ಕೋವಿಡ್‌ 19 ಹೊಡೆತ; ಅಧಿಕಾರಿಗಳ ಭೇಟಿಗೂ ಅಂಕುಶ


Team Udayavani, Jul 5, 2020, 5:49 AM IST

corona-hodeta

ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಪ್ರಥಮ ದರ್ಜೆ ಕಾಲೇಜು, ಕಾನೂನು, ಬಿ.ಇಡಿ ಹಾಗೂ ಚಿತ್ರಕಲೆ ಕಾಲೇಜುಗಳು ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಇನ್ನು ಮುಂದೆ ಸುಲಭವಾಗಿ ಮೇಲಧಿಕಾರಿಗಳನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ತಮ್ಮ ಸಮಸ್ಯೆಗಳನ್ನು ಮೇಲಧಿಕಾರಿಗಳಿಗೆ ತಿಳಿಸಲು ಆಗಾಗ್ಗೆ ಕೇಂದ್ರ ಕಚೇರಿಗೆ ಬರುತ್ತಿರುತ್ತಾರೆ. ಕೋವಿಡ್‌ 19 ವೈರಸ್‌ ವ್ಯಾಪಕರವಾಗಿ ಹರಡುತ್ತಿರುವುದರಿಂದ ಇನ್ನು  ಮುಂದೆ ಕೇಂದ್ರ ಕಚೇರಿಗೆ ಬರಕೂಡದು ಮತ್ತು ಏನೇ ಸಮಸ್ಯೆಯಿದ್ದರೂ ಮೈತ್ರಿ ಸಹಾಯವಾಣಿಗೆ ತಿಳಿಸಬೇಕು ಎಂದು ತಾಂತ್ರಿಕ ಮತ್ತು ಕಾಲೇಜು ಶಿಕ್ಷಣ ಇಲಾಖೆ ಫ‌ರ್ಮಾನು ಹೊರಡಿಸಿದೆ.

ತಾಂತ್ರಿಕ ಹಾಗೂ ಕಾಲೇಜು ಶಿಕ್ಷಣ ಇಲಾಖೆ  ಕಚೇರಿ ಮತ್ತು ಕಾಲೇಜುಗಳಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ನೌಕರರು ಪೂರ್ವಾನುಮತಿ ಇಲ್ಲದೇ ಅಧಿಕಾರಿಗಳನ್ನು ಭೇಟಿ ಮಾಡುವಂತಿಲ್ಲ. ತುರ್ತು ಸಂದರ್ಭಗಳಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಲೇ ಬೇಕೆಂದಿದ್ದರೆ, ಕಾಲೇಜು  ಅಥವಾ ಕಚೇರಿ ಮುಖ್ಯಸ್ಥರಿಂದ ಅನುಮತಿ ಪತ್ರದ ಜತೆಗೆ ರಜೆ ಪಡೆದುಕೊಳ್ಳಬೇಕು. ಮುಖ್ಯಸ್ಥರ ಅನುಮತಿ ಪತ್ರ ಹಾಗೂ ರಜೆ ಪಡೆಯದೇ ಇದ್ದರೆ ಮೇಲಧಿಕಾರಿಗಳ ಭೇಟಿ ಸಾಧ್ಯವಿಲ್ಲ ಎಂದು ಇಲಾಖೆ ಸ್ಪಷ್ಟ ಸೂಚನೆ ಹೊಡಿಸಿದೆ.

