BBMPಗೆ 600 ಕೋಟಿ ಹೆಚ್ಚುವರಿ ತೆರಿಗೆ

ಜುಲೈ ಅಂತ್ಯಕೆ 3065 ಕೋಟಿ ರೂ. ತೆರಿಗೆ ಸಂಗ್ರಹ | ಕಳೆದ ವರ್ಷ 2457 ಕೋಟಿ ರೂ. ಸಂಗ್ರಹ | ಒಟಿಎಸ್‌ ವಿಸರಣೆಗೆ ಸರ್ಕಾರಕ್ಕೆ ಮನವಿ

Team Udayavani, Aug 2, 2024, 4:18 PM IST

9-bbmp

ಬೆಂಗಳೂರು: ಬಿಬಿಎಂಪಿಗೆ ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಆಸ್ತಿ ತೆರಿಗೆ ಈ ವರ್ಷ 600 ಕೋಟಿ ರೂ. ಹೆಚ್ಚುವರಿ ಸಂಗ್ರಹವಾಗಿದೆ. ಸುದ್ದಿಗಾರರ ಜತೆ ಮಾತನಾಡಿದ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಕಳೆದ ವರ್ಷದ 31 ಜುಲೈಗೆ 2,457.30 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು.

ಈ ವರ್ಷ 3065.82 ಕೋಟಿ ರೂ. ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ 600 ಕೋಟಿ ರೂ. ಹೆಚ್ಚಳವಾಗಿದೆ. ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಆಸ್ತಿ ಮಾಲೀಕರಿಂದ 184 ಕೋಟಿ ರೂ. ಸಂಗ್ರಹವಾಗಿದೆ ಎಂದು ವಿವರಿಸಿದ್ದಾರೆ.

ಬಾಕಿದಾರರ ಸಂಖ್ಯೆ 2.80 ಲಕ್ಷಕ್ಕೆ ಇಳಿಕೆ: ಈ ಹಿಂದೆ 3.95 ಲಕ್ಷ ಬಾಕಿದಾರರು ಬಿಬಿಎಂಪಿ ವ್ಯಾಪ್ತಿಯಲ್ಲಿದ್ದರು. ಇದರಲ್ಲೀಗ 1.14 ಲಕ್ಷ ಬಾಕಿದಾರರಿಂದ 184 ಕೋಟಿ ರೂ. ಆದಾಯ ಸಂಗ್ರಹ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಾಕಿದಾರರ ಸಂಖ್ಯೆ ಈಗ 2.80 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದರು.

ದಂಡ ವಸೂಲಿ ಹಲವು ಸ್ತರಗಳಲ್ಲಿ ಇದೆ: ಸರ್ಕಾರ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಸಂಬಂಧ ನೀಡಲಾಗಿದ್ದ “ಒಂದು ಬಾರಿ ಪರಿಹಾರ ಯೋಜನೆ'(ಒಟಿಎಸ್‌) ಅವಧಿ ಈಗಾಗಲೇ ಮುಗಿದಿದೆ. ಇನ್ನು ಮುಂದೆ ಯಾವುದೇ ರೀತಿ ಬಡ್ಡಿ ಮನ್ನಾವಾಗಲಿ ಜತೆಗೆ ರಿಯಾಯ್ತಿಯಾಗಲಿ ಇರುವುದಿಲ್ಲ. ದಂಡ ಹಾಕಿ ಆಸ್ತಿ ತೆರಿಗೆ ಸಂಗ್ರಹ ಮಾಡುವ ಕೆಲಸವನ್ನು ಪಾಲಿಕೆ ಕಂದಾಯ ಅಧಿಕಾರಿಗಳು ಮಾಡಲಿದ್ದಾರೆ. ದಂಡ ವಸೂಲಿ ಹಲವು ಸ್ತರಗಳಲ್ಲಿ ಇರಲಿದೆ. ಒಂದು ವರ್ಷಕ್ಕೆ ಶೇ.15 ದಂಡ ಹಾಕಬೇಕು ಎಂಬುವುದು ಬೈಲಾದಲ್ಲಿದೆ. ಅದಕ್ಕಿಂತಲೂ ಹೆಚ್ಚಿನ ವರ್ಷಗಳಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬೇರೆ ಬೇರೆ ರೀತಿಯಲ್ಲಿ ದಂಡ ಹಾಕುವುದು ನಿಯದಲ್ಲಿದೆ ಎಂದು ಮಾಹಿತಿ ನೀಡಿದರು.

