ದೇವನಗರಿಗೆ ಮತ್ತೊಮ್ಮೆ ಅಪ್ಪಳಿಸಿದ ಕೋವಿಡ್

Team Udayavani, May 20, 2020, 11:35 AM IST

20-April-03

ಸಾಂದರ್ಭಿಕ ಚಿತ್ರ

ದಾವಣಗೆರೆ: ಇಡೀ ವಿಶ್ವವನ್ನೇ ನಡುಗಿಸಿರುವ ಕೋವಿಡ್ ವೈರಸ್‌ ಮಂಗಳವಾರ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯನ್ನ ಮತ್ತೆ ತಲ್ಲಣಗೊಳಿಸಿದೆ. ನಿನ್ನೆ ಹೊಸದಾಗಿ ಈಗ 22 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 112ಕ್ಕೇರಿದೆ.

ಕೇವಲ 20 ದಿನಗಳ ಹಿಂದೆ ದಾವಣಗೆರೆಯಲ್ಲಿ ಇದ್ದ ವಾತಾವರಣ ಈಗ ಇಲ್ಲ. ಈ ಅವಧಿಯಲ್ಲಿ ಜಿಲ್ಲೆಯ ಚಿತ್ರಣವೇ ಬದಲಾಗಿ ಹೋಗಿದೆ. ಏ.29ರಿಂದ ಕೋವಿಡ್‌-19ರ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಈ ಮೊದಲು ದಾವಣಗೆರೆ ನಗರಕ್ಕೆ ಸೀಮಿತವಾಗಿದ್ದ ಸೋಂಕು ಈಗ ಹಳ್ಳಿಗೂ ವ್ಯಾಪಿಸುತ್ತಿರುವುದು ತೀವ್ರ ಆತಂಕಕ್ಕೀಡು ಮಾಡುವಂತಾಗಿದೆ.

ಈ ಮೊದಲು ಮಾರ್ಚ್‌ ಕೊನೆಯ ವಾರದಲ್ಲಿ ವಿದೇಶದಿಂದ ಬಂದಿದ್ದ ಮೂವರಲ್ಲಿ (ಒಂದು ಪ್ರಕರಣ ಚಿತ್ರದುರ್ಗ ಜಿಲ್ಲೆಯದ್ದು) ಕೋವಿಡ್ ಸೋಂಕು ದೃಢಪಟ್ಟಿತ್ತು. ಆಗ ಜಿಲ್ಲೆಯ ಜನ ಆತಂಕಗೊಂಡಿದ್ದರು. ಜಿಲ್ಲಾಡಳಿತ, ಆರೋಗ್ಯ ಹಾಗೂ ಪೊಲೀಸ್‌ ಇಲಾಖೆ, ಇತರರೂ ಒಳಗೊಂಡಂತೆ ಎಲ್ಲರ ಅವಿರತ ಶ್ರಮದಿಂದಾಗಿ ಮಹಾಮಾರಿ ಕೊರೊನಾ ಸೋಂಕು ಹರಡಲು ಅವಕಾಶವಾಗಲಿಲ್ಲ. ಆದರೆ, ಏ. 29ರ ನಂತರ ಕೋವಿಡ್ ದಾವಣಗೆರೆ ಜಿಲ್ಲೆಯ ಜನಜೀವನಕ್ಕೆ ಮುಳ್ಳಾಯಿತು.

ಜಿಲ್ಲೆಯಲ್ಲಿ ಪ್ರಥಮ (ವಿದೇಶದಿಂದ ಬಂದವರ ಬಿಟ್ಟು)ವಾಗಿ ದಾವಣಗೆರೆ ಬಾಷಾನಗರದ ವ್ಯಕ್ತಿ (ರೋಗಿ ನಂಬರ್‌ 533)ಗೆ ಕೋವಿಡ್ ದೃಢಪಟ್ಟ ಕೆಲವೇ ಗಂಟೆಗಳ ಅಂತರದಲ್ಲಿ ಜಾಲಿನಗರದ 69 ವರ್ಷದ ವಯೋವೃದ್ಧ (ರೋಗಿ ಸಂಖ್ಯೆ 556)ಗೆ ಕೋವಿಡ್ ಸೋಂಕು ಪತ್ತೆಯಾಯಿತು. ಜಾಲಿನಗರದ ವೃದ್ಧ ಮೇ 1 ರಂದು ಮೃತಪಟ್ಟರಲ್ಲದೆ, ಅಂದೇ 6 ಮಂದಿಗೆ (ಪಿ-533 ಹಾಗೂ ಪಿ-556ರ ಕುಟುಂಬದವರು) ಸೋಂಕು ಅಂಟಿಕೊಂಡಿತ್ತು. ಒಂದೇ ಬಾರಿಗೆ 6 ಮಂದಿಗೆ ಸೋಂಕು ತಗುಲಿದ್ದು ಜನರ ನೆಮ್ಮದಿ ಕೆಡುವಂತಾಯಿತು. ಆದರೆ ಮೇ 3ರಂದು ದಾವಣಗೆರೆಯಲ್ಲಿ 21 ಮಂದಿಗೆ ಕೋವಿಡ್ ದೃಢಪಟ್ಟ ವರದಿ ಜಿಲ್ಲಾಡಳಿತಕ್ಕೆ ಶಾಕ್‌ ನೀಡಿತು. ಆ ದಿನವೇ ಜಾಲಿನಗರದ 48 ವರ್ಷದ ಮಹಿಳೆ (ರೋಗಿ-651) ಸಹ ಮೃತಪಟ್ಟರು.