ಕೋವಿಡ್‌ 19 ವ್ಯಾಪಕವಾಗಿ ಹರಡುತ್ತಿರುವ ಈ  ಸಂದರ್ಭದಲ್ಲಿ ಬೋಧಕ, ಬೋಧಕತೇರ ಸಿಬ್ಬಂದಿ ತಮ್ಮ ಕೆಲಸಕ್ಕಾಗಿ ಕೇಂದ್ರ ಕಚೇರಿಗೆ ಭೇಟಿ ನೀಡುತ್ತಿರುವುದು ಕಂಡು ಬಂದಿದೆ. ಇಲಾಖೆ ಸಿಬ್ಬಂದಿ ತನ್ನ ಸಮಸ್ಯೆ ಹೇಳಿಕೊಳ್ಳಲು  ಈಗಾಗಲೇ ಸಹಾಯವಾಣಿ ಮತ್ತು ಇ-ಮೇಲ್‌ ನೀಡಲಾಗಿದೆ. ಇದಾಗಿಯೂ ನೇರವಾಗಿ ಕಚೇರಿಗೆ ಬರುತ್ತಿದ್ದಾರೆ. ಇಂತಹ ಸಂದಿಗಟಛಿ ಪರಿಸ್ಥಿತಿಯಲ್ಲಿ ಕಚೇರಿಗೆ ಬರುವುದನ್ನು ತಪ್ಪಿಸಲು ಇಲಾಖೆಯಿಂದ ಈ ಸೂಚನೆ ನೀಡಲಾಗಿದೆ ಎಂದು  ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಾಜ್ಯದ ತಾಂತ್ರಿಕ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಎಲ್ಲ ಜಂಟಿ ನಿರ್ದೇಶಕರು, ಸರ್ಕಾರಿ, ಅನುದಾನಿತ ಪ್ರಥಮದರ್ಜೆ ಕಾಲೇಜು, ಕಾನೂನು, ಬಿ.ಇಡಿ ಹಾಗೂ ಚಿತ್ರಕಲೆ ಕಾಲೇಜುಗಳ ಪ್ರಾಂಶುಪಾಲರು ಈ ಸಂಬಂಧ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ತುರ್ತು ಕಾರಣ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಕೇಂದ್ರ ಕಚೇರಿಗೆ ಬೋಧಕ, ಬೋಧಕೇತರ ಸಿಬ್ಬಂದಿ ಅಥವಾ ಅಧಿಕಾರಿಯನ್ನು ಕಳುಹಿಸಬಾರದು. ಎಲ್ಲಾ  ಸಮಸ್ಯೆಗಳನ್ನು ಮೈತ್ರಿ ಸಹಾಯವಾಣಿ ಮೂಲಕವೇ ನೀಡಬೇಕು. ಸಹಾಯವಾಣಿಯಲ್ಲಿ ಹೇಳಿಕೊಳ್ಳಲು ಸಾಧ್ಯವಾಗದೇ ಇರುವುದನ್ನು ಇ-ಮೇಲ್‌ ಮೂಲಕ ಕಳುಹಿಸಲು ಅವಕಾಶ  ನೀಡಲಾಗಿದೆ. ಹೀಗಾಗಿ ಕೇಂದ್ರ ಕಚೇರಿಗೆ ಸಿಬ್ಬಂದಿ ಅಥವಾ ಅಧಿಕಾರಿ ಪದೇ ಪದೇ ಬರುವುದನ್ನು ತಡೆಯಬೇಕು ಎಂದು ಇಲಾಖೆಯಿಂದ ಖಡಕ್‌ ನಿರ್ದೇಶನ ನೀಡಲಾಗಿದೆ.

ಮಧ್ಯಾಹ್ನ 3ರಿಂದ 5.30ರವರೆಗೆ ಅವಕಾಶ: ಕೋವಿಡ್‌ 19 ಹರಡುವಿಕೆ ಹಿನ್ನೆಲೆಯಲ್ಲಿ ಇಲಾಖೆಯ ಎಲ್ಲಾ ಅಧಿಕಾರಿ ಹಾಗೂ ನೌಕರರು ತಮ್ಮ ಯಾವುದೇ ಸಮಸ್ಯೆಗಳಿದ್ದರೂ ಸಹಾಯ ವಾಣಿ ಅಥವಾ ಇ-ಮೇಲ್‌ಗೆ ಕಳುಹಿಸಬೇಕು. ಹಾಗೆಯೇ  ಕೇಂದ್ರ ಕಚೇರಿಯಲ್ಲಿ ಸಂದರ್ಶಕರಿಗೆ ನಿಗದಿಪಡಿಸಲಾಗಿರುವ ಸಮಯ ಮಧ್ಯಾಹ್ನ 3ರಿಂದ 5.30ರ ವರಗೆ ಮಾತ್ರ ಅಧಿಕಾರಿಗಳನ್ನು ಭೇಟಿ ಮಾಡಲು ಸಾಧ್ಯ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಾಂತ್ರಿಕ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

* ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

ಚಳಿ ಮುಗಿಯುವವರೆಗೆ ಎಚ್ಚರ ಅಗತ್ಯ: ತಜ್ಞ ವೈದ್ಯರ ಸಲಹೆ

ಚಳಿ ಮುಗಿಯುವವರೆಗೆ ಎಚ್ಚರ ಅಗತ್ಯ: ತಜ್ಞ ವೈದ್ಯರ ಸಲಹೆ

HOSAMANI1

ಕುಸಿದಿದ್ದ ನೇತಾಜಿಯ ಕೈಹಿಡಿದಿದ್ದೇ ಕರುನಾಡು!

