ಗಗನಕುಸುಮವಾದ ಮಂತ್ರಿಗಿರಿ


Team Udayavani, Aug 5, 2021, 6:13 PM IST

5-12

„ರಾ. ರವಿಬಾಬು

ದಾವಣಗೆರೆ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಸ್ಥಾನ ದೊರೆಯುತ್ತದೆ ಎಂಬ ನಿರೀಕ್ಷೆ ಕೊನೆ ಗಳಿಗೆಯಲ್ಲಿ ಹುಸಿಯಾದ ಪರಿಣಾಮ ಈ ಬಾರಿಯೂ ದಾವಣಗೆರೆ ಜಿಲ್ಲೆಗೆ ಪ್ರಾತಿನಿಧ್ಯ ಇಲ್ಲದಂತಾಗಿದೆ. ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಬಿಜೆಪಿಯ ಭದ್ರ ಕೋಟೆ. ಹಾಲಿ ಇರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ದಾವಣಗೆರೆ ದಕ್ಷಿಣ, ಹರಿಹರ ಹೊರತುಪಡಿಸಿದರೆ ದಾವಣಗೆರೆ ಉತ್ತರ, ಜಗಳೂರು, ಹೊನ್ನಾಳಿ, ಮಾಯಕೊಂಡ, ಚನ್ನಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ.

ಬಿಜೆಪಿ ಪಕ್ಷ ಒಂದೇ ಅಲ್ಲ, ಸರ್ಕಾರದ ರಚನೆಗೆ ಬಲ ನೀಡಿರುವ ದಾವಣಗೆರೆ ಜಿಲ್ಲೆಗೆ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನ ದಕ್ಕಿರಲಿಲ್ಲ. ನಾಯಕತ್ವ ಬದಲಾವಣೆ ಪರಿಣಾಮ ಅಸ್ತಿತ್ವಕ್ಕೆ ಬಂದಿರುವ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ಭಾರೀ ಭರವಸೆ ಇತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೃಪಾಕಟಾಕ್ಷ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಇಲ್ಲವೇ ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಮೇಲಿದೆ.

ಯಾವುದೇ ಕಾರಣಕ್ಕೂ ಸಚಿವ ಸ್ಥಾನ ತಪ್ಪುವುದೇ ಇಲ್ಲ ಭರ್ಜರಿ ವಿಶ್ವಾಸ ಕಮಲ ಪಾಳೆಯದಲ್ಲಿತ್ತು. ಆದರೆ ಕೊನೆ ಗಳಿಗೆಯಲ್ಲಿ ನಿರೀಕ್ಷೆ ಕಮರಿ ಹೋಯಿತು. ಹಾಗಾಗಿ ಕಳೆದ ಬಾರಿಯಂತೆ ಸಚಿವ ಸ್ಥಾನದಿಂದ ಬಿಜೆಪಿ ಶಾಸಕರು ವಂಚಿತರಾಗಬೇಕಾಯಿತು. 1997ರಲ್ಲಿ ಉದಯಗೊಂಡಿರುವ ದಾವಣಗೆರೆ ಜಿಲ್ಲೆ 25 ಹರೆಯದ ಸಂಭ್ರಮದಲ್ಲಿರುವ ಸಂದರ್ಭದಲ್ಲೇ ಜಿಲ್ಲೆಗೆ ಸಚಿವ ಸ್ಥಾನವೇ ಇಲ್ಲದಂತಾಗಿರುವುದು ಬಿಜೆಪಿ ಮುಖಂಡರು, ಕಟ್ಟಾ ಅಭಿಮಾನಿಗಳು, ಕಾರ್ಯಕರ್ತರ ನಿರಾಸೆಗೆ ಕಾರಣವಾಗಿದೆ. ಆದರೆ ಪಕ್ಷದ, ವರಿಷ್ಠರ ಅಂತಿಮ ತೀರ್ಮಾನಕ್ಕೆ ಬದ್ಧವಾಗಿರಬೇಕಾದ ಅನಿವಾರ್ಯತೆಯಲ್ಲಿ ಕಮಲ ಪಕ್ಷದ ನಾಯಕರಿದ್ದಾರೆ.

ಒಗ್ಗಟ್ಟಿನ ಮನವಿಗೆ ಸಿಗಲಿಲ್ಲ ಸ್ಪಂದನೆ: ಜಿಲ್ಲೆಯಲ್ಲಿ ಬಿಜೆಪಿಯ ಐವರು ಶಾಸಕರಿದ್ದರೂ ಒಂದೇ ಧ್ವನಿ ಎತ್ತಿದ್ದು ಬಹಳ ಅಪರೂಪ. ಇದೇ ಪ್ರಥಮ ಬಾರಿಗೆ ಸಂಸದ ಜಿ.ಎಂ. ಸಿದ್ದೇಶ್ವ ರ ನೇತೃತ್ವದಲ್ಲಿ ಐವರು ಶಾಸಕರು ಒಗ್ಗಟ್ಟಾಗಿ ಐವರು ಶಾಸಕರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದರು.

