ಮೂರುಪಟ್ಟಾದ ಕಂಟೈನ್ಮೆಂಟ್‌


Team Udayavani, Jul 6, 2020, 5:56 AM IST

ooru-pattu

ಬೆಂಗಳೂರು: ನಗರದಲ್ಲಿ ಕೋವಿಡ್‌ 19 ಸೋಂಕಿನ ಪ್ರಕರಣಗಳಿಗೆ ತಕ್ಕಂತೆ ಅತ್ತ ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸಾವಿರದ ಗಡಿ ದಾಟಿದೆ. ಕೇವಲ ಒಂದೇ ದಿನದಲ್ಲಿ ಈ ವಲಯಗಳ ಸಂಖ್ಯೆ ಮೂರುಪಟ್ಟು  ಹೆಚ್ಚಳವಾಗಿದೆ! ಶನಿವಾರವಷ್ಟೇ ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ 481 ಇತ್ತು. ಭಾನುವಾರ 1423 ಆಗಿದೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನೂ ಏರಿಕೆ ಕ್ರಮದಲ್ಲಿ ಸಾಗುವ ಸಾಧ್ಯತೆ ಇದೆ.

ಹೀಗೆ ಗುರುತಿಸಿದ ವಲಯಗಳ ಸುಮಾರು 50  ಮೀಟರ್‌ ಸುತ್ತ ನಿರ್ಬಂಧ ವಿಧಿಸಲಾಗಿರುತ್ತದೆ. ಸೋಂಕು ತಗುಲಿರುವ ವ್ಯಕ್ತಿ ಮನೆ ಅಕ್ಕಪಕ್ಕ ವಾಣಿಜ್ಯ ಸೇರಿದಂತೆ ಯಾವುದೇ ಚಟುವಟಿಕೆ ನಡೆಸಲು ಅವಕಾಶ ಇಲ್ಲ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ಪೂರ್ವ ವಲಯ 442,  ಪಶ್ಚಿಮ ವಲಯ 791, ದಕ್ಷಿಣ ವಲಯ 118, ದಾಸರಹಳ್ಳಿ ವಲಯ 08, ಬೊಮ್ಮನಹಳ್ಳಿ 64, ಯಲಹಂಕ 28, ರಾಜರಾಜೇಶ್ವರಿ ನಗರ 47, ಮಹದೇವಪುರ 124 ಸ್ಥಳಗಳನ್ನು ಕಂಟೈನ್ಮೆಂಟ್‌ ವಲಯ ಎಂದು ಗುರುತಿಸಲಾಗಿದೆ.

ಪಾಲಿಕೆಯ  4ನೇ ಒಂದರಷ್ಟು ವಾರ್ಡ್‌ಗಳಲ್ಲಿ 50ಕ್ಕೂ ಅಧಿಕ ಸೋಂಕಿತರಿದ್ದಾರೆ. ಈ ಮಧ್ಯೆ ಗುಣಮುಖರ ಸಂಖ್ಯೆ ಶೇ.13ರಷ್ಟು ಮಾತ್ರ ಇದೆ ಎಂದು ಬಿಬಿಎಂಪಿ ಬುಲೆಟಿನ್‌ ಮಾಹಿತಿ ನೀಡಿದೆ. ಇನ್ನು ನಗರದಲ್ಲಿ ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ  ವಲಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿದ್ದು, ಈ 3 ವಲಯಗಳಲ್ಲಿ ಶೇ.60 ಸೋಂಕಿತರಿದ್ದಾರೆ.

ಈ ವಲಯಗಳಲ್ಲಿ 5,657 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಇವು ಕೋವಿಡ್‌ 19 ಹಾಟ್‌ಸ್ಪಾಟ್‌ಗಳಾಗಿ ಪರಿವರ್ತನೆಯಾಗಿವೆ.  ಈ ಪೈಕಿ ಪೂರ್ವ ವಲಯದಲ್ಲಿ 1,694, ಪಶ್ಚಿಮ 1,650, ದಕ್ಷಿಣ 2,313, ರಾಜರಾಜೇಶ್ವರಿ ನಗರ 322, ಬೊಮ್ಮನಹಳ್ಳಿ 630, ಯಲಹಂಕ 310, ದಾಸರಹಳ್ಳಿ 65, ಮಹದೇವಪುರ 499 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಮಧ್ಯೆ ನಗರದಲ್ಲಿ ಭಾನುವಾರ ದಾಖಲೆಯ  1,235 ಹೊಸ ಪ್ರಕರಣ ದೃಢಪಟ್ಟಿದ್ದು, 16 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 9,580 ಏರಿಕೆ ಆಗಿದ್ದು, 132 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಾರೆ. ಕೋವಿಡ್‌ ನಿಗದಿತ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರ, ಆರೈಕೆ ಕೇಂದ್ರಗಳಲ್ಲಿ 8,167 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 145 ಜನ ಸೋಂಕಿಗೆ ಬಲಿಯಾಗಿದ್ದು, 302 ಜನ ಗುಣಮುಖರಾಗಿ  ಬಿಡುಗಡೆಯಾಗಿದ್ದಾರೆ.

