Flipkart Big Billion Day ಸೆ. 27 ರಿಂದ ಆರಂಭ
Team Udayavani, Sep 20, 2024, 4:01 PM IST
ಬೆಂಗಳೂರು: ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ತನ್ನ ಬಹುನಿರೀಕ್ಷಿತ ವಾರ್ಷಿಕ ಫ್ಲ್ಯಾಗ್ ಶಿಪ್ ಕಾರ್ಯಕ್ರಮವಾದ ಬಿಗ್ ಬಿಲಿಯನ್ ಡೇಸ್ (ಟಿಬಿಬಿಡಿ) 2024 ರ ದಿನಾಂಕಗಳನ್ನು ಘೋಷಣೆ ಮಾಡಿದೆ.
ಈ ಶಾಪಿಂಗ್ ಉತ್ಸವವು ಸೆಪ್ಟೆಂಬರ್ 27 ರಂದು ಆರಂಭವಾಗಲಿದ್ದು, ಅಕ್ಟೋಬರ್ 4 ರವರೆಗೆ ನಡೆಯಲಿದೆ. ಫ್ಲಿಪ್ ಕಾರ್ಟ್ ಪ್ಲಸ್ ಮತ್ತು ವಿಐಪಿ ಸದಸ್ಯತ್ವ ಹೊಂದಿರುವ ಗ್ರಾಹಕರು ಒಂದು ದಿನ ಮೊದಲೇ ಶಾಪಿಂಗ್ ಉತ್ಸವದ ಸೌಲಭ್ಯ ಪಡೆಯಬಹುದಾಗಿದೆ. ಇಡೀ ದೇಶ ಹಬ್ಬದ ಸೀಸನ್ ಗೆ ಸಜ್ಜುಗೊಳ್ಳುತ್ತಿರುವ ಈ ಸಂದರ್ಭದಲ್ಲಿ ದಿ ಬಿಗ್ ಬಿಲಿಯನ್ ಡೇಸ್ 2024 ಗ್ರಾಹಕರಿಗೆ ಅತ್ಯುತ್ತಮ ಡೀಲ್ ಗಳು ಮತ್ತು ಅತ್ಯಾಕರ್ಷಕವಾದ ಉತ್ಪನ್ನಗಳ ಆಯ್ಕೆಗಳನ್ನು ಒದಗಿಸಲಿದೆ.
ಹಬ್ಬದ ಸಿದ್ಧತೆಗಳ ಪೂರ್ವಭಾವಿಯ ಭಾಗವಾಗಿ ದೇಶಾದ್ಯಂತ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ 11 ಹೊಸ ಫುಲ್ ಫಿಲ್ಮೆಂಟ್ ಸೆಂಟರ್ ಗಳನ್ನು (FCs) ಗಳನ್ನು ಆರಂಭಿಸಿದೆ. ಈ ಮೂಲಕ ಫುಲ್ ಫಿಲ್ಮೆಂಟ್ ಸೆಂಟರ್ ಗಳ ಸಂಖ್ಯೆಯನ್ನು 83 ಕ್ಕೆ ಹೆಚ್ಚಿಸಿಕೊಂಡಿದೆ. ಈ ಹೊಸ ಸೆಂಟರ್ ಗಳ ಆರಂಭದಿಂದಾಗಿ ಫ್ಲಿಪ್ ಕಾರ್ಟ್ ನ ಸರಬರಾಜು ಸರಣಿಯ ಮೂಲಕ ಪ್ಯಾನ್ ಇಂಡಿಯಾದ್ಯಂತ ನೇರವಾಗಿ 1 ಲಕ್ಷಕ್ಕೂ ಅಧಿಕ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಬದ್ಧತೆಗೆ ಅನುಗುಣವಾಗಿ ಸಂಸ್ಥೆಯು ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಯತ್ತ ತನ್ನ ಗಮನವನ್ನು ಹರಿಸಿದೆ.
ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಮೊಬೈಲ್ ಸೇರಿದಂತೆ ಗ್ಯಾಜೆಟ್ ಗಳು, ಗೃಹಬಳಕೆ ಸಾಮಗ್ರಿಗಳು ಇತರ ದಿನಗಳಿಗಿಂತ ಬಹಳ ಕಡಿಮೆ ಬೆಲೆಯಲ್ಲಿ ದೊರಕುತ್ತವೆ.
ಇದರ ಜೊತೆಗೆ HDFC Bank ಕ್ರೆಡಿಟ್ ಡೆಬಿಟ್ ಕಾರ್ಡ್ ಮೂಲಕ ಖರೀದಿಗೆ ಶೇ.10 ರಷ್ಟು ರಿಯಾಯಿತಿ ದೊರಕಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JC Nagar Dussehra: ಜೆ.ಸಿ.ನಗರ ದಸರಾದಲ್ಲಿ ನೂರಾರು ಪಲ್ಲಕ್ಕಿಗಳ ಉತ್ಸವ
Threat: ನಿನ್ನ ಪತ್ನಿ ಸರಿಯಾಗಿ ಬಟ್ಟೆ ಹಾಕದಿದ್ದರೆ ಆ್ಯಸಿಡ್ ಎರಚುವೆ: ಕಿಡಿಗೇಡಿ ಬೆದರಿಕೆ
Arrested: ಈವೆಂಟ್ ಮ್ಯಾನೇಜ್‌ಮೆಂಟ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ
Missing Case: 20 ಲಕ್ಷ ರೂ. ಸಾಲ ಮಾಡಿ ಮನೆ ತೊರೆದ ಬ್ಯಾಂಕ್ ಉದ್ಯೋಗಿ
Bengaluru: ಫೋಟೋ ಕ್ಲಿಕ್ಕಿಸುವಾಗ ಅಡ್ಡ ಬಂದ ಎಚ್‌ಎಎಲ್ ನೌಕರನ ಮೇಲೆ ಹಲ್ಲೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.