ಅಕ್ರಮ ಮಾಸ್ಕ್: 13.37 ಲಕ್ಷ ದಂಡ
Team Udayavani, Jul 3, 2020, 5:35 AM IST
ಬೆಂಗಳೂರು: ಕೋವಿಡ್-19 ಹಿನ್ನೆಲೆ ಅಕ್ರಮವಾಗಿ ಅಧಿಕ ದರಕ್ಕೆ ಮಾಸ್ಕ್ ಮಾರಾಟ ಮಾಡುತ್ತಿದ್ದ 6958 ಔಷಧ ಮಳಿಗೆಗಳು ಮತ್ತು ಸಗಟು ಮಳಿಗೆಗಳ ವಿರುದ್ಧ ದಾಳಿ ನಡೆಸಿ, 13.37 ಲಕ್ಷ ರೂ. ದಂಡವನ್ನು ರಾಜ್ಯ ಸರ್ಕಾರ ಸಂಗ್ರಹಿಸಿದೆ.
ಅಕ್ರಮ ಮಾಸ್ಕ್ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಡಾ. ರಾಜೀವ್ ಆರ್. ಗೋತೆ, ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ. ಎ.ಎಸ್. ಓಕ್ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ರಾಜ್ಯ ಸರ್ಕಾರ ಈ ಮಾಹಿತಿ ಸಲ್ಲಿಸಿದೆ.
ಮಾರ್ಚ್ 2020 ರಿಂದ ಈವರೆಗೆ ಅಕ್ರಮ ಮಾಸ್ಕ್ ದಾಸ್ತಾನು ಮತ್ತು ಮಾರಾಟದ ವಿರುದ್ಧ ರಾಜ್ಯದ ಹತ್ತು ವಲಯಗಳಲ್ಲಿ 6,958 ಕಡೆ ದಾಳಿ ನಡೆಸಿ, ಒಟ್ಟು 335 ಪ್ರಕ ರಣಗಳನ್ನು ದಾಖಲಿಸಿ, ಒಟ್ಟು 13.37 ಲಕ್ಷ ರೂ. ದಂಡವನ್ನು ಸಂಗ್ರಹ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ
ಮಳೆಯಬ್ಬರ ಎದುರಿಸಲು ಸಕಲ ಸಿದ್ಧತೆ : ಮುಂದಿನ ವಾರ 4 ಎನ್ಡಿಆರ್ಎಫ್ ತಂಡ ರಾಜ್ಯಕ್ಕೆ
ನಟಿ ಚೇತನಾ ಸಾವು: ಶಸ್ತ್ರಚಿಕಿತ್ಸೆ ಮಾಡಿದ್ದ ಆಸ್ಪತ್ರೆಗೆ ಬೀಗ
ಗುತ್ತಿಗೆದಾರರ ಬೇಜವಾಬ್ದಾರಿ, ಕಾಮಗಾರಿ ವಿಳಂಬದಿಂದ ಮನೆಗಳಿಗೆ ನೀರು :ಎಸ್.ಟಿ.ಸೋಮಶೇಖರ್ ಕಿಡಿ
ಅಪರಾಧಿಗಳನ್ನು ಹಿಡಿಯಬೇಕಾದ ಪೊಲೀಸರು ಅಪರಾಧ ನಡೆಸಿದರೆ ಕ್ಷಮೆ ಇಲ್ಲ : ಗೃಹ ಸಚಿವ ಎಚ್ಚರಿಕೆ