ಸುರಂಗ ಮಾರ್ಗ ನಿರ್ಮಾಣ ಕಾರ್ಯಾರಂಭ


Team Udayavani, Jul 6, 2020, 6:01 AM IST

karyarambha

ಬೆಂಗಳೂರು: ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಹೆಚ್ಚು-ಕಡಿಮೆ 6 ತಿಂಗಳ ನಂತರ “ನಮ್ಮ ಮೆಟ್ರೋ’ ಸುರಂಗ ಮಾರ್ಗದ ಡೇರಿ ವೃತ್ತದಿಂದ ವೆಲ್ಲಾರ ಜಂಕ್ಷನ್‌ ನಡುವೆ ಕಾಮಗಾರಿಗೆ ಚಾಲನೆ ದೊರಕಿದೆ. ಈ ಮೂಲಕ ಇಡೀ ಸುರಂಗ  ಮಾರ್ಗದ ನಿರ್ಮಾಣ ಕಾರ್ಯ ಶುರುವಾಗಿದೆ. ಕೋವಿಡ್‌ 19 ಹಾವಳಿ ನಡುವೆಯೂ ಲಭ್ಯವಿರುವ ಸುಮಾರು 200 ಕಾರ್ಮಿಕರ ನೆರವಿನಿಂದ ಡೇರಿ ವೃತ್ತದಿಂದ ವೆಲ್ಲಾರ ಜಂಕ್ಷನ್‌ (ಪ್ಯಾಕೇಜ್‌-1) ನಡುವೆ ನೆಲದಡಿ ಬರುವ 2 ನಿಲ್ದಾಣ  ನಿರ್ಮಾಣ ಭರದಿಂದ ಸಾಗಿದೆ.

ಮುಂದಿನ 40 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಹೊಂದಿದೆ. ಡೇರಿ ವೃತ್ತ, ಲಕ್ಕಸಂದ್ರ (ಮೈಕೊ ಇಂಡಸ್ಟ್ರೀಸ್‌) ನಿಲ್ದಾಣ ನಿರ್ಮಿಸಲು ಉದ್ದೇಶಿಸಿರುವ ಜಾಗದಲ್ಲಿನ  ಕಟ್ಟಡ ತೆರವು ಬಹುತೇಕ ಪೂರ್ಣಗೊಂಡಿದ್ದು, ನಿಲ್ದಾಣಗಳಿಗಾಗಿ ಭೂಮಿ ಅಗೆಯುವ ಕೆಲಸ ಶುರುವಾಗಿದೆ. ಇದಕ್ಕೂ ಮುನ್ನ ಪೈಲಿಂಗ್‌ ನಿರ್ಮಾಣ ನಡೆದಿದೆ. ಪ್ರತಿ ನಿಲ್ದಾಣಗಳಲ್ಲಿ ತಲಾ 600-700 ಪೈಲಿಂಗ್‌ ನಿರ್ಮಿಸಲಾಗುತ್ತದೆ. ಇವು ಸುಮಾರು 20 ಮೀಟರ್‌ ಆಳ ಅಗೆಯುವ ಭೂಮಿಗೆ ಪೂರಕವಾಗಿರಲಿದೆ.

ನೆಲದಡಿ ಇಳಿಯಲಿವೆ 2 ಟಿಬಿಎಂ: ಈ ಮಧ್ಯೆ ಡೇರಿ ವೃತ್ತದ ಬಳಿಯ ಸೌತ್‌ರ್‍ಯಾಂಪ್‌ನಲ್ಲಿ ಟನಲ್‌ ಬೋರಿಂಗ್‌ ಮಷಿನ್‌ (ಟಿಬಿಎಂ) ಕೆಳಗಿಳಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇಲ್ಲಿ ಒಟ್ಟಿಗೆ 2 ಯಂತ್ರಗಳನ್ನು ಕೆಳಗಿಳಿಸಲು  ಉದ್ದೇಶಿಸಲಾಗಿದೆ. ಇವೆರಡೂ ಸೌತ್‌ ರ್‍ಯಾಂಪ್‌ನಿಂದ ಡೇರಿ ವೃತ್ತ, ಅಲ್ಲಿಂದ ಲಕ್ಕಸಂದ್ರ, ಲ್ಯಾಂಗ್‌ಫೋಡ್‌ ìವರೆಗೆ (ಸುಮಾರು 2.68 ಕಿ.ಮೀ.) ಸುರಂಗ ಮಾರ್ಗ ನಿರ್ಮಿಸಲಿವೆ.

ಇದಕ್ಕೆ ಪರ್ಯಾಯವಾಗಿ ವೆಲ್ಲಾರ ಜಂಕ್ಷನ್‌ನಿಂದ 1 ಟಿಬಿಎಂ  ಲ್ಯಾಂಗ್‌ ಫೋರ್ಡ್‌ ಕಡೆಗೆ ಬರಲಿದೆ. ಇಡೀ ಮಾರ್ಗ ಸುಮಾರು 3.655 ಕಿ.ಮೀ. ಇದೆ. ಆದರೆ, ಈ ಯಂತ್ರ ವರ್ಷಾಂತ್ಯಕ್ಕೆ ಬಂದಿಳಿಯಲಿವೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ  ಮಾಹಿತಿ ನೀಡಿದರು. ಅಂದಹಾಗೆ, ಪ್ಯಾಕೇಜ್‌-1 ಅನ್ನು ಮುಂಬೈನ ಎಎಫ್ಕಾನ್ಸ್‌ ಇನ್‌ ಫ್ರಾಸ್ಟ್ರಕ್ಚರ್‌ ಲಿ., ಗುತ್ತಿಗೆ ಪಡೆದಿದೆ. ಡೇರಿ ವೃತ್ತದ ಸೌತ್‌ರ್‍ಯಾಂಪ್‌ ನಂತರ ಬರುವ ಸ್ವಾಗತ್‌ ರಸ್ತೆಯ ಎತ್ತರಿಸಿದ ಮಾರ್ಗದಿಂದ ವೆಲ್ಲಾರ ಜಂಕ್ಷನ್‌ ವರೆಗೆ  .655 ಕಿ.ಮೀ. ಉದ್ದದಲ್ಲಿ 1,526.33 ಕೋಟಿ ವೆಚ್ಚದಲ್ಲಿಸುರಂಗ ನಿರ್ಮಾಣಗೊಳ್ಳುತ್ತಿದೆ.