ಮೇ 3ರ ನಂತರ ಜಿಲ್ಲೆಯಲ್ಲಿ ಕೊರೊನಾಘಾತ ಮುಂದುವರಿದಿದೆ. ಮೇ 5ರಂದು 12 ಮಂದಿಯಲ್ಲಿ ಕಾಣಿಸಿಕೊಂಡ ಕೋವಿಡ್, ಅಂದು 55 ವರ್ಷದ ಮಹಿಳೆ (ರೋಗಿ-662)ಯನ್ನ ಬಲಿ ಪಡೆಯಿತು. ಮೇ 7ರಂದು ಮತ್ತೆ ಮೂವರಲ್ಲಿ ದೃಢಪಟ್ಟ ಸೋಂಕು, ಆ ದಿನ 55 ವರ್ಷದ ಮತ್ತೋರ್ವ ಮಹಿಳೆ (ರೋಗಿ-694) ಸಹ ಸಾವನ್ನಪಿದರು. ಹಾಗಾಗಿ ಕೆಲವೇ ದಿನಗಳ ಅಂತರದಲ್ಲಿ ಕೋವಿಡ್ ಸೋಂಕಿತರ ಜತೆಗೆ ಸಾವಿನ ಸಂಖ್ಯೆಯೂ ಏರತೊಡಗಿದ್ದರಿಂದ ನಗರದ ನಾಗರಿಕರು ಚಿಂತೆಗೀಡಾದರು. ಮೇ 8ರಂದು ಮತ್ತೆ 14 ಮಂದಿಗೆ ಕೋವಿಡ್ ಸೋಂಕು ಪತ್ತೆಯಾಯಿತಲ್ಲದೆ, ಕೋವಿಡ್‌ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರತೊಡಗಿತು. ಮೇ 9ಕ್ಕೆ 6, 11ರಂದು ಮೂವರು ಹಾಗೂ ಮೇ 12ರಂದು 12 ಮಂದಿಗೆ ಸೋಂಕು ವ್ಯಾಪಿಸಿರುವುದು ದೃಢಪಟ್ಟಿತು. ಪೊಲೀಸ್‌ ಪೇದೆ, ಈರುಳ್ಳಿ-ಬೆಳ್ಳುಳ್ಳಿ ವ್ಯಾಪಾರಿ, ಹೊರ ರಾಜ್ಯದಿಂದ ಬಂದ ಕೃಷಿ ಕಾರ್ಮಿಕ, ಸೇರಿದಂತೆ ಹಲವರು ಸೋಂಕಿಗೊಳಗಾಗಿದ್ದಾರೆ.

ಈಗ ಮಂಗಳವಾರ ಮತ್ತೆ ಆಘಾತವನ್ನುಂಟು ಮಾಡಿದೆ. ಜಿಲ್ಲೆಯಲ್ಲಿ ಹೊಸದಾಗಿ 22 ಮಂದಿಗೆ ಸೋಂಕು ದೃಢಪಟ್ಟಿದ್ದು, ಈಗ ಒಟ್ಟು ಸೋಂಕಿತರ ಸಂಖ್ಯೆ 112ಕ್ಕೇರಿದೆ. ಇವರಲ್ಲಿ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗುಣಮುಖರಾಗಿದ್ದಾರೆ. ಈಗ ಸಕ್ರಿಯ  ಕೋವಿಡ್ ಸೋಂಕಿತರ ಸಂಖ್ಯೆ 106.

ನೆಮ್ಮದಿ ಕಸಿದ ಮಹಾಮಾರಿ
ಕೇವಲ 21 ದಿನಗಳ ಹಿಂದೆ ಒಂದೂ ಸಕ್ರಿಯ ಪ್ರಕರಣವಿಲ್ಲದಿದ್ದ ದಾವಣಗೆರೆ ಜಿಲ್ಲೆಯಲ್ಲೀಗ ಸಂಖ್ಯೆ ಮೂರಂಕಿ ದಾಟಿದೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದ ಇನ್ನೂ ನೂರಾರು ಮಂದಿಯ ಗಂಟಲುದ್ರವ ಮಾದರಿ ಪರೀಕ್ಷಾ ವರದಿ ಬರಬೇಕಿದೆ. ದಿನೇ ದಿನೇ ಏರುತ್ತಿರುವ ಕೋವಿಡ್  ಸೋಂಕಿತರ ಸಂಖ್ಯೆ ಜಿಲ್ಲೆಯ ಜನರ ನೆಮ್ಮದಿಯನ್ನೇ ಕಸಿದುಕೊಂಡಿದೆ.

ಎನ್‌.ಆರ್‌. ನಟರಾಜ್‌

ಟಾಪ್ ನ್ಯೂಸ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮದ್ ಅಮಾನತು

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು

1-dvg

Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.