ಜಪ್ತಿ ಕೂಡ ಮಾಡಬಹುದು: ಆಸ್ತಿ ತೆರಿಗೆ ವಿಚಾರದಲ್ಲಿ ಬೈಲಾಕ್ಕೆ ಹಲವು ನಿಯಮಗಳನ್ನು ಅಳವಡಿಕೆ ಮಾಡಲಾಗಿದೆ. ಕಾನೂನು ಮತ್ತು ನಿಯಮದಲ್ಲಿ ಹಲವು ಬದಲಾವಣೆ ತರಲಾಗಿದೆ. ಈ ಹಿಂದಿನ ಕಾನೂನಿಗಿಂತಲೂ ಕಠಿಣವಾಗಿದೆ. ಪಾಲಿಕೆ ಆಸ್ತಿ ತೆರಿಗೆ ವಸೂಲಿ ಸಂಬಂಧ ಮಾಲೀಕರಿಗೆ ನೋಟಿಸ್‌ ನೀಡಿದರೂ ತೆರಿಗೆ ಕಟ್ಟಿಲ್ಲ ಎಂದಾದರೆ ಬೇರೆ ವಿಧಾನಗಳಲ್ಲೂ ತೆರಿಗೆ ವಸೂಲಿ ಮಾಡಬಹುದಾಗಿದೆ. ಕರದಾತರ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಬಹುದಾಗಿದೆ. ಈ ಹಿಂದೆ ಆಸ್ತಿ ಹರಾಜಿಗೆ ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಆದರೆ, ಹೊಸ ಕಾಯ್ದೆಯಲ್ಲಿ ಇದಕ್ಕೆ ಅವಕಾಶ ನೀಡಲಾಗಿದೆ. ಹೊಸ ನಿಯಮಾವಳಿಗಳು ಆಸ್ತಿ ತೆರಿಗೆ ಸಂಗ್ರಹಕ್ಕೆ ಪೂರಕವಾಗಿದೆ ಎಂದು ವಿವರಿಸಿದರು.

ಸರ್ಕಾರ ನಿರ್ಧಾರ ಕೈಕೊಳ್ಳಬೇಕು: ಈಗಾಗಲೇ ಆಸ್ತಿ ತೆರಿಗೆ ಪಾವತಿ ಯೋಜನೆ ಅವಧಿಯನ್ನು ವಿಸ್ತಾರ ಮಾಡುವಂತೆ ಹಲವು ಸಂಘ ಸಂಸ್ಥೆಗಳು ಮನವಿ ಮಾಡಿವೆ. ಆ.15ರವರೆಗೂ ವಿಸ್ತರಣೆ ಮಾಡುವಂತೆ ಹೋಟೆಲ್‌ ಮಾಲೀಕರ ಸಂಘ, ಎಫ್ಕೆಸಿಸಿಐ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಕೋರಿವೆ. ಜು.31ರಂದು ಆಸ್ತಿ ತೆರಿಗೆಗೆ ಕೊನೆಯ ದಿನವಾಗಿತ್ತು. ಅಂತಿಮ ದಿನದಂದು ಮಳೆ, ಸಾಫ್ಟ್ವೇರ್‌ ಕೂಡ ಕೈ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ಕಂದಾಯ ಅಧಿಕಾರಿಗಳ ವರದಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಆಸ್ತಿ ತೆರಿಗೆ ಪಾವತಿ ಯೋಜನೆ ವಿಸ್ತರಣೆ ಮಾಡಬೇಕೇ? ಬೇಡವೇ? ಎಂಬುದನ್ನು ಸರ್ಕಾರ ನಿರ್ಧರಿಸಲಿದೆ ಎಂದು ಪಾಲಿಕೆ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಟಾಪ್ ನ್ಯೂಸ್

Ratan Tata: ರತನ್ ಟಾಟಾ ಅರೋಗ್ಯ ಸ್ಥಿತಿ ಗಂಭೀರ… ಐಸಿಯು ನಲ್ಲಿ ಚಿಕಿತ್ಸೆ: ವರದಿ

Ratan Tata: ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ… ಐಸಿಯು ನಲ್ಲಿ ಚಿಕಿತ್ಸೆ: ವರದಿ

BBK11: ಬಿಗ್‌ ಬಾಸ್‌ ಮನೆಯಲ್ಲಿ ದೆವ್ವಗಳ ಕಾಟ..  ಸ್ಪರ್ಧಿಗಳಿಗೆ ಶುರುವಾಯಿತು ಭೀತಿ

BBK11: ಬಿಗ್‌ ಬಾಸ್‌ ಮನೆಯಲ್ಲಿ ದೆವ್ವಗಳ ಕಾಟ.. ಸ್ಪರ್ಧಿಗಳಿಗೆ ಶುರುವಾಯಿತು ಭೀತಿ

Charmady: ಭಾರಿ ಮಳೆಗೆ ಚಾರ್ಮಾಡಿ ಘಾಟಿ 3ನೇ ತಿರುವಿನಲ್ಲಿ ಲಘು ಭೂ ಕುಸಿತ.. ಟ್ರಾಫಿಕ್ ಜಾಮ್

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿ 3ನೇ ತಿರುವಿನಲ್ಲಿ ಲಘು ಭೂ ಕುಸಿತ.. ಟ್ರಾಫಿಕ್ ಜಾಮ್

