Udayavni Special

ಇಂದಿನಿಂದ ಅಂತಾರಾಜ್ಯಗಳಿಗೆ ವಿಮಾನಗಳ ಹಾರಾಟ ಆರಂಭ


Team Udayavani, May 25, 2020, 6:06 AM IST

viamna hara

ಬೆಂಗಳೂರು: ಕೋವಿಡ್‌ 19 ವೈರಸ್‌ಗೆ ಬೆದರಿ ಗೂಡು ಸೇರಿದ್ದ ಲೋಹದ ಹಕ್ಕಿಗಳು ಸೋಮವಾರದಿಂದ ಮತ್ತೆ ರೆಕ್ಕೆಬಿಚ್ಚಿ ಆಗಸಕ್ಕೆ ಚಿಮ್ಮಲಿವೆ. ಆದರೆ, ಅವುಗಳ ಹಾರಾಟ ಅಂತಾರಾಜ್ಯಗಳಿಗೆ ಮಾತ್ರ ಸೀಮಿತವಾಗಿರಲಿದೆ. ಲಾಕ್‌ಡೌನ  ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ದೇಶೀಯ ವಿಮಾನಗಳ ಸೇವೆ ಮೇ 25ರಿಂದ ಪುನಾರಂಭಗೊಳ್ಳಲಿದೆ. ಆದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್‌)ದ ಒಟ್ಟಾರೆ ಸಾಮರ್ಥ್ಯದ ಶೇ. 33ರಷ್ಟು ಅಂದರೆ,  ಅಂದಾಜು 200 ವಿಮಾನಗಳು ಮೊದಲ ದಿನ ಹಾರಾಟ ನಡೆಸುವ ಸಾಧ್ಯತೆ ಇದೆ.

ಅದೂ ಆಸನಗಳ ಬುಕಿಂಗ್‌ ಅನ್ನು ಅವಲಂಬಿಸಿದೆ. ಬೆಳಗಿನ ಜಾವ 5.5ಕ್ಕೆ ಮೊದಲ ವಿಮಾನ (ಇಂಡಿಗೊ) ಮುಂಬೈ ಗೆ ಹಾರಲಿದೆ. ಅದೇ ರೀತಿ ಬೆಳಿಗ್ಗೆ  7.35ಕ್ಕೆ ಚೆನ್ನೈನಿಂದ ಬೆಂಗಳೂರಿಗೆ ಬಂದಿಳಿ  ಯಲಿದೆ. ಇತ್ತ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅತ್ತ ಭಾನುವಾರ ರಾತ್ರಿವರೆಗೂ ವಿಮಾನಗಳ ಬುಕಿಂಗ್‌, ಅನು ಸೂಚಿಗಳ ಪಟ್ಟಿ ಸಿದಟಛಿಪಡಿಸುವ ಕಾರ್ಯ ನಡೆದಿತ್ತು. 10 ಗಂಟೆ ವರೆಗೂ  ವೇಳಾಪಟ್ಟಿ ಅಂತಿಮ ಗೊಂಡಿರಲಿಲ್ಲ. ಇದನ್ನು ಸ್ವತಃ ಬಿಐಎಎಲ್‌ ವಕ್ತಾರರು “ಉದಯ ವಾಣಿ’ಗೆ ಸ್ಪಷ್ಟಪಡಿಸಿದರು. ಈ ಮಧ್ಯೆ ದೇಶೀಯ ವಿಮಾನ ಕಾರ್ಯಾಚರಣೆಗೆ ಬಿ ಎಎಲ್‌ ಸಿದತೆ ಮಾಡಿಕೊಂಡಿದೆ.

ಸೋಂಕು  ಯಂತ್ರಿಸಲು ಸಿಬ್ಬಂದಿ ಹಾಗೂ ಪ್ರಯಾ  ಣಿಕರ ಸುರಕ್ಷತೆ ದೃಷ್ಟಿಯಿಂದ ವಿಮಾನ ನಿಲ್ದಾಣದ ವಾಹನ ಪಾರ್ಕಿಂಗ್‌ನಿಂದ ವಿಮಾನದ ಬೋರ್ಡಿಂಗ್‌ವರೆಗೂ ಪ್ರತಿ ಹಂತದಲ್ಲೂ ಸುರಕ್ಷತೆಗೆ ಹಲವು ಕ್ರಮ ಕೈಗೊಂಡಿದೆ. ಆರೋಗ್ಯ ಇಲಾಖೆ  ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ, ಕೆಐಎಎಲ್‌ಗೆ ಭಾನುವಾರ ಭೇಡಿ ಪರಿಶೀಲನೆ ನಡೆಸಿದರು. ಪ್ರಯಾಣಿಕರ ಸ್ಕ್ರೀನಿಂಗ್‌ ಮಾಡಲು ನಡೆಸಿರುವ ಸಿದಟಛಿತೆಗಳನ್ನು ವೀಕ್ಷಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ,  ಸಿಪಿ  ಭೀಮಾಶಂಕರ ಗುಳೇದ ಹಾಜರಿದ್ದರು.

