Devanahalli: ಕೈಕೊಟ್ಟ ಮಳೆ: ಮೊಳಕೆಯಲ್ಲೇ ಒಣಗುತ್ತಿದೆ ರಾಗಿ
ಮಳೆ ಇಲ್ಲದಿದ್ದಕ್ಕೆ ಮೇವಿಗೂ ಸಂಕಷ್ಟ, ಕಂಗಲಾಗುತ್ತಿರುವ ರೈತರು ; ಮೂರು ವಾರದಿಂದ ಬಾರದ ಮಳೆ
Team Udayavani, Sep 20, 2024, 3:45 PM IST
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಎರಡು ಮೂರು ವಾರಗಳಿಂದ ಮಳೆ ಬಾರದೇ ಇರುವುದರಿಂದ ಬಿತ್ತನೆ ಮಾಡಿರುವ ಬೆಳೆಗಳು ತೇವಾಂಶದ ಕೊರತೆಯಿಂದ ರಾಗಿ ಪೈರು ಭೂಮಿಯಲ್ಲಿ ಒಣಗುತ್ತಿರುವುದು. ಒಂದು ಕಡೆಯಾದರೆ ಬಿತ್ತನೆ ಮಾಡಬೇಕಾಗಿರುವ ರೈತರು ಮಳೆರಾಯನಿಗಾಗಿ ಕಾಯ್ದು ಕುಳಿತಿದ್ದು ರೈತರನ್ನು ಮತ್ತಷ್ಟು ಆತಂಕಕ್ಕೆ ದೂಡುವಂತೆ ಮಾಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4 ತಾಲೂಕುಗಳನ್ನು ಸಹ ರಾಗಿ ಪ್ರಮುಖ ಬೆಳೆಯಾಗಿದೆ. ಕಳೆದ ಎರಡು ಮೂರು ವಾರಗಳಿಂದ ಮಳೆ ಬರದೇ ಇರುವುದರಿಂದ ರೈತ ರಲ್ಲಿ ಸಾಕಷ್ಟು ಕಂಗಲಾಗುವಂತೆ ಮಾಡಿದೆ. ಕಳೆದ ಬಾರಿಯೂ ಸಹ ಮಳೆ ಇಲ್ಲದೇ ಬರಗಾಲದ ಪರಿಸ್ಥಿತಿಯನ್ನು ರೈತರು ಎದುರಿಸಿದ್ದರು.
ಬಿತ್ತನೆ ಸಂದರ್ಭದಲ್ಲಿ ಕೈ ಕೊಟ್ಟ ಮಳೆ: ಜಿಲ್ಲೆಯಲ್ಲಿ ಪ್ರಾರಂಭದಲ್ಲಿ ಮುಂಗಾರು ಮಳೆ ರೈತರಿಗೆ ಆಶಾಭಾವನೆ ಮೂಡಿಸಿತ್ತು. ಬಿತ್ತನೆ ಸಂದರ್ಭದಲ್ಲಿ ಕೈ ಕೊಟ್ಟಿತ್ತು.ಆ ಬಳಿಕ ಮಳೆ ಬಂದಿದ್ದರಿಂದ ಜಿಲ್ಲೆಯಲ್ಲಿ ಶೇಕಡ 105 ರಷ್ಟು ಬಿತ್ತನೆ ಕಾರ್ಯ ನಡೆದಿದೆ. ಹಳೆಯ ಕೊರತೆಯಿಂದಾಗಿ ಬೆಳೆಗಳು ಒಣಗುತ್ತಿದೆ. ರಾಗಿಯನ್ನು ಬಿತ್ತನೆ ಮಾಡಿರುವುದು ಒಂದು ಕಡೆಯಾದರೆ ಸಾಲ ಮಾಡಿ ಕೊಂಡು ಬೀಜ ಗೊಬ್ಬರ ಉಳುಮೆಗಾಗಿ ಹಣ ಹೊಂದಿಸಿಕೊಂಡು ರಾಗಿ ಬಿತ್ತನೆ ಮಾಡಲು ಕಾಯುತ್ತಿರುವ ರೈತರಲ್ಲಿ ಸಕಾಲಕ್ಕೆ ಮಳೆ ಬಾರದಿದ್ದರೆ ಬಿತ್ತನೆ ಮಾಡಲು ಆಗುತ್ತದೆಯೋ ಇಲ್ಲವೋ ಎಂಬ ಭಯದಲ್ಲಿ ಮಳೆಗಾಗಿ ಕಾಯುತ್ತಿದ್ದಾರೆ.
