ಮಧು ಹೀರಿ ಸೋಲಿಲ್ಲದ ಸರದಾರನಾದ ರಾಘವೇಂದ್ರ!

ಗೆದ್ದವರೆಲ್ಲಾ ಮತ ಲಕ್ಷಾಧೀಶರು!

Team Udayavani, May 24, 2019, 1:38 AM IST

Q-32

ಶಿವಮೊಗ್ಗ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿಜಯೋತ್ಸವ ಆಚರಿಸಿದರು.

ಶಿವಮೊಗ್ಗ: ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಗೆ ಹೊಡೆತ ನೀಡಲು ಮೈತ್ರಿ ಸರ್ಕಾರ ನಡೆಸಿದ ಪ್ರಯತ್ನ ನೀರಲ್ಲಿ ಹೋಮ ಮಾಡಿದಂತಾಗಿದೆ. ಉಪ ಚುನಾವಣೆಗಿಂತಲೂ ನಾಲ್ಕು ಪಟ್ಟು ಹೆಚ್ಚು ಮತ ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಸೋಲಿಲ್ಲದ ಸರದಾರನಾಗಿ ಹೊರಹೊಮ್ಮಿದ್ದಾರೆ.

ಈವರೆಗೂ ಸ್ಪರ್ಧಿಸಿರುವ 3 ಲೋಕಸಭೆ ಚುನಾವಣೆಯಲ್ಲೂ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡುವ ಜತೆಗೆ ಸೋಲಿಲ್ಲದ ಸರದಾರ ಬಂಗಾರಪ್ಪ ಅವರನ್ನು ಸೋಲಿಸುವ ಜತೆಗೆ, ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಅವರನ್ನೂ ಎರಡು ಬಾರಿ ಸೋಲಿಸುವ ಮೂಲಕ ಶಿವಮೊಗ್ಗ ಬಿಜೆಪಿ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಚುನಾವಣೆ ಘೋಷಣೆಯಾದ ನಂತರ ಮೊಟ್ಟ ಮೊದಲ ಮೈತ್ರಿ ಅಭ್ಯರ್ಥಿ ಘೋಷಿಸಿದ್ದು ಇದೇ ಕ್ಷೇತ್ರದಲ್ಲಿ. ಆದರೆ ಇದಕ್ಕೂ ಮೊದಲೇ ಕ್ಷೇತ್ರದಲ್ಲಿ ಸುತ್ತಾಟ ಆರಂಭಿಸಿದ್ದ ರಾಘವೇಂದ್ರ ಪ್ರಚಾರ ಆರಂಭಿಸಿದ್ದರು. ಮಾಜಿ ಮುಖ್ಯಮಂತ್ರಿಗಳ ಪುತ್ರರು ಮತ್ತೂಮ್ಮೆ ಮುಖಾಮುಖೀಯಾಗಿದ್ದರಿಂದ ಮಲೆನಾಡಿನ ಈ ಕ್ಷೇತ್ರ ರಾಜ್ಯದ ಗಮನ ಸೆಳೆದಿತ್ತು. ದಿನೇ ದಿನೇ ರಂಗೇರುತ್ತಿದ್ದ ಕಣದಲ್ಲಿ ಬಿಜೆಪಿಯ ವ್ಯವಸ್ಥಿತ ಪ್ರಚಾರ ಹಾಗೂ ರಾಜಕೀಯ ತಂತ್ರಗಾರಿಕೆ ಎದುರು ಮೈತ್ರಿ ಪಕ್ಷಗಳು ಮಕಾಡೆ ಮಲಗುವಂತಾಯಿತು. ಜೆಡಿಎಸ್‌ ಅಭ್ಯರ್ಥಿಗೆ ಮೊದಲು ಕಾಂಗ್ರೆಸ್‌ ಬೆಂಬಲ ಅಷ್ಟಾಗಿ ಸಿಗಲೇ ಇಲ್ಲ.

ಪ್ರಚಾರದಲ್ಲೂ ಸಹ ಕಾಂಗ್ರೆಸ್‌ನವರು ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ಮೈತ್ರಿ ಪಕ್ಷದ ಈ ಸಾಮರಸ್ಯದ ಕೊರತೆ ಬಿಜೆಪಿಗೆ ಪ್ಲಸ್‌ ಆಯಿತು. ಪ್ರಚಾರದ ವೇಳೆ ಮಧು ಬಂಗಾರಪ್ಪ ಇಂಪೋರ್ಟೆಡ್‌ ಅಭ್ಯರ್ಥಿ ಎಂಬುದು ಕ್ಷೇತ್ರದಲ್ಲಿ ಪ್ರತಿಧ್ವನಿಸಿದ್ದು, ಅಣ್ಣ-ತಮ್ಮನ ಮಧ್ಯದ ವೈಮನಸ್ಸು ಎಲ್ಲವೂ ಸಹ ಪ್ರಚಾರದ ವೇಳೆ ಜನರ ಮೇಲೆ ಪ್ರಭಾವ ಬೀರಿತು. ತಮ್ಮನ ಪರ ಗೀತಾ ಶಿವರಾಜ್‌ ಕುಮಾರ್‌ ಕ್ಷೇತ್ರದ ಹಲವೆಡೆ ಪ್ರಚಾರ ನಡೆಸಿದರೂ ಪ್ರಯೋಜನವಾಗಿಲ್ಲ.