ಬೋರ್ಡಿಂಗ್‌ ಪಾಸ್‌ ಸ್ಕ್ಯಾನ್‌: ಪ್ರಯಾಣಿಕರು ಟರ್ಮಿನಲ್‌ ಪ್ರವೇಶಿಸಿದ ಬಳಿಕ ಸ್ವಯಂ ಸೇವಾ ಕಿಯೋಸ್ಕ್ಗಳಲ್ಲಿ ಬೋರ್ಡಿಂಗ್‌ ಪಾಸ್‌ ಸ್ಕ್ಯಾನ್‌ ಮಾಡಬೇಕು. ಸೆನ್ಸರ್‌ ಮೂಲಕ ಬೋರ್ಡಿಂಗ್‌ ಪಾಸ್‌ ಸ್ಕ್ಯಾನ್‌ ಮಾಡಿದ ನಂತರ ವಿಮಾನ  ಸಂಸ್ಥೆ ಸಿಬ್ಬಂದಿ ಬ್ಯಾಗ್‌ ಸ್ವೀಕರಿಸಲಿದ್ದಾರೆ. ರಾಜ್ಯಕ್ಕೆ ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು, ದೆಹಲಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಿಂದ ವಿಮಾನ, ರೈಲು ಅಥವಾ ರಸ್ತೆ ಮೂಲಕ ಬರುವವರು ಕಡ್ಡಾಯವಾಗಿ 7 ದಿನಗಳ  ಸಾಂಸ್ಥಿಕ ಕ್ವಾರಂಟೈನ್‌ ಹಾಗೂ 7 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಪಡಬೇಕು.

ಟ್ಯಾಕ್ಸಿ ಸೇವೆಯಲ್ಲಿ ಸುರಕ್ಷತೆಗೆ ಒತ್ತು: ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಸೇವೆ ನೀಡುವ ಚಾಲಕರು ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರತಿ ಟ್ರಿಪ್‌ ಗೊಮ್ಮೆ ಥರ್ಮಲ್‌ ಸ್ಕ್ರೀನಿಂಗ್‌ ಒಳಗಾಗಬೇಕು. ಕ್ಯಾಬ್‌ನೊಳಗೆ ಸ್ವತ್ಛತೆ ಕಾಯ್ದುಕೊಳ್ಳಬೇಕು. ಸ್ವಯಂ ಚಾಲನೆ ಕಾರು ಹೊಂದಿರುವ ಪ್ರಯಾಣಿಕರು ಪಾರ್ಕಿಂಗ್‌ ಸ್ಥಳದ ಆಗಮನ ದ್ವಾರದಲ್ಲಿ ಯಂತ್ರದ ಮೂಲಕ ಟಿಕೆಟ್‌ ಪಡೆಯಬೇಕು. ಈ ಟಿಕೆಟ್‌ನಲ್ಲಿ ಸಮಯ ಹಾಗೂ ದಿನಾಂಕ ಇರುತ್ತದೆ.  ನಿರ್ಗಮನದ ವೇಳೆ ಯಂತ್ರದ ಮೂಲಕ ಟಿಕೆಟ್‌ ಸ್ಕ್ಯಾನ್‌ ಮಾಡಬೇಕು. ಹಣಪಾವತಿಗೆ ಡಿಜಿಟೆಲ್‌, ಕಾರ್ಡ್‌ ಪಾವತಿಗೂ ಅವಕಾಶ ಕಲ್ಪಿಸಲಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

siddramiha

ಕೋವಿಡ್ ನಿಯಂತ್ರಣಕ್ಕೆ ಖರ್ಚು ಎಷ್ಟಾಗಿದೆ ? ಸರ್ಕಾರ ಸಮರ್ಪಕ ದಾಖಲೆ ನೀಡಲಿ: ಸಿದ್ದರಾಮಯ್ಯ

murugesh-nirani

ಕೋವಿಡ್-19 ಉಪಕರಣ ಖರೀದಿ ದಾಖಲೆಗಳಿರುವ ಪೆನ್ ಡ್ರೈವ್ ನನ್ನ ಬಳಿ ಇಲ್ಲ: ಮುರುಗೇಶ್ ನಿರಾಣಿ

48ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಅಭಿಮಾನಿಗಳ “ದಾದಾ” ಸೌರವ್ ಗಂಗೂಲಿ

48ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಅಭಿಮಾನಿಗಳ “ದಾದಾ” ಸೌರವ್ ಗಂಗೂಲಿ

News-tdy-1

ಕೋವಿಡ್ ನಿಂದ ರಕ್ಷಣೆ ಪಡೆಯಲು ಬಂದಿದೆ ಕೋವಿಡ್ ಕೊಡೆ..! : ವೈರಲ್ ಆಯಿತು ಕೋವಿಡ್ ಕೊಡೆ

covid19-india

ಒಂದೇ ದಿನ 22,752 ಹೊಸ ಪ್ರಕರಣ: ದೇಶದಲ್ಲಿ 7.42 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಪ್ರತಿಮೆ ಆಯ್ತು ಈಗ ಮುಂಬೈನಲ್ಲಿ ಅಂಬೇಡ್ಕರ್ ಮನೆಗೆ ನುಗ್ಗಿ ಹಲವು ವಸ್ತುಗಳ ನಾಶ

ಪ್ರತಿಮೆ ಆಯ್ತು ಈಗ ಮುಂಬೈನಲ್ಲಿ ಡಾ.ಅಂಬೇಡ್ಕರ್ ಮನೆಗೆ ನುಗ್ಗಿ ಹಲವು ವಸ್ತುಗಳ ನಾಶ!

ದ.ಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಅಟ್ಟಹಾಸ : ಒಂದೇ ದಿನ ಮೂವರ ಸಾವು

ದ.ಕ ಜಿಲ್ಲೆಯಲ್ಲಿ ಕೋವಿಡ್-19 ಅಟ್ಟಹಾಸ: ಒಂದೇ ದಿನ ಮೂವರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

seveenty icu

ಐಸಿಯುನಲ್ಲಿ ಒಟ್ಟು 175 ಸೋಂಕಿತರು

hechida-sonku

ಹೆಚ್ಚಿದ ಸೋಂಕು.. ಡ್ಯೂಟಿಗೆ ಬಂಕು..

agara-jwara

ನಗರಾದ್ಯಂತ ಜ್ವರ ತಪಾಸಣಾ ಕೇಂದ್ರ

samagra

ಕೋವಿಡ್‌ 19 ನಿರ್ವಹಣೆ ಸಮಗ್ರ ಮಾಹಿತಿ ನೀಡಿ

ceo bank

ಬ್ಯಾಂಕ್‌ ಅವ್ಯವಹಾರದಲ್ಲಿ ಗಣ್ಯರು ಭಾಗಿ?

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

siddramiha

ಕೋವಿಡ್ ನಿಯಂತ್ರಣಕ್ಕೆ ಖರ್ಚು ಎಷ್ಟಾಗಿದೆ ? ಸರ್ಕಾರ ಸಮರ್ಪಕ ದಾಖಲೆ ನೀಡಲಿ: ಸಿದ್ದರಾಮಯ್ಯ

murugesh-nirani

ಕೋವಿಡ್-19 ಉಪಕರಣ ಖರೀದಿ ದಾಖಲೆಗಳಿರುವ ಪೆನ್ ಡ್ರೈವ್ ನನ್ನ ಬಳಿ ಇಲ್ಲ: ಮುರುಗೇಶ್ ನಿರಾಣಿ

8-July-12

ಹಿರಿಯೂರಲ್ಲಿ 25ಕ್ಕೇರಿದ ಸೋಂಕಿತರ ಸಂಖ್ಯೆ

8-July-11

ಸಾಗರ; ಆರು ಕಡೆ ಸೀಲ್‌ಡೌನ್‌

48ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಅಭಿಮಾನಿಗಳ “ದಾದಾ” ಸೌರವ್ ಗಂಗೂಲಿ

48ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಅಭಿಮಾನಿಗಳ “ದಾದಾ” ಸೌರವ್ ಗಂಗೂಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.