ಸಂಕಷ್ಟದಲ್ಲಿ ಜಾನುವಾರು: ಮಳೆರಾಯ ಸಂಪೂರ್ಣ ಮುನಿಸಿಕೊಂಡಿರುವುದರಿಂದ ಮುಂಗಾರು ಬೆಳೆಗಳು ಅಷ್ಟೇನೂ ಲಾಭದಾಯಕವಾಗಿಲ್ಲ. ಹಾಗೂ ಜಾನು ವಾರುಗಳ ಮೇವಿಗೂ ಸಹ ಸಂಕಷ್ಟ ಎದುರಾಗುತ್ತದೆ. ಕೆಲ ಭಾಗಗಳ ರೈತರು ಮಳೆ ಬರುತ್ತೆ ಎಂಬುವ ವಿಶ್ವಾಸದಿಂದ ಒಣ ಭೂಮಿಗೆ ರಾಗಿ ಬಿತ್ತನೆ ಮಾಡಿದ್ದು. ಮಳೆ ಕೈಕೊಟ್ಟಿರುವ ಕಾರಣ ರಾಗಿ ಪೈರು ಹುಟ್ಟಿಲ್ಲ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಬಯಲು ಸೀಮೆಯ ಪ್ರದೇಶವಾಗಿದ್ದು ಇಲ್ಲಿ ಯಾವುದೇ ನದಿ ನಾಲೆಗಳು ಇಲ್ಲ. ಕೇವಲ ರೈತರು ಮಳೆ ಆಶ್ರಿತವಾಗಿಯೇ ಕೃಷಿ ಚಟು ವಟಿಕೆಗಳನ್ನು ಮಾಡುತ್ತಿದ್ದಾರೆ. ಮಳೆ ಇಲ್ಲದೆ ರೈತರು ಸಂಕಷ್ಟದ ಸ್ಥಿತಿಗಳನ್ನು ಎದುರಿಸುವ ಪರಿಸ್ಥಿತಿ ಬಂದಿದೆ. ಜಿಲ್ಲೆಯ ಜಾನುವಾರು ಗಳ ಪ್ರಮುಖ ಆಹಾರ ಬೆಳೆಯದ ರಾಗಿ ಈ ಬಾರಿ ಕೈಕೊಡುವುದು ಗ್ಯಾರಂಟಿ ಎಂಬುದು ರೈತರಲ್ಲಿ ಆತಂಕ ಹುಟ್ಟಿಸಿದೆ.
ರಾಗಿ ಹುಲ್ಲು ಇಲ್ಲದೇ ತಪ್ಪಿಸುವ ಪರಿಸ್ಥಿತಿ: ಜಿಲ್ಲೆಯಲ್ಲಿ ಪ್ರಮುಖ ಬೆಳೆ ರಾಗಿಯಾಗಿದ್ದು ರೈತರ ಆದಾಯವೆಂದರೆ ಪಶುಸಂಗೋಪನೆ ಅಂದರೆ ಪಶು ಸಂಗೋಪನೆಗೆ ಪ್ರಮುಖವಾಗಿ ರಾಗಿ ಹುಲ್ಲು ಅಗತ್ಯ ವಾಗಿದೆ. ವರುಣನ ಮುನಿಸಿನಿಂದ ಈ ವರ್ಷವೂ ದನ ಕರುಗಳು ಕುರಿ ಮೇಕೆಗಳನ್ನು ವಹಿಸಲು ಇಲ್ಲದೇ ತಪ್ಪಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗ ಮಳೆ ಬಂದರೆ ರಾಗಿ ಚಿಗುರು ಒಡೆದು ಉತ್ತಮ ಬೆಳೆಯಾಗಿ ಬರಲು ಸಾಧ್ಯ ಇಲ್ಲದಿದ್ದರೆ ಮಳೆ ಇಲ್ಲದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗುತ್ತದೆ. ಮಳೆರಾಯನ ಕೃಪೆಗೂ ಕೃಪೆಯು ಮುಖ್ಯವಾಗಿದೆ. ಈ ಮೂಲಕ ಬೆಳೆಗಾರರು ಬದುಕು ಕಟ್ಟಿಕೊಳ್ಳುವ ಕೊಳ್ಳುವಂತಾಗಬೇಕಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ವಾಡಿಕೆ ಮಳೆ 115 ಮಿಲಿ ಮೀಟರ್ ಗೆ 167 ಮಿಲಿ ಮೀಟರ್ ಮಳೆ ಯಾಗಿತ್ತು. ಸುಮಾರು 55 ಮಿಲಿ ಮೀಟರ್ ಹೆಚ್ಚುವರಿ ಯಾಗಿತ್ತು. ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿ 94.5 ಮಿಲಿಮೀಟರ್ ವಾಡಿಕೆಮಳೆ ಯಾಗಬೇಕಾಗಿದ್ದು ಅದರಲ್ಲಿ ಶೇ.13ರಷ್ಟು ಮಳೆಯಾಗಿದೆ.