ಈಡಿಗರ ಮತ ಸೆಳೆಯುವ ಲೆಕ್ಕಾಚಾರ ಸಹ ಉಲ್ಟಾ ಹೊಡೆದಿದ್ದು ಈಡಿಗರು ಬಿಜೆಪಿಗೇ ಜೈ ಎಂದಿದ್ದಾರೆ. ಟ್ರಬಲ್‌ ಶೂಟರ್‌ ಎಂದೇ ಕರೆಸಿಕೊಳ್ಳುವ ಡಿ.ಕೆ.ಶಿವಕುಮಾರ್‌ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ನಂತರ ಚಿತ್ರಣ ಬದಲಾಯ್ತು ಎಂದೇ ಹೇಳಲಾಗಿತ್ತು. ಇದಕ್ಕೆ ಪ್ರತಿತಂತ್ರವಾಗಿ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್‌ ಶಾ ಅವರ ರೋಡ್‌ ಶೋ ನಡೆಸಿ ಮೈತ್ರಿ ಪಕ್ಷಕ್ಕೆ ಸರಿಯಾದ ಏಟು ನೀಡಿತ್ತು. ಇದಲ್ಲದೆ ಕ್ಷೇತ್ರದಲ್ಲಿರುವ ಪ್ರಧಾನಿ ಮೋದಿ ಅಲೆ, ಯಡಿಯೂರಪ್ಪನವರ ಹವಾ ಎದುರು ಮೈತ್ರಿ ಪಕ್ಷ ಮಂಡಿಯೂರುವಂತಾಗಿದೆ. ಮತ ಎಣಿಕೆಯ ಆರಂಭದಿಂದಲೂ ಲೀಡ್‌ ಕಾಯ್ದುಕೊಂಡ ಬಿ.ವೈ. ರಾಘವೇಂದ್ರ ಕೊನೆಗೂ ಮತ್ತೂಮ್ಮೆ ಗೆಲುವಿನ ನಗೆ ಬೀರಿದ್ದಾರೆ.

ಗೆಲುವಿಗೆ 3 ಕಾರಣ
1. ಕ್ಷೇತ್ರದಾದ್ಯಂತ ಪ್ರಧಾನಿ ಮೋದಿ ಅಲೆ. ಅಮಿತ್‌ ಶಾ ನಡೆಸಿದ ರೋಡ್‌ ಶೋ
2. ಕಾರ್ಯಕರ್ತರ ಮನೆ ಮನೆ ಪ್ರಚಾರ, ಬಲಿಷ್ಠ ಸಂಘಟನೆ
3. ರಾಷ್ಟ್ರೀಯತೆ ವಿಚಾರ ಪ್ರಸ್ತಾಪ, ಸಹೋದರರ ಜಗಳದ ಲಾಭ

ಸೋಲಿಗೆ 3 ಕಾರಣ
1. ಯುವ ಮತದಾರರ ನಿರ್ಲಕ್ಷ, ವ್ಯವಸ್ಥಿತ ಪ್ರಚಾರ ಮಾಡದಿರುವುದು
2. ಸ್ಥಳೀಯ ನಾಯಕತ್ವ ಕೊರತೆ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಕಡೆಗಣಿಸಿದ್ದು
3. ಮೈತ್ರಿ ಸರ್ಕಾರದ ಮೇಲಿನ ಸಿಟ್ಟು, ಸಹೋದರರ ಕೌಟುಂಬಿಕ ಕಿತ್ತಾಟ

ವಿಜೇತರು ಬಿ.ವೈ. ರಾಘವೇಂದ್ರ
ಪಡೆದ ಮತ 7,29,872
ಎದುರಾಳಿ ಮಧು ಬಂಗಾರಪ್ಪ (ಜೆಡಿಎಸ್‌)
ಪಡೆದ ಮತ 5,06,512
ಗೆಲುವಿನ ಅಂತರ 2,23,360
ಕಳೆದ ಬಾರಿ ಗೆದ್ದವರು: ಬಿ.ವೈ. ರಾಘವೇಂದ್ರ (ಬಿಜೆಪಿ)

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.