ಅತ್ತಾವರದ ಯಲ್ಲಪ್ಪ, ನೇತಾಜಿ ಸೇನೆಯ ವಿತ್ತ ಮಂತ್ರಿ

ಅತ್ತಾವರದ ಯಲ್ಲಪ್ಪ, ನೇತಾಜಿ ಸೇನೆಯ ವಿತ್ತ ಮಂತ್ರಿ

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಸಿಂಧು-ಮಾಳವಿಕಾ ಫೈನಲ್‌ ಹಣಾಹಣಿ

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಸಿಂಧು-ಮಾಳವಿಕಾ ಫೈನಲ್‌ ಹಣಾಹಣಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ: ವೃಥಾ ವಿವಾದ ಸೃಷ್ಟಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ: ವೃಥಾ ವಿವಾದ ಸೃಷ್ಟಿ

ಐಪಿಎಲ್‌ ಹರಾಜಿಗೆ 1,214 ಆಟಗಾರರು

ಐಪಿಎಲ್‌ ಹರಾಜಿಗೆ 1,214 ಆಟಗಾರರು

ದ.ಕ.: ಹೋಂ ಐಸೋಲೇಶನ್‌ನಲ್ಲಿ ಇರುವವರಿಗೆ ಔಷಧ ಕಿಟ್‌: 5 ಸಾವಿರ ಕಿಟ್‌ ವಿತರಿಸಲು ಕ್ರಮ

ದ.ಕ.: ಹೋಂ ಐಸೋಲೇಶನ್‌ನಲ್ಲಿ ಇರುವವರಿಗೆ ಔಷಧ ಕಿಟ್‌: 5 ಸಾವಿರ ಕಿಟ್‌ ವಿತರಿಸಲು ಕ್ರಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ ಇಂದು 42,470 ಕೋವಿಡ್ ಪ್ರಕರಣ ಪತ್ತೆ : 26 ಮಂದಿ ಸಾವು

ರಾಜ್ಯದಲ್ಲಿ ಇಂದು 42,470 ಕೋವಿಡ್ ಪ್ರಕರಣ ಪತ್ತೆ : 26 ಮಂದಿ ಸಾವು

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳ ಬಂಧನ

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ 2 ಕಾನ್‌ಸ್ಟೇಬಲ್‌ಗಳು ಪರಪ್ಪನ ಅಗ್ರಹಾರದಲ್ಲಿ ಬಂಧಿ

ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆಯ ಸಹೋದರನ ಅಪಹರಣ : ಆರು ಮಂದಿ ಬಂಧನ

ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆಯ ಸಹೋದರನ ಅಪಹರಣ : ಭಗ್ನ ಪ್ರೇಮಿ ಸೇರಿ ಆರು ಮಂದಿ ಬಂಧನ

ಕೋವಿಡ್ ಟೆಸ್ಟ್‌ ವರದಿ ಯಾವಾಗ ಬರುತ್ತೆ?

ಕೋವಿಡ್ ಟೆಸ್ಟ್‌ ವರದಿ ಯಾವಾಗ ಬರುತ್ತೆ?

ಹುಟ್ಟುಹಬ್ಬದ ದಿನವೇ ಯುವತಿ ಸಾವು

ಹುಟ್ಟುಹಬ್ಬದ ದಿನವೇ ಯುವತಿ ಸಾವು

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ಚಳಿ ಮುಗಿಯುವವರೆಗೆ ಎಚ್ಚರ ಅಗತ್ಯ: ತಜ್ಞ ವೈದ್ಯರ ಸಲಹೆ

ಚಳಿ ಮುಗಿಯುವವರೆಗೆ ಎಚ್ಚರ ಅಗತ್ಯ: ತಜ್ಞ ವೈದ್ಯರ ಸಲಹೆ

HOSAMANI1

ಕುಸಿದಿದ್ದ ನೇತಾಜಿಯ ಕೈಹಿಡಿದಿದ್ದೇ ಕರುನಾಡು!

ಅತ್ತಾವರದ ಯಲ್ಲಪ್ಪ, ನೇತಾಜಿ ಸೇನೆಯ ವಿತ್ತ ಮಂತ್ರಿ

ಅತ್ತಾವರದ ಯಲ್ಲಪ್ಪ, ನೇತಾಜಿ ಸೇನೆಯ ವಿತ್ತ ಮಂತ್ರಿ

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಸಿಂಧು-ಮಾಳವಿಕಾ ಫೈನಲ್‌ ಹಣಾಹಣಿ

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಸಿಂಧು-ಮಾಳವಿಕಾ ಫೈನಲ್‌ ಹಣಾಹಣಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ: ವೃಥಾ ವಿವಾದ ಸೃಷ್ಟಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ: ವೃಥಾ ವಿವಾದ ಸೃಷ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.