ಲಾಕ್‌ಡೌನ್‌ ಸಡಿಲಿಕೆಯಲ್ಲಿ ಬೆಸ್ಕಾಂ ಬಿಸಿ

ಮನೆ ಕರೆಂಟ್‌ಬಿಲ್‌ನಲ್ಲಿ ಏರಿಕೆ ತಂದ ಶಾಕ್‌; ಬೆಸ್ಕಾಂ ಸಹಾಯವಾಣಿಗೆ ಕರೆಗಳ ಸುರಿಮಳೆ

Team Udayavani, May 9, 2020, 9:16 AM IST

ಲಾಕ್‌ಡೌನ್‌ ಸಡಿಲಿಕೆಯಲ್ಲಿ ಬೆಸ್ಕಾಂ ಬಿಸಿ

ಬೆಂಗಳೂರು: ಹೊಸಹಳ್ಳಿ ನಿವಾಸಿ ಮಹೇಶ್‌ ಲಾಕ್‌ಡೌನ್‌ ಘೋಷಣೆ ಯಾಗುತ್ತಿದ್ದಂತೆ ಊರಿಗೆ ಹೋಗಿದ್ದರು. ಸಡಿಲಿಕೆಯಾದ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳ ನಂತರ ಅಂದರೆ ಶುಕ್ರವಾರ ಬೆಂಗಳೂರಿಗೆ ಹಿಂತಿರುಗಿದರು. ಮನೆಯ ಬೀಗ ತೆಗೆಯುತ್ತಿದ್ದಂತೆ “ಶಾಕ್‌’ ಕಾದಿತ್ತು. ಆ ಶಾಕ್‌ ನೀಡಿದ್ದು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ)! ಸಾಮಾನ್ಯವಾಗಿ ಪ್ರತಿ ತಿಂಗಳು ಮಹೇಶ್‌ ಅವರ ಮನೆಯ ವಿದ್ಯುತ್‌ ಬಿಲ್‌ ಸರಾಸರಿ 400-500 ರೂ. ಬರುತ್ತಿತ್ತು. ಮೇನಲ್ಲಿ 850 ರೂ. ಬಿಲ್‌ ಬಂದಿದೆ. ಇದರಿಂದ ಕಂಗಾಲಾದ ಅವರು, ಬೆಸ್ಕಾಂ ಸಹಾಯವಾಣಿಗೆ ಫೋನಾಯಿಸಿದರು. ಆಗ, ಅಲ್ಲಿಂದ ಬಂದ ಉತ್ತರ- “ತಪ್ಪಾಗಿದೆ ಸರಿಪಡಿಸುತ್ತೇವೆ’. ಆಗ ಕೊಂಚ ನಿರಾಳವಾಯಿತು. ಆದರೆ, ಕಳೆದೆರಡು ಮೂರು ದಿನಗಳಲ್ಲಿ ಇಂತಹ ನೂರಾರು ಕರೆಗಳ ಸುರಿಮಳೆಯೇ ಬೆಸ್ಕಾಂ ಸಹಾಯವಾಣಿಗೆ ಬರುತ್ತಿದೆ.

ಗೃಹಬಳಕೆ ಗ್ರಾಹಕರು ಅಬ್ಬಬ್ಟಾ ಎಂದರೆ ತಿಂಗಳಿಗೆ 50-75 ಯೂನಿಟ್‌ ಉಪಯೋಗಿಸುತ್ತಾರೆ. ಎರಡೂ ತಿಂಗಳು ಸೇರಿಸಿದರೂ 100-150 ಯೂನಿಟ್‌ ಆಗುತ್ತದೆ. ವಿದ್ಯುತ್‌ ಬಿಲ್‌ ಈ ಲೆಕ್ಕವೂ ಮೀರಿದೆ. ಕೆಲವರಿಗೆ ಸಾವಿರ ರೂ.ವರೆಗೂ ಬಂದಿದೆ. ಈ ಪೈಕಿ ಹಲವರು ಆನ್‌ಲೈನ್‌ನಲ್ಲೇ ಬಿಲ್‌ ಪಾವತಿ ಮಾಡಿದ್ದರೂ ಅದು ಕಡಿತಗೊಂಡಿಲ್ಲ. ಇದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.