Bhool Bhulaiyaa 3 trailer: ʼಮಂಜುಲಿಕಾʼಗಳ ರಹಸ್ಯ ಬಯಲಿಗೆ ʼರೂಹ್‌ ಬಾಬಾʼನಾದ ಕಾರ್ತಿಕ್‌

Bhool Bhulaiyaa 3 trailer: ʼಮಂಜುಲಿಕಾʼಗಳ ರಹಸ್ಯ ಬಯಲಿಗೆ ʼರೂಹ್‌ ಬಾಬಾʼನಾದ ಕಾರ್ತಿಕ್‌

MUDA CASE: ಮರೆಮಾಚಲು ಜಾತಿಗಣತಿ ಉದ್ಭವ: ಶಾಸಕ ಕಂದಕೂರ

MUDA CASE: ಮರೆಮಾಚಲು ಜಾತಿಗಣತಿ ಉದ್ಭವ: ಶಾಸಕ ಕಂದಕೂರ

ಕಾಂಗ್ರೆಸ್ ನಲ್ಲೇ ಸಿದ್ದರಾಮಯ್ಯ ವಿರುದ್ಧ ತೆರೆಮರೆಯ ಚಟುವಟಿಕೆ ನಡೆಯುತ್ತಿದೆ: ಸಿ.ಟಿ. ರವಿ

ಕಾಂಗ್ರೆಸ್ ನಲ್ಲೇ ಸಿದ್ದರಾಮಯ್ಯ ವಿರುದ್ಧ ತೆರೆಮರೆಯ ಚಟುವಟಿಕೆ ನಡೆಯುತ್ತಿದೆ: ಸಿ.ಟಿ. ರವಿ

UK-Khandre

Forest: ಅರಣ್ಯ ಅತಿಕ್ರಮಣಕಾರರಿಗೆ ಹಕ್ಕುಪತ್ರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವ: ಸಚಿವ ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High Court: ವಕೀಲರ ವಾಕ್‌ ಸ್ವಾತಂತ್ರ್ಯ ನಿರ್ಬಂಧಿಸುವ ಅಧಿಕಾರ ಬಾರ್‌ ಕೌನ್ಸಿಲ್‌ಗೆ ಇಲ್ಲ

High Court: ವಕೀಲರ ವಾಕ್‌ ಸ್ವಾತಂತ್ರ್ಯ ನಿರ್ಬಂಧಿಸುವ ಅಧಿಕಾರ ಬಾರ್‌ ಕೌನ್ಸಿಲ್‌ಗೆ ಇಲ್ಲ

Arrested: ತ.ನಾಡಿನಿಂದ ಬಂದು ಲ್ಯಾಪ್‌ಟಾಪ್‌ ಕಳ್ಳತನ

Arrested: ತ.ನಾಡಿನಿಂದ ಬಂದು ಲ್ಯಾಪ್‌ಟಾಪ್‌ ಕಳ್ಳತನ

Bengaluru: ಹರಳು ಕೂರಿಸುವುದಾಗಿ 1 ಕೋಟಿ ರೂ. ಮೌಲ್ಯದ ಚಿನ್ನ ಕದ್ದ!

Bengaluru: ಹರಳು ಕೂರಿಸುವುದಾಗಿ 1 ಕೋಟಿ ರೂ. ಮೌಲ್ಯದ ಚಿನ್ನ ಕದ್ದ!

Theft: ಪಿಜಿಗಳ ಗುರಿಯಾಗಿಸಿ ಲ್ಯಾಪ್‌ಟಾಪ್‌, ಫೋನ್‌ ಕಳ್ಳತನ

Theft: ಪಿಜಿಗಳ ಗುರಿಯಾಗಿಸಿ ಲ್ಯಾಪ್‌ಟಾಪ್‌, ಫೋನ್‌ ಕಳ್ಳತನ

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ud

Bramavara: ಬಾರ್‌ನಲ್ಲಿ ಗಲಾಟೆ; ಪ್ರಕರಣ ದಾಖಲು

10(1)

Vitla: ಸಾಲೆತ್ತೂರು; ವಿದ್ಯುತ್‌ ಕಂಬಕ್ಕೆ ಕಾರು ಢಿಕ್ಕಿ, ಜಖಂ

Ratan Tata: ರತನ್ ಟಾಟಾ ಅರೋಗ್ಯ ಸ್ಥಿತಿ ಗಂಭೀರ… ಐಸಿಯು ನಲ್ಲಿ ಚಿಕಿತ್ಸೆ: ವರದಿ

Ratan Tata: ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ… ಐಸಿಯು ನಲ್ಲಿ ಚಿಕಿತ್ಸೆ: ವರದಿ

road-mishap-11

Bramavara: ರಿಕ್ಷಾ ಪಲ್ಟಿ: ಇಬ್ಬರಿಗೆ ಗಾಯ

death

Udupi: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಯುವಕ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.