ಬಾಲ ಲೇಖಕ ಆಸ್ಟಿನ್ ಅಜಿತ್ ಕೃತಿ ಬಿಡುಗಡೆ
ವಿಶ್ವದ ಮೊದಲ ಕಿರಿಯ ಲೇಖಕನೆಂದು ಪ್ರಶಂಸೆಗೆ ಪಾತ್ರವಾಗಿದ್ದಾರೆ.
Team Udayavani, May 5, 2022, 9:45 AM IST
ಬೆಂಗಳೂರು: ವಿಶ್ವದ ಅತಿ ಕಿರಿಯ ಲೇಖಕ (ಫಿಕ್ಷನ್ ವಿಭಾಗ) ಎಂಬ ಹೆಗ್ಗಳಿಕೆಗೆ ಬೆಂಗಳೂರು ಮೂಲದ ಆಸ್ಟಿನ್ ಅಜಿತ್ ಪಾತ್ರವಾಗಿದ್ದಾರೆ. ಎಂಟು ವರ್ಷ ವಯಸ್ಸಿನ ಬಾಲಕ ಆಸ್ಟಿನ್ ಅಜಿತ್ ರಚಿಸಿರುವ “ಗ್ರಾಂಡ್ಮ ಆ್ಯಂಡ್ ಆಸ್ಟಿನ್ಸ್ ಪ್ಲಾಂಟ್ ಕಿಂಗ್ಡಮ್’ (ಅಜ್ಜಿ ಮತ್ತು ಆಸ್ಟಿನ್ ಸಸ್ಯ ಸಾಮ್ರಾಜ್ಯ) ಎಂಬ 64 ಪುಟಗಳ ಕಾಲ್ಪನಿಕ ಕಥೆಯ ಇಂಗ್ಲಿಷ್ ಕೃತಿ ಕಾರ್ಮಿಕರ ದಿನಾಚರಣೆಯಂದು ಬಿಡುಗಡೆಯಾಯಿತು.
ಇದೇ ವೇಳೆ ಮಾತನಾಡಿದ ಆಸ್ಟಿನ್ ಅಜಿತ್, ಕಳೆದ ವರ್ಷ ಬೇಸಿಗೆ ಸಮಯದಲ್ಲಿ ಅಜ್ಜಿಯ ಮನೆಗೆ ಹೋದಾಗ, ದುರಾದೃಷ್ಟವಶಾತ್ ಕೊರೊನಾದಿಂದ ಅಲ್ಲಿಯೇ ಉಳಿದುಕೊಳ್ಳಬೇಕಾಯಿತು. ಆಗ ಆ ಸಮಯವನ್ನು ಸದುಪಯೋಗಪಡಿಸಿಕೊಂಡು ಕೃಷಿ, ಪ್ರಕೃತಿ ಮತ್ತು ಸಸ್ಯ ಸಾಮ್ರಾಜ್ಯದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದೆ. ಅದೆಲ್ಲದರ ಪ್ರೇರಣೆಯಿಂದ ಈ ಪುಸ್ತಕ ಬರೆಯಲು ಸಾಧ್ಯವಾಯಿತು ಎಂದರು.
ಈ ಹಿಂದೆ ಉತ್ತರ ಪ್ರದೇಶದ ಗಾಜಿಯಾಬಾದ್ನ ಅಭಿಯುಜಿತ ಗುಪ್ತಾ ನಾನ್ ಫಿಕ್ಷನ್ ವಿಭಾಗದಲ್ಲಿ ಕಥೆಯನ್ನು ಬರೆದು ದಾಖಲೆ ನಿರ್ಮಿಸಿದ್ದರು. ಈಗ ಆಸ್ಟಿನ್ ಅಜಿತ್ ಫಿಕ್ಷನ್ (ಕಾಲ್ಪನಿಕ) ವಿಭಾಗದಲ್ಲಿ ಬರೆದಿದ್ದು, ವಿಶ್ವದ ಮೊದಲ ಕಿರಿಯ ಲೇಖಕನೆಂದು ಪ್ರಶಂಸೆಗೆ ಪಾತ್ರವಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