ಸೋಂಕಿತರ ಓಡಾಟ!: ನಗರದಲ್ಲಿ ಸೋಂಕಿತರನ್ನು ಕರೆದೊಯ್ಯಲು ಸಕಾಲದಲ್ಲಿ ಆ್ಯಂಬುಲೆನ್ಸ್‌ ದೊರೆಯದ ಕಾರಣ ಹಾಗೂ ಬೆಡ್‌ ಕೊರತೆಯಿಂದ ಖುದ್ದಾಗಿ ಚಿಕಿತ್ಸೆಗೆ ತೆರಳುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳ ಮೂಲಕ  ಹಾದುಹೋಗುವುದ ರಿಂದ ಸೋಂಕಿನ ಭೀತಿ ಕಾಡುತ್ತಿದೆ. ಇನ್ನು ಕನ್ನಡ -ಸಂಸ್ಕೃತಿ ಇಲಾಖೆ ಜಾನಪದ ಅಕಾ ಡೆಮಿ ಇಬ್ಬರು ಸಿಬ್ಬಂದಿಗೆ ಸೋಂಕು ತಗುಲಿದ್ದು, ಇವರ ಸಂಪರ್ಕದಲ್ಲಿದ್ದವರನ್ನು ಜಿಕೆವಿಕೆ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌  ಮಾಡಲಾಗಿದೆ. ಈ ಕ್ವಾರಂಟೈನ್‌ ಕೇಂದ್ರದಲ್ಲಿ ಸರಿಯಾದ ಸಮ ಯಕ್ಕೆ ಊಟ, ತಿಂಡಿ ನೀಡುತ್ತಿಲ್ಲ. ಶುಚಿತ್ವ ಇಲ್ಲ. ಸೋಂಕಿತರ ಪರೀಕ್ಷೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಕೊನೇ ಬಾರಿ ತಂದೆ ಮುಖ ನೋಡಲಾಗದ ಮಗ: ಕುರುಬರಹಳ್ಳಿಯ 60 ವರ್ಷದ ವ್ಯಕ್ತಿಯೊಬ್ಬರು ಸೋಂಕಿ  ನಿಂದ ಅಸುನೀಗಿದ್ದು, ವೃದ್ಧನ ಅಂತ್ಯ ಸಂಸ್ಕಾರ ಸುಮನಹಳ್ಳಿ ಯ ಚಿತಾಗಾರದಲ್ಲಿ ನೆರವೇರಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದರು. ತಂದೆ ಮುಖವನ್ನು  ಕೊನೇ ಬಾರಿ ನೋಡಲಾಗದೆ ಅವರ ಮಗ ಸಂಕಟದಿಂದ ಕಣ್ಣೀರಿಟ್ಟ ದೃಶ್ಯ ನೆರೆದವರ ಮನಕಲುಕಿತು.

ಟಾಪ್ ನ್ಯೂಸ್

ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಎರಡನೇ ಪಟ್ಟಿ ರಿಲೀಸ್

ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಎರಡನೇ ಪಟ್ಟಿ ರಿಲೀಸ್

ball tampering

ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಮತ್ತೋರ್ವ ಕ್ರಿಕೆಟಿಗ: ನಾಲ್ಕು ಪಂದ್ಯಗಳ ನಿಷೇಧ ಶಿಕ್ಷೆ!

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು

ಸಿದ್ದು-ಡಿಕೆಶಿ ತಿಕ್ಕಾಟದಿಂದ ಹಲವರು ಕಾಂಗ್ರೆಸ್ ಬಿಡುತ್ತಾರೆ, ಯಾರೂ ಸೇರಲ್ಲ:ಸಿಎಂ ಬೊಮ್ಮಾಯಿ

ಸಿದ್ದು-ಡಿಕೆಶಿ ತಿಕ್ಕಾಟದಿಂದ ಹಲವರು ಕಾಂಗ್ರೆಸ್ ಬಿಡುತ್ತಾರೆ,ಯಾರೂ ಸೇರಲ್ಲ: ಸಿಎಂ ಬೊಮ್ಮಾಯಿ

vಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

Woke Up To Personal Message From PM Narendra Modi”: Chris Gayle

ಕ್ರಿಸ್ ಗೇಲ್ ಗೆ ಸಂದೇಶ ಕಳುಹಿಸಿದ ಪ್ರಧಾನಿ ನರೇಂದ್ರ ಮೋದಿ: ಯುನಿವರ್ಸಲ್ ಬಾಸ್ ಹೇಳಿದ್ದೇನು?

