ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಮೇಲೆ ಎಸಿಬಿ ದಾಳಿ


Team Udayavani, Jun 19, 2020, 5:05 AM IST

guru-raghavendra

ಬೆಂಗಳೂರು: ಗ್ರಾಹಕರ ಹಣವನ್ನು ಅಕ್ರಮ ವರ್ಗಾವಣೆ ಮತ್ತು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಬಸವನಗುಡಿಯಲ್ಲಿರುವ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮಿತದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಬ್ಯಾಂಕ್‌ ನ ವಿವಿಧ ಶಾಖೆ ಹಾಗೂ ಅಧ್ಯಕ್ಷರು, ಮಾಜಿ ಸಿಇಒ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು  ವಶಪಡಿಸಿಕೊಂಡಿದ್ದಾರೆ.

ಸಹಕಾರ ಬ್ಯಾಂಕ್‌ನ ಅಧ್ಯಕ್ಷರು ಮತ್ತು ಕೆಲವು ಸದಸ್ಯರು ಹಾಗೂ ಕಚೇರಿಯ ಸಿಬ್ಬಂದಿ ಬ್ಯಾಂಕಿಗೆ ಹೂಡಿಕೆ ಮಾಡಿರುವ ಗ್ರಾಹಕರ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಕೊಂಡು ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸಾರ್ವಜ ನಿಕರು ಎಸಿಬಿಗೆ ದೂರು ನೀಡಿದ್ದರು. ಈ ಮಧ್ಯೆ ಸಹಕಾರ ಬ್ಯಾಂಕ್‌ನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ರಿಜಿಸ್ಟ್ರಾರ್‌ ಸಹಕಾರ ಇಲಾಖೆಯವರ ವರದಿ ಹಾಗೂ ಆರ್‌ಬಿಐನ ಅಧಿಕಾರಿಗಳು ನಡೆಸಿರುವ ವಿಚಾರಣಾ ವರದಿಯಲ್ಲಿ ಬ್ಯಾಂಕ್‌ನಲ್ಲಿ ಕೆಲವು ಅವ್ಯವಹಾರ ನಡೆದಿರುವುದು ಕಂಡು ಬಂದಿತ್ತು.

ಬ್ಯಾಂಕ್‌ಗೆ ಹೂಡಿಕೆ ಮಾಡಿರುವ ಗ್ರಾಹಕರ ಹಣವನ್ನು ಬ್ಯಾಂಕಿನ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ  ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ಸುಮಾರು 1,400 ಕೋಟಿ ರೂ. ಅವ್ಯವಹಾರ ಮಾಡಿದ್ದಾರೆ. ಆರ್‌ಬಿಐ ನಿಯಮ  ಗಳಿಗೆ ವಿರುದ್ಧವಾಗಿ ಬ್ಯಾಂಕಿನ ಕೆಲವು ಅಧಿಕಾರಿಗಳು-ಸಿಬ್ಬಂದಿ ಕೃತಕ (ನಕಲಿ) ಠೇವಣಿಗಳನ್ನು  ಸೃಷ್ಟಿಸಿ 150 ಕೋಟಿ ರೂ. ಸಾಲವನ್ನು, 60 ಕಾಲ್ಪನಿಕ ಗ್ರಾಹಕರಿಗೆ ಮಂಜೂರು ಮಾಡಿದ್ದಾರೆ.

ಖಾತೆ ತೆರೆಯುವಾಗ ನೀಡಿದ ಬ್ರೌಷರ್‌ನಲ್ಲಿ ಎನ್‌ಪಿಎ ಶೇ.1 ಕ್ಕಿಂತ ಕಡಿಮೆ ಇದ್ದು, ನಿರಂತರವಾಗಿ ಶೇ.15 ರಿಂದ 16 ರಷ್ಟು ಎನ್‌ಪಿಎ ಇರುವುದಾಗಿ ತಿಳಿಸಿದ್ದಾರೆ. ಆದರೆ,  ಸಹಕಾರ ಸಂಘಗಳ ವರದಿಯಿಂದ ಬ್ಯಾಂಕ್‌ ನ ಎನ್‌ಪಿಎ ಶೇ.25ರಿಂದ30ರಷ್ಟು ಇರುವುದು ಕಂಡು ಬಂದಿದೆ ಎಂದು ಎಸಿಬಿ ತಿಳಿಸಿದೆ.

