, ಎಲ್ಲಾ ಅರ್ಹ ಹಣಕಾಸು ಸಂಸ್ಥೆಗಳಿಗೂ, ಸಹಕಾರಿ ಬ್ಯಾಂಕುಗಳಿಗೂ ಅನ್ವಯಿಸುತ್ತದೆ.

ಈ ಯೋಜನೆ ಕುರಿತಾಗಿ, ಕೆಲ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಇ-ಮೇಲನ್ನು ಕಳಿಸಿವೆ. ಈ ಇ-ಮೇಲ್, ಕೇವಲ ಮಾಹಿತಿಯಷ್ಟೇ. ಅಷ್ಟು ಮಾತ್ರಕ್ಕೆ, ತಮ್ಮ ಖಾತೆ ಯೋಜನೆಗೆ ಒಳಪಟ್ಟಿದೆ ಎಂದು ಗ್ರಾಹಕರು ತಿಳಿಯುವ ಹಾಗಿಲ್ಲ. ವಿನಾಯಿತಿ ಕೇಳಿ ಗ್ರಾಹಕರು ಮನವಿ ಸಲ್ಲಿಸದೇ ಹೋದರೆ, ಎಂದಿನ ಇ.ಎಂ. ಐ ನಿಯಮಗಳೇ ಅನ್ವಯವಾಗುವುದು. ಮೂರು ತಿಂಗಳ ವಿನಾಯಿತಿಗೆ ಒಳಪಟ್ಟ ಗ್ರಾಹಕರಿಗೆ, ದಂಡ ವಿಧಿಸಲಾಗುವುದಿಲ್ಲ. ಆದರೆ, ಬಡ್ಡಿಯ ಮೊತ್ತವನ್ನು ಎಂದಿನಂತೆಯೇ ವಿಧಿಸಲಾಗುವುದು. ಸಮಯಕ್ಕೆ ಸರಿಯಾಗಿ ಕಂತು ಕಟ್ಟುವುದರಿಂದ, ಬ್ಯಾಂಕುಗಳು ನೀಡುವ ಕ್ರೆಡಿಟ್‌ ರೇಟಿಂಗ್‌ (ಸಿಬಿಲ್‌ ಸ್ಕೋರ್‌) ಹೆಚ್ಚುತ್ತದೆ. ಈ ಸಮಯದಲ್ಲಿ ಮೂರು ತಿಂಗಳು ಮುಂದೂಡಲ್ಪಟ್ಟರೆ, ತಮ್ಮ ಕ್ರೆಡಿಟ್‌ ಸ್ಕೋರ್‌ ಮೇಲೆ ಏನಾದರೂ ದುಷ್ಪರಿಣಾಮ ಬೀರುವುದೇ ಎಂಬ ಅನುಮಾನ ಅನೇಕರಿಗಿರುತ್ತದೆ. ಆದರೆ, ಕ್ರೆಡಿಟ್‌ ರೇಟಿಂಗ್‌ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದು ಆರ್‌.ಬಿ.ಐ. ಸ್ಪಷ್ಟನೆ ನೀಡಿದೆ.

ಮಾರ್ಚ್‌ 1- ಮೇ 31, ಈ ಅವಧಿಯಲ್ಲಿ ಕಟ್ಟಬೇಕಿದ್ದ ಕಂತಿನ ಮೊತ್ತ ಒಂದುವೇಳೆ ಗ್ರಾಹಕರ ಖಾತೆಯಿಂದ ಕಟ್ಟಲ್ಪಟ್ಟಿದ್ದರೆ, ಮಾರ್ಚ್‌ ತಿಂಗಳ ಇ.ಎಂ.ಐ. ಮೊತ್ತವನ್ನು ಮರಳಿಸುವಂತೆ ಗ್ರಾಹಕರು ಬ್ಯಾಂಕುಗಳನ್ನು ಕೇಳಿಕೊಳ್ಳಬಹುದು. ಈ ಕುರಿತಾಗಿ, ತಮ್ಮ ಪಾಲಿಸಿಗಳ ಆಧಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ, ಬ್ಯಾಂಕಿನವರಿಗೆ ಇರುತ್ತದೆ. ಎಸ್‌.ಬಿ.ಐ. ಮತ್ತು ಎಚ್‌.ಡಿ.ಎಫ್.ಸಿ. ಬ್ಯಾಂಕುಗಳು, ತಮ್ಮ ಗ್ರಾಹಕರ ಮಾರ್ಚ್‌ ತಿಂಗಳ ಕಂತು ಕಡಿತಗೊಂಡಿದ್ದರೆ, ಅದನ್ನು ಮರಳಿಸುವುದಾಗಿ ಹೇಳಿವೆ.­