ಆದರೂ ಮುಖ್ಯಮಂತ್ರಿಗಳು, ಹೈಕಮಾಂಡ್‌ ಜಿಲ್ಲೆಯ ಶಾಸಕರ ಒಗ್ಗಟ್ಟಿನ ಮನವಿಗೆ ಸ್ಪಂದಿಸಲೇ ಇಲ್ಲ. ನೂತನ ಮುಖ್ಯಮಂತ್ರಿಗಳ ನೇತೃತ್ವದ ಸಂಪುಟದ ಭರ್ತಿ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆಯೇ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಯಾವುದೇ ಖಾತೆ ನೀಡಿದರೂ ನಿರ್ವಹಿಸಲು ಸಿದ್ಧ ಎನ್ನುವ ಮೂಲಕ ಮಂತ್ರಿ ಸ್ಥಾನಕ್ಕೆ ದಾಳ ಉರುಳಿಸಿದ್ದರು. ಚನ್ನಗಿರಿ ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ಅವರು ತಮ್ಮ ನೆಚ್ಚಿನ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮೂಲಕ ಸಚಿವರಾಗುವ ಪ್ರಯತ್ನ ನಡೆಸಿದರು.

ಯಡಿಯೂರಪ್ಪ ಅವರ ಪರಮಾಪ್ತ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ದೊರೆತೇ ದೊರೆಯುತ್ತದೆ ಎಂಬ ವಿಶ್ವಾಸದಲಿದ್ದರು. ಆದರೆ ಈ ಬಾರಿಯೂ ನಿರಾಸೆ ಅನುಭವಿಸುವಂತಾಯಿತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಆಗಿದ್ದ “ಮಾನಸ ಪುತ್ರ’ ಎಂದೇ ಗುರುತಿಸಿಕೊಂಡಿರುವ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಎರಡನೇ ಬಾರಿ ಸಚಿವರಾಗುವ ಕನಸು ಕಂಡಿದ್ದರು. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಲೇ ತಮ್ಮದೇ ಆದ ರಾಜಕೀಯ ದಾಳ ಉರುಳಿಸುತ್ತಾ ಮಂತ್ರಿಗಿರಿಯತ್ತ ಚಿತ್ತ ನೆಟ್ಟಿದ್ದರು.

ಸಚಿವ ಸಂಪುಟ ರಚನೆಯ ಕೊನೆ ಕ್ಷಣದವರೆಗೆ ರೇಣುಕಾಚಾರ್ಯರ ಹೆಸರು ಮುಂಚೂಣಿಯಲ್ಲೇ ಇತ್ತು. ಜಿಲ್ಲೆಗೆ ಮಂತ್ರಿ ಸ್ಥಾನ ದೊರೆಯುತ್ತದೆ ಎನ್ನುವ ವಾತಾವರಣವೂ ನಿರ್ಮಾಣವಾಗಿತ್ತು. ಆದರೆ ಕಡೇ ಕ್ಷಣದಲ್ಲಿ ರೇಣುಕಾಚಾರ್ಯರಿಗೆ ಮಾತ್ರವಲ್ಲ, ದಾವಣಗೆರೆ ಜಿಲ್ಲೆಗೂ ಪ್ರಾತಿನಿಧ್ಯ ದೊರೆಯಲಿಲ್ಲ. ಜಗಳೂರು ಶಾಸಕ, ವಾಲೀ¾ಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್‌.ವಿ. ರಾಮಚಂದ್ರ ಸಹ ಒಂದು ಕೈ ನೋಡಿಯೇ ಬಿಡೋಣ ಎನ್ನುವಂತೆ ಮಂತ್ರಿ ಸ್ಥಾನದತ್ತ ಗಮನ ಹರಿಸಿದ್ದರು.

ವಾಲ್ಮೀಕಿ ನಾಯಕ ಸಮಾಜ ಕೂಡ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯವನ್ನೂ ಮಾಡಿತ್ತು. ಅವರಿಗೂ ಸಚಿವ ಸ್ಥಾನ ದಕ್ಕಲೇ ಇಲ್ಲ. ಒಟ್ಟಾರೆ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಾವಣಗೆರೆ ಜಿಲ್ಲೆಗೆ ಈ ಬಾರಿ ಕೂಡ ಸಚಿವ ಸ್ಥಾನ ದೊರೆಯದೇ ಇರುವುದು ಬೇಸರದ ಸಂಗತಿ.

ಟಾಪ್ ನ್ಯೂಸ್

1-fdsfsd

ಎಸ್‌ಎಸ್ಎಲ್‌ಸಿ ಫಲಿತಾಂಶ : ಗ್ರೇಡಿಂಗ್ ವ್ಯವಸ್ಥೆಯಲ್ಲಿ ಜಿಲ್ಲಾವಾರು ಸ್ಥಾನವಿಲ್ಲ

Boxer Musa Yamak

ವಿಡಿಯೋ; ರಿಂಗ್ ನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ಜರ್ಮನಿಯ ಬಾಕ್ಸರ್ ಮೂಸಾ ಯಮಕ್!