ಎಸಿಬಿ ದಾಳಿ: ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಶಾಖಾ ಕಚೇರಿ, ಕೇಂದ್ರ ಕಚೇರಿ, ಶಂಕರಪುರದಲ್ಲಿನ ಶ್ರೀಗುರು ಸಾರ್ವಭೌಮ ಸೌಹಾರ್ದ ಸಹಕಾರ ಸಂಘದ ಕಚೇರಿ, ಬ್ಯಾಂಕಿನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಚಿಕ್ಕಲ್ಲಸಂದ್ರದ ನಿವಾಸಿ ವಾಸುದೇವಮಯ್ಯ,  ಬ್ಯಾಂಕ್‌ನ ಅಧ್ಯಕ್ಷರಾದ ಡಾ ಕೆ.ರಾಮಕೃಷ್ಣ, ಅವರ ಬಸವನಗುಡಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಕೆಲವೊಂದು ದಾಖಲೆ ಗಳನ್ನು ವಶಪಡಿಸಿಕೊಂಡು ಪರಿಶೀಲಿಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.

ಟಾಪ್ ನ್ಯೂಸ್

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆ

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆ

ನಾಳೆ ಪೂರ್ಣ ಸೂರ್ಯಗ್ರಹಣ

2021ರ ಕೊನೆಯ ಗ್ರಹಣ: ನವೆಂಬರ್ 4ರಂದು ಪೂರ್ಣ ಸೂರ್ಯಗ್ರಹಣ

1-fdsfds

ಹೊಂಡಗುಂಡಿ ರಸ್ತೆ; ಆ್ಯಂಬುಲೆನ್ಸ್‌ನಲ್ಲಿ ವಿಚಿತ್ರ ಹೆರಿಗೆ !

ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯ

ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯ

ಕೊನೆಗೂ ಪಂದ್ಯ ಆರಂಭ: ಭಾರತ ತಂಡದಲ್ಲಿ 3 ಬದಲಾವಣೆ, ಕಿವೀಸ್ ಗೂ ಹೊಸ ನಾಯಕ

ಕೊನೆಗೂ ಪಂದ್ಯ ಆರಂಭ: ಭಾರತ ತಂಡದಲ್ಲಿ 3 ಬದಲಾವಣೆ, ಕಿವೀಸ್ ಗೂ ಹೊಸ ನಾಯಕ

ಸಣ್ಣ ವ್ಯವಹಾರಗಳಿಗೆ ಮೈಕ್ರೋಸಾಫ್ಟ್ ಟೀಮ್ಸ್ ಎಸೆನ್ಷಿಯಲ್ಸ್ ಪರಿಚಯ

ಸಣ್ಣ ವ್ಯವಹಾರಗಳಿಗೆ ಮೈಕ್ರೋಸಾಫ್ಟ್ ಟೀಮ್ಸ್ ಎಸೆನ್ಷಿಯಲ್ಸ್ ಪರಿಚಯ

3congress

ಬಿಜೆಪಿಗೆ ಪಂಚಾಯತ್ ವ್ಯವಸ್ಥೆಯಲ್ಲಿ ವಿಶ್ವಾಸ‌ ಇಲ್ಲ: ದೇಶಪಾಂಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

shivaram karanda building

ಶಿವರಾಮಕಾರಂತ ಬಡಾವಣೆ 300 ಕಟ್ಟಡ ಸಕ್ರಮ

cm bommayee

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವೆ

sadguru

ಈಶಾ ಫೌಂಡೇಶನ್‌ನಿಂದ ಯೋಗಕ್ಷೇಮ  ಕಾರ್ಯಕ್ರಮಕ್ಕೆ ಚಾಲನೆ

ಊಟ ಕೂಟ

ಡಿ.5ರಂದು ತುಳುಕೂಟದ ಹೊಸ ಅಕ್ಕಿ ಊಟ

credit card scam

ಕ್ರೆಡಿಟ್‌ ಕಾರ್ಡ್‌ ಸಾಲ ಕೊಡುವುದಾಗಿ ವಂಚನೆ

MUST WATCH

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

ಹೊಸ ಸೇರ್ಪಡೆ

ಶ್ರೀ ಗಂಧ ಅಕ್ರಮ

ಶ್ರೀಗಂಧ ಚೋರರ ಮೇಲೆ ಗುಂಡಿನ ದಾಳಿ..!

shivaram karanda building

ಶಿವರಾಮಕಾರಂತ ಬಡಾವಣೆ 300 ಕಟ್ಟಡ ಸಕ್ರಮ

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆ

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆ

4rain

ಕಾಫಿನಾಡಿನಲ್ಲಿ ಭಾರಿ ಮಳೆ

cm bommayee

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.