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹಳೇ ವೈಷಮ್ಯಕ್ಕೆ ಮೂವರು ಬಲಿ

ಹಳೇ ವೈಷಮ್ಯಕ್ಕೆ ಮೂವರು ಬಲಿ

ಯಾದಗಿರಿ ಜಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 9 ಜನ ಗುಣಮುಖ

ಯಾದಗಿರಿ ಜಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 9 ಜನ ಗುಣಮುಖ

ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

speed-inter-net

ಜಗತ್ತಿನ ಅತೀ ವೇಗದ ಇಂಟರ್ ನೆಟ್ ಡೇಟಾ ದಾಖಲೆ: ಸೆಕೆಂಡ್ ನಲ್ಲಿ ಸಾವಿರ ಸಿನಿಮಾ ಡೌನ್ ಲೋಡ್ !

ಪಾಕಿಸ್ತಾನದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಎಷ್ಟಾಗಿದೆ ಗೊತ್ತಾ?

ಪಾಕಿಸ್ತಾನದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಎಷ್ಟಾಗಿದೆ ಗೊತ್ತಾ?

ಜೂನ್ 1ರಿಂದ ಎಲ್ಲಾ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಕ್ಕೆ ಅವಕಾಶ: ಕೋಟ ಶ್ರೀನಿವಾಸ ಪೂಜಾರಿ

ಜೂನ್ 1ರಿಂದ ಎಲ್ಲಾ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಕ್ಕೆ ಭಕ್ತರಿಗೆ ಅವಕಾಶ: ಕೋಟ

ಮೆಕ್ಸಿಕೋದಲ್ಲಿ 10 ಲಕ್ಷ ಉದ್ಯೋಗ ನಷ್ಟ

ಮೆಕ್ಸಿಕೋದಲ್ಲಿ 10 ಲಕ್ಷ ಉದ್ಯೋಗ ನಷ್ಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

reela reallla

ರೀಲಾ, ರಿಯಲ್ಲಾ?: ರಿಯಲ್‌ ಎಸ್ಟೇಟ್‌ ಸ್ಥಿತಿಗತಿ

tenta-banta

ತೆಂತಾ ಬಂತಾ?

score-yesht

ಸ್ಕೋರ್‌ ಎಷ್ಟಾಯ್ತು?

dablu s

ಸೂಪರ್‌ ಟ್ರೈಬರ್‌: ಲಾಕ್‌ಡೌನ್‌ ನಡುವೆಯೇ ರಿಲೀಸ್‌ ಆಯ್ತು ಕಾರು!

lat fan

ಮಡಚುವ ಫ್ಯಾನ್‌!

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

ಹಳೇ ವೈಷಮ್ಯಕ್ಕೆ ಮೂವರು ಬಲಿ

ಹಳೇ ವೈಷಮ್ಯಕ್ಕೆ ಮೂವರು ಬಲಿ

Dead-730

ಹಿಂಡಲಗಾ ಕಾರಾಗೃಹದಲ್ಲಿ ಖೈದಿ ಸಾವು

ಯಾದಗಿರಿ ಜಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 9 ಜನ ಗುಣಮುಖ

ಯಾದಗಿರಿ ಜಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 9 ಜನ ಗುಣಮುಖ

ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

speed-inter-net

ಜಗತ್ತಿನ ಅತೀ ವೇಗದ ಇಂಟರ್ ನೆಟ್ ಡೇಟಾ ದಾಖಲೆ: ಸೆಕೆಂಡ್ ನಲ್ಲಿ ಸಾವಿರ ಸಿನಿಮಾ ಡೌನ್ ಲೋಡ್ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.