ಜಗಳ ಬಿಡಿಸಲು ಹೋಗಿ ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು : ಇಬ್ಬರ ಬಂಧನ

ಮಗನಿಂದ ಸೊಸೆಯ ಮೇಲಿನ ಹಲ್ಲೆ ತಪ್ಪಿಸಲು ಹೋಗಿ ಗಂಭೀರ ಗಾಯಗೊಂಡಿದ್ದ ತಾಯಿ ಸಾವು : ಇಬ್ಬರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪತ್ನಿ ದುಬಾರಿ ಜೀವನಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಪತ್ನಿ ದುಬಾರಿ ಜೀವನಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಅಪಘಾತದಲ್ಲಿ ಮರ್ಮಾಂಗ ಶಾಶ್ವತ ಊನ : ಯುವಕನಿಗೆ 17 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್‌ ಆದೇಶ

ಅಪಘಾತದಲ್ಲಿ ಮರ್ಮಾಂಗ ಶಾಶ್ವತ ಊನ : ಯುವಕನಿಗೆ 17 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್‌ ಆದೇಶ

ಮತದಾರರ ಸಂಖ್ಯೆ: ಪ್ರಮೀಳಾ ಪಾರುಪತ್ಯ

ಮತದಾರರ ಸಂಖ್ಯೆ: ಪ್ರಮೀಳಾ ಪಾರುಪತ್ಯ

ನಗರದ ಹೊರಭಾಗದಲ್ಲೇ ಸೋಂಕು ಅಧಿಕ

ನಗರದ ಹೊರಭಾಗದಲ್ಲೇ ಸೋಂಕು ಅಧಿಕ

BJP FLAG

ಬಿಬಿಎಂಪಿ ಚುನಾವಣೆ ಪೂರ್ವ ಸಿದ್ಧತೆ: ಜ. 25 ರಿಂದ ಮೂರು ದಿನ ಬಿಜೆಪಿ ಸಭೆ

MUST WATCH

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

udayavani youtube

ಗಣರಾಜ್ಯ ದಿನದ ಮೆರವಣಿಗೆ 2022

udayavani youtube

೭೩ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ರಾರಾಜಿಸಿದ ಕರ್ನಾಟಕದ ಸ್ತಬ್ಧಚಿತ್ರ

udayavani youtube

ಕಾಂಗ್ರೆಸ್ ಕೊಳೆತು ನಾರುತ್ತಿರುವ ಮಾವಿನ ಹಣ್ಣು : ಈಶ್ವರಪ್ಪ ಲೇವಡಿ

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

ಹೊಸ ಸೇರ್ಪಡೆ

26road

ರಸ್ತೆ ಕಾಮಗಾರಿ ಪರಿಶೀಲನೆ

ಹುಣಸೂರು: ಬಲಿಷ್ಠ ಹುಲಿ ದಾಳಿಗೆ ಸಿಲುಕಿ ಎರಡು ಹುಲಿ ಮರಿಗಳ ಸಾವು

ಹುಣಸೂರು: ಬಲಿಷ್ಠ ಹುಲಿ ದಾಳಿಗೆ ಸಿಲುಕಿ ಎರಡು ಹುಲಿ ಮರಿಗಳ ಸಾವು

ಮಂಗಳೂರು ಮಹಾನಗರ ಪಾಲಿಕೆ: ಕೋವಿಡ್‌ ನಿಯಂತ್ರಣಕ್ಕೆ ವಾರ್ಡ್‌ಗೊಂದು ತಂಡ

ಮಂಗಳೂರು ಮಹಾನಗರ ಪಾಲಿಕೆ: ಕೋವಿಡ್‌ ನಿಯಂತ್ರಣಕ್ಕೆ ವಾರ್ಡ್‌ಗೊಂದು ತಂಡ

25problem

ಗ್ರಾಪಂ ಸಮಸ್ಯೆ ಅಲ್ಲಿಯೇ ಬಗೆಹರಿಸಿ

24develop

ಹೆದ್ದಾರಿ ಅಭಿವೃದ್ಧಿಗೆ 12 ಸಾವಿರ ಕೋಟಿ ರೂ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.