Udayavni Special

ಒಂದೇ ದಿನ ಆರು ಮಂದಿ ಬಲಿ


Team Udayavani, Jul 4, 2020, 5:50 AM IST

single day

ಬೆಂಗಳೂರು: ಒಂದೆಡೆ ಕೋವಿಡ್‌ 19 ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದರೆ, ಮತ್ತೂಂದೆಡೆ ಸರಿಯಾಗಿ ಚಿಕಿತ್ಸೆ ಸಿಗದೆ ಸೋಂಕಿತರು ಮೃತಪಡುತ್ತಿದ್ದಾರೆ. ಶುಕ್ರವಾರ ಒಂದೇ ದಿನ 6 ಜನ ಬಲಿಯಾಗಿದ್ದಾರೆ. ವಿಕ್ಟೋರಿಯಾ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 54 ವರ್ಷದ ಮಹಿಳೆ, ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 47 ವರ್ಷದ ಮಹಿಳೆ, 58 ವರ್ಷದ ವ್ಯಕ್ತಿ, ಥಣಿಸಂದ್ರದ 17 ವರ್ಷದ ಯುವತಿ, ಸಂಪಂಗಿರಾಮನಗರದ 55 ವರ್ಷದ  ಸೋಂಕಿತ, ಕಲಾಸಿಪಾಳ್ಯದ 61 ವರ್ಷದ ವೃದ್ಧ ಮೃತಪಟ್ಟಿದ್ದಾರೆ.

ಸಂಪಂಗಿರಾಮನಗರದ 55 ವರ್ಷದ ವ್ಯಕ್ತಿ ಮನೆಯಲ್ಲೇ ಮೃತಪಟ್ಟಿದ್ದು, ಇತ್ತೀಚೆಗೆ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲು ಮಾಡಬೇಕು  ಎನ್ನುವಷ್ಟರಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ. ಕಾಚರಕನಹಳ್ಳಿಯಲ್ಲಿ ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ 88 ವರ್ಷದ ವೃದ್ಧನಿಗೆ ಚಿಕಿತ್ಸೆ ನೀಡಲು ಅಲೆದಾಡಿಸಿದ  ಖಾಸಗಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ವೃದ್ಧ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೃತಪಟ್ಟವರ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷೆಗೊಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ. ಪತ್ನಿ ಹಾಗೂ ಮಗನನ್ನು ಪ್ರತ್ಯೇಕ ಆಸ್ಪತ್ರೆಗಳಲ್ಲಿ ಕ್ವಾರಂಟೈನ್‌  ಮಾಡಲಾಗಿದೆ.

ಬೆಳಗ್ಗೆ ಸೋಂಕು ದೃಢ, ಮಧ್ಯಾಹ್ನ ಮೃತ: ಕಲಾಸಿಪಾಳ್ಯದ 61 ವರ್ಷದ ವೃದ್ಧನಿಗೆ ಶುಕ್ರವಾರ ಸೋಂಕು ದೃಢಪಟ್ಟಿದ್ದು, ಮಧ್ಯಾಹ್ನ ಮನೆಯಲ್ಲಿ ಮೃತಪಟ್ಟಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸೋಂಕಿತ ವ್ಯಕ್ತಿಗೆ ಉಸಿರಾಟದ  ತೊಂದರೆಯಾಗಿದ್ದು, ಶಂಕರಪುರದ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟಿದ್ದಾರೆ. ಶುಕ್ರವಾರ ವರದಿ ಬಂದಿದ್ದು, ಆ್ಯಂಬುಲನ್ಸ್‌ನಲ್ಲಿ ಕರೆದುಕೊಂಡು ಹೋಗುವುದಾಗಿ ತಿಳಿಸಿದ ಪಾಲಿಕೆ ಅಧಿಕಾರಿಗಳು, ಮಧ್ಯಾಹ್ನವಾದರೂ  ಬಂದಿಲ್ಲ.

ವೃದ್ಧ ಮನೆಯಲ್ಲಿ ಮೃತಪಟ್ಟಿದ್ದು, ಸ್ಥಳೀಯರು ಪಿಪಿಇ ಕಿಟ್‌ ಧರಿಸಿ ಶವವನ್ನು ಹೊರಗೆ ತೆಗೆದಿದ್ದಾರೆ. ಸರಿಯಾದ ಸಮಯಕ್ಕೆ ಆ್ಯಂಬುಲ‌ನ್ಸ್‌ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರೆ ಬದುಕಿ ಉಳಿಯುತ್ತಿದ್ದರು.  ಅಧಿಕಾರಿಗಳ ನಿರ್ಲಕ್ಷದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಮಧ್ಯೆ ಥಣಿಸಂದ್ರದ 17 ವರ್ಷದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಾಮಾಕ್ಷಿಪಾಳ್ಯದ 50 ವರ್ಷದ ವ್ಯಕ್ತಿಯೊಬ್ಬರು  ವೈದ್ಯರ ನಿರ್ಲಕ್ಷದಿಂದ ಬಲಿಯಾಗಿದ್ದಾರೆಂಬ ಆರೋಪ ಕೇಳಿಬಂದಿದೆ.

