ಠಾಣೆಯಿಂದ ಪರಾರಿಯಾಗುವಾಗ ಸ್ಕೈವಾಕ್‌ನಿಂದ ಬಿದ್ದು ಆರೋಪಿ ಸಾವು

Team Udayavani, Dec 21, 2021, 11:19 AM IST

1-ssds

 ಕೆ.ಆರ್‌.ಪುರಂ: ಮಹಿಳೆಯ ಆತ್ಮಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿ ಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಸ್ಕೈವಾಕ್‌ನಿಂದ ಕೆಳಗೆ ಜಿಗಿದು ಸ್ಥಳದಲ್ಲೇ ಸಾವನ್ನಪಿರುವ ಘಟನೆ ಕೆ.ಆರ್‌.ಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಆರ್‌.ಪುರದ ವಿಜಿನಾಪುರ ನಿವಾಸಿ ಶಕ್ತಿವೇಲು (32) ಮೃತಪಟ್ಟ ಆರೋಪಿ. 7 ವರ್ಷದ ಹಿಂದೆ ಶಕ್ತಿವೇಲು ಸಂಗೀತಾ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದ. ಕೆಲ ತಿಂಗಳಿಂದ ಕೌಟುಂಬಿಕ ಕಲಹ ಉಂಟಾಗಿದ್ದು, ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಶಕ್ತಿವೇಲು ತನ್ನ ಪತ್ನಿಗೆ ಕಿರುಕುಳ ಕೊಡಲು ಪ್ರಾರಂಭಿಸಿದ್ದ. ಪತಿಯ ಕಿರುಕುಳ ತಾಳಲಾರದೇ ಸಂಗೀತಾ ಶನಿವಾರ ಡೆತ್‌ನೋಟ್‌ ಬರೆದಿಟ್ಟು ಮನೆಯ ಕೊಠಡಿಯಲ್ಲಿದ್ದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದರು. ಈ ಸಂಬಂಧ ಸಂಗೀತಾ ಪಾಲಕರು ತಮ್ಮ ಮಗಳ ಸಾವಿಗೆ ಆಕೆಯ ಪತಿ ಶಕ್ತಿವೇಲು ಕಾರಣ ಎಂದು ಆರೋಪಿಸಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಜತೆಗೆ ಪತಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಂಗೀತಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಳು. ಈ ಆಧಾರದ ಮೇಲೆ ಶಕ್ತಿವೇಲು ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡ ಕೆ.ಆರ್‌ .ಪುರಂ ಪೊಲೀಸರು ಭಾನುವಾರ ಸಂಜೆ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ರಾತ್ರಿಯಿಡಿ ಇದ್ದ ಶಕ್ತಿವೇಲುನನ್ನು ಸೋಮವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದರು.

ಘಟನೆ ನಡೆದದ್ದು ಹೇಗೆ?:

ಸೋಮವಾರ ಮುಂಜಾನೆ ಆರೋಪಿ ಶಕ್ತಿವೇಲು ಶೌಚಗೃಹಕ್ಕೆ ಹೋಗಬೇಕು ಎಂದು ಠಾಣೆಯಲ್ಲಿದ್ದ ಕಾನ್ಸ್‌ ಟೇಬಲ್‌ ಬಳಿ ಕೇಳಿಕೊಂಡಿದ್ದ. ಅದಕ್ಕೆ ಪೊಲೀಸ್‌ ಕಾನ್‌ಸ್ಟೆàಬಲ್‌ ಆತನನ್ನು ಶೌಚಗೃಹದ ಬಳಿ ಕರೆದೊಯ್ದು ಮತ್ತೆ ಕರೆತರುತ್ತಿ¨ªಾಗ, ಏಕಾಏಕಿ ಠಾಣೆಯಿಂದ ಹೊರಗೆ ಓಡಿಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಠಾಣೆಯಲ್ಲಿದ್ದ ಪೊಲೀಸ್‌ ಸಿಬ್ಬಂದಿ ದ್ವಿಚಕ್ರವಾಹನದಲ್ಲಿ ಆರೋಪಿಯನ್ನು ಬೆನ್ನಟ್ಟಿಕೊಂಡು ಹೋಗಿದ್ದರು. ಪೊಲೀಸರು ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಕಂಡು ಆತಂಕಗೊಂಡ ಆರೋಪಿ ಶಕ್ತಿವೇಲು, ಐಟಿಐ ಗೇಟ್‌ನ ಸ್ಕೆçವಾಕ್‌ ಮೇಲಿಂದ ಕೆಳಗೆ ಜಿಗಿದಿ¨ªಾನೆ. ಪರಿಣಾಮ ಸ್ಕೈವಾಕ್‌ನಿಂದ ಕೆಳಗಿನ ರಸ್ತೆಗೆ ಬಿದ್ದು ತಲೆ, ಕೈ, ಕಾಲುಗಳಿಗೆ ಗಂಭೀರವಾಗಿ ಗಾಯಗಳಾಗಿದ್ದವು. ಅದೇ ವೇಳೆ ಸ್ಕೆçವಾಕ್‌ ಕೆಳಗಿನ ರಸ್ತೆಯಲ್ಲಿ ಬಂದ ಕಾರು ಸಹ ಶಕ್ತಿವೇಲುಗೆ ತಾಗಿದೆ. ಬಳಿಕ ಶಕ್ತಿವೇಲು ಸ್ಥಳದಲ್ಲೇ ಮೃತಪಟ್ಟಿದ್ದ. ಕೆ.ಆರ್‌. ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಟಾಪ್ ನ್ಯೂಸ್

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: ಮದುವೆ ಆಗದೇ ದೈಹಿಕ ಸಂಪರ್ಕ ಬೆಳೆಸಿ ಮಹಿಳಾ ಟೆಕಿಗೆ ವಂಚನೆ

Fraud: ಮದುವೆ ಆಗದೇ ದೈಹಿಕ ಸಂಪರ್ಕ ಬೆಳೆಸಿ ಮಹಿಳಾ ಟೆಕಿಗೆ ವಂಚನೆ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

15

ವೃದ್ಧಾಶ್ರಮ ಸ್ವಚ್ಛತೆ ಬಂದು ಮಾಲೀಕರ ಮನೆಗೇ ಕನ್ನ

Bengaluru: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ; ನಾಲ್ಕು ವರ್ಷದ ಮಗು ಆಹುತಿ

Bengaluru: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ; ನಾಲ್ಕು ವರ್ಷದ ಮಗು ಆಹುತಿ

Fraud: ಫ್ಲ್ಯಾಟ್‌ ಖರೀದಿ ಹೆಸರಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಗೆ 60.8 ಲಕ್ಷ ವಂಚನೆ

Fraud: ಫ್ಲ್ಯಾಟ್‌ ಖರೀದಿ ಹೆಸರಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಗೆ 60.8 ಲಕ್ಷ ವಂಚನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.