ಬೆಸ್ಕಾಂ ಬಿಲ್‌ ನೀಡುವಾಗ ಬಳಕೆಯ ಸ್ಲ್ಯಾಬ್‌
ಆಧಾರದಲ್ಲಿ ವಿದ್ಯುತ್‌ ಶುಲ್ಕ ವಿಧಿಸುತ್ತದೆ. ವಿದ್ಯುತ್‌ ಬಳಕೆ ಆಧರಿಸಿ ಬರುವ ಯೂನಿಟ್‌ಗಳ ಆಧಾರದ ಮೇಲೆ ಈ ಸ್ಲ್ಯಾಬ್‌ ಹಾಗೂ ಅದರ ಶುಲ್ಕ ನಿಗದಿಪಡಿಸುತ್ತದೆ. ಉದಾಹರಣೆಗೆ ತಿಂಗಳಿಗೆ 30 ಯೂನಿಟ್‌ವರೆಗಿನ ಬಳಕೆಗೆ ಪ್ರತಿ ಯೂನಿಟ್‌ಗೆ 3.75 ರೂ. ಇದ್ದರೆ, 70 ಯೂನಿಟ್‌ವರೆಗಿನ ಬಳಕೆಗೆ ಪ್ರತಿ ಯುನಿಟ್‌ಗೆ 5.20 ರೂ., ನೂರು ಯೂನಿಟ್‌ವರೆಗಿನ ಬಳಕೆಗೆ ಪ್ರತಿ ಯೂನಿಟ್‌ಗೆ 6.75 ರೂ. ಮತ್ತು ನೂರು ಯೂನಿಟ್‌ ಮೇಲ್ಪಟ್ಟು ಪ್ರತಿ ಯೂನಿಟ್‌ಗೆ 7.80 ರೂ. ಇದೆ. ಆದರೆ, ಬೆಸ್ಕಾಂ ಸಿಬ್ಬಂದಿ ಮೀಟರ್‌ ರೀಡಿಂಗ್‌ ಸಂದರ್ಭದಲ್ಲಿ ಎರಡೂ ತಿಂಗಳು ಒಟ್ಟಾಗಿ ಬಿಲ್‌ ಮಾಡಲಾಗುತ್ತಿರುವುದು ಈ ಯಡವಟ್ಟಿಗೆ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಕೈಗಾರಿಕೆಗಳಿಗೂ ತಟ್ಟಿದ ಬಿಸಿ!
ಉದ್ದಿಮೆಗಳಿಗೆ ಸರ್ಕಾರ ವಿದ್ಯುತ್‌ ಬಿಲ್‌ ಪಾವತಿಯಲ್ಲಿ ರಿಯಾಯ್ತಿ ಘೋಷಿಸಿರುವುದಾಗಿ ಹೇಳಿಕೊಂಡಿದೆ. ಆದರೆ, ವಾಸ್ತವವಾಗಿ ಅದಕ್ಕೆ ತದ್ವಿರುದ್ಧವಾಗಿದ್ದು, ಬಳಕೆಯಾಗದಿದ್ದರೂ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹಲವುಪಟ್ಟು ಹೆಚ್ಚು ಬಿಲ್‌ ಬಂದಿದೆ ಎಂದು ಉದ್ಯಮಿಗಳು ಬೇಸರ ವ್ಯಕ್ತಪಡಿಸುತ್ತಾರೆ. ಲಾಕ್‌ಡೌನ್‌ ಅವಧಿಯಲ್ಲಿ ಉದ್ದಿಮೆಗಳು ಸಂಪೂರ್ಣ ಸ್ಥಗಿತ ಗೊಂಡಿದ್ದವು. ಹಾಗಾಗಿ, ಕನಿಷ್ಠ ಬಿಲ್‌ ಬರಬೇಕಿತ್ತು. ಆದರೆ, ಯಾವುದೇ ಬಾಕಿ ಇಲ್ಲದಿದ್ದರೂ ಹಿಂದೆಂದಿಗಿಂತ ಹೆಚ್ಚು ಬಿಲ್‌ ಬಂದಿದೆ. ಸಹಾಯವಾಣಿಗೆ ಕರೆ ಮಾಡಿದರೆ, ಸರಿಪಡಿಸುವ ಸಿದ್ಧ ಉತ್ತರ ಬರುತ್ತಿದೆ. ಇದು ನನ್ನೊಬ್ಬನ ಸಮಸ್ಯೆ ಅಲ್ಲ. ಹಲವಾರು ಉದ್ಯಮಿಗಳಿಗೆ ಈ ಬಿಸಿ ತಟ್ಟಿದೆ. ಮೊದಲೇ ನಷ್ಟದಿಂದ ಕಂಗೆಟ್ಟಿದ್ದೇವೆ. ಈ ಮಧ್ಯೆ ಇಂತಹ ಯಡವಟ್ಟುಗಳು ಮತ್ತಷ್ಟು ಕಿರಿಕಿರಿ ಉಂಟು ಮಾಡುತ್ತವೆ ಎಂದು ಪೀಣ್ಯ ಕೈಗಾರಿಕೆ ಪ್ರದೇಶದ ಉದ್ಯಮಿ ಉಮೇಶ್‌ ತಿಳಿಸಿದರು. “ನೂರಕ್ಕೆ ಒಂದು ಕಡೆ ಇಂತಹ ಪ್ರಕರಣಗಳನ್ನು ಕಾಣ ಬಹುದು. ಆದರೆ, ಮಾನವಸಹಜ ಲೋಪ. ಇದನ್ನು ಸರಿಪಡಿಸು ವುದಾಗಿಯೂ ಬೆಸ್ಕಾಂ ತಿಳಿಸಿದೆ. ಈ ಹಿಂದೆ ಕೂಡ ಹಲವು ಸಲ ಇಂತಹ ತಪ್ಪುಗಳು ಆಗಿದ್ದೂ ಇದೆ. ಹಾಗಾಗಿ, ಗಂಭೀರವಾಗಿ ಪರಿ ಗಣಿಸುವ ಅಗತ್ಯವಿಲ್ಲ’ ಎಂದು ಪೀಣ್ಯ ಕೈಗಾರಿಕಾ ಸಂಘದ ಹಿರಿಯ ಉಪಾಧ್ಯಕ್ಷ ಸಿ. ಪ್ರಕಾಶ್‌ ಸ್ಪಷ್ಟಪಡಿಸಿದರು.