ಈ ವ್ಯಕ್ತಿ ಬೆಳಗ್ಗೆ ಎಂದಿನಂತೆ ಪಾರ್ಕ್‌ಗೆ ವಾಯುವಿಹಾರಕ್ಕೆ ತೆರಳಿದ್ದರು. ಈ ವೇಳೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳೀಯರೇ  ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆ ಸಿಬ್ಬಂದಿ ಆ ವ್ಯಕ್ತಿಯನ್ನು ಒಳಗೆ ಸೇರಿಸಿಕೊಂಡಿಲ್ಲ ಎಂದು ಆರೋಪಿಸಲಾಗಿದೆ. ಆ ವ್ಯಕ್ತಿಗೆ ಉಸಿರಾಟದ ತೊಂದರೆ ಇತ್ತು. ಕೂಡಲೇ ಚಿಕಿತ್ಸೆ ಕೊಟ್ಟಿದ್ದರೆ ಬದುಕುತ್ತಿದ್ದರು. ಆದರೆ, ಆ ರೋಗಿಯನ್ನು  ಒಳಗಡೆಯೇ ಬಿಟ್ಟುಕೊಂಡಿಲ್ಲ. ಈಗ ಮರಣ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸಿಂಗೇನ ಅಗ್ರಹಾರ ಮಾರ್ಕೆಟ್‌ ಬಂದ್:‌ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಸಿಂಗೇನ ಅಗ್ರಹಾರ ವನ್ನು ಸ್ವಯಂ ಪ್ರೇರಿತವಾಗಿ ಒಂದು ವಾರ ಬಂದ್‌ ಮಾಡಲು ಹಣ್ಣಿನ ವ್ಯಾಪಾರಸ್ಥರು ನಿರ್ಧರಿಸಿದ್ದಾರೆ. ಈಗಾಗಲೇ ಸ್ವಯಂ ಪ್ರೇರಿತ ಬಂದ್‌ಗೆ  ಬೆಂಗಳೂರು ಸಗಟು ಹಣ್ಣಿನ ವರ್ತಕರ ಸಂಘ ಕರೆ ನೀಡಿದ್ದು ಜತೆಗೆ ಹಣ್ಣು ಸಾಗಾಟ ವಾಹನ ಮಾಲೀಕರು ಬಂದ್‌ಗೆ ಬೆಂಬಲ ನೀಡಿದ್ದಾರೆ. ಮಾರುಕಟ್ಟೆ ಪ್ರಾಂಗಣದಲ್ಲಿ ತಮಿಳುನಾಡು ಮತ್ತಿ ತರ ಭಾಗಗಳ ಕಾರ್ಮಿಕರು ಕೆಲಸ  ಮಾಡುತ್ತಿದ್ದು, ಕೆಲವರಿಗೆ ಸೋಂಕು ತಗಲುವ ಆತಂಕ ಉಂಟಾ ಗಿದೆ. ಆ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಸಗಟು ಹಣ್ಣಿನ ವರ್ತಕರ ಸಂಘ ಕಾರ್ಯದರ್ಶಿ ಸಿದಾಟಛಿರೆಡ್ಡಿ ತಿಳಿಸಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬದುಕಿನ ಆಸರೆ ಕಳೆದುಕೊಂಡ ಸಹೋದರಿಯರು

ಬದುಕಿನ ಆಸರೆ ಕಳೆದುಕೊಂಡ ಸಹೋದರಿಯರು

ಕ್ರಿಯಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಆಫ್ ಲೈನ್‌ ಶಿಕ್ಷಣ

ಕ್ರಿಯಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಆಫ್ ಲೈನ್‌ ಶಿಕ್ಷಣ

ಪ್ರಾಣಿ ಪ್ರಪಂಚದ ಚಿತ್ರಣವನ್ನೇ ಬದಲಿಸಲಿದೆ ತಾಪಮಾನ

ಪ್ರಾಣಿ ಪ್ರಪಂಚದ ಚಿತ್ರಣವನ್ನೇ ಬದಲಿಸಲಿದೆ ತಾಪಮಾನ

ಚೀನದ ಚಳಿ ಬಿಡಿಸಲು ಸಿದ್ಧ; ಅಮೆರಿಕದಿಂದ ಚಳಿಗಾಲದ ಯುದ್ಧ ಸಂಬಂಧಿ ಕಿಟ್‌ ಖರೀದಿಸಿದ ಭಾರತ

ಚೀನದ ಚಳಿ ಬಿಡಿಸಲು ಸಿದ್ಧ; ಅಮೆರಿಕದಿಂದ ಚಳಿಗಾಲದ ಯುದ್ಧ ಸಂಬಂಧಿ ಕಿಟ್‌ ಖರೀದಿಸಿದ ಭಾರತ

ಸಚಿವೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಮಾಜಿ ಸಿಎಂ ಕಮಲ್‌ನಾಥ್‌ ವಿರುದ್ಧ ಬಿಜೆಪಿ ಆಕ್ರೋಶ

ಸಚಿವೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಮಾಜಿ ಸಿಎಂ ಕಮಲ್‌ನಾಥ್‌ ವಿರುದ್ಧ ಬಿಜೆಪಿ ಆಕ್ರೋಶ

ಬಾಂಡ್‌ಗಳಲ್ಲಿ ಸಂಪತ್ತು ಹೂಡಿಕೆಗೆ ಟೀಕೆ

ಬಾಂಡ್‌ಗಳಲ್ಲಿ ಸಂಪತ್ತು ಹೂಡಿಕೆಗೆ ಟೀಕೆ

IPLಚೆನ್ನೈ-ರಾಜಸ್ಥಾನ್ ಮುಖಾಮುಖಿ : ಸ್ಮಿತ್ ಪಡೆಗೆ 7 ವಿಕೆಟ್ ಗಳ ಗೆಲುವು

ಚೆನ್ನೈ-ರಾಜಸ್ಥಾನ್ ಮುಖಾಮುಖಿ : ಸ್ಮಿತ್ ಪಡೆಗೆ 7 ವಿಕೆಟ್ ಗಳ ಗೆಲುವು





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

.0.

ಹಬ್ಬದ ಸಮಯದಲ್ಲಿ ಕಡ್ಡಾಯವಾಗಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಿ : ಸಚಿವ ಡಾ.ಕೆ.ಸುಧಾಕರ್

bng-tdy-3

93 ಸ್ಯಾನಿಟರಿ ಪ್ಯಾಡ್‌ ದಹನಯಂತ್ರ?

bng-tdy-2

ವೃಷಭಾವತಿ ಉಕ್ಕಿ ಹರಿದರೆ ದ್ವೀಪ ಸೃಷ್ಟಿ

ಹೈಪರ್ ಲೂಪ್ ಎಂಬ ದುಬಾರಿ ಕನಸು

ಶೀಘ್ರವಾಗಿ ಏರ್‌ಪೋರ್ಟ್‌ ತಲುಪಲು ಹೊಸ ಮಾದರಿ: ಹೈಪರ್ ಲೂಪ್ ಎಂಬ ದುಬಾರಿ ಕನಸು

ಹೆಚ್ಚಿನ ಚಿಕಿತ್ಸೆಗೆ ಕಾರಜೋಳ ಪುತ್ರನನ್ನು ಏರ್‌ ಲಿಫ್ಟ್ ಮೂಲಕ ಹೈದರಾಬಾದ್‌ಗೆ ಸ್ಥಳಾಂತರ

ಕಾರಜೋಳ ಪುತ್ರನ ಅರೋಗ್ಯ ಸ್ಥಿತಿ ಗಂಭೀರ : ಚಿಕಿತ್ಸೆಗಾಗಿ ಏರ್‌ ಲಿಫ್ಟ್ ಮೂಲಕ ಹೈದರಾಬಾದ್‌ಗೆ

MUST WATCH

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavani

udayavani youtube

ಹಸುವಿನ ಸಗಣಿ ಬಳಸಿ ಧೂಪ ತಯಾರಿಸುವುದು ಹೇಗೆ?

udayavani youtube

45 years journey of Pot maker from Karkala | Annumuli Pot maker | Udayavani



ಹೊಸ ಸೇರ್ಪಡೆ

ಬದುಕಿನ ಆಸರೆ ಕಳೆದುಕೊಂಡ ಸಹೋದರಿಯರು

ಬದುಕಿನ ಆಸರೆ ಕಳೆದುಕೊಂಡ ಸಹೋದರಿಯರು

ಕ್ರಿಯಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಆಫ್ ಲೈನ್‌ ಶಿಕ್ಷಣ

ಕ್ರಿಯಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಆಫ್ ಲೈನ್‌ ಶಿಕ್ಷಣ

12 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ ಸೈಕಲ್‌ ಪಥ !

12 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ ಸೈಕಲ್‌ ಪಥ !

ದ.ಕ.: ಅಂತರ್‌ ಜಾತಿ ವಿವಾಹಕ್ಕೆ 1.48 ಕೋ.ರೂ. ಪ್ರೋತ್ಸಾಹಧನ

ದ.ಕ.: ಅಂತರ್‌ ಜಾತಿ ವಿವಾಹಕ್ಕೆ 1.48 ಕೋ.ರೂ. ಪ್ರೋತ್ಸಾಹಧನ

ಕಲ್ಲಡ್ಕ ಸಮೀಪದ ಬೊಂಡಾಲದಲ್ಲಿ 2 ಕೋ.ರೂ.ವೆಚ್ಚದಲ್ಲಿ ಬಾಲಕಿಯರ ಹಾಸ್ಟೆಲ್‌ ನಿರ್ಮಾಣ

ಕಲ್ಲಡ್ಕ ಸಮೀಪದ ಬೊಂಡಾಲದಲ್ಲಿ 2 ಕೋ.ರೂ.ವೆಚ್ಚದಲ್ಲಿ ಬಾಲಕಿಯರ ಹಾಸ್ಟೆಲ್‌ ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.