ಸುಮಾರು 82 ರಷ್ಟು ಹಳೆಯ ಕೊರತೆ ಕಾಣುತ್ತಿದೆ. ಮಳೆ ಇದೇ ರೀತಿ ಕೈಕೊಟ್ಟರೆ ಬೆಳೆಗಳು ಸರಿಯಾದ ರೀತಿ ಬರುವುದಿಲ್ಲ ಎಂದು ರೈತರು ಹೇಳುತ್ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಲ್ಲಿವರೆಗೂ ಶೇಕಡ 105 ರಷ್ಟು ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ 59,100 ಆಗಿ ಬಿತ್ತನೆ ಗುರಿ ಹೊಂದಿದ್ದು. ಅದರಲ್ಲಿ 62.230 ಬಿತ್ತನೆಯಾಗಿದೆ. ತೊಗರಿ 960 ಹೆಕ್ಟರ್, ಜೋಳ 4260 ಹೆಟ್ಟರ್ ಬಿತ್ತನೆಯಾಗಿದೆ.
ಆಗಸ್ಟ್ ತಿಂಗಳಿನಲ್ಲಿ ಉತ್ತಮ ಮಳೆ ಬಂದಿದ್ದರಿಂದ ಬಿತ್ತನೆ ಕಾರ್ಯ ಮಾಡ ಲಾಗಿತ್ತು. ಆದರೆ, ಸೆಪ್ಟಂಬರ್ ತಿಂಗಳಿನಲ್ಲಿ ಮಳೆ ಬಾರದೇ ಇರುವುದರಿಂದ ರಾಗಿ ಪೈರು ಒಣಗುತ್ತಿದೆ. ಇದೇ ರೀತಿ ಮುಂದುವರೆದರೆ ಜಾನುವಾರುಗಳಿಗೂ ಮುಂದಿನ ದಿನಗಳಲ್ಲಿ ಕೊರತೆ ಉಂಟಾಗಲಿದೆ. ●ರಾಮಪ್ಪ, ರೈತ
ಕಳೆದ ಎರಡು ಮೂರು ವಾರಗಳಿಂದ ಮಳೆಯ ಕೊರತೆ ಎದುರಾಗಿದೆ. ಇದೇ ರೀತಿ ಮುಂದುವರೆದರೆ ಉತ್ತಮ ಇಳುವರಿ ಪಡೆಯಲು ಕಷ್ಟವಾಗುತ್ತದೆ. ಕೃಷಿ ಇಲಾಖೆಯಿಂದ ಬಿತ್ತನೆ ಬೀಜಗಳನ್ನು ನೀಡಲಾಗಿದೆ. ರೈತರು ವರುಣನಿಗಾಗಿ ಕಾಯುತ್ತಿದ್ದು ಅಂದು ಕೊಂಡಂತೆ ಬೆಳೆ ಬಂದರೆ ರಾಗಿ ಉತ್ತಮವಾಗಿ ಬರಲಿದೆ. ●ಕಲಾವತಿ, ಜಂಟಿ ಕೃಷಿ ನಿರ್ದೇಶಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆ
-ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.