ಬಿಲ್‌ ನೀಡುವಲ್ಲಿ ಲೋಪವಾಗಿಲ : ಬೆಸ್ಕಾಂ ಸ್ಪಷ್ಟನೆ
ಗ್ರಾಹಕರು ಬಳಸಿದ ವಿದ್ಯುತ್‌ ಪ್ರಮಾಣಕ್ಕೆ ಅನುಗುಣವಾಗಿ ಬಿಲ್‌ ಮೊತ್ತ ಸೃಷ್ಟಿಸಿ ನೀಡಲಾಗಿದ್ದು, ಯಾವುದೇ ರೀತಿಯ ಲೋಪವಾಗಿಲ್ಲ. ಲಾಕ್‌ಡೌನ್‌ ಕಾರಣಕ್ಕೆ ಮಾರ್ಚ್‌ ತಿಂಗಳ ವಿದ್ಯುತ್‌ ಬಳಕೆ ಸಂಬಂಧ ಮೀಟರ್‌ ಮಾಪನಕ್ಕೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಸರಾಸರಿ ವಿದ್ಯುತ್‌ ಬಳಕೆ ಮೊತ್ತ ಪಾವತಿಸುವಂತೆ ಗ್ರಾಹಕರಲ್ಲಿ ಮನವಿ ಮಾಡಲಾಗಿತ್ತು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ತಿಳಿಸಿದ್ದಾರೆ. ಡಿಸೆಂಬರ್‌, ಜನವರಿ, ಫೆಬ್ರುವರಿ ತಿಂಗಳ ಮಾಸಿಕ ವಿದ್ಯುತ್‌ ಬಳಕೆ ಪ್ರಮಾಣ ಆಧರಿಸಿ ಮಾರ್ಚ್‌ ತಿಂಗಳಿಗೆ ಸರಾಸರಿ ವಿದ್ಯುತ್‌ ಬಿಲ್‌ ಮೊತ್ತ ಸೃಜಿಸಲಾಗಿತ್ತು. ಇದೀಗ ಮಾರ್ಚ್‌, ಏಪ್ರಿಲ್‌ ತಿಂಗಳ ವಿದ್ಯುತ್‌ ಬಳಕೆ ಸಂಬಂಧ ಮೀಟರ್‌ ಮಾಪನ ಮಾಡಿ ನಿಖರ ಮಾಹಿತಿ ಸಂಗ್ರಹಿಸಿ ಬಿಲ್‌ ನೀಡಲಾಗಿದೆ. ಲಾಕ್‌ಡೌನ್‌ನಿಂದಾಗಿ ಗೃಹ ಬಳಕೆ ವಿದ್ಯುತ್‌ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು. ಮಾರ್ಚ್‌ ತಿಂಗಳ 15 ದಿನ ಹಾಗೂ ಏಪ್ರಿಲ್‌ನ 15 ದಿನಗಳ ವಿದ್ಯುತ್‌ ಬಳಕೆ ಪ್ರಮಾಣಕ್ಕೆ ಸೂಕ್ತವಾದ ಸ್ಲ್ಯಾಬ್‌ಗಳಡಿ ಶುಲ್ಕ ವಿಧಿಸಲಾಗಿದೆ. ಯಾವ ಗ್ರಾಹಕರಿಗೂ ಬಳಕೆಗಿಂತ ಹೆಚ್ಚು ಮೊತ್ತ ವಿಧಿಸಿಲ್ಲ. ಈ ಬಗ್ಗೆ ಗೊಂದಲಗಳಿದ್ದರೆ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಹೇಳಿದರು.

ಟಾಪ್ ನ್ಯೂಸ್

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.