ಭಾರೀ ಕುಸಿತ ಕಂಡ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ಲಾಭಗಳಿಸಿದ ಐಟಿಸಿ ಷೇರು

ಭಾರೀ ಕುಸಿತ ಕಂಡ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ಲಾಭಗಳಿಸಿದ ಐಟಿಸಿ ಷೇರು

cm-bommai

1600 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಮಳೆ ನೀರು ಕಾಲುವೆಗಳ ಆಧುನೀಕರಣ

tower

ಗಾಳಿ ಮಳೆ : ಕಿಷ್ಕಿಂದಾ ಅಂಜನಾದ್ರಿ ಬಳಿ ನಿರ್ಮಾಣ ಹಂತದ ಮೊಬೈಲ್ ಟವರ್ ಬಿದ್ದು 7 ಮಂದಿಗೆ ಗಾಯ

1-sfssf

ಬ್ರ್ಯಾಂಡ್ ಬೆಂಗಳೂರು ಬಂದಿದ್ದು ದೇವೇಗೌಡರ ಕಾಲದಲ್ಲಿ: ಎಸ್ಎಂಕೆ ಗೆ ಹೆಚ್ ಡಿಕೆ ಟಾಂಗ್

ದೆಹಲಿ: AAP ಸರ್ಕಾರದ ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆ ರದ್ದು: ಹೈಕೋರ್ಟ್

ದೆಹಲಿ: AAP ಸರ್ಕಾರದ ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆ ರದ್ದು: ಹೈಕೋರ್ಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

damage

ವರುಣನ ಅಬ್ಬರಕ್ಕೆ ಅಪಾರ ಬೆಳೆ ಹಾನಿ

honnali

ನ್ಯಾಮತಿ ತಾಲೂಕಿಗೆ ತಪ್ಪದ ಹೊನ್ನಾಳಿ ಅವಲಂಬನೆ!

crop-damage

ಮಲೆ ಬೆನ್ನೂರು: ಭಾರೀ ಮಳೆ-ಗಾಳಿಗೆ ಅಪಾರ ಬೆಳೆ ಹಾನಿ

congress

ಬಿಜೆಪಿ-ಕಾಂಗ್ರೆಸ್‌ನಿಂದ ಅಬ್ಬರದ ಪ್ರಚಾರ

renukacharya

ಸನಾತನ ಧರ್ಮ-ಸಂಸ್ಕೃತಿ ಉಳಿಸಿ ಬೆಳೆಸಿ

MUST WATCH

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಬಸ್ಸು ಚಲಾಯಿಸಿ ಚಾಲನೆ ನೀಡಿದ ಶಾಸಕ ಯು.ಟಿ. ಖಾದರ್

udayavani youtube

ಕಾರ್ಖಾನೆಯ ಗೋಡೆ ಕುಸಿದು 12 ಮಂದಿ ಕಾರ್ಮಿಕರ ಸಾವು

udayavani youtube

ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರ ಮಾರಾಮಾರಿ ! ವಿಡಿಯೋ ವೈರಲ್ ..

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

ಹೊಸ ಸೇರ್ಪಡೆ

ಕಸಾಪದಿಂದ ಡಾ| ಹಳಕಟ್ಟಿ ಜಯಂತಿ ಆಚರಿಸಲಿ

ಕಸಾಪದಿಂದ ಡಾ| ಹಳಕಟ್ಟಿ ಜಯಂತಿ ಆಚರಿಸಲಿ

ಕೊಟ್ಟಿಗೆ ಗೊಬ್ಬರಕ್ಕೆ ಭಾರೀ ಬೇಡಿಕೆ

ಕೊಟ್ಟಿಗೆ ಗೊಬ್ಬರಕ್ಕೆ ಭಾರೀ ಬೇಡಿಕೆ

18

ಸಿಎಂ ಕಚೇರಿ ಮುತ್ತಿಗೆಗೆ ಹೊರಟಿದ್ದ ರೈತರಿಗೆ ತಡೆ

ಶಹಾಬಾದ ಸರ್ಕಾರಿ ಶಾಲೆಗೆ ಡಿಮ್ಯಾಂಡ್‌

ಶಹಾಬಾದ ಸರ್ಕಾರಿ ಶಾಲೆಗೆ ಡಿಮ್ಯಾಂಡ್‌

1-fdsfsd

ಎಸ್‌ಎಸ್ಎಲ್‌ಸಿ ಫಲಿತಾಂಶ : ಗ್ರೇಡಿಂಗ್ ವ್ಯವಸ್ಥೆಯಲ್ಲಿ ಜಿಲ್ಲಾವಾರು ಸ್ಥಾನವಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.