2.68 ಕಿ.ಮೀ. ಉದ್ದದಲ್ಲಿ ಡೇರಿ ವೃತ್ತ, ಮೈಕೋ ಇಂಡಸ್ಟ್ರೀಸ್‌ ಮತ್ತು ಲ್ಯಾಂಗೊರ್ಡ್‌ ಟೌನ್‌ ಎಂಬ 3 ಸುರಂಗ ನಿಲ್ದಾಣ ಬರಲಿವೆ. ಟಿಬಿಎಂ ಸೇರಿ  ಎಲ್ಲಲ್ಲಾ ವೆಚ್ಚವನ್ನೂ ಇದು ಒಳಗೊಂಡಿದೆ. ಟೆಂಡರ್‌ ಪೂರ್ಣಗೊಳ್ಳುತ್ತಿದ್ದಂತೆಯೇ ಗುತ್ತಿಗೆದಾರರಿಗೆ ಜಾಗ ಹಸ್ತಾಂತರಿಸಬೇಕಾಗುತ್ತದೆ. ಆದರೆ, 6 ತಿಂಗಳು ಕಳೆದರೂ ಲ್ಯಾಂಗ್‌ಫೋರ್ಡ್‌ ನಿಲ್ದಾಣಕ್ಕೆ ಅಗತ್ಯವಿರುವ ಜಾಗ ಕಗ್ಗಂಟಾಗಿಯೇ ಉಳಿದಿದ್ದು, ನಿಗಮಕ್ಕೆ ತಲೆನೋವಾಗಿ ಪರಿಣಮಿಸಿದೆ. ಸ್ವತಃ ಸಿಎಂ ಬಿಎಸ್‌ವೈ ಮೆಟ್ರೋ ಪ್ರಗತಿ ಪರಿಶೀಲನೆ ನಡೆಸಿ, ವಿಳಂಬದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಉಳಿದ 3 ಪ್ಯಾಕೇಜ್‌ಗಳಲ್ಲೂ ಸುರಂಗ ನಿರ್ಮಾಣ  ಕಾರ್ಯ ಪ್ರಗತಿಯಲ್ಲಿದೆ. ಟ್ಯಾನರಿ ರಸ್ತೆಯಿಂದ ನಾಗವಾರವರೆಗೆ 4.59 ಕಿ.ಮೀ. ಉದ್ದದಲ್ಲಿ 1,771.25 ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಗೊಳ್ಳುತ್ತಿದೆ. ಅದೇ ರೀತಿ, ವೆಲ್ಲಾರ ಜಂಕ್ಷನ್‌ನಿಂದ ಶಿವಾಜಿನಗರ 1,329.14 ಕೋಟಿ ಹಾಗೂ  ಶಿವಾಜಿನಗರ-ಟ್ಯಾನರಿ ರಸ್ತೆ ನಡುವಿನ ಸುರಂಗ ಮಾರ್ಗ 1,299 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಒಟ್ಟಾರೆ ಇಡೀ ಮಾರ್ಗವನ್ನು 2024ಕ್ಕೆ ಪೂರ್ಣಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಹೊಂದಿದೆ. 2014-15ರಲ್ಲಿ ಇದಕ್ಕೆ  ಅನುಮೋದನೆ ದೊರಕಿತ್ತು.

ಯಂತ್ರಗಳಿಗಿಲ್ಲ ಅಡ್ಡಿ: ಭಾರತ-ಚೀನಾ ನಡುವಿನ ಸಂಘರ್ಷ ಟಿಬಿಎಂ ಪೂರೈಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ತುಂಬಾ ಕಡಿಮೆ. ಏಕೆಂದರೆ, ಈ ಒಪ್ಪಂದ ಸುಮಾರು ದಿನಗಳ ಹಿಂದೆಯೇ ಆಗಿದೆ. ಈ ಸಂಬಂಧ ಎರಡೂ ದೇಶಗಳ  ನಡುವೆ ಒಡಂಬಡಿಕೆ ಆಗಿದ್ದು, ಇದರಲ್ಲಿ ಅವನಿ ಮತ್ತು ಊರ್ಜಾ ಎಂಬ ಎರಡು ಟಿಬಿಎಂಗಳೂ ಬಂದಿಳಿದಿವೆ. ವಿಂಧ್ಯಾ ಮತ್ತು ಲವಿ ಬರಲಿವೆ. ಈಗಾಗಲೇ ಒಡಂಬಡಿಕೆ ಸಾಕಷ್ಟು ಮುಂದುವರಿದಿರುವುದರಿಂದ ಯಾವುದೇ ಪರಿಣಾಮ